kn_tw/bible/kt/worship.md

42 lines
6.2 KiB
Markdown

# ಆರಾಧನೆ
## ಪದದ ಅರ್ಥವಿವರಣೆ:
“ಆರಾಧನೆ” ಎನ್ನುವ ಪದಕ್ಕೆ ಯಾರಾದರೊಬ್ಬರಿಗೆ ವಿಶೇಷವಾಗಿ ದೇವರಿಗೆ ವಿಧೇಯರಾಗಿರುವುದು, ಅವರನ್ನು ಸ್ತುತಿಸುವುದು ಮತ್ತು ಅವರನ್ನು ಘನಪಡಿಸುವುದು ಎಂದರ್ಥವಾಗಿರುತ್ತದೆ.
* ಈ ಪದಕ್ಕೆ ಅನೇಕಬಾರಿ ಅಕ್ಷರಾರ್ಥವಾಗಿ “ಕೆಳಗೆ ಬಾಗುವುದು” ಅಥವಾ ಯಾರಾದರೊಬ್ಬರನ್ನು ತಗ್ಗಿಸಿಕೊಂಡು ಘನಪಡಿಸುವುದಕ್ಕೆ “ಸಾಷ್ಟಾಂಗ ನಮಸ್ಕರಿಸುವುದು” ಎಂದರ್ಥ.
* ನಾವು ದೇವರನ್ನು ಸ್ತುತಿಸುವುದರ ಮೂಲಕ ಮತ್ತು ಆತನಿಗೆ ವಿಧೇಯತೆ ತೋರಿಸಿ ಘನಪಡಿಸಿದಾಗ, ಆತನಿಗೆ ಸೇವೆ ಮಾಡಿದಾಗ ಆತನನ್ನು ನಾವು ಆರಾಧನೆ ಮಾಡುತ್ತಿದ್ದೇವೆ,
* ಇಸ್ರಾಯೇಲ್ಯರು ದೇವರನ್ನು ಆರಾಧನೆ ಮಾಡಿದಾಗ, ಅನೇಕಬಾರಿ ಇದರಲ್ಲಿ ಯಜ್ಞವೇದಿಯ ಬಳಿ ಪ್ರಾಣಿಯ ಬಲಿಯರ್ಪಣೆಯು ಒಳಗೊಂಡಿರುತ್ತದೆ.
* ಕೆಲವೊಂದು ಜನರು ಸುಳ್ಳು ದೇವರುಗಳನ್ನು ಆರಾಧನೆ ಮಾಡಿದ್ದಾರೆ.
## ಅನುವಾದ ಸಲಹೆಗಳು:
* “ಆರಾಧನೆ” ಎನ್ನುವ ಪದವನ್ನು “ಕೆಳಕ್ಕೆ ಬಾಗುವುದು” ಅಥವಾ “ಘನಪಡಿಸು ಮತ್ತು ಸೇವೆ ಮಾಡು” ಅಥವಾ “ಘನಪಡಿಸು ಮತ್ತು ವಿಧೇಯತೆ ತೋರಿಸು” ಎಂದೂ ಅನುವಾದ ಮಾಡಬಹುದು.
* ಕೆಲವೊಂದು ಸಂದರ್ಭಗಳಲ್ಲಿ ಇದನ್ನು “ತಗ್ಗಿಸುಕೊಂಡು ಸ್ತುತಿಸುವುದು” ಅಥವಾ “ಸ್ತುತಿ, ಘನವನ್ನು ಕೊಡು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಹೋಮ](../other/sacrifice.md), [ಸ್ತುತಿಸು](../other/praise.md), [ಘನಪಡಿಸು](../kt/honor.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಕೊಲೊ.02:18-19](rc://*/tn/help/col/02/18)
* [ಧರ್ಮೋ.29:17-19](rc://*/tn/help/deu/29/17)
* [ವಿಮೋ.03:11-12](rc://*/tn/help/exo/03/11)
* [ಲೂಕ.04:5-7](rc://*/tn/help/luk/04/05)
* [ಮತ್ತಾಯ.02:1-3](rc://*/tn/help/mat/02/01)
* [ಮತ್ತಾಯ.02:7-8](rc://*/tn/help/mat/02/07)
## ಸತ್ಯವೇದದಿಂದ ಉದಾಹರಣೆಗಳು:
* __[13:04](rc://*/tn/help/obs/13/04)__ ಆದನಂತರ ದೇವರು ಅವರಿಗೆ ಒಡಂಬಡಿಕೆಯನ್ನು ಕೊಟ್ಟನು ಮತ್ತು “ನಾನೇ ಯೆಹೋವನು, ಐಗುಪ್ತದಿಂದ ನಿಮ್ಮನ್ನು ರಕ್ಷಿಸಿದ ನಿಮ್ಮ ದೇವರು“ ಸುಳ್ಳು ದೇವರನ್ನು __ ಆರಾಧಿಸಬೇಡಿರಿ __” ಎಂದು ಹೇಳಿದನು.
* __[14:02](rc://*/tn/help/obs/14/02)__ ಕಾನಾನಿಯರು ದೇವರನ್ನು __ ಆರಾಧಿಸಲಿಲ್ಲ __ ಅಥವಾ ಆತನಿಗೆ ವಿಧೇಯತೆ ತೋರಿಸಲಿಲ್ಲ. ಅವರು ಸುಳ್ಳು ದೇವರುಗಳನ್ನು ಆರಾಧನೆ ಮಾಡಿದರು ಮತ್ತು ಅನೇಕ ದುಷ್ಟ ಕಾರ್ಯಗಳನ್ನು ಮಾಡಿದರು.
* __[17:06](rc://*/tn/help/obs/17/06)__ ಇಸ್ರಾಯೇಲ್ಯರೆಲ್ಲರು ದೇವರನ್ನು __ ಆರಾಧಿಸುವ __ ಅಂಟ್ಟು ಆತನಿಗೆ ಅರ್ಪಣೆಗಳನ್ನು ಅರ್ಪಿಸುವ ಸ್ಥಳವಾದ ದೇವಾಲಯವನ್ನು ನಿರ್ಮಿಸಬೇಕೆಂದು ದಾವೀದನು ಬಯಸಿದ್ದನು.
* __[18:12](rc://*/tn/help/obs/18/12)__ ಅರಸರಲ್ಲಿ ಅನೇಕರು ಮತ್ತು ಇಸ್ರಾಯೇಲ್ ರಾಜ್ಯದಲ್ಲಿ ಅನೇಕ ಜನರು ವಿಗ್ರಹಗಳನ್ನು __ ಆರಾಧಿಸಿದರು __.
* __[25:07](rc://*/tn/help/obs/25/07)__ “ಸೈತಾನನೇ, ನನ್ನಿಂದ ಹೊರಟು ಹೋಗು! ‘ಕರ್ತನಾದ ನಿಮ್ಮ ದೇವರನ್ನು ಮಾತ್ರವೇ __ ಆರಾಧಿಸು __ ಮತ್ತು ಆತನನ್ನು ಮಾತ್ರವೇ ಸೇವಿಸು’ ಎಂದು ಆತನು ತನ್ನ ಜನರಿಗೆ ಆಜ್ಞಾಪಿಸಿರುವುದು ದೇವರ ವಾಕ್ಯದಲ್ಲಿದೆ” ಎಂದು ಯೇಸು ಉತ್ತರಿಸಿದನು.
* __[26:02](rc://*/tn/help/obs/26/02)__ ಸಬ್ಬತ್ ದಿನದಂದು ಆತನು (ಯೇಸು)__ ಆರಾಧನೆ __ ಸ್ಥಳಕ್ಕೆ ಹೋದನು.
* __[47:01](rc://*/tn/help/obs/47/01)__ ಅಲ್ಲಿ ಅವರು ವ್ಯಾಪಾರಸ್ಥಳಾದ ಲುದ್ಯ ಎನ್ನುವ ಹೆಸರಿನ ಸ್ತ್ರೀಯಳನ್ನು ಭೇಟಿಯಾದರು. ಆಕೆ ದೇವರನ್ನು ಪ್ರೀತಿಸಿ, ಆತನನ್ನು __ ಆರಾಧಿಸಿದಳು __.
* __[49:18](rc://*/tn/help/obs/49/18)__ ನೀವು ಇತರ ಕ್ರೈಸ್ತರೊಂದಿಗೆ ಸೇರಿ ದೇವರನ್ನು __ ಆರಾಧಿಸಬೇಕೆಂದು __, ತನ್ನ ವಾಕ್ಯವನ್ನು ಅಧ್ಯಯನ ಮಾಡಬೇಕೆಂದು ಮತ್ತು ಪ್ರಾರ್ಥಿಸಬೇಕೆಂದು ದೇವರು ಹೇಳಿದನು, ಮತ್ತು ಆತನು ನಿಮಗಾಗಿ ಮಾಡಿರುವ ಎಲ್ಲಾ ಕಾರ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳಿರಿ ಎಂದು ಹೇಳಿದನು.
## ಪದ ಡೇಟಾ:
* Strong's: H5457, H5647, H6087, H7812, G1391, G1479, G2151, G2318, G2323, G2356, G3000, G3511, G4352, G4353, G4573, G4574, G4576