39 lines
5.3 KiB
Markdown
39 lines
5.3 KiB
Markdown
# ಜ್ಞಾನಿ, ಜ್ಞಾನ
|
||
|
||
## ಪದದ ಅರ್ಥವಿವರಣೆ:
|
||
|
||
“ಜ್ಞಾನಿ” ಎನ್ನುವ ಪದವು ಮಾಡುವುದಕ್ಕೆ ನೈತಿಕವಾದ ವಿಷಯವನ್ನು ಮತ್ತು ಸರಿಯಾದದ್ದನ್ನು ಅರ್ಥಮಾಡಿಕೊಂಡು, ಅದರಂತೆಯೇ ನಡೆಯುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. “ಜ್ಞಾನ” ಎಂದರೆ ನಿಜವಾದದ್ದನ್ನು ಮತ್ತು ನೈತಿಕವಾಗಿ ಸರಿಯಾದದ್ದನ್ನು ಅರ್ಥಮಾಡಿಕೊಂಡು, ಅದರ ಪ್ರಕಾರ ನಡೆದು ಅಭ್ಯಾಸ ಮಾಡುವುದು ಎಂದರ್ಥ.
|
||
|
||
* ಜ್ಞಾನಿಯಾಗಿರುವುದರಲ್ಲಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ, ವಿಶೇಷವಾಗಿ ದೇವರನ್ನು ಮೆಚ್ಚಿಸುವದನ್ನು ಮಾಡಲು ಆರಿಸಿಕೊಳ್ಳುವುದು.
|
||
* ದೇವರಿಗೆ ಕಿವಿಗೊಟ್ಟು ಆತನ ಚಿತ್ತವನ್ನು ನಮ್ರತೆಯಿಂದ ಪಾಲಿಸುವ ಮೂಲಕ ಜನರು ಬುದ್ಧಿವಂತರಾಗುತ್ತಾರೆ.
|
||
* ಜನರು ದೇವರನ್ನು ಕೇಳುವ ಮೂಲಕ ಮತ್ತು ಆತನ ಚಿತ್ತವನ್ನು ವಿನಮ್ರವಾಗಿ ಪಾಲಿಸುವ ಮೂಲಕ ಜ್ಞಾನಿಯಾಗಿರುತ್ತಾರೆ .*ಜ್ಞಾನಿಯಾದ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ, ದಯೆ, ಪ್ರೀತಿ ಮತ್ತು ತಾಳ್ಮೆಯಂತಹ ಪವಿತ್ರಾತ್ಮದ ಫಲವನ್ನು ತೋರಿಸುತ್ತಾನೆ.
|
||
|
||
## ಅನುವಾದ ಸಲಹೆಗಳು:
|
||
|
||
* ಸಂದರ್ಭಾನುಸಾರವಾಗಿ, “ಜ್ಞಾನಿ” ಎನ್ನುವ ಪದವನ್ನು ಅನುವಾದ ಮಾಡುವುದರಲ್ಲಿ “ದೇವರಿಗೆ ವಿಧೇಯನಾಗಿರುವುದು” ಅಥವಾ “ಸಂವೇದನಾಶೀಲ ಮತ್ತು ವಿಧೇಯನು” ಅಥವಾ “ದೇವರಲ್ಲಿ ಭಯಭಕ್ತಿಯುಳ್ಳ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
|
||
* “ಜ್ಞಾನ” ಎನ್ನುವ ಪದವನ್ನು “ಜ್ಞಾನಿ ಜೀವನ” ಅಥವಾ “ಸಂವೇದನಾಶೀಲ ಮತ್ತು ವಿಧೇಯನಾಗಿರುವ ಜೀವನ” ಅಥವಾ “ಒಳ್ಳೇಯ ತೀರ್ಪು” ಎಂದರ್ಥವನ್ನು ಕೊಡುವ ಮಾತು ಅಥವಾ ಪದವನ್ನು ಉಪಯೋಗಿಸಿ ಅನುವಾದ ಮಾಡಬಹುದು.
|
||
* “ಜ್ಞಾನಿ” ಮತ್ತು “ಜ್ಞಾನ” ಎನ್ನುವ ಪದಗಳನ್ನು ನೀತಿವಂತ ಅಥವಾ ವಿಧೇಯನು ಎನ್ನುವ ಪದಗಳಿಗೆ ವಿಭಿನ್ನವಾಗಿರುತ್ತವೆಯೆನ್ನುವ ವಿಧಾನದಲ್ಲಿ ಅನುವಾದ ಮಾಡುವುದು ಉತ್ತಮ.
|
||
|
||
(ಈ ಪದಗಳನ್ನು ಸಹ ನೋಡಿರಿ : [ವಿಧೇಯತೆ ತೋರಿಸು](../other/obey.md), [ಫಲ](../other/fruit.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [ಅಪೊ.ಕೃತ್ಯ.06:03](rc://*/tn/help/act/06/03)
|
||
* [ಕೊಲೊ.03:15-17](rc://*/tn/help/col/03/15)
|
||
* [ವಿಮೋ.31:೦6](rc://*/tn/help/exo/31/06)
|
||
* [ಆದಿ.03:೦6](rc://*/tn/help/gen/03/06)
|
||
* [ಯೆಶಯಾ.19:12](rc://*/tn/help/isa/19/12)
|
||
* [ಯೆರೆ.18:18](rc://*/tn/help/jer/18/18)
|
||
* [ಮತ್ತಾಯ.07:24](rc://*/tn/help/mat/07/24)
|
||
|
||
## ಸತ್ಯವೇದ ಕತೆಗಳಿಂದ ಉದಾಹರಣೆಗಳು:
|
||
|
||
* __[02:05](rc://*/tn/help/obs/02/05)__ ಆಕೆಯು ಕೂಡ __ ಜ್ಞಾನಿಯಾಗಬೇಕೆಂದು __ ಬಯಸಿದಳು, ಇದರಿಂದ ಆಕೆ ಕೆಲವೊಂದು ಫಲಗಳನ್ನು ತಿಂದು, ಅದನ್ನು ತಿಂದಳು.
|
||
* __[18:01](rc://*/tn/help/obs/18/01)__ ಸೊಲೊಮೋನನು __ ಜ್ಞಾನಕ್ಕಾಗಿ __ ಬೇಡಿಕೊಂಡಾಗ, ದೇವರು ಸಂತೋಷಪಟ್ಟನು ಮತ್ತು ಆತನು ಅವನನ್ನು ಲೋಕದಲ್ಲಿ __ ಜ್ಞಾನಿಯನ್ನಾಗಿ __ ಮಾಡಿದನು.
|
||
* __[23:09](rc://*/tn/help/obs/23/09)__ ಸ್ವಲ್ಪಕಾಲವಾದನಂತರ, ಪೂರ್ವ ದಿಕ್ಕಿನಲ್ಲಿರುವ ದೇಶಗಳಿಂದ ಬಂದ __ ಜೋಯಿಸರು __ ಆಕಾಶದಲ್ಲಿ ಅಸಹಜವಾದ ನಕ್ಷತ್ರವನ್ನು ನೋಡಿದರು.
|
||
* __[45:01](rc://*/tn/help/obs/45/01)__ ಅವನು (ಸ್ತೆಫೆನ) ಒಳ್ಳೇಯ ಖ್ಯಾತಿಯನ್ನು ಹೊಂದಿದ್ದನು, ಮತ್ತು ಪವಿತ್ರಾತ್ಮನಿಂದಲೂ, __ ಜ್ಞಾನದಿಂದಲೂ __ ತುಂಬಿದ್ದನು.
|
||
|
||
## ಪದ ಡೇಟಾ:
|
||
|
||
* Strong's: H998, H1350, H2445, H2449, H2450, H2451, H2452, H2454, H2942, H3820, H3823, H6195, H6493, H6912, H7535, H7919, H7922, H8454, G4678, G4679, G4680, G4920, G5428, G5429, G5430
|