kn_tw/bible/kt/yahweh.md

63 lines
11 KiB
Markdown

# ಯೆಹೋವ
## ಸತ್ಯಾಂಶಗಳು:
“ಯೆಹೋವ” ಎನ್ನುವ ಪದವು ದೇವರ ವೈಯುಕ್ತಿಕ ಹೆಸರಾಗಿರುತ್ತದೆ, ದೇವರು ಈ ಹೆಸರನ್ನು ಮೋಶೆಗೆ ಉರಿಯುತ್ತಿರುವ ಪೊದೆಯ ಬಳಿ ಹೇಳಿರುತ್ತಾರೆ.
* “ಯೆಹೋವ” ಎನ್ನುವ ಹೆಸರು “ಇರುವಾತನು” ಅಥವಾ “ಅಸ್ತಿತ್ವದಲ್ಲಿದ್ದಾನೆ” ಎನ್ನುವ ಅರ್ಥಗಳಿರುವ ಪದದಿಂದ ಬಂದಿರುತ್ತದೆ.
* “ಯೆಹೋವ” ಎನ್ನುವ ಹೆಸರಿಗೆ ಸಾಧ್ಯವಾಗುವ ಅರ್ಥಗಳಲ್ಲಿ “ಆತನಿದ್ದಾನೆ” ಅಥವಾ “ಇರುವಂತೆ ಮಾಡುವವನು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* ಈ ಹೆಸರು ದೇವರು ಯಾವಾಗಲೂ ಜೀವಿಸಿದ್ದಾನೆ ಮತ್ತು ಎಂದಿಗೂ ನಿರಂತರವಾಗಿ ಜೀವಿಸುವಾತನಾಗಿದ್ದಾನೆಂದು ತಿಳಿಯಪಡಿಸುತ್ತಿದೆ. ಇದಕ್ಕೆ ಆತನು ಯಾವಾಗಲೂ ಇರುವಾತನಾಗಿದ್ದಾನೆಂದರ್ಥವೂ ಇದೆ.
* ಸಂಪ್ರದಾಯಿಕವಾಗಿ, ಅನೇಕ ಬೈಬಲ್ ಅನುವಾದಗಳು “ಯೆಹೋವ” ಎನ್ನುವ ಹೆಸರನ್ನು ಪ್ರತಿನಿಧಿಸುವುದಕ್ಕೆ “ಕರ್ತನು” ಅಥವಾ “ಯೆಹೋವನಾದ ದೇವರು” ಎನ್ನುವ ಪದಗಳನ್ನು ಉಪಯೋಗಿಸಿದ್ದಾರೆ. ಈ ಸಂಪ್ರದಾಯವು ಇತಿಹಾಸದ ಸತ್ಯಾಂಶದಿಂದ ಉಂಟಾಯಿತು, ಯೆಹೋವನ ಹೆಸರನ್ನು ತಪ್ಪಾಗಿ ಉಚ್ಚರಿಸುವತ್ತೆವೇನೋ ಎಂದು ಯೆಹೂದ್ಯ ಜನರು ಹೆದರಿಕೆಪಟ್ಟಿದ್ದರು, ಇದಕ್ಕಾಗಿ ವಾಕ್ಯದಲ್ಲಿ “ಯೆಹೋವ” ಎನ್ನುವ ಹೆಸರಿಗೆ ಬದಲಾಗಿ ಪ್ರತಿಯೊಂದುಸಾರಿ ‘ಕರ್ತನು” ಎಂದು ಹೇಳುವುದನ್ನು ಆರಂಭಿಸಿರುತ್ತಾರೆ. ಆಧುನಿಕ ಬೈಬಲ್.ಗಳಲ್ಲಿ ದೇವರ ವೈಯುಕ್ತಿಕ ಹೆಸರಿಗೆ ಗೌರವವನ್ನು ತೋರಿಸುವುದಕ್ಕೆ ಮತ್ತು ಲಾರ್ಡ್ (Lord) ಎನ್ನುವ ಇಬ್ರಿ ಭಾಷೆಯ ಪದದಿಂದ ವಿಭಿನ್ನವಾಗಿರುವುದಕ್ಕೆ ಆಂಗ್ಲ ಭಾಷೆಯಲ್ಲಿ ಲಾರ್ಡ್ ("LORD") ಎನ್ನುವ ಪದವನ್ನು ದೊಡ್ಡ ಅಕ್ಷರಗಳಾಗಿ ಬರೆದಿರುತ್ತಾರೆ.
* ಯುಎಲ್.ಬಿ ಮತ್ತು ಯುಡಿಬಿ ವಾಕ್ಯಭಾಗಗಳು ಯಾವಾಗಲೂ ಈ ಪದವನ್ನು ಹಳೇ ಒಡಂಬಡಿಕೆಯಲ್ಲಿ ಇಬ್ರಿ ವಾಕ್ಯದಲ್ಲಿರುವಂತೆಯೇ “ಯೆಹೋವ” ಎಂದಾಗಿ ಅನುವಾದ ಮಾಡಿರುತ್ತಾರೆ.
* “ಯೆಹೋವ” ಎನ್ನುವ ಹೆಸರು ಹೊಸ ಒಡಂಬಡಿಕೆಯ ಮೂಲ ಭಾಷೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ; ಕೇವಲ “ಕರ್ತನು” ಎನ್ನುವ ಗ್ರೀಕ್ ಪದವನ್ನು ಮಾತ್ರವೇ ಉಪಯೋಗಿಸಿರುತ್ತಾರೆ, ಹಳೇ ಒಡಂಬಡಿಕೆಯಿಂದ ತೆಗೆದಿರುವ ವಾಕ್ಯಗಳಲ್ಲಿಯೂ ಕರ್ತನು ಎಂಬುದಾಗಿಯೇ ಉಪಯೋಗಿಸಿರುತ್ತಾರೆ.
* ಹಳೇ ಒಡಂಬಡಿಕೆಯಲ್ಲಿ ದೇವರು ತನ್ನ ಕುರಿತಾಗಿ ಮಾತನಾಡಿದಾಗ, ಆತನು ಅನೇಕಬಾರಿ ಸರ್ವನಾಮವನ್ನು ಉಪಯೋಗಿಸುವುದರ ಬದಲಾಗಿ ತನ್ನ ಹೆಸರನ್ನು ಉಪಯೋಗಿಸುತ್ತಿದ್ದನು.
* “ನಾನು” ಅಥವಾ “ನಾನೇ” ಎನ್ನುವ ಸರ್ವನಾಮವು ಜೋಡಿಸುವದರಿಂದ, ದೇವರು ಮಾತನಾಡುತ್ತಿದ್ದಾರೆಂದು ಓದುಗಾರರಿಗೆ ಯುಎಲ್.ಬಿ ಸೂಚಿಸುತ್ತಿದೆ.
## ಅನುವಾದ ಸಲಹೆಗಳು:
* “ಯೆಹೋವ” ಎನ್ನುವ ಹೆಸರನ್ನು “ನಾನೇ” ಅಥವಾ “ಜೀವಿಸುವಾತನು” ಅಥವಾ “ಇರುವಾತನು” ಅಥವಾ “ಸಜೀವವುಳ್ಳವನು” ಎಂದರ್ಥಗಳಿರುವ ಮಾತಿನೊಂದಿಗೆ ಅಥವಾ ಪದದೊಂದಿಗೆ ಅನುವಾದ ಮಾಡಬಹುದು.
* “ಯೆಹೋವ” ಎನ್ನುವ ಹೆಸರನ್ನು ಹೇಗೆ ಉಚ್ಚರಿಸಬೇಕೆನ್ನುವ ವಿಧಾನದಲ್ಲಿಯೂ ಈ ಪದವು ಬರೆದಿರುತ್ತಾರೆ.
* ಕೆಲವೊಂದು ಸಭೆಯ ಸಂಸ್ಥೆಗಳಲ್ಲಿ “ಯೆಹೋವ” ಎನ್ನುವ ಹೆಸರನ್ನು ಉಪಯೋಗಿಸುವುದಿಲ್ಲ ಮತ್ತು ಆದರೆ ಸಂಪ್ರದಾಯಿಕವಾಗಿ “ಕರ್ತನು” ಎಂದು ಉಪಯೋಗಿಸುತ್ತಾರೆ. ಇಲ್ಲಿ ಗಮನಿಸಬಹುದಾದ ಪ್ರಾಮುಖ್ಯವಾದ ವಿಷಯ ಏನೆಂದರೆ ಇದನ್ನು ಗಟ್ಟಿಯಾಗಿ ಓದುತ್ತಿರುವಾಗ ಬಹುಶಃ ಗಲಿಬಿಲಿಯಾಗುತ್ತಿರಬಹುದು, ಯಾಕಂದರೆ ಇದು “ಕರ್ತನು” ಎನ್ನುವ ಬಿರುದಿನಂತೆಯೇ ಉಚ್ಚರಿಸಲ್ಪಡುತ್ತದೆ. ಕೆಲವೊಂದು ಭಾಷೆಗಳಲ್ಲಿ “ಕರ್ತನು” ಎನ್ನುವ ಬಿರುದಿಗೂ ಮತ್ತು (ಯೆಹೋವ) ಎನ್ನುವ ಹೆಸರಾಗಿ ಉಪಯೋಗಿಸುವ ಪದಕ್ಕೂ ವ್ಯತ್ಯಾಸ ತೋರಿಸುವುದಕ್ಕೆ ವ್ಯಾಕರಣ ಸಂಬಂಧವಾದ ಗುರುತನ್ನು ಅಥವಾ ಬೇರೊಂದು ಪದದ ಜೋಡಣೆಯನ್ನು ಇಟ್ಟಿರುತ್ತಾರೆ.
* ಮೂಲ ಭಾಷೆಯಲ್ಲಿರುವ ಕಾಣಿಸಿಕೊಳ್ಳುವಂತೆಯೇ ಅಕ್ಷರಾರ್ಥವಾದ ಪದವು ಯೆಹೋವ ಎನ್ನುವ ಹೆಸರನ್ನೇ ಇಡುವುದು ಉತ್ತಮವಾದ ಕೆಲಸ, ಆದರೆ ಕೆಲವೊಂದು ಅನುವಾದಗಳು ಕೆಲವೊಂದು ಸ್ಥಳಗಳಲ್ಲಿ ಮಾತ್ರ ವಾಕ್ಯವನ್ನು ಸ್ವಾಭಾವಿಕವಾಗಿಯು ಮತ್ತು ಸ್ಪಷ್ಟವಾಗಿರಲು ಸರ್ವನಾಮವನ್ನು ಮಾತ್ರವೇ ಉಪಯೋಗಿಸುವುದಕ್ಕೆ ನಿರ್ಣಯಿಸಿಕೊಂಡಿರುತ್ತಾರೆ..
* “ಯೆಹೋವನು ಹೀಗೆನ್ನುತ್ತಾನೆ, “ ಎನ್ನುವ ವಾಕ್ಯವನ್ನು ಉಪಯೋಗಿಸಿ ಮಾತುಗಳನ್ನು ಪರಿಚಯಿಸುತ್ತಾರೆ.
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-names))
(ಈ ಪದಗಳನ್ನು ಸಹ ನೋಡಿರಿ : [ದೇವರು](../kt/god.md), [ಒಡೆಯ](../kt/lord.md), [ಕರ್ತನು](../kt/lord.md), [ತೋರಿಸು](../names/moses.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.21:19-20](../kt/reveal.md)
* [1 ಸಮು.16:6-7](rc://*/tn/help/1ki/21/19)
* [ದಾನಿ.09:3-4](rc://*/tn/help/1sa/16/06)
* [ಯೆಹೆ.17:24](rc://*/tn/help/dan/09/03)
* [ಆದಿ.02:4-6](rc://*/tn/help/ezk/17/24)
* [ಆದಿ.04:3-5](rc://*/tn/help/gen/02/04)
* [ಆದಿ.28:12-13](rc://*/tn/help/gen/04/03)
* [ಹೋಶೆಯ.11:12](rc://*/tn/help/gen/28/12)
* [ಯೆಶಯಾ.10:3-4](rc://*/tn/help/hos/11/12)
* [ಯೆಶಯಾ.38:7-8](rc://*/tn/help/isa/10/03)
* [ಯೋಬ.12:9-10](rc://*/tn/help/isa/38/07)
* [ಯೆಹೋ.01:8-9](rc://*/tn/help/job/12/09)
* [ಪ್ರಲಾಪ.01:4-5](rc://*/tn/help/jos/01/08)
* [ಯಾಜಕ.25:35-38](rc://*/tn/help/lam/01/04)
* [ಮಲಾಕಿ.03:4-5](rc://*/tn/help/lev/25/35)
* [ಮೀಕ.02:3-5](rc://*/tn/help/mal/03/04)
* [ಮೀಕ.06:3-5](rc://*/tn/help/mic/02/03)
* [ಅರಣ್ಯ.08:9-11](rc://*/tn/help/mic/06/03)
* [ಕೀರ್ತನೆ.124:1-3](rc://*/tn/help/num/08/09)
* [ರೂತಳು.01:19-21](rc://*/tn/help/psa/124/001)
* [ಜೆಕರ್ಯ.14:5](rc://*/tn/help/rut/01/19)
## ಸತ್ಯವೇದದಿಂದ ಉದಾಹರಣೆಗಳು:
* ___[09:14](rc://*/tn/help/zec/14/05)___ “ನಾನು ಇರುವಾತನಾಗಿದ್ದೇನೆ”. ‘ಇರುವಾತನು ನಿನ್ನ ಬಳಿಗೆ ನನ್ನನ್ನು ಕಳುಹಿಸಿದ್ದಾನೆ’ ‘ನಾನು ನಿಮ್ಮ ಪಿತೃಗಳಾದ ಅಬ್ರಾಹಾಮ, ಇಸಾಕ, ಮತ್ತು ಯಾಕೋಬರ ದೇವರಾದ ___ ಯೆಹೋವ ___, ಇದೆ ನನ್ನ ಹೆಸರು ಎಂದಿಗೂ ಇರುವುದು’” ಎಂದೂ ಅವರಿಗೆ ಹೇಳು ಎಂದು ದೇವರು ಹೇಳಿದರು.
* ___[13:04](rc://*/tn/help/obs/09/14)___ ಆದನಂತರ ದೇವರು ಅವರಿಗೆ ಒಡಂಬಡಿಕೆಯನ್ನು ಕೊಟ್ಟರು, ಮತ್ತು “ಐಗುಪ್ತದಲ್ಲಿ ನಿಮ್ಮನ್ನು ಗುಲಾಮಗಿರಿಯಿಂದ ರಕ್ಷಿಸಿದ ನಿಮ್ಮ ದೇವರಾದ ___ ಯೆಹೋವ ___ ನಾನೇ ಆಗಿದ್ದೇನೆ” ಇತರ ದೇವರುಗಳನ್ನು ಆರಾಧನೆ ಮಾಡಬೇಡಿರಿ” ಎಂದು ಎಂದು ಹೇಳಿದನು.
* ___[13:05](rc://*/tn/help/obs/13/04)___ “ವಿಗ್ರಹಗಳನ್ನು ಮಾಡಬೇಡಿರಿ, ಅಥವಾ ಅವುಗಳನ್ನು ಆರಾಧಿಸಬೇಡಿರಿ, ಯಾಕಂದರೆ ನಾನು ___ ಯೆಹೋವ ___, ರೋಷವುಳ್ಳ ದೇವರಾಗಿದ್ದೇನೆ.”
* ___[16:01](rc://*/tn/help/obs/13/05)___ ಇಸ್ರಾಯೇಲ್ಯರು ನಿಜ ದೇವರಾಗಿರುವ __ ಯೆಹೋವನನ್ನು ___ ಬಿಟ್ಟು, ಕಾನಾನ್ಯ ದೇವರುಗಳನ್ನು ಆರಾಧನೆ ಮಾಡುವುದಕ್ಕೆ ಆರಂಭಿಸಿದರು.
* ___[19:10](rc://*/tn/help/obs/16/01)___ “ಅಬ್ರಾಹಾಮ, ಇಸಾಕ, ಯಾಕೋಬರ ದೇವರಾಗಿರುವ ___ ಯೆಹೋವನೇ __, ನೀನು ಇಸ್ರಾಯೇಲ್ ದೇವರೆಂದು ಮತ್ತು ನಾನು ನಿನ್ನ ಸೇವಕನೆಂದು ಈ ದಿನದಂದು ನಮಗೆ ತೋರಿಸಿಕೋ” ಎಂದು ಎಲೀಯ ಪ್ರಾರ್ಥನೆ ಮಾಡಿದನು.
## ಪದ ಡೇಟಾ:
* Strong's: H3050, H3068, H3069