kn_tw/bible/kt/sonsofgod.md

32 lines
4.7 KiB
Markdown

# ದೇವ ಪುತ್ರರು
## ಪದದ ಅರ್ಥವಿವರಣೆ:
“ದೇವ ಪುತ್ರರು” ಎನ್ನುವ ಮಾತು ಅನೇಕ ಅರ್ಥಗಳಿರುವ ಅಲಂಕಾರಿಕ ಮಾತಾಗಿರುತ್ತದೆ.
* ಹೊಸ ಒಡಂಬಡಿಕೆಯಲ್ಲಿ “ದೇವ ಪುತ್ರರು” ಎನ್ನುವ ಮಾತು ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಎಲ್ಲಾ ವಿಶ್ವಾಸಿಗಳನ್ನು ಸೂಚಿಸುತ್ತದೆ ಮತ್ತು ಇದನ್ನು ಅನೇಕಬಾರಿ “ದೇವರ ಮಕ್ಕಳು” ಎಂಬುದಾಗಿ ಅನುವಾದ ಮಾಡಲಾಗಿರುತ್ತದೆ, ಯಾಕಂದರೆ ಈ ಮಾತಿನಲ್ಲಿ ಸ್ತ್ರೀ, ಪುರುಷರೂ ಒಳಗೊಂಡಿರುತ್ತಾರೆ.
* ಈ ಮಾತಿನ ಉಪಯೋಗವು ಮನುಷ್ಯರ ತಂದೆ ಮತ್ತು ಮಗ ಸಂಬಂಧದಲ್ಲಿ ಪುತ್ರರಾಗಿರುವದರಿಂದ ಉಂಟಾಗುವ ಎಲ್ಲಾ ಸವಲತ್ತುಗಳಿರುವಂತೆಯೇ ದೇವರೊಂದಿಗಿರುವ ಸಂಬಂಧದ ಕುರಿತಾಗಿ ಮಾತನಾಡುತ್ತದೆ,
* ಆದಿಕಾಂಡ 6ನೇ ಅಧ್ಯಾಯದಲ್ಲಿಕಾಣಿಸುವ “ದೇವ ಪುತ್ರರು” ಎನ್ನುವ ಪದವನ್ನು ಕೆಲವರು ಕೆಳಗೆ ಬಿದ್ದ ದೂತರು ಅಂದರೆ ದುಷ್ಟ ಆತ್ಮಗಳು ಅಥವಾ ದೆವ್ವಗಳು ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಇನ್ನೂ ಕೆಲವರು ಇವರು ಸೇತನ ವಂಶಸ್ಥರು ಅಥವಾ ಶಕ್ತಿಯುತವಾದ ಪಾಲನಾ ಅಧಿಕಾರಿಗಳು ಎಂದು ಸೂಚಿಸುತ್ತಿರಬಹುದು.
* ಹೊಸ ಒಡಂಬಡಿಕೆಯಲ್ಲಿ “ದೇವ ಪುತ್ರರು” ಎನ್ನುವ ಮಾತು ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬ ವಿಶ್ವಾಸಿಯನ್ನು ಸೂಚಿಸುತ್ತದೆ ಮತ್ತು ಇದನ್ನು “ದೇವರ ಮಕ್ಕಳು” ಎಂದೂ ಅನುವಾದ ಮಾಡಲಾಗಿರುತ್ತದೆ, ಯಾಕಂದರೆ ಈ ಮಾತಿನಲ್ಲಿ ಸ್ತ್ರೀ ಪುರುಷರು ಒಳಗೊಂಡಿರುತ್ತಾರೆ.
* ಈ ಮಾತಿನ ಉಪಯೋಗವು ಮನುಷ್ಯರ ತಂದೆ ಮತ್ತು ಮಗ ಸಂಬಂಧದಲ್ಲಿ ಪುತ್ರರಾಗಿರುವದರಿಂದ ಉಂಟಾಗುವ ಎಲ್ಲಾ ಸವಲತ್ತುಗಳಿರುವಂತೆಯೇ ದೇವರೊಂದಿಗಿರುವ ಸಂಬಂಧದ ಕುರಿತಾಗಿ ಮಾತನಾಡುತ್ತದೆ,
* “ದೇವರ ಮಗ” ಎನ್ನುವ ಬಿರುದು ವಿಭಿನ್ನವಾದ ಮಾತಾಗಿರುತ್ತದೆ: ಇದು ದೇವರ ಒಬ್ಬನೇ ಮಗನಾಗಿರುವ ಯೇಸುವನ್ನು ಸೂಚಿಸುವಂತಹ ಮಾತಾಗಿರುತ್ತದೆ.
## ಅನುವಾದ ಸಲಹೆಗಳು:
* “ದೇವ ಪುತ್ರರು” ಎನ್ನುವ ಮಾತನ್ನು ಯೇಸುವಿನ ವಿಶ್ವಾಸಿಗಳಿಗೆ ಉಪಯೋಗಿಸಿದಾಗ, ಇದನ್ನು “ದೇವರ ಮಕ್ಕಳು” ಎಂದು ಅನುವಾದ ಮಾಡಬಹುದು.
* ಆದಿಕಾಂಡ 6:2 ಮತ್ತು 4ರಲ್ಲಿರುವ “ದೇವ ಪುತ್ರರು” ಎನ್ನುವ ಮಾತನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದೂತರು”, “ಆತ್ಮಗಳು”, “ಪ್ರಕೃತಾತೀತವಾದ ಜೀವಿಗಳು” ಅಥವಾ “ದೆವ್ವಗಳು” ಎನ್ನುವ ಪದಗಳು ಅಥವಾ ಮಾತುಗಳು ಒಳಗೊಂಡಿರುತ್ತವೆ.
* “ಮಗ” ಎನ್ನುವ ಅನುಬಂಧನವನ್ನು ನೋಡಿರಿ.
(ಈ ಪದಗಳನ್ನು ಸಹ ನೋಡಿರಿ : [ದೂತ](../kt/angel.md), [ದೆವ್ವ](../kt/demon.md), [ಮಗ](../kt/son.md), [ದೇವರ ಮಗ](../kt/sonofgod.md), [ಪಾಲಕ](../other/ruler.md), [ಆತ್ಮ](../kt/spirit.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.06:1-3](rc://*/tn/help/gen/06/01)
* [ಆದಿ.06:4](rc://*/tn/help/gen/06/04)
* [ಯೋಬ.01:6-8](rc://*/tn/help/job/01/06)
* [ರೋಮಾ.08:14-15](rc://*/tn/help/rom/08/14)
## ಪದ ಡೇಟಾ:
* Strong's: H430, H1121, G2316, G5043, G5207