kn_tw/bible/kt/woe.md

32 lines
3.9 KiB
Markdown

# ಅಯ್ಯೋ
## ಪದದ ಅರ್ಥವಿವರಣೆ:
“ಅಯ್ಯೋ” ಎನ್ನುವ ಪದವು ದೊಡ್ಡ ತೊಂದರೆಯ ಭಾವನೆಯನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿ ಗಂಭೀರವಾದ ತೊಂದರೆಯನ್ನು ಅನುಭವಿಸುತ್ತಾನೆಂದು ಕೊಡುವ ಎಚ್ಚರಿಕೆಯನ್ನೂ ಸೂಚಿಸುತ್ತದೆ.
* “ಅಯ್ಯೋ” ಎನ್ನುವ ಪದವು ಜನರು ಮಾಡಿದ ಪಾಪಗಳಿಗಾಗಿ ಶಿಕ್ಷೆಯಾಗಿ ಅವರು ಶ್ರಮೆಗಳನ್ನು ಅನುಭವಿಸುತ್ತಾರೆಂದು ಜನರಿಗೆ ಎಚ್ಚರಿಕೆಯನ್ನು ಕೊಡುವ ಮಾತಿನಲ್ಲಿ ಉಪಯೋಗಿಸಲ್ಪಟ್ಟಿರುತ್ತದೆ.
* ಸತ್ಯವೇದದಲ್ಲಿ ಅನೇಕ ಸ್ಥಳಗಳಲ್ಲಿ “ಅಯ್ಯೋ” ಎನ್ನುವ ಪದವು ಅನೇಕಸಲ ಉಪಯೋಗಿಸಲ್ಪಟ್ಟಿರುತ್ತದೆ, ವಿಶೇಷವಾಗಿ ಭಯಂಕರವಾದ ತೀರ್ಪನ್ನು ಒತ್ತಿ ಹೇಳುತ್ತದೆ.
* “ಅಯ್ಯೋ, ನಾನು” ಅಥವಾ “ನನಗೆ ಸಂಭವಿಸಿದ ಗತಿ” ಎಂದು ಒಬ್ಬ ವ್ಯಕ್ತಿ ಹೇಳಿದಾಗ ಗಂಭೀರವಾದ ಶ್ರಮೆಯ ಕುರಿತಾಗಿ ದುಃಖವನ್ನು ವ್ಯಕ್ತಪಡಿಸುವುದು ಎಂದರ್ಥವಾಗಿರುತ್ತದೆ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ, “ಅಯ್ಯೋ” ಎನ್ನುವ ಪದವನ್ನು “ಮಹಾ ದುಃಖ” ಅಥವಾ “ದುಃಖಸ್ಥಿತಿ” ಅಥವಾ “ವಿಪತ್ತು” ಅಥವಾ “ದುರಂತ” ಎಂದೂ ಅನುವಾದ ಮಾಡಬಹುದು.
* “ಅಯ್ಯೋ, (ಪಟ್ಟಣದ) ಗತಿ” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ, “(ಪಟ್ಟಣಕ್ಕೆ) ಎಂತ ಭಯಂಕರವಾದ ಪರಿಸ್ಥಿತಿ” ಅಥವಾ “(ಪಟ್ಟಣದಲ್ಲಿ) ಜನರು ತುಂಬಾ ತೀವ್ರವಾಗಿ ಶಿಕ್ಷಿಸಲ್ಪಟ್ಟಿರುವುದು” ಅಥವಾ “ಆ ಜನರು ಅತೀ ಗಂಭೀರವಾಗಿ ಶ್ರಮೆಗಳನ್ನು ಅನುಭವಿಸುವರು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* “ಅಯ್ಯೋ, ನಾನು” ಅಥವಾ “ನನಗೆ ಸಂಭವಿಸಿದ ಗತಿ!” ಎನ್ನುವ ಮಾತನ್ನು “ನಾನು ಎಷ್ಟು ದುಃಖ ಸ್ಥಿತಿಯಲ್ಲಿದ್ದೇನೆ!” ಅಥವಾ “ನಾನು ದುಃಖದಲ್ಲಿದ್ದೇನೆ!” ಅಥವಾ “ಇದು ನನಗೆ ಎಷ್ಟು ಭಯಂಕರವಾಗಿದೆ!” ಎಂದೂ ಅನುವಾದ ಮಾಡಬಹುದು.
* “ಅಯ್ಯೋ ನೀನು” ಎನ್ನುವ ಮಾತನ್ನು “ನೀನು ಅತೀ ಗಂಭೀರವಾಗಿ ಶ್ರಮೆ ಹೊಂದುವಿ” ಅಥವಾ “ನೀನು ಭಯಂಕರವಾದ ತೊಂದರೆಗಳನ್ನು ಅನುಭವಿಸುವಿ” ಎಂದೂ ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [ಯೆಹೆ.13:17-18](rc://*/tn/help/ezk/13/17)
* [ಹಬ.02:12-14](rc://*/tn/help/hab/02/12)
* [ಯೆಶಯಾ.31:1-2](rc://*/tn/help/isa/31/01)
* [ಯೆರೆ.45:1-3](rc://*/tn/help/jer/45/01)
* [ಯೂದಾ.01:9-11](rc://*/tn/help/jud/01/09)
* [ಲೂಕ.06:24-25](rc://*/tn/help/luk/06/24)
* [ಲೂಕ.17:1-2](rc://*/tn/help/luk/17/01)
* [ಮತ್ತಾಯ.23:23-24](rc://*/tn/help/mat/23/23)
## ಪದ ಡೇಟಾ:
* Strong's: H188, H190, H337, H480, H1929, H1945, H1958, G3759