kn_tw/bible/kt/sanctuary.md

33 lines
4.1 KiB
Markdown

# ಪವಿತ್ರ ಸ್ಥಳ
## ಪದದ ಅರ್ಥವಿವರಣೆ:
“ಪವಿತ್ರ ಸ್ಥಳ” ಎನ್ನುವ ಪದವನ್ನು ಅಕ್ಷರಾರ್ಥವಾಗಿ “ಪರಿಶುದ್ಧ ಸ್ಥಾನ” ಎಂದರ್ಥ ಮತ್ತು ಇದು ದೇವರು ಪರಿಶುದ್ಧ ಮಾಡಿದ ಮತ್ತು ಪವಿತ್ರ ಮಾಡಿದ ಸ್ಥಳವನ್ನು ಸೂಚಿಸುತ್ತದೆ. ಇದನ್ನು ಸಂರಕ್ಷಣೆ ಮತ್ತು ಭದ್ರತೆಯನ್ನು ಕೊಡುವ ಸ್ಥಳವನ್ನು ಸೂಚಿಸುತ್ತದೆ.
* ಹಳೇ ಒಡಂಬಡಿಕೆಯಲ್ಲಿ “ಪವಿತ್ರ ಸ್ಥಳ” ಎನ್ನುವ ಪದವನ್ನು ಅನೇಕಬಾರಿ “ಪರಿಶುದ್ಧ ಸ್ಥಳ” ಮತ್ತು “ಅತಿ ಪರಿಶುದ್ಧ ಸ್ಥಳ”ಗಳನ್ನು ಹೊಂದಿರುವ ದೇವಾಲಯ ಭವನವನ್ನು ಅಥವಾ ಗುಡಾರವನ್ನು ಸೂಚಿಸುತ್ತದೆ.
* ದೇವರು ತನ್ನ ಇಸ್ರಾಯೇಲ್ ಜನರ ಮಧ್ಯೆದಲ್ಲಿ ನಿವಾಸ ಮಾಡುವ ಸ್ಥಳವನ್ನಾಗಿ ದೇವರು ಈ ಪವಿತ್ರವಾದ ಸ್ಥಳವನ್ನು ಸೂಚಿಸಿದ್ದಾನೆ.
* ದೇವರು ತನ್ನನ್ನು ತಾನು “ಪವಿತ್ರ ಸ್ಥಳ” ಎಂಬುದಾಗಿ ಕರೆದುಕೊಂಡನು ಅಥವಾ ಜನರು ತಮಗೆ ಸಂರಕ್ಷಣೆಯನ್ನು ಕಂಡುಕೊಳ್ಳುವ ಭದ್ರತೆಯ ಸ್ಥಳವನ್ನಾಗಿ ಕರೆದುಕೊಂಡನು.
## ಅನುವಾದ ಸಲಹೆಗಳು:
* ಈ ಪದಕ್ಕೆ ಪ್ರಾಥಮಿಕ ಅರ್ಥವು “ಪರಿಶುದ್ಧ ಸ್ಥಳವು” ಅಥವಾ “ಪ್ರತ್ಯೇಕಿಸಲ್ಪಟ್ಟ ಸ್ಥಳ” ಎಂದಾಗಿರುತ್ತದೆ.
* ಸಂದರ್ಭಾನುಸಾರವಾಗಿ, “ಪವಿತ್ರ ಸ್ಥಳ” ಎನ್ನುವ ಮಾತನ್ನು “ಪರಿಶುದ್ಧ ಸ್ಥಳ” ಅಥವಾ “ಪವಿತ್ರ ಭವನ” ಅಥವಾ “ದೇವರ ನಿವಾಸವಾಗುವ ಪರಿಶುದ್ಧವಾದ ಸ್ಥಳ” ಅಥವಾ “ಸಂರಕ್ಷಣೆಯ ಪರಿಶುದ್ಧವಾದ ಸ್ಥಳ” ಅಥವಾ “ಭದ್ರತೆಯ ಪರಿಶುದ್ಧ ಸ್ಥಳ” ಎಂದೂ ಅನುವಾದ ಮಾಡಬಹುದು.
* “ಪವಿತ್ರವಾದ ಶೆಕೆಲ್” ಎನ್ನುವ ಮಾತನ್ನು “ಗುಡಾರಕ್ಕಾಗಿ ಕೊಡಲ್ಪಡುವ ಒಂದು ವಿಧವಾದ ಶೆಕೆಲ್” ಅಥವಾ “ದೇವಾಲಯವನ್ನು ನೋಡಿಕೊಳ್ಳುವುದಕ್ಕೆ ತೆರಿಗೆ ಕಟ್ಟುವುದರಲ್ಲಿ ಉಪಯೋಗಿಸುವ ಶೆಕೆಲ್” ಎಂದೂ ಅನುವಾದ ಮಾಡಬಹುದು.
* ಗಮನಿಸಿ: ಈ ಪದಕ್ಕೆ ಮಾಡಿದ ಅನುವಾದವು ಈಗಿನ ಆಧುನಿಕ ಸಭೆಯಲ್ಲಿ ಆರಾಧನೆ ಮಾಡುವುದಕ್ಕೆ ಉಪಯೋಗಿಸುವ ಕೊಠಡಿಯನ್ನು ಸೂಚಿಸದಂತೆ ನೋಡಿಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : [ಪರಿಶುದ್ಧ](../kt/holy.md), [ಪವಿತ್ರಾತ್ಮ](../kt/holyspirit.md), [ಪರಿಶುದ್ಧ](../kt/holy.md), [ಪ್ರತ್ಯೇಕಿಸು](../kt/setapart.md), [ಗುಡಾರ](../kt/tabernacle.md), [ತೆರಿಗೆ](../other/tax.md), [ದೇವಾಲಯ](../kt/temple.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆಮೋಸ.07:12-13](rc://*/tn/help/amo/07/12)
* [ವಿಮೋ.25:3-7](rc://*/tn/help/exo/25/03)
* [ಯೆಹೆ.25:3-5](rc://*/tn/help/ezk/25/03)
* [ಇಬ್ರಿ.08:1-2](rc://*/tn/help/heb/08/01)
* [ಲೂಕ.11:49-51](rc://*/tn/help/luk/11/49)
* [ಅರಣ್ಯ.18:1-2](rc://*/tn/help/num/18/01)
* [ಕೀರ್ತನೆ.078:67-69](rc://*/tn/help/psa/078/067)
## ಪದ ಡೇಟಾ:
* Strong's: H4720, H6944, G39