39 lines
5.5 KiB
Markdown
39 lines
5.5 KiB
Markdown
# ಶೋಧಿಸು, ಶೋಧನೆ
|
|
|
|
## ಪದದ ಅರ್ಥವಿವರಣೆ:
|
|
|
|
ಯಾರಾದರೊಬ್ಬರನ್ನು ಶೋಧಿಸು ಎನ್ನುವ ಮಾತಿಗೆ ಆ ವ್ಯಕ್ತಿ ಯಾವುದಾದರೊಂದು ತಪ್ಪು ಮಾಡುವಂತೆ ಪ್ರೇರೇಪಿಸು ಎಂದರ್ಥ.
|
|
|
|
* ಶೋಧನೆ ಎಂದರೆ ಒಬ್ಬ ವ್ಯಕ್ತಿ ಯಾವುದಾದರೊಂದು ತಪ್ಪನ್ನು ಮಾಡುವಂತೆ ಬಯಸಲು ಕಾರಣವಾಗುವ ಯಾವುದೇ ವಿಷಯವನ್ನು ಸೂಚಿಸುತ್ತದೆ.
|
|
* ಜನರು ತಮ್ಮ ಸ್ವಂತ ಪಾಪ ಸ್ವಭಾವದಿಂದ ಮತ್ತು ಇತರ ಜನರಿಂದ ಶೋಧಿಸಲ್ಪಡುತ್ತಾರೆ.
|
|
* ದೇವರಿಗೆ ಅವಿಧೇಯತೆ ತೋರಿಸುವಂತೆ ಮತ್ತು ಕೆಟ್ಟ ಕಾರ್ಯಗಳನ್ನು ಮಾಡುವುದರ ಮೂಲಕ ದೇವರಿಗೆ ವಿರುದ್ಧವಾಗಿ ಪಾಪ ಮಾಡುವಂತೆ ದೇವರು ಜನರನ್ನು ಶೋಧಿಸುತ್ತಾರೆ.
|
|
* ಸೈತಾನನು ಯೇಸುವನ್ನು ಶೋಧಿಸಿದನು ಮತ್ತು ಕೆಟ್ಟ ಕಾರ್ಯವನ್ನು ಮಾಡುವಂತೆ ಆತನನ್ನು ಪ್ರೇರೇಪಿಸಲು ಯತ್ನಿಸಿದನು, ಆದರೆ ಯೇಸು ಸೈತಾನಿನ ಎಲ್ಲಾ ಶೋಧನೆಗಳನ್ನು ಜಯಿಸಿದನು ಮತ್ತು ಯಾವ ಪಾಪವು ಮಾಡಲಿಲ್ಲ.
|
|
* “ದೇವರನ್ನು ಶೋಧಿಸುವ” ಒಬ್ಬ ವ್ಯಕ್ತಿ ಆತನು ಯಾವುದಾದರೊಂದು ತಪ್ಪು ಮಾಡುವುದಕ್ಕೆ ಪ್ರಯತ್ನಿಸುತ್ತಿಲ್ಲ, ಆದರೆ ಇದಕ್ಕೆ ಬದಲಾಗಿ, ದೇವರು ತನ್ನನ್ನು ಶಿಕ್ಷಿಸಬೇಕೆನ್ನುವ ಆಲೋಚನೆಯಿಂದ ದೇವರಿಗೆ ಅವಿಧೇಯತೆ ತೋರಿಸುವುದರಲ್ಲಿ ಮೊಂಡುತನ ಮುಂದುವರಿಯುತ್ತಿದ್ದಾನೆಂದರ್ಥ. ಇದನ್ನೇ “ದೇವರನ್ನು ಪರೀಕ್ಷಿಸುವುದು” ಎಂದೂ ಕರೆಯುತ್ತಾರೆ.
|
|
|
|
## ಅನುವಾದ ಸಲಹೆಗಳು:
|
|
|
|
* “ಶೋಧಿಸು” ಎನ್ನುವ ಪದವನ್ನು “ಪಾಪ ಮಾಡುವುದಕ್ಕೆ ಯತ್ನಿಸು” ಅಥವಾ “ಪ್ರಲೋಭೆಗೊಳಿಸು” ಅಥವಾ “ಪಾಪ ಮಾಡುವುದಕ್ಕೆ ಆಶೆಯನ್ನು ಹುಟ್ಟಿಸು” ಎಂದೂ ಅನುವಾದ ಮಾಡಬಹುದು.
|
|
* “ಶೋಧನೆಗಳು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಶೋಧಿಸುವ ವಿಷಯಗಳು” ಅಥವಾ “ಯಾರಾದರೊಬ್ಬರು ಪಾಪ ಮಾಡಲು ಪ್ರಲೋಭೆಗೊಳಿಸುವ ವಿಷಯಗಳು” ಅಥವಾ “ಯಾವುದಾದರೊಂದು ತಪ್ಪು ಮಾಡುವುದಕ್ಕೆ ಆಶೆಯನ್ನು ಹುಟ್ಟಿಸುವ ವಿಷಯಗಳು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
|
|
* “ದೇವರನ್ನು ಶೋಧಿಸು” ಎನ್ನುವ ಮಾತನ್ನು “ಪರೀಕ್ಷೆ ಮಾಡುವುದಕ್ಕೆ ದೇವರನ್ನು ನಿಲ್ಲಿಸು” ಅಥವಾ “ದೇವರನ್ನು ಪರೀಕ್ಷಿಸು” ಅಥವಾ “ದೇವರ ಸಹನೆಯನ್ನು ಶೋಧಿಸು” ಅಥವಾ “ದೇವರು ಶಿಕ್ಷಿಸುವಂತೆ ಮಾಡು” ಅಥವಾ “ಮೊಂಡುತನದಿಂದ ದೇವರಿಗೆ ಅವಿಧೇಯತೆ ತೋರಿಸುವುದರಲ್ಲಿ ಮುಂದೆವರಿ” ಎಂದೂ ಅನುವಾದ ಮಾಡಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ಅವಿಧೇಯತೆ](../other/disobey.md), [ಸೈತಾನ](../kt/satan.md), [ಪಾಪ](../kt/sin.md), [ಪರೀಕ್ಷಿಸು](../kt/test.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಥೆಸ್ಸ.03:4-5](rc://*/tn/help/1th/03/04)
|
|
* [ಇಬ್ರಿ.04:14-16](rc://*/tn/help/heb/04/14)
|
|
* [ಯಾಕೋಬ.01:12-13](rc://*/tn/help/jas/01/12)
|
|
* [ಲೂಕ.04:1-2](rc://*/tn/help/luk/04/01)
|
|
* [ಲೂಕ.11:3-4](rc://*/tn/help/luk/11/03)
|
|
* [ಮತ್ತಾಯ.26:39-41](rc://*/tn/help/mat/26/39)
|
|
|
|
## ಸತ್ಯವೇದದಿಂದ ಉದಾಹರಣೆಗಳು:
|
|
|
|
* ___[25:01](rc://*/tn/help/obs/25/01)___ ಸೈತಾನನು ಯೇಸುವಿನ ಬಳಿಗೆ ಬಂದನು ಮತ್ತು ಪಾಪ ಮಾಡುವಂತೆ ಆತನನ್ನು ___ ಶೋಧಿಸಿದನು ___.
|
|
* ___[25:08](rc://*/tn/help/obs/25/08)___ ಸೈತಾನಿನ ___ ಶೋಧನೆಗಳಿಗೆ ___ ಯೇಸುವು ಒಳಗಾಗಲಿಲ್ಲ, ಅದಕ್ಕಾಗಿ ಸೈತಾನನು ಆತನಿಂದ ಪಾರಾದನು.
|
|
* ___[38:11](rc://*/tn/help/obs/38/11)___ ನೀವು ___ ಶೋಧನೆಯೊಳಗೆ ___ ಪ್ರವೇಶಿಸದಂತೆ ಪ್ರಾರ್ಥನೆ ಮಾಡಿಕೊಳ್ಳಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು.
|
|
|
|
## ಪದ ಡೇಟಾ:
|
|
|
|
* Strong's: H974, H4531, H5254, G551, G1598, G3985, G3986, G3987
|