kn_tw/bible/kt/sanctify.md

31 lines
4.2 KiB
Markdown

# ಪವಿತ್ರೀಕರಿಸು, ಪವಿತ್ರೀಕರಿಸುವುದು
## ಪದದ ಅರ್ಥವಿವರಣೆ:
ಪವಿತ್ರೀಕರಿಸು ಎಂದರೆ ಪರಿಶುದ್ಧವನ್ನಾಗಿ ಮಾಡು ಅಥವಾ ಪ್ರತ್ಯೇಕಿಸು ಎಂದರ್ಥ. ಪವಿತ್ರೀಕರಣ ಎನ್ನುವುದು ಪರಿಶುದ್ಧವನ್ನಾಗಿ ಮಾಡುವ ವಿಧಾನ ಎಂದರ್ಥ.
* ಹಳೇ ಒಡಂಬಡಿಕೆಯಲ್ಲಿ ದೇವರ ಸೇವೆಗಾಗಿ ಕೆಲವೊಂದು ನಿರ್ದಿಷ್ಟವಾದ ಜನರು ಮತ್ತು ವಸ್ತುಗಳು ಪವಿತ್ರೀಕರಿಸಲ್ಪಡುತ್ತವೆ, ಅಥವಾ ಪ್ರತ್ಯೇಕಿಸಲ್ಪಡುತ್ತವೆ.
* ಯೇಸುವಿನಲ್ಲಿ ನಂಬಿದ ಜನರನ್ನು ದೇವರು ಪವಿತ್ರೀಕರಿಸುವರೆಂದು ಹೊಸ ಒಡಂಬಡಿಕೆ ಬೋಧಿಸುತ್ತದೆ. ಆತನಿಗೆ ಸೇವೆ ಮಾಡುವುದಕ್ಕೆ ಆತನು ಅವರನ್ನು ಪ್ರತ್ಯೇಕಿಸುವನು ಮತ್ತು ಪರಿಶುದ್ಧಗೊಳಿಸುವನು.
* ಯೇಸುವಿನಲ್ಲಿ ನಂಬಿಕೆ ಇಟ್ಟಿರುವ ಜನರು ತಮ್ಮನ್ನು ತಾವು ದೇವರಿಗಾಗಿ ಪವಿತ್ರೀಕರಿಸಿಕೊಳ್ಳಬೇಕೆಂದು, ಅವರು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಪರಿಶುದ್ಧರಾಗಿರಬೇಕೆನ್ನುವ ಆಜ್ಞೆಯನ್ನು ಹೊಂದಿರುತ್ತಾರೆ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ, “ಪವಿತ್ರೀಕರಿಸು” ಎನ್ನುವ ಪದವನ್ನು “ಪ್ರತ್ಯೇಕಿಸು” ಅಥವಾ “ಪರಿಶುದ್ಧವನ್ನಾಗಿ ಮಾಡು” ಅಥವಾ “ಶುದ್ಧೀಕರಿಸು” ಎಂದೂ ಅನುವಾದ ಮಾಡಬಹುದು.
* ಜನರು ತಮ್ಮನ್ನು ತಾವು ಪವಿತ್ರೀಕರಿಸಿಕೊಳ್ಳುವಾಗ, ಅವರು ತಮ್ಮನ್ನು ತಾವು ಶುದ್ಧೀಕರಿಸಿಕೊಳ್ಳುವರು ಮತ್ತು ದೇವರಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವರು. ಇದೇ ಅರ್ಥವನ್ನು ಹೊಂದಿರುವ ಪದವಾಗಿರುವ “ಪ್ರತಿಷ್ಠಾಪಿಸು” ಎನ್ನುವ ಪದವನ್ನು ಸತ್ಯವೇದದಲ್ಲಿ ಉಪಯೋಗಿಸಿರುತ್ತಾರೆ.
* ಇದರ ಅರ್ಥವು “ಪ್ರತಿಷ್ಠಾಪಿಸು” ಎಂದಾಗಿದ್ದಾಗ, ಈ ಪದವನ್ನು “ದೇವರ ಸೇವೆಗಾಗಿ ಯಾರಾದರೊಬ್ಬರನ್ನು (ಅಥವಾ ಯಾವುದಾದರೊಂದನ್ನು) ಪ್ರತಿಷ್ಠೆ ಮಾಡು” ಎಂದೂ ಅನುವಾದ ಮಾಡಬಹುದು.
* ಸಂದರ್ಭಾನುಸಾರವಾಗಿ, “ನಿನ್ನ ಪವಿತ್ರೀಕರಣ” ಎನ್ನುವ ಮಾತನ್ನು “ನಿನ್ನನ್ನು ಪರಿಶುದ್ಧ ಮಾಡುವುದು” ಅಥವಾ “(ದೇವರಿಗಾಗಿ) ನಿನ್ನನ್ನು ಪ್ರತ್ಯೇಕಿಸುವುದು” ಅಥವಾ “ನಿನ್ನನ್ನು ಪರಿಶುದ್ಧ ಮಾಡುವುದು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಪ್ರತಿಷ್ಠಾಪಿಸು](../kt/consecrate.md), [ಪರಿಶುದ್ಧ](../kt/holy.md), [ಪ್ರತ್ಯೇಕಿಸಿಕೋ](../kt/setapart.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಥೆಸ್ಸ.04:3-6](rc://*/tn/help/1th/04/03)
* [2 ಥೆಸ್ಸ.02:13](rc://*/tn/help/2th/02/13)
* [ಆದಿ.02:1-3](rc://*/tn/help/gen/02/01)
* [ಲೂಕ.11:2](rc://*/tn/help/luk/11/02)
* [ಮತ್ತಾಯ.06:8-10](rc://*/tn/help/mat/06/08)
## ಪದ ಡೇಟಾ:
* Strong's: H6942, G37, G38