kn_tw/bible/kt/tetrarch.md

25 lines
3.0 KiB
Markdown

# ಉಪರಾಜ
## ಪದದ ಅರ್ಥವಿವರಣೆ:
“ಉಪರಾಜ” ಎನ್ನುವ ಪದವು ರೋಮಾ ಸಾಮ್ರಾಜ್ಯದ ಭಾಗವನ್ನು ಆಳಿದ ಪ್ರಭುತ್ವ ಅಧಿಕಾರಿಗಳನ್ನು ಸೂಚಿಸುತ್ತದೆ. ಪ್ರತಿಯೊಬ್ಬ ಉಪರಾಜನು ರೋಮಾ ಸಾಮ್ರಾಜ್ಯದ ಅಧಿಕಾರದಲ್ಲಿರಬೇಕು.
* “ಉಪರಾಜ” ಎನ್ನುವ ಪದಕ್ಕೆ “ಚತುರ್ಧಾಧಿಪತಿಗಳಲ್ಲಿ ಒಬ್ಬನು” ಎಂದರ್ಥ.
* ದಯೋಕ್ಲೆಶಿಯನ್ ಚಕ್ರವರ್ತಿಯ ಕೆಳಗೆ ಆರಂಭಿಸಿ, ರೋಮಾ ಸಾಮ್ರಾಜ್ಯದಲ್ಲಿ ನಾಲ್ಕು ಮುಖ್ಯ ಭಾಗಗಳಿದ್ದವು, ಅವುಗಳಲ್ಲಿ ಪ್ರತಿಯೊಂದು ಭಾಗವನ್ನು ಒಬ್ಬೊಬ್ಬ ಉಪರಾಜನು ಆಳಬೇಕಾಗಿರುತ್ತಿತ್ತು.
* ಯೇಸುವಿನ ಜನನ ಸಮಯದ ಕಾಲದಲ್ಲಿ ಅರಸನಾಗಿರುವ “ಮಹಾ” ಹೆರೋದನ ರಾಜ್ಯವು ಹೆರೋದನು ಸತ್ತುಹೋದನಂತರ ನಾಲ್ಕು ಮುಖ್ಯ ವಿಭಾಗಗಳಾಗಿ ವಿಂಗಡಿಸಲ್ಪಟ್ಟಿತು, ಮತ್ತು ಅವುಗಳನ್ನು ತನ್ನ ಮಕ್ಕಳು “ಉಪರಾಜರಾಗಿ” ಅಥವಾ “ನಾಲ್ಕು ಮಂದಿ ಪಾಲಕರಾಗಿ” ಆಳಿದರು.
* ಪ್ರತಿಯೊಂದು ಭಾಗದಲ್ಲಿ ಒಂದಕ್ಕಿಂತ ಹೆಚ್ಚಾಗಿ “ಸೀಮೆಗಳು” ಎಂದು ಕರೆಯಲ್ಪಡುವ ವಿಭಾಗಗಳನ್ನು ಇರುತ್ತಿದ್ದವು, ಉದಾಹರಣೆಗೆ, ಗಲಿಲಾಯ ಅಥವಾ ಸಮಾರ್ಯ.
* ಹೊಸ ಒಡಂಬಡಿಕೆಯಲ್ಲಿ “ಉಪರಾಜನಾದ ಹೆರೋದ” ಎಂದು ಅನೇಕಸಲ ದಾಖಲಿಸಲಾಗಿದೆ. ಇವನನ್ನು “ಹೆರೋದ್ ಅಂತಿಪ” ಎಂದೂ ಕರೆಯಲ್ಪಟ್ಟಿರುತ್ತಾನೆ.
* “ಉಪರಾಜ” ಎನ್ನುವ ಈ ಪದವನ್ನು “ಪ್ರಾಂತೀಯ ರಾಜ್ಯಪಾಲಕ” ಅಥವಾ “ಪ್ರಾಂತ್ಯದ ಪಾಲಕ” ಅಥವಾ “ಪಾಲಕ” ಅಥವಾ “ರಾಜ್ಯಪಾಲರು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಹೆರೋದ್ ಅಂತಿಪ](../other/governor.md), [ಸೀಮೆ](../names/herodantipas.md), [ರೋಮ್](../other/province.md), [ಪಾಲಕ](../names/rome.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಲೂಕ.03:1-2](../other/ruler.md)
* [ಲೂಕ.09:7-9](rc://*/tn/help/luk/03/01)
* [ಮತ್ತಾಯ.14:1-2](rc://*/tn/help/luk/09/07)
## ಪದ ಡೇಟಾ:
* Strong's: G5075, G5076