kn_tw/bible/kt/true.md

61 lines
8.3 KiB
Markdown

# ನಿಜ, ಸತ್ಯ, ಸತ್ಯಾಸತ್ಯಗಳು
## ಪದದ ಅರ್ಥವಿವರಣೆ:
“ಸತ್ಯ” ಎನ್ನುವ ಪದವು ಸತ್ಯಾಂಶಗಳಾಗಿರುವ ಒಂದು ಅಥವಾ ಹೆಚ್ಚಿನ ಪರಿಕಲ್ಪನೆಗಳನ್ನು, ನಿಜವಾಗಿ ನಡೆದ ಸಂಘಟನೆಗಳನ್ನು ಮತ್ತು ನಿಜವಾಗಿ ಹೇಳಲ್ಪಟ್ಟ ವ್ಯಾಖ್ಯೆಗಳನ್ನು ಸೂಚಿಸುತ್ತದೆ. ಅಂಥಹ ಪರಿಕಲ್ಪನೆಗಳು “ನಿಜವಾಗಿ” ಹೇಳಲ್ಪಟ್ಟಿರುತ್ತವೆ.
* ನಿಜ ಸಂಗತಿಗಳೆಲ್ಲವು ಅಸ್ತಿತ್ವದಲ್ಲಿ ನಡೆದ, ವಾಸ್ತವಿಕವಾಗಿರುವ, ಮೋಸವಲ್ಲದ, ನ್ಯಾಯವಾಗಿರುವ, ತರ್ಕಬದ್ಧವಾಗಿರುವ ಮತ್ತು ನಡೆದ ಸಂಗತಿಗಳಾಗಿರುವ ಸಂದರ್ಭಗಳಾಗಿರುತ್ತವೆ.
* ಸತ್ಯ ಎಂದರೆ ತಿಳುವಳಿಕೆ, ನಂಬಿಕೆಗಳು ಅಥವಾ ಸತ್ಯವಾದ ಹೇಳಿಕೆ.
* ಪ್ರವಾದನೆಯು “ನಿಜವಾಗಿದೆ” ಅಥವಾ “ನಿಜವಾಗುತ್ತದೆ” ಎನ್ನುವ ಮಾತಿಗೆ ಹೇಳಿದ ಪ್ರಕಾರವೇ ಇದು ನಡೆದಿದೆ ಅಥವಾ ಅದರ ಪ್ರಕಾರವೇ ನಡೆಯುತ್ತದೆ ಎಂದರ್ಥವಾಗಿರುತ್ತದೆ.
* "ಸತ್ಯ" ಎಂಬ್ವ ಸತ್ಯವೇದದ ಪರಿಕಲ್ಪನೆಯಲ್ಲಿ ವಿಶ್ವಾಸಾರ್ಹ ಮತ್ತು ನಿಷ್ಠಾವಂತ ವಿಧಾನದಲ್ಲಿ ನಡೆದುಕೊಳ್ಳುವ ಪರಿಕಲ್ಪನೆಯು ಒಳಗೊಂಡಿರುತ್ತದೆ.
* ಯೇಸು ತಾನು ಮಾತನಾಡಿದ ಮಾತುಗಳಲ್ಲಿ ದೇವರ ಸತ್ಯವನ್ನು ಪ್ರಕಟಿಸಿದ್ದಾನೆ.
* ದೇವರ ವಾಕ್ಯವೇ ಸತ್ಯ. ಇದು ನಿಜವಾಗಿ ನಡೆದ ಸಂಘಟನೆಗಳ ಕುರಿತಾಗಿ ಹೇಳುತ್ತದೆ, ದೇವರ ಕುರಿತಾಗಿ ಮತ್ತು ದೇವರು ಮಾಡಿದ ಎಲ್ಲಾ ಸೃಷ್ಟಿಯ ಕುರಿತಾಗಿ ಬೋಧಿಸುತ್ತದೆ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ ಮತ್ತು ಹೇಳಲ್ಪಟ್ಟಿರುವ ಸಂಗತಿಗಳ ಪ್ರಕಾರ , “ನಿಜ” ಎನ್ನುವ ಪದವನ್ನು “ವಾಸ್ತವ” ಅಥವಾ “ನಡೆದ ಸಂಗತಿ” ಅಥವಾ “ಸರಿಯಾದ” ಅಥವಾ “ಸರಿ” ಅಥವಾ “ನಿರ್ದಿಷ್ಟ” ಅಥವಾ “ಪ್ರಾಮಾಣಿಕವಾದ” ಎಂದೂ ಅನುವಾದ ಮಾಡಬಹುದು.
* “ಸತ್ಯ” ಎನ್ನುವ ಪದವನ್ನು ಅನುವಾದ ಮಾಡುವದರಲ್ಲಿ “ನಿಜವಾದದ್ದು” ಅಥವಾ “ಸತ್ಯಾಂಶವು” ಅಥವಾ “ನಿರ್ದಿಷ್ಟವಾದದ್ದು” ಅಥವಾ “ನಿಯಮ” ಎನ್ನುವ ಪದಗಳು ಒಳಗೊಂಡಿರುತ್ತವೆ.
* “ನಿಜವಾಗು” ಎನ್ನುವ ಮಾತನ್ನು “ವಾಸ್ತವಿಕವಾಗಿ ನಡೆಯುವ ಸಂಗತಿ” ಅಥವಾ “ನೆರವೇರಿಸಲ್ಪಡುವುದು” ಅಥವಾ “ಹೇಳಿದ ಪ್ರಕಾರ ನಡೆಯುವುದು” ಎಂದೂ ಅನುವಾದ ಮಾಡಬಹುದು.
* “ಸತ್ಯವನ್ನು ಹೇಳು” ಅಥವಾ “ಸತ್ಯವನ್ನು ಮಾತನಾಡು” ಎನ್ನುವ ಮಾತುಗಳನ್ನು “ನಿಜವಾದದ್ದನ್ನು ಹೇಳು” ಅಥವಾ “ವಾಸ್ತವಿಕವಾಗಿ ನಡೆದದ್ದನ್ನು ಹೇಳು” ಅಥವಾ “ನಂಬುವಂತಹ ವಿಷಯಗಳನ್ನು ಹೇಳು” ಎಂದೂ ಅನುವಾದ ಮಾಡಬಹುದು.
* “ಸತ್ಯವನ್ನು ಅಂಗೀಕರಿಸು” ಎನ್ನುವ ಮಾತನ್ನು “ದೇವರ ಕುರಿತಾದ ಸತ್ಯವನ್ನು ನಂಬು” ಎಂದೂ ಅನುವಾದ ಮಾಡಬಹುದು.
* “ಆತ್ಮದಲ್ಲಿ ಮತ್ತು ಸತ್ಯದಲ್ಲಿ ದೇವರನ್ನು ಆರಾಧಿಸು” ಎನ್ನುವ ಮಾತಿನಲ್ಲಿ, “ಸತ್ಯದಲ್ಲಿ” ಎನ್ನುವ ಪದವನ್ನು “ದೇವರು ನಮಗೆ ಹೇಳಿದವುಗಳಿಗೆ ವಿಶ್ವಾಸಾರ್ಹದಿಂದ ವಿಧೇಯರಾಗುವುದು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ನಂಬು](../kt/believe.md), [ವಿಶ್ವಾಸಾರ್ಹ](../kt/faithful.md), [ನೆರವೇರಿಸು](../kt/fulfill.md), [ವಿಧೇಯತೆ ತೋರಿಸು](../other/obey.md), [ಪ್ರವಾದಿ](../kt/prophet.md), [ಅರಿತುಕೋ](../other/understand.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.05:6-8](rc://*/tn/help/1co/05/06)
* [1 ಯೋಹಾನ.01:5-7](rc://*/tn/help/1jn/01/05)
* [1 ಯೋಹಾನ.02:7-8](rc://*/tn/help/1jn/02/07)
* [3 ಯೋಹಾನ.01:5-8](rc://*/tn/help/3jn/01/05)
* [ಅಪೊ.ಕೃತ್ಯ.26:24-26](rc://*/tn/help/act/26/24)
* [ಕೊಲೊ.01:4-6](rc://*/tn/help/col/01/04)
* [ಆದಿ.47:29-31](rc://*/tn/help/gen/47/29)
* [ಯಾಕೋಬ.01:17-18](rc://*/tn/help/jas/01/17)
* [ಯಾಕೋಬ.03:13-14](rc://*/tn/help/jas/03/13)
* [ಯಾಕೋಬ.05:19-20](rc://*/tn/help/jas/05/19)
* [ಯೆರೆ.04:1-3](rc://*/tn/help/jer/04/01)
* [ಯೋಹಾನ.01:9](rc://*/tn/help/jhn/01/09)
* [ಯೋಹಾನ.01:16-18](rc://*/tn/help/jhn/01/16)
* [ಯೋಹಾನ.01:49-51](rc://*/tn/help/jhn/01/49)
* [ಯೋಹಾನ.03:31-33](rc://*/tn/help/jhn/03/31)
* [ಯೆಹೋ.07:19-21](rc://*/tn/help/jos/07/19)
* [ಪ್ರಲಾಪ.05:19-22](rc://*/tn/help/lam/05/19)
* [ಮತ್ತಾಯ.08:8-10](rc://*/tn/help/mat/08/08)
* [ಮತ್ತಾಯ.12:15-17](rc://*/tn/help/mat/12/15)
* [ಕೀರ್ತನೆ.026:1-3](rc://*/tn/help/psa/026/001)
* [ಪ್ರಕ.01:19-20](rc://*/tn/help/rev/01/19)
* [ಪ್ರಕ.15:3-4](rc://*/tn/help/rev/15/03)
## ಸತ್ಯವೇದದಿಂದ ಉದಾಹರಣೆಗಳು:
* ___[02:04](rc://*/tn/help/obs/02/04)___ “ಇದು __ ನಿಜವಲ್ಲ __! ನೀನು ಸಾಯುವುದಿಲ್ಲ” ಎಂದು ಹಾವು ಸ್ತ್ರೀಯಳಲ್ಲಿ ಸ್ಪಂದಿಸಿತು.
* ___[14:06](rc://*/tn/help/obs/14/06)___ ತಕ್ಷಣವೇ ಕಾಲೇಬನು ಮತ್ತು ಯೆಹೋಶುವನು, ಇತರ ಗೂಢಚಾರಿಗಳು “ಕಾನಾನಿನಲ್ಲಿರುವ ಜನರು ತುಂಬಾ ಎತ್ತರವಾಗಿದ್ದಾರೆ ಮತ್ತು ಬಲವಾಗಿದ್ದಾರೆ, ಆದರೆ ನಾವು ತಪ್ಪದೇ ಅವರನ್ನು ಸೋಲಿಸಬಹುದು!” ಎಂದು ಹೇಳಿದರು.
* ___[16:01](rc://*/tn/help/obs/16/01)___ ___ ನಿಜ ___ ದೇವರಾಗಿರುವ ಯೆಹೋವನನ್ನು ಬಿಟ್ಟು, ಇಸ್ರಾಯೇಲ್ಯರು ಕಾನಾನ್ ದೇವರುಗಳನ್ನು ಆರಾಧನೆ ಮಾಡುವುದಕ್ಕೆ ಆರಂಭಿಸಿದರು.
* ___[31:08](rc://*/tn/help/obs/31/08)___ “___ ನಿಜವಾಗಿ ___ ನೀನು ದೇವರ ಮಗ” ಎಂದು ಹೇಳುತ್ತಾ ಅವರು ಯೇಸುವನ್ನು ಆರಾಧಿಸಿದರು.
* ___[39:10](rc://*/tn/help/obs/39/10)___ “ದೇವರ ಕುರಿತಾಗಿ ___ ಸತ್ಯವನ್ನು ___ ಹೇಳುವುದಕ್ಕೆ ನಾನು ಈ ಭೂಲೋಕಕ್ಕೆ ಬಂದಿದ್ದೇನೆ. ಸತ್ಯವನ್ನು ___ ಪ್ರೀತಿಸುವ ಪ್ರತಿಯೊಬ್ಬನು ನನ್ನ ಮಾತನ್ನು ಕೇಳುವನು.” “___ ಸತ್ಯ ಎಂದರೇನು?” ಎಂದು ಪಿಲಾತನು ಹೇಳಿದನು.
## ಪದ ಡೇಟಾ:
* Strong's: H199, H389, H403, H529, H530, H543, H544, H551, H571, H935, H3321, H3330, H6237, H6656, H6965, H7187, H7189, G225, G226, G227, G228, G230, G1103, G3303, G3483, G3689, G4103, G4137