kn_tw/bible/kt/sabbath.md

44 lines
5.6 KiB
Markdown

# ಸಬ್ಬತ್
## ಪದದ ಅರ್ಥವಿರರಣೆ:
“ಸಬ್ಬತ್” ಎನ್ನುವ ಪದವು ವಾರದ ಏಳನೇಯ ದಿನವನ್ನು ಸೂಚಿಸುತ್ತದೆ, ಈ ದಿನದಂದು ಯಾವ ಕೆಲಸವನ್ನು ಮಾಡದೇ ವಿಶ್ರಾಂತಿ ತೆಗೆದುಕೊಂಡಿರಲು ಪ್ರತ್ಯೇಕಿಸಬೇಕೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದರು.
* ದೇವರು ಈ ಸರ್ವ ಸೃಷ್ಟಿಯನ್ನು ಆರು ದಿನಗಳಲ್ಲಿ ಮಾಡಿ ಮುಗಿಸಿದನಂತರ, ಆತನು ಏಳನೇಯ ದಿನದಂದು ವಿಶ್ರಾಂತಿ ತೆಗೆದುಕೊಂಡನು. ಈ ರೀತಿಯಲ್ಲಿಯೇ, ಆತನನ್ನು ಆರಾಧನೆ ಮಾಡುವುದಕ್ಕೆ ಮತ್ತು ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ವಿಶೇಷ ದಿನವನ್ನಾಗಿ ಏಳನೇ ದಿನವನ್ನು ಪ್ರತ್ಯೇಕಿಸಬೇಕೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದರು.
* “ಸಬ್ಬತ್ ದಿನವನ್ನು ಪರಿಶುದ್ಧವೆಂದು ಎಣಿಸಿ ” ಆಜ್ಞೆಯು ಹತ್ತು ಆಜ್ಞೆಗಳಲ್ಲಿ ಒಂದಾಗಿರುತ್ತದೆ, ದೇವರು ಇಸ್ರಾಯೇಲ್ಯರಿಗಾಗಿ ಮೋಶೆ ಕೊಟ್ಟಿರುವ ಶಿಲಾಶಾಸನಗಳ ಮೇಲೆ ದೇವರು ಬರೆದಿರುವ ಆಜ್ಞೆಯಾಗಿತ್ತು.
* ದಿನಗಳು ಎಣಿಸುವ ಯೆಹೂದ್ಯರ ವಿಧಾನದ ಪ್ರಕಾರ, ಸಬ್ಬತ್ ದಿನವು ಶುಕ್ರವಾರ ಸಾಯಂಕಾಲ ಆರಂಭವಾಗಿ ಶನಿವಾರ ಸಾಯಂಕಾಲದವರೆಗೆ ಇರುತ್ತದೆ.
* ಸತ್ಯವೇದದಲ್ಲಿ ಕೆಲವೊಂದುಬಾರಿ ಸಬ್ಬತ್ ಎನ್ನುವುದನ್ನು ಕೇವಲ ಸಬ್ಬತ್ ಎಂದು ಕರೆಯಲ್ಪಡದೆ “ಸಬ್ಬತ್ ದಿನ” ಎಂದು ಕರೆಯಲ್ಪಟ್ಟಿದೆ.
## ಅನುವಾದ ಸಲಹೆಗಳು:
* ಈ ಪದವನ್ನು ‘ವಿಶ್ರಾಂತಿ ದಿನ” ಅಥವಾ “ವಿಶ್ರಾಂತಿಗಾಗಿ ನೇಮಿಸಿದ ದಿನ” ಅಥವಾ “ಕೆಲಸ ಮಾಡದ ದಿನ” ಅಥವಾ “ವಿಶ್ರಾಂತಿ ತೆಗೆದುಕೊಳ್ಳುವ ದೇವರ ದಿನ” ಎಂದೂ ಅನುವಾದ ಮಾಡಬಹುದು.
* ಕೆಲವೊಂದು ಅನುವಾದಗಳಲ್ಲಿ ಈ ಪದದ ಮೊದಲನೇ ಅಕ್ಷರವನ್ನು ದೊಡ್ಡದಾಗಿ ಮಾಡಿ ತೋರಿಸುತ್ತಾರೆ, ಉದಾಹರಣೆಗೆ, “ಸಬ್ಬತ್ ದಿನ” ಅಥವಾ “ವಿಶ್ರಾಂತಿ ದಿನ”.
* ಸ್ಥಳೀಯ ಅಥವಾ ಜಾತೀಯ ಭಾಷೆಯಲ್ಲಿ ಈ ಪದವನ್ನು ಹೇಗೆ ಅನುವಾದ ಮಾಡಿದ್ದಾರೆಂದು ಗಮನಿಸಿರಿ.
(ಅನುವಾದ ಸಲಹೆಗಳು: [ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ವಿಶ್ರಾಂತಿ](../other/rest.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಪೂರ್ವ.31:2-3](rc://*/tn/help/2ch/31/02)
* [ಅಪೊ.ಕೃತ್ಯ.13:26-27](rc://*/tn/help/act/13/26)
* [ವಿಮೋ.31:12-15](rc://*/tn/help/exo/31/12)
* [ಯೆಶಯಾ.56:6-7](rc://*/tn/help/isa/56/06)
* [ಪ್ರಲಾಪ.02:5-6](rc://*/tn/help/lam/02/05)
* [ಯಾಜಕ.19:1-4](rc://*/tn/help/lev/19/01)
* [ಲೂಕ.13:12-14](rc://*/tn/help/luk/13/12)
* [ಮಾರ್ಕ.02:27-28](rc://*/tn/help/mrk/02/27)
* [ಮತ್ತಾಯ.12:1-2](rc://*/tn/help/mat/12/01)
* [ನೆಹೆ.10:32-33](rc://*/tn/help/neh/10/32)
## ಸತ್ಯವೇದದಿಂದ ಉದಾಹರಣೆಗಳು:
* __[13:05](rc://*/tn/help/obs/13/05)__ “__ ಸಬ್ಬತ್ ದಿನವನ್ನು __ ಪರಿಶುದ್ಧ ದಿನವನ್ನಾಗಿ ನೋಡಿಕೊಳ್ಳುವುದರಲ್ಲಿ ನಿಶ್ಚಯ ಮಾಡಿಕೊಳ್ಳಿರಿ. ಆರು ದಿನಗಳು ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಿರಿ, ಏಳನೇ ದಿನವು ನನ್ನನ್ನು ಘನ ಪಡಿಸುವುದಕ್ಕೆ ಮತ್ತು ನೀವು ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಪ್ರತ್ಯೇಕಿಸಿರಿ.
* __[26:02](rc://*/tn/help/obs/26/02)__ ಯೇಸು ನಿವಾಸ ಮಾಡಿರುವ ಸ್ಥಳವು ಮತ್ತು ತನ್ನ ಬಾಲ್ಯ ದಿನಗಳು ಎಲ್ಲವು ಕಳೆದ ನಜರೇತಿಗೆ ಹೋದನು. __ ಸಬ್ಬತ್ ದಿನದಂದು __ ಆತನು ಆರಾಧನೆ ಮಾಡುವ ಸ್ಥಳಕ್ಕೆ ಹೋದನು.
* __[41:03](rc://*/tn/help/obs/41/03)__ ಯೇಸುವನ್ನು ಮಡಿದ ದಿನದ ಆ ಮರುದಿನವು __ ಸಬ್ಬತ್ ದಿನವಾಗಿದ್ದಿತ್ತು __, ಮತ್ತು ಆ ದಿನದಂದು ಸಮಾಧಿಯ ಬಳಿಗೆ ಹೋಗುವುದಕ್ಕೆ ಯೆಹೂದ್ಯರಿಗೆ ಅನುಮತಿಯಿದ್ದಿಲ್ಲ.
## ಪದ ಡೇಟಾ:
* Strong's: H4868, H7676, H7677, G4315, G4521