kn_tw/bible/other/12tribesofisrael.md

25 lines
3.4 KiB
Markdown

# ಇಸ್ರಾಯೇಲ್ಯರ ಹನ್ನೆರಡು ಕುಲಗಳು, ಇಸ್ರಾಯೇಲನ ಮಕ್ಕಳಾದ ಹನ್ನೆರಡು ಕುಲಗಳು, ಹನ್ನೆರಡು ಕುಲಗಳು
## ನಿರ್ವಚನ:
“ಇಸ್ರಾಯೇಲ್ಯರ ಹನ್ನೆರಡು ಕುಲಗಳು” ಎನ್ನುವ ಮಾತು ಯಾಕೋಬನ ಹನ್ನೆರಡು ಮಕ್ಕಳಿಗೆ ಮತ್ತು ಅವರ ಸಂತಾನಕ್ಕೆ ಸೂಚನೆಯಾಗಿರುತ್ತದೆ.
* ಯಾಕೋಬನು ಅಬ್ರಹಾಮನ ಮೊಮ್ಮಗನಾಗಿರುತ್ತಾನೆ. ಸ್ವಲ್ಪಕಾಲವಾದನಂತರ ದೇವರು ಯಾಕೋಬನ ಹೆಸರನ್ನು ಇಸ್ರಾಯೇಲ ಎಂಬ ಹೆಸರಾಗಿ ಮಾರ್ಪಡಿಸಿದರು.
* ಕುಲಗಳ ಹೆಸರುಗಳು ಈ ಕೆಳಕಂಡಂತಿವೆ: ರೂಬೇನ್, ಸಿಮೆಯೋನ್, ಲೇವಿ, ಯೂದ, ದಾನ್, ನಫ್ತಾಲಿ, ಗಾದ್, ಆಶೇರ್, ಇಸ್ಸಾಕಾರ್, ಜೆಬೂಲೂನ್, ಯೋಸೇಫ ಮತ್ತು ಬೆನ್ಯಾಮೀನ್.
* ಕಾನಾನ್ ದೇಶದಲ್ಲಿ ಯಾವ ಭೂಭಾಗವನ್ನಾಗಲಿ ಲೇವಿ ವಂಶದವರು ಪಡೆಯಲಿಲ್ಲ ಯಾಕಂದರೆ ಅವರು ದೇವರನ್ನು ಸೇವಿಸಲು ಮತ್ತು ದೇವರ ಪ್ರಜೆಗಳಿಗೆ ಸೇವೆ ಮಾಡಲು ಪ್ರತ್ಯೇಕಿಸಲ್ಪಟ್ಟ ಯಾಜಕರಾಗಿದ್ದರು.
* ಯೋಸೇಫನು ವಾಗ್ಧಾನ ಭೂಮಿಯ ಸ್ವಾಸ್ಥ್ಯವನ್ನು ಎರಡರಷ್ಟು ಹೊಂದಿಕೊಂಡನು, ಯಾಕಂದರೆ ತನ್ನ ಇಬ್ಬರು ಗಂಡು ಮಕ್ಕಳಾದ ಎಫ್ರಾಯಿಂ ಮತ್ತು ಮನಸ್ಸೆ ಬಂದಿರುವ ಪಾಲಾಗಿತ್ತು.
* ಸ್ವಲ್ಪ ವ್ಯತ್ಯಾಸವನ್ನು ಹೊರತುಪಡಿಸಿ ಹನ್ನೆರಡು ಕುಲಗಳ ಪಟ್ಟಿಕೆಯು ಸತ್ಯವೇದದಲ್ಲಿ ಅನೇಕ ಭಾಗಗಳಲ್ಲಿ ಬರೆಯಲ್ಪಟ್ಟಿರುವುದನ್ನು ನಾವು ಕಾಣಬಹುದು. ಕೆಲವೊಂದುಬಾರಿ ಲೇವಿ, ಯೋಸೇಫ, ಅಥವಾ ದಾನ್ ಎನ್ನುವವರನ್ನು ಪಟ್ಟಿಯಿಂದ ಹೊರಪಡಿಸಿದ್ದಾರೆ ಮತ್ತು ಕೆಲವೊಂದು ಸ್ಥಳಗಳಲ್ಲಿ, ಯೋಸೇಫನ ಇಬ್ಬರು ಗಂಡು ಮಕ್ಕಳಾದ ಎಫ್ರಾಯಿಂ ಮತ್ತು ಮನಸ್ಸೆರವರನ್ನು ಪಟ್ಟಿಯಲ್ಲಿ ಒಳಪಡಿಸಿದ್ದಾರೆ.
(ಈ ಪದಗಳನ್ನು ಸಹ ನೋಡಿರಿ : [ಸ್ವಾಸ್ಥ್ಯ](../kt/inherit.md), [ಇಸ್ರಾಯೇಲ್](../kt/israel.md), [ಯಾಕೋಬ](../names/jacob.md), [ಯಾಜಕ](../kt/priest.md), [ಕುಲ](../other/tribe.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.26:6 8](rc://*/tn/help/act/26/06)
* [ಆದಿ.49:28-30](rc://*/tn/help/gen/49/28)
* [ಲೂಕಾ.22:28-30](rc://*/tn/help/luk/22/28)
* [ಮತ್ತಾಯ.19;28](rc://*/tn/help/mat/19/28)
## ಪದ ಡೇಟಾ:
* Strong's: H3478, H7626, H8147, G1427, G2474, G5443