kn_tw/bible/kt/satan.md

52 lines
8.4 KiB
Markdown

# ಸೈತಾನ, ದೆವ್ವ, ದುಷ್ಟ
## ಸತ್ಯಾಂಶಗಳು:
ದೆವ್ವವು ದೇವರು ಸೃಷ್ಟಿಸಿದ ಆತ್ಮವಾಗಿದ್ದರೂ, ಅವನು ದೇವರ ವಿರುದ್ಧ ದಂಗೆ ಎದ್ದನು ಮತ್ತು ದೇವರ ಶತ್ರುವಾದನು. ದೆವ್ವವನ್ನು “ಸೈತಾನ” ಮತ್ತು “ದುಷ್ಟನು” ಎಂದೂ ಕರೆಯುತ್ತಾರೆ.
* ದೆವ್ವವು ದೇವರನ್ನು ಮತ್ತು ದೇವರು ಉಂಟು ಮಾಡಿದ ಪ್ರತಿಯೊಂದನ್ನು ದ್ವೇಷಿಸುತ್ತದೆ, ಯಾಕಂದರೆ ಅವನಿಗೆ ದೇವರ ಸ್ಥಾನ ಬೇಕಾಗಿರುತ್ತದೆ
* ಜನರು ದೇವರಿಗೆ ವಿರುದ್ಧವಾಗಿ ತಿರಸ್ಕಾರ ಮಾಡುವುದಕ್ಕೆ ಸೈತಾನನು ಅವರನ್ನು ಶೋಧಿಸುತ್ತಾನೆ.
* ಸೈತಾನ ನಿಯಂತ್ರಣದಿಂದ ಜನರನ್ನು ರಕ್ಷಿಸುವುದಕ್ಕೆ ದೇವರು ತನ್ನ ಒಬ್ಬನೇ ಮಗನಾಗಿರುವ ಯೇಸುವನ್ನು ಕಳುಹಿಸಿದನು.
* “ಸೈತಾನ” ಎನ್ನುವ ಹೆಸರಿಗೆ “ಅಪವಾದಿ” ಅಥವಾ “ವೈರಿ” ಎಂದರ್ಥ.
* “ದೆವ್ವ” ಎನ್ನುವ ಹೆಸರಿಗೆ “ಆರೋಪಿ” ಎಂದರ್ಥ.
## ಅನುವಾದ ಸಲಹೆಗಳು:
* “ದೆವ್ವ” ಎನ್ನುವ ಪದವನ್ನು “ಆರೋಪಿ” ಅಥವಾ “ದುಷ್ಟನು” ಅಥವಾ “ದುರಾತ್ಮಗಳಿಗೆ ಅರಸನು” ಅಥವಾ “ಪ್ರಧಾನ ದುಷ್ಟಾತ್ಮನು” ಎಂದೂ ಅನುವಾದ ಮಾಡುತ್ತಾರೆ.
* “ಸೈತಾನ” ಎನ್ನುವ ಪದವನ್ನು “ವಿರೋಧಿ” ಅಥವಾ “ಎದುರಾಳಿ” ಎಂದೂ ಅನುವಾದ ಮಾಡಬಹುದು. ಅಥವಾ ಅವನು ದೆವ್ವ ಎಂದು ತೋರಿಸುವ ಇತರ ಹೆಸರಿನಿಂದ ಅನುವಾದ ಮಾಡಬಹುದು.
* ಈ ಪದವನ್ನು ರಾಕ್ಷಸ ಮತ್ತು ದುಷ್ಟ ಶಕ್ತಿ ಎನ್ನುವ ಪದಗಳಿಗೆ ವಿಭಿನ್ನವಾಗಿ ಅನುವಾದ ಮಾಡಬೇಕಾಗಿರುತ್ತದೆ.
* ಸ್ಥಳೀಯ ಅಥವಾ ಜಾತೀಯ ಭಾಷೆಯಲ್ಲಿ ಈ ಪದಗಳನ್ನು ಹೇಗೆ ಅನುವಾದ ಮಾಡಬೇಕೆಂದು ಗಮನಿಸಿರಿ.
(ನೋಡಿರಿ: [ಗೊತ್ತಿಲ್ಲದವುಗಳನ್ನು ಯಾವ ರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-names))
(ಈ ಪದಗಳನ್ನು ಸಹ ನೋಡಿರಿ : [ದೆವ್ವ](../kt/demon.md), [ದುಷ್ಟ](../kt/evil.md), [ದೇವರ ರಾಜ್ಯ](../kt/kingdomofgod.md), [ಶೋಧಿಸು](../kt/tempt.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಯೋಹಾನ.03:08](rc://*/tn/help/1jn/03/08)
* [1 ಥೆಸ್ಸ.02:17-20](rc://*/tn/help/1th/02/17)
* [1 ತಿಮೊಥೆ.05:15](rc://*/tn/help/1ti/05/15)
* [ಅಪೊ.ಕೃತ್ಯ.13:10](rc://*/tn/help/act/13/10)
* [ಯೋಬ.01:08](rc://*/tn/help/job/01/08)
* [ಮಾರ್ಕ.08:33](rc://*/tn/help/mrk/08/33)
* [ಜೆಕರ್ಯ.03:01](rc://*/tn/help/zec/03/01)
## ಸತ್ಯೆವೇದ ಕತೆಗಳಿಂದ ಉದಾಹರಣೆಗಳು:
* __[21:01](rc://*/tn/help/obs/21/01)__ ಹವ್ವಳನ್ನು ಮೋಸಗೊಳಿಸಿದ ಹಾವು __ ಸೈತಾನನಾಗಿದ್ದನು __. ಮೆಸ್ಸೀಯ ಬಂದು __ ಸೈತಾನನನ್ನು __ ಪೂರ್ತಿಯಾಗಿ ಸೋಲಿಸುವನೆಂದು ವಾಗ್ಧಾನದ ಅರ್ಥವಾಗಿರುತ್ತದೆ.
* __[25:06](rc://*/tn/help/obs/25/06)__ ಸೈತಾನನು ಯೇಸುವಿಗೆ ಎಲ್ಲಾ ರಾಜ್ಯಗಳನ್ನು ಮತ್ತು ಅವುಗಳ ಮಹಿಮೆಯನ್ನು ತೋರಿಸಿದನು, ಮತ್ತು “ನೀನು ನನಗೆ ಅಡ್ಡಬಿದ್ದು, ಆರಾಧನೆ ಮಾಡಿದರೆ ಈ ಎಲ್ಲಾ ರಾಜ್ಯಗಳನ್ನು ನಾನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
* __[25:08](rc://*/tn/help/obs/25/08)__ ಸೈತಾನನ _ ಶೋಧನೆಗಳಿಗೆ ಯೇಸುವು ಒಳಗಾಗಲಿಲ್ಲ, ಇದರಿಂದ __ ಸೈತಾನನು __ ಆತನನ್ನು ಬಿಟ್ಟು ಹೋದನು.
* __[33:06](rc://*/tn/help/obs/33/06)__ “ಬೀಜವು ದೇವರ ವಾಕ್ಯವೇ. ಮಾರ್ಗವು ದೇವರ ವಾಕ್ಯವನ್ನು ಕೇಳುವ ವ್ಯಕ್ತಿಯಾಗಿರುತ್ತಾನೆ, ಆದರೆ ಆ ವಾಕ್ಯವನ್ನು ಅರ್ಥ ಮಾಡಿಕೊಳ್ಳುವುದಿಲ್ಲ, ಮತ್ತು __ ದೆವ್ವವು __ ಆ ವಾಕ್ಯವನ್ನು ಅವನಿಂದ ತೆಗೆದುಕೊಳ್ಳುವನು.”
* __[38:07](rc://*/tn/help/obs/38/07)__ ಯೂದನು ಆ ರೊಟ್ಟಿಯನ್ನು ತೆಗೆದುಕೊಂಡನಂತರ, __ ಸೈತಾನನು __ ಅವನೊಳಗೆ ಪ್ರವೇಶಿಸಿದನು.
* __[48:04](rc://*/tn/help/obs/48/04)__ ಹವ್ವಳ ಸಂತಾನದಲ್ಲಿ ಒಬ್ಬರು __ ಸೈತಾನನ __ ತಲೆಯನ್ನು ಜಜ್ಜುವನು ಎಂದು ದೇವರು ವಾಗ್ಧಾನ ಮಾಡಿದ್ದಾರೆ ಮತ್ತು __ ಸೈತನಾನು __ ಆತನ ಹಿಮ್ಮಡಿಯನ್ನು ಕಚ್ಚುವನು. __ ಸೈತಾನನು __ ಮೆಸ್ಸೀಯನನ್ನು ಸಾಯಿಸುತ್ತಾನೆಂದು ಇದರ ಅರ್ಥವಾಗಿರುತ್ತದೆ. ಆದರೆ ದೇವರು ಆತನನ್ನು ತಿರುಗಿ ಎಬ್ಬಿಸುವವನಾಗಿದ್ದಾನೆ, ಮತ್ತು ಆದನಂತರ ಮೆಸ್ಸೀಯ __ ಸೈತಾನನ __ ಶಕ್ತಿಯನ್ನು ಶಾಶ್ವತವಾಗಿ ಜಜ್ಜುತ್ತಾನೆ.
* __[49:15](rc://*/tn/help/obs/49/15)__ ದೇವರು ನಿನ್ನನ್ನು __ ಸೈತಾನನ __ ಕತ್ತಲೆಯ ರಾಜ್ಯದಿಂದ ಹೊರತಂದು, ಬೆಳಕು ಎನ್ನುವ ದೇವರ ರಾಜ್ಯದೊಳಗೆ ನಿನ್ನನ್ನು ಇಡುತ್ತಾನೆ.
* __[50:09](rc://*/tn/help/obs/50/09)__ “ಕಳೆಯು __ ದುಷ್ಟನಿಗೆ __ ಸಂಬಂಧಪಟ್ಟಿರುವ ಜನರನ್ನು ಪ್ರತಿನಿಧಿಸುತ್ತಿದೆ. ಕಳೆಯನ್ನು ಬಿತ್ತಿದ ವೈರಿಯೂ __ ದುಷ್ಟನಿಗೆ __ ಪ್ರತಿನಿಧಿಸುತ್ತಾನೆ.”
* __[50:10](rc://*/tn/help/obs/50/10)__ “ಲೋಕದ ಅಂತ್ಯವು ಮುಗಿದ ತಕ್ಷಣವೇ, ದೂತರು __ ದುಷ್ಟನಿಗೆ __ ಸಂಬಂಧಪಟ್ಟವರನ್ನು ಒಂದು ಸ್ಥಳಕ್ಕೆ ಕೂಡಿಸುತ್ತಾನೆ ಮತ್ತು ಅವರನ್ನು ಧಗಧಗನೆ ಉರಿಯುತ್ತಿರುವ ಬೆಂಕಿಯೊಳಗೆ ಹಾಕುತ್ತಾನೆ, ಅಲ್ಲಿ ಅವರು ಅಳುವರು ಮತ್ತು ಭಯಂಕರವಾದ ಶ್ರಮೆಯಲ್ಲಿ ಹಲ್ಲುಗಳನ್ನು ಕಡಿಯುತ್ತಾ ಇರುವರು.
* __[50:15](rc://*/tn/help/obs/50/15)__ ಯೇಸು ಹಿಂದಿರುಗಿ ಬರುವಾಗ, ಆತನು ಸಂಪೂರ್ಣವಾಗಿ __ ಸೈತಾನನನ್ನು __ ಮತ್ತು ತನ್ನ ರಾಜ್ಯವನ್ನು ನಾಶಗೊಳಿಸುವನು. ಆತನು __ ಸೈತಾನನನ್ನು __ ಮತ್ತು ದೇವರಿಗೆ ವಿಧೇಯರಾಗದೇ ಅವನನ್ನು ಹಿಂಬಾಲಿಸುವ ಪ್ರತಿಯೊಬ್ಬರನ್ನೂ ಶಾಶ್ವತವಾಗಿ ಸುಟ್ಟು ಹೋಗುವುದಕ್ಕೆ ನರಕದಲ್ಲಿ ಎಸೆಯುತ್ತಾನೆ,
## ಪದ ಡೇಟಾ:
* Strong's: H7700, H7854, H8163, G1139, G1140, G1141, G1142, G1228, G4190, G4566, G4567