76 lines
14 KiB
Markdown
76 lines
14 KiB
Markdown
# ನೀತಿ, ನೀತಿಯುತ, ಅನೀತಿ, ಅನೀತಿಯುತ, ನೀತಿ, ನೀತಿಯುತ
|
|
|
|
## ಪದದ ಅರ್ಥವಿವರಣೆ:
|
|
|
|
“ನೀತಿಯುತ” ಎನ್ನುವ ಪದವು ದೇವರು ಖಂಡಿತವಾದ ಒಳ್ಳೆಯತನ, ನ್ಯಾಯ, ನಂಬಿಕೆತನ ಮತ್ತು ಪ್ರೀತಿ ಎನ್ನುವವುಗಳನ್ನು ಸೂಚಿಸುತ್ತದೆ. ಈ ಗುಣಲಕ್ಷಣಗಳೆಲ್ಲವು ಸೇರಿ ದೇವರನ್ನು “ನೀತಿವಂತನನ್ನಾಗಿ” ಮಾಡುತ್ತವೆ. ದೇವರು ನೀತಿವಂತನಾಗಿರುವದರಿಂದ, ಆತನು ತಪ್ಪದೇ ಪಾಪವನ್ನು ಖಂಡಿಸುತ್ತಾನೆ.
|
|
|
|
* ಈ ಪದಗಳನ್ನು ಅನೇಕಬಾರಿ ದೇವರಿಗೆ ವಿಧೇಯನಾಗುವ ವ್ಯಕ್ತಿಯನ್ನು ಮತ್ತು ನೈತಿಕವಾಗಿ ಒಳ್ಳೆಯತನದಿಂದ ಇರುವ ವ್ಯಕ್ತಿಯನ್ನು ವಿವರಿಸುವುದಕ್ಕೆ ಉಪಯೋಗಿಸಲ್ಪಡುತ್ತವೆ. ಏನೇಯಾದರೂ, ಜನರೆಲ್ಲರೂ ಪಾಪ ಮಾಡಿದ್ದರಿಂದ, ದೇವರನ್ನು ಬಿಟ್ಟು ಯಾವ ಮನುಷ್ಯನೂ ನೀತಿವಂತನಲ್ಲ.
|
|
* ಸತ್ಯವೇದದಲ್ಲಿ “ನೀತಿವಂತರೆಂದು” ಕರೆಯಲ್ಪಟ್ಟಿರುವ ಜನರ ಉದಾಹರಣೆಗಳಲ್ಲಿ ನೋಹ, ಯೋಬ, ಅಬ್ರಾಹಾಮ, ಜೆಕರ್ಯ, ಮತ್ತು ಎಲೀಸಬೇತಳು ಇರುತ್ತಾರೆ.
|
|
* ಜನರು ತಮ್ಮನ್ನು ರಕ್ಷಿಸಬೇಕೆಂದು ಯೇಸುವಿನಲ್ಲಿ ಭರವಸೆ ಇಟ್ಟಾಗ, ದೇವರು ಅವರ ಪಾಪಗಳಿಂದ ಅವರನ್ನು ತೊಳೆಯುವನು ಮತ್ತು ಯೇಸುವಿನ ನೀತಿಯ ಕಾರಣದಿಂದ ಅವರನ್ನು ನೀತಿವಂತರೆಂದು ಪ್ರಕಟಿಸುವನು.
|
|
|
|
“ಅನೀತಿ” ಎನ್ನುವ ಪದಕ್ಕೆ ಪಾಪವನ್ನು ಮಾಡುವುದು ಮತ್ತು ನೈತಿಕವಾಗಿ ಭ್ರಷ್ಟತ್ವದಲ್ಲಿರುವುದು ಎಂದರ್ಥ. “ಅನೀತಿಯುತ ಎನ್ನುವ ಪದವು ಪಾಪ ಸ್ವಭಾವದಿಂದ ಇರುವ ಸ್ಥಿತಿಯನ್ನು ಅಥವಾ ಪಾಪವನ್ನು ಸೂಚಿಸುತ್ತದೆ.
|
|
|
|
* ಈ ಪದಗಳೆಲ್ಲವೂ ವಿಶೇಷವಾಗಿ ದೇವರ ಬೋಧನೆಗಳಿಗೆ ಮತ್ತು ಆಜ್ಞೆಗಳಿಗೆ ಅವಿಧೇಯತೆಯನ್ನು ತೋರಿಸುವ ವಿಧಾನದಲ್ಲಿ ಜೀವನ ಮಾಡುವುದನ್ನು ಸೂಚಿಸುತ್ತವೆ.
|
|
* ಅನೀತಿಯುತವಾದ ಜನರು ತಮ್ಮ ಆಲೋಚನೆಗಳಲ್ಲಿ ಮತ್ತು ಕ್ರಿಯೆಗಳಲ್ಲಿ ಅನೈತಿಕ ವ್ಯಕ್ತಿಗಳಾಗಿರುತ್ತಾರೆ.
|
|
* ಕೆಲವೊಂದುಬಾರಿ “ಅನೀತಿಯು” ವಿಶೇಷವಾಗಿ ಯೇಸುವಿನಲ್ಲಿ ನಂಬದ ಜನರನ್ನು ಸೂಚಿಸುತ್ತದೆ.
|
|
|
|
“ನೀತಿ” ಮತ್ತು “ನೀತಿಯುತ” ಎನ್ನುವ ಪದಗಳು ದೇವರ ಆಜ್ಞೆಗಳನ್ನು ಅನುಸರಿಸುವ ವಿಧಾನದಲ್ಲಿ ನಡೆದುಕೊಳ್ಳುವುದನ್ನು ಸೂಚಿಸುತ್ತದೆ.
|
|
|
|
* ಈ ಪದಗಳ ಅರ್ಥದಲ್ಲಿ ಲಂಬವಾಗಿ ನಿಂತಿಕೊಂಡಿರುವ ಆಲೋಚನೆಯು ಮತ್ತು ಮುಂದಕ್ಕೆ ನೇರವಾಗಿ ನೋಡುವ ಆಲೋಚನೆಯನ್ನು ಒಳಗೊಂಡಿರುತ್ತದೆ.
|
|
* “ನೀತಿ”ಯಿಂದ ಇರುವ ವ್ಯಕ್ತಿ ಎಂದರೆ ದೇವರ ನಿಯಮಗಳಿಗೆ ವಿಧೇಯನಾಗಿರುವ ವ್ಯಕ್ತಿ ಮತ್ತು ದೇವರ ಚಿತ್ತಕ್ಕೆ ವಿರುದ್ಧವಾಗಿ ಕೆಲಸ ಕಾರ್ಯಗಳನ್ನು ಮಾಡದಿರುವ ವ್ಯಕ್ತಿ ಎಂದರ್ಥ.
|
|
* “ಪೂರ್ಣತೆ” ಮತ್ತು “ನೀತಿ” ಎನ್ನುವ ಪದಗಳು ಒಂದೇ ಅರ್ಥಗಳನ್ನು ಹೊಂದಿರುತ್ತವೆ ಮತ್ತು ಕೆಲವೊಂದುಬಾರಿ ಸಮಾನಾಂತರ ನಿರ್ಣಯಗಳಲ್ಲಿ ಉಪಯೋಗಿಸಲ್ಪಡುತ್ತವೆ, ಉದಾಹರಣೆಗೆ, “ಪೂರ್ಣತೆ ಮತ್ತು ನೀತಿಯುತ”. (ನೋಡಿರಿ: [ಸಮಾನಾಂತರ](rc://*/ta/man/translate/figs-parallelism))
|
|
|
|
## ಅನುವಾದ ಸಲಹೆಗಳು:
|
|
|
|
* ಇದು ದೇವರನ್ನು ಸೂಚಿಸಿ ವಿವರಿಸುವಾಗ, “ನೀತಿ” ಎನ್ನುವ ಪದವನ್ನು “ಪರಿಪೂರ್ಣವಾಗಿ ಒಳ್ಳೇಯದು ಮತ್ತು ನ್ಯಾಯವಾದದ್ದು” ಅಥವಾ “ಯಾವಾಗಲೂ ನ್ಯಾಯವಾಗಿ ನಡೆದುಕೊಳ್ಳುವುದು” ಎಂದೂ ಅನುವಾದ ಮಾಡಬಹುದು.
|
|
* ದೇವರ “ನೀತಿಯುತವು” ಎನ್ನುವ ಮಾತನ್ನು “ಪರಿಪೂರ್ಣವಾದ ನಂಬಿಗಸ್ಥಿಕೆಯನ್ನು ಮತ್ತು ಒಳ್ಳೇಯತನ” ಎಂದೂ ಅನುವಾದ ಮಾಡಬಹುದು.
|
|
* ದೇವರಿಗೆ ವಿಧೇಯರಾಗಿರುವ ಜನರ ಕುರಿತಾಗಿ ಈ ಪದವು ವಿವರಿಸುವಾಗ, “ನೀತಿ” ಎನ್ನುವ ಪದವನ್ನು “ನೈತಿಕವಾಗಿ ಒಳ್ಳೇಯದು” ಅಥವಾ “ನ್ಯಾಯವಾದದ್ದು” ಅಥವಾ “ದೇವರು ಇಷ್ಟಪಡುವ ಜೀವನವನ್ನು ಜೀವಿಸುವುದು” ಎಂದೂ ಅನುವಾದ ಮಾಡಬಹುದು.
|
|
* “ನೀತಿವಂತ” ಎನ್ನುವ ಪದವನ್ನು “ನೀತಿವಂತ ಜನರು” ಅಥವಾ “ದೇವರಿಗೆ ಭಯಪಡುವ ಜನರು” ಎಂದೂ ಅನುವಾದ ಮಾಡಬಹುದು.
|
|
* ಸಂದರ್ಭಾನುಸಾರವಾಗಿ, “ನೀತಿಯುತವಾದ” ಎನ್ನುವ ಮಾತನ್ನು “ಒಳ್ಳೆಯತನ” ಅಥವಾ “ದೇವರ ಮುಂದೆ ಪರಿಪೂರ್ಣವಾಗಿರುವುದು” ಅಥವಾ “ದೇವರಿಗೆ ವಿಧೇಯತೆಯನ್ನು ತೋರಿಸುವುದರ ಮೂಲಕ ಸರಿಯಾದ ಮಾರ್ಗದಲ್ಲಿ ನಡೆದುಕೊಳ್ಳುವುದು” ಅಥವಾ “ಪರಿಪೂರ್ಣವಾದ ಒಳ್ಳೇಯದನ್ನೇ ಮಾಡುವುದು” ಎಂದು ಅರ್ಥಗಳಿರುವ ಮಾತುಗಳೊಂದಿಗೆ ಅನುವಾದ ಮಾಡಬಹುದು.
|
|
* ಕೆಲವೊಂದುಬಾರಿ “ನೀತಿವಂತರು” ಎನ್ನುವ ಪದವನ್ನು ಅಲಂಕಾರಿಕವಾಗಿ ಉಪಯೋಗಿಸುತ್ತಾರೆ ಮತ್ತು “ಜನರು ತಾವು ಒಳ್ಳೆಯವರೆಂದು ಆಲೋಚಿಸುವವರನ್ನು” ಅಥವಾ “ನೀತಿವಂತರಾಗಿ ಕಾಣುವ ಜನರನ್ನು” ಸೂಚಿಸುತ್ತದೆ.
|
|
* “ಅನೀತಿ” ಎನ್ನುವ ಪದವನ್ನು ಸಾಧಾರಣವಾಗಿ “ನೀತಿಯಲ್ಲದ್ದು” ಎಂದೂ ಅನುವಾದ ಮಾಡಬಹುದು.
|
|
* ಸಂದರ್ಭಾನುಸಾರವಾಗಿ, ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ದುಷ್ಟತ್ವ” ಅಥವಾ “ಅನೈತಿಕತೆ” ಅಥವಾ “ದೇವರಿಗೆ ವಿರುದ್ಧವಾಗಿ ತಿರಸ್ಕಾರ ಮಾಡುವ ಜನರು” ಅಥವಾ “ಪಾಪ ಸ್ವಭಾವವುಳ್ಳವರು” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
|
|
* “ಅನೀತಿವಂತ” ಎನ್ನುವ ಮಾತನ್ನು “ಅನೀತಿವಂತ ಜನರು” ಎಂದೂ ಅನುವಾದ ಮಾಡಬಹುದು.
|
|
* “ಅನೀತಿಯುತವಾದ” ಎನ್ನುವ ಪದವನ್ನು “ಪಾಪ” ಅಥವಾ “ದುಷ್ಟ ಆಲೋಚನೆಗಳು ಮತ್ತು ದುಷ್ಟ ಕ್ರಿಯೆಗಳು” ಅಥವಾ “ದುಷ್ಟತ್ವ” ಎಂದೂ ಅನುವಾದ ಮಾಡಬಹುದು.
|
|
* ಸಾಧ್ಯವಾದರೆ, ಈ ಪದಗಳು “ನೀತಿ, ನೀತಿಯುತವಾದ” ಎನ್ನುವ ಪದಗಳೊಂದಿಗೆ ಇರುವ ಸಂಬಂಧವನ್ನು ತೋರಿಸುವ ವಿಧಾನದಲ್ಲಿ ಇದನ್ನು ಅನುವಾದ ಮಾಡುವುದು ಉತ್ತಮವಾಗಿರುತ್ತದೆ.
|
|
* “ನೀತಿ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಉನ್ನತವಾಗಿ ನಡೆದುಕೊಳ್ಳುವುದು” ಅಥವಾ “ಸರಿಯಾಗಿ ನಡೆದುಕೊಳ್ಳುವ ವ್ಯಕ್ತಿ” ಅಥವಾ “ದೇವರ ಆಜ್ಞೆಗಳನ್ನು ಅನುಸರಿಸುವ ವ್ಯಕ್ತಿ” ಅಥವಾ “ದೇವರಿಗೆ ವಿಧೇಯನಾಗಿರುವ ವ್ಯಕ್ತಿ” ಅಥವಾ “ಸರಿಯಾದ ವಿಧಾನದಲ್ಲಿ ನಡೆದುಕೊಳ್ಳುವ ವ್ಯಕ್ತಿ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
|
|
* “ನೀತಿಯುತವಾದ” ಎನ್ನುವ ಪದವನ್ನು “ನೈತಿಕವಾಗಿ ಪವಿತ್ರತೆಯನ್ನು ಹೊಂದಿರುವುದು” ಅಥವಾ “ಒಳ್ಳೇಯ ನೈತಿಕವಾದ ಸ್ಥಿತಿ” ಅಥವಾ “ಸರಿಯಾದದ್ದು” ಎಂದೂ ಅನುವಾದ ಮಾಡಬಹುದು.
|
|
* “ನೀತಿಯುತ” ಎನ್ನುವ ಪದವನ್ನು “ನೀತಿವಂತರಾಗಿರುವ ಜನರು” ಅಥವಾ “ನೀತಿಯುಳ್ಳ ಜನರು” ಎಂದೂ ಅನುವಾದ ಮಾಡಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ದುಷ್ಟ](../kt/evil.md), [ವಿಶ್ವಾಸಾರ್ಹ](../kt/faithful.md), [ಒಳ್ಳೇಯ](../kt/good.md), [ಪರಿಶುದ್ಧ](../kt/holy.md), [ಪೂರ್ಣತೆ](../other/integrity.md), [ನ್ಯಾಯ](../kt/justice.md), [ಧರ್ಮಶಾಸ್ತ್ರ](../other/law.md), [ಆಜ್ಞೆ](../kt/lawofmoses.md), [ವಿಧೇಯತೆ ತೋರಿಸು](../other/obey.md), [ಪವಿತ್ರ](../kt/purify.md), [ನೀತಿ](../kt/righteous.md), [ಪಾಪ](../kt/sin.md), [ನ್ಯಾಯವಲ್ಲದ](../other/lawful.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಧರ್ಮೋ.19:15-16](rc://*/tn/help/deu/19/15)
|
|
* [ಯೋಬ.01:6-8](rc://*/tn/help/job/01/06)
|
|
* [ಕೀರ್ತನೆ.037:28-30](rc://*/tn/help/psa/037/028)
|
|
* [ಕೀರ್ತನೆ.049:14-15](rc://*/tn/help/psa/049/014)
|
|
* [ಕೀರ್ತನೆ.107:41-43](rc://*/tn/help/psa/107/041)
|
|
* [ಪ್ರಸಂಗಿ.12:10-11](rc://*/tn/help/ecc/12/10)
|
|
* [ಯೆಶಯಾ.48:1-2](rc://*/tn/help/isa/48/01)
|
|
* [ಯೆಹೆ.33:12-13](rc://*/tn/help/ezk/33/12)
|
|
* [ಮಲಾಕಿ.02:5-7](rc://*/tn/help/mal/02/05)
|
|
* [ಮತ್ತಾಯ.06:1-2](rc://*/tn/help/mat/06/01)
|
|
* [ಅಪೊ.ಕೃತ್ಯ.03:13-14](rc://*/tn/help/act/03/13)
|
|
* [ರೋಮಾ.01:29-31](rc://*/tn/help/rom/01/29)
|
|
* [1 ಕೊರಿಂಥ.06:9-11](rc://*/tn/help/1co/06/09)
|
|
* [ಗಲಾತ್ಯ.03:6-9](rc://*/tn/help/gal/03/06)
|
|
* [ಕೊಲೊಸ್ಸ.03:22-25](rc://*/tn/help/col/03/22)
|
|
* [2 ಥೆಸ್ಸ.02:8-10](rc://*/tn/help/2th/02/08)
|
|
* [2 ತಿಮೊಥೆ.03:16-17](rc://*/tn/help/2ti/03/16)
|
|
* [1 ಪೇತ್ರ.03:18-20](rc://*/tn/help/1pe/03/18)
|
|
* [1 ಯೋಹಾನ.01:8-10](rc://*/tn/help/1jn/01/08)
|
|
* [1 ಯೋಹಾನ.05:16-17](rc://*/tn/help/1jn/05/16)
|
|
|
|
## ಸತ್ಯವೇದದಿಂದ ಉದಾಹರಣೆಗಳು:
|
|
|
|
* ___[03:02](rc://*/tn/help/obs/03/02)___ ಆದರೆ ನೋಹನು ದೇವರ ದಯೆಯನ್ನು ಪಡೆದುಕೊಂಡನು. ಆತನು ___ ನೀತಿವಂತನಾಗಿದ್ದನು ___, ದುಷ್ಟ ಜನರ ಮಧ್ಯದಲ್ಲಿ ಜೀವಿಸುತ್ತಿದ್ದನು.
|
|
* ___[04:08](rc://*/tn/help/obs/04/08)___ ಅಬ್ರಾಹಾಮನು ___ ನೀತಿವಂತನೆಂದು ___ ದೇವರು ಹೇಳಿದರು, ಯಾಕಂದರೆ ಆತನು ದೇವರ ವಾಗ್ಧಾನದಲ್ಲಿ ನಂಬಿಕೆ ಇಟ್ಟಿದ್ದನು.
|
|
* ___[17:02](rc://*/tn/help/obs/17/02)___ ದಾವೀದನು ತಗ್ಗಿಸಿಕೊಂಡಿದ್ದನು ಮತ್ತು ದೇವರಿಗೆ ವಿಧೇಯನಾದ ಮತ್ತು ಭರವಸೆವಿಟ್ಟಿರುವ ___ ನೀತಿವಂತನಾಗಿದ್ದನು ___ .
|
|
* ___[23:01](rc://*/tn/help/obs/23/01)___ ಮರಿಯಳ ಜೊತೆಯಲ್ಲಿ ಪ್ರಧಾನ ಮಾಡಲ್ಪಟ್ಟಿರುವ ಯೋಸೇಫನು ___ ನೀತಿವಂತನಾಗಿದ್ದನು ___.
|
|
* ___[50:10](rc://*/tn/help/obs/50/10)___ ___ ನೀತಿವಂತರಾಗಿರುವವರು ___ ತಮ್ಮ ತಂದೆಯಂತೆಯೇ ದೇವರ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು.
|
|
|
|
## ಪದ ಡೇಟಾ:
|
|
|
|
* Strong's: H205, H1368, H2555, H3072, H3474, H3476, H3477, H3483, H4334, H4339, H4749, H5228, H5229, H5324, H5765, H5766, H5767, H5977, H6662, H6663, H6664, H6665, H6666, H6968, H8535, H8537, H8549, H8552, G93, G94, G458, G1341, G1342, G1343, G1344, G1345, G1346, G2118, G3716, G3717
|