kn_tw/bible/other/acacia.md

25 lines
2.6 KiB
Markdown

# ಜಾಲೀಮರ
## ನಿರ್ವಚನ :
“ಜಾಲೀಮರ” ಎನ್ನುವ ಪದವು ಒಂದು ಸಾಮಾನ್ಯವಾದ ಪೊದರು ಅಥವಾ ಪುರಾತನ ಕಾಲಗಳಲ್ಲಿ ಕಾನಾನ್ ದೇಶದಲ್ಲಿ ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮರವಾಗಿರುತ್ತದೆ; ಅದು ಈಗಲೂ ಕೂಡ ಆ ಪ್ರಾಂತ್ಯದಲ್ಲಿ ಅತೀ ಹೆಚ್ಚಾಗಿ ಬೆಳೆಯುತ್ತಿರುವ ಮರವಾಗಿರುತ್ತದೆ.
* ಜಾಲೀಮರದ ಕಿತ್ತಳೆ ಕಂದು ಬಣ್ಣದಲ್ಲಿರುವ ಕಟ್ಟಿಗೆ ತುಂಬಾ ಗಟ್ಟಿಯಾಗಿರುತ್ತದೆ ಮತ್ತು ಅದು ಹೆಚ್ಚಿನ ಕಾಲ ಬಾಳಿಕೆ ಬರುವ ಕಟ್ಟಿಗೆಯಾಗಿರುತ್ತದೆ, ನಿರ್ಮಾಣಕ್ಕಾಗಿ ಈ ಮರದ ಕಟ್ಟಿಗೆ ಉಪಯೋಗಕರವಾಗಿರುತ್ತದೆ.
* ಈ ಕಟ್ಟಿಗೆ ಅಷ್ಟು ಸುಲಭವಾಗಿ ಸವೆದು ಹೋಗುವುದಿಲ್ಲ ಯಾಕಂದರೆ ಇದು ನೀರನ್ನು ಹೊರ ಇರಿಸುವ ಸಾಂದ್ರತೆಯನ್ನು ಹೊಂದಿರುತ್ತದೆ ಮತ್ತು ಇದು ನಾಶವಾಗದಂತೆ ನಾಶಪಡಿಸುವ ಕ್ರಿಮಿ ಕೀಟಕಗಳನ್ನು ಹೊರ ಇರಿಸುತ್ತದೆ ಮತ್ತು ಇದು ಸ್ವಾಭಾವಿಕವಾಗಿ ಸ್ವಯಂ ಸಂರಕ್ಷಣೆಯ ಗುಣವನ್ನು ಹೊಂದಿರುತ್ತದೆ.
* ಸತ್ಯವೇದದಲ್ಲಿ ಜಾಲೀಮರವನ್ನು ಗುಡಾರವನ್ನು ನಿರ್ಮಿಸುವುದಕ್ಕಾಗಿ ಮತ್ತು ಒಡಂಬಡಿಕೆಯ ಮಂಜೂಷವನ್ನು ಮಾಡುವುದಕ್ಕಾಗಿ ಉಪಯೋಗಿಸಿದರು.
(ಅನುವಾದ ಸಲಹೆಗಳು : /[ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : /[ಒಡಂಬಡಿಕೆಯ ಮಂಜೂಷ](../kt/arkofthecovenant.md), /[ಗುಡಾರ](../kt/tabernacle.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಧರ್ಮೋ.10:3-4](rc://*/tn/help/deu/10/03)
* [ವಿಮೋ.25:3-7](rc://*/tn/help/exo/25/03)
* [ವಿಮೋ.38:6-7](rc://*/tn/help/exo/38/06)
* [ಯೆಶಯಾ.41:19-20](rc://*/tn/help/isa/41/19)
## ಪದ ಡೇಟಾ:
* Strong's: H7848