kn_tw/bible/kt/sonofman.md

37 lines
5.0 KiB
Markdown

# ಮನುಷ್ಯ ಕುಮಾರನು, ಮನುಷ್ಯನ ಮಗ
## ಪದದ ಅರ್ಥವಿವರಣೆ:
“ಮನುಷ್ಯ ಕುಮಾರ” ಎನ್ನುವ ಬಿರುದು ಯೇಸುವನ್ನು ಸೂಚಿಸಿಕೊಳ್ಳುವುದಕ್ಕೆ ಯೇಸುವಿನಿಂದಲೇ ಉಪಯೋಗಿಸಲ್ಪಟ್ಟಿರುತ್ತದೆ. ಆತನು “ನಾನು” ಅಥವಾ “ನಾನೇ” ಎನ್ನುವ ಪದಗಳನ್ನು ಉಪಯೋಗಿಸುವುದಕ್ಕೆ ಬದಲಾಗಿ ಈ ಮಾತನ್ನು ಉಪಯೋಗಿಸಿರುತ್ತಾರೆ.
* ಸತ್ಯವೇದದಲ್ಲಿ “ಮನುಷ್ಯ ಮಗ” ಎನ್ನುವ ಮಾತು ಮನುಷ್ಯನನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ. ಇದಕ್ಕೆ “ಮಾನವ” ಎಂದರ್ಥ.
* ಹಳೇ ಒಡಂಬಡಿಕೆಯ ಪುಸ್ತಕವಾಗಿರುವ ಯೆಹೆಜ್ಕೇಲ ಗ್ರಂಥದಲ್ಲೆಲ್ಲಾ ದೇವರು ಯೆಹೆಜ್ಕೇಲನನ್ನು “ನರಪುತ್ರ” ಎಂಬುದಾಗಿ ಸೂಚಿಸಿರುವುದನ್ನು ನಾವು ನೋಡಬಹುದು. ಉದಾಹರಣೆಗೆ, “ನರಪುತ್ರನೆ, ನೀನು ತಪ್ಪದೇ ಪ್ರವಾದಿಸಬೇಕು” ಎಂದು ದೇವರು ಹೇಳಿದ್ದಾರೆ.
* “ಮನುಷ್ಯನ ಮಗ” ಮೇಘಗಳೊಂದಿಗೆ ಬರುತ್ತಿರುವುದನ್ನು ಪ್ರವಾದಿಯಾದ ದಾನಿಯೇಲನು ದರ್ಶನವನ್ನು ಕಂಡನು, ಇದು ಬರುವ ಮೆಸ್ಸೀಯನಿಗೆ ಸೂಚನೆಯಾಗಿದ್ದಿತ್ತು.
* ಮನುಷ್ಯ ಕುಮಾರನು ತಿರುಗಿ ಮೇಘಗಳ ಮೇಲೆ ಬರುವನೆಂದು ಯೇಸು ಕೂಡ ಹೇಳಿದ್ದಾನೆ.
* ಈ ಎಲ್ಲಾ ವಚನಗಳು ಮೇಘಗಳ ನಡುವೆ ಬರುವ ಮನುಷ್ಯ ಕುಮಾರನು ಬರುತ್ತಾನೆನ್ನುವುದು ಮೆಸ್ಸೀಯನಾಗಿರುವ ಯೇಸು ದೇವರಾಗಿದ್ದಾನೆ ಎಂದು ತಿಳಿಸುತ್ತದೆ.
## ಅನುವಾದ ಸಲಹೆಗಳು:
* “ಮನುಷ್ಯ ಕುಮಾರನು” ಎಂದು ಯೇಸು ಉಪಯೋಗಿಸಿದಾಗ, ಇದನ್ನು “ಮನುಷ್ಯನಾಗಿ ಬಂದಿರುವ ವ್ಯಕ್ತಿ” ಅಥವಾ “ಪರಲೋಕದಿಂದ ಬಂದಿರುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
* ಕೆಲವೊಂದು ಅನುವಾದಗಳು ಕೆಲವೊಮ್ಮೆ ಈ ಬಿರುದುನೊಂದಿಗೆ “ನಾನು” ಅಥವಾ “ನಾನೇ” (ಮನುಷ್ಯನಾಗಿರುವ ನಾನೇ) ಎಂಬುದಾಗಿಯೂ ಉಪಯೋಗಿಸಿರುತ್ತಾರೆ, ಯಾಕಂದರೆ ಯೇಸುವು ತನ್ನ ಕುರಿತಾಗಿಯೇ ಮಾತನಾಡುತ್ತಿದ್ದಾನೆಂದು ಸ್ಪಷ್ಟವಾಗಿ ಹೇಳುವುದಕ್ಕೆ ಈ ರೀತಿ ಉಪಯೋಗಿಸಿರುತ್ತಾರೆ.
* ಈ ಪದದ ಅನುವಾದವು ತಪ್ಪಾದ ಅರ್ಥವನ್ನು ಕೊಡದಂತೆ ನೋಡಿಕೊಳ್ಳಿರಿ (ಯೇಸು ಮನುಷ್ಯ ಕುಮಾರನು ಮಾತ್ರವೇ ಆಗಿರುತ್ತಾನೆನ್ನುವ ತಪ್ಪಾದ ಭಾವನೆಯನ್ನು ಕೊಡದಂತೆ ಅಥವಾ ಅಕ್ರಮ ಮಗ ಎನ್ನುವುದನ್ನು ಸೂಚಿಸದಂತೆ ನೋಡಿಕೊಳ್ಳಿರಿ).
* ಈ ಪದವು ಒಬ್ಬ ವ್ಯಕ್ತಿಗೆ ಸೂಚಿಸುವುದಕ್ಕೆ ಉಪಯೋಗಿಸಿದಾಗ, “ಮನುಷ್ಯನ ಮಗ” ಎನ್ನುವ ಮಾತನ್ನು “ನೀನು, ಮನುಷ್ಯನು” ಅಥವಾ “ನೀನು, ಮಾನವನು” ಅಥವಾ “ಮಾನವಾಳಿ” ಅಥವಾ “ಮನುಷ್ಯನು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಆಕಾಶ](../kt/heaven.md), [ಮಗ](../kt/son.md), [ದೇವರ ಮಗ](../kt/sonofgod.md), [ಯೆಹೋವ](../kt/yahweh.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.07:54-56](rc://*/tn/help/act/07/54)
* [ದಾನಿ.07:13-14](rc://*/tn/help/dan/07/13)
* [ಯೆಹೆ.43:6-8](rc://*/tn/help/ezk/43/06)
* [ಯೋಹಾನ.03:12-13](rc://*/tn/help/jhn/03/12)
* [ಲೂಕ.06:3-5](rc://*/tn/help/luk/06/03)
* [ಮಾರ್ಕ.02:10-12](rc://*/tn/help/mrk/02/10)
* [ಮತ್ತಾಯ.13:36-39](rc://*/tn/help/mat/13/36)
* [ಕೀರ್ತನೆ.080:17-18](rc://*/tn/help/psa/080/017)
* [ಪ್ರಕ.14:14-16](rc://*/tn/help/rev/14/14)
## ಪದ ಡೇಟಾ:
* Strong's: H120, H606, H1121, H1247, G444, G5207