kn_tw/bible/kt/purify.md

33 lines
5.5 KiB
Markdown

# ಶುದ್ಧ, ಶುದ್ಧೀಕರಿಸು, ಶುದ್ಧೀಕರಣೆ
## ಪದದ ಅರ್ಥವಿವರಣೆ:
“ಶುದ್ಧ” ಎನ್ನುವ ಪದಕ್ಕೆ ಯಾವ ದೋಷಗಳೂ ಇಲ್ಲದಿರುವುದು ಅಥವಾ ಮಿಶ್ರಣವಿಲ್ಲದಿರುವುದು, ಅದರಲ್ಲಿ ಬೇರೆ ಯಾವುದೂ ಇರಬಾರದು. ಯಾವುದಾದರೊಂದನ್ನು ಶುದ್ಧೀಕರಿಸುವುದು ಎಂದರೆ ಅದನ್ನು ಚೊಕ್ಕಟಗೊಳಿಸು ಎಂದರ್ಥ ಮತ್ತು ಅದನ್ನು ಮಲಿನಗೊಳಿಸುವ ಅಥವಾ ಕಲುಷಿತಗೊಳಿಸುವವುಗಳನ್ನು ತೆಗೆದುಹಾಕುವುದು ಎಂದರ್ಥ.
* ಹಳೇ ಒಡಂಬಡಿಕೆ ಆಜ್ಞೆಗಳಿಗೆ ಸಂಬಂಧಪಟ್ಟಂತೆ, “ಶುದ್ಧೀಕರಿಸು” ಮತ್ತು “ಶುದ್ಧೀಕರಣ” ಎನ್ನುವ ಪದಗಳು ಪ್ರಾಮುಖ್ಯವಾಗಿ ಒಬ್ಬ ವ್ಯಕ್ತಿಯನ್ನು ಅಥವಾ ವಸ್ತುವನ್ನು ಅಶುದ್ಧವನ್ನಾಗಿ ಮಾಡುವ ವಿಷಯಗಳಿಂದ ಶುದ್ಧೀಕರಣ ಮಾಡುವುದುದನ್ನು ಸೂಚಿಸುತ್ತದೆ, ಉದಾಹರಣೆಗೆ, ರೋಗ, ದೇಹದ ದ್ರವಗಳು, ಅಥವಾ ಶಿಶು ಜನನ ಎನ್ನುವಂಥವುಗಳು.
* ಹಳೇ ಒಡಂಬಡಿಕೆಯು ಕೂಡ ಪಾಪದಿಂದ ಹೇಗೆ ಶುದ್ಧೀಕರಣ ಹೊಂದಬೇಕೆಂದು ಜನರಿಗೆ ಹೇಳುವ ಆಜ್ಞೆಗಳನ್ನು ಒಳಗೊಂಡಿರುತ್ತದೆ, ಸಾಧಾರಣವಾಗಿ ಪ್ರಾಣಿಯನ್ನು ಬಲಿ ಕೊಡುವುದರ ಮೂಲಕ ಶುದ್ಧೀಕರಣವು ಇರುತ್ತದೆ. ಇದು ತಾತ್ಕಾಲಿಕವಾಗಿರುತ್ತದೆ ಮತ್ತು ಯಜ್ಞಗಳು ಮತ್ತೇ ಮತ್ತೇ ಮಾಡಬೇಕಾದ ಪರಿಸ್ಥಿತಿ ಇರುತ್ತದೆ.
* ಹೊಸ ಒಡಂಬಡಿಕೆಯಲ್ಲಿ ಶುದ್ಧೀಕರಣೆ ಅನೇಕಬಾರಿ ಪಾಪದಿಂದ ತೊಳೆಯಲ್ಪಡುವುದನ್ನು ಸೂಚಿಸುತ್ತದೆ.
* ಜನರು ತಮ್ಮ ಪಾಪಗಳಿಂದ ಸಂಪೂರ್ಣವಾಗಿ ಮತ್ತು ಶಾಶ್ವತವಾಗಿ ಶುದ್ಧೀಕರಿಸಲ್ಪಡುವ ಒಂದೇ ವಿಧಾನ ಏನೆಂದರೆ ಪಶ್ಚಾತ್ತಾಪ ಹೊಂದಿ, ದೇವರ ಕ್ಷಮೆಯನ್ನು ಪಡೆದುಕೊಳ್ಳುವುದರ ಮೂಲಕ ಮತ್ತು ಯೇಸುವಿನಲ್ಲಿ, ತನ್ನ ತ್ಯಾಗದಲ್ಲಿ ನಂಬಿಕೆಯಿಡುವುದರ ಮೂಲಕ ಸಾಧ್ಯವಾಗುತ್ತದೆ.
## ಅನುವಾದ ಸಲಹೆಗಳು:
* “ಶುದ್ಧೀಕರಿಸು” ಎನ್ನುವ ಪದವನ್ನು “ಪವಿತ್ರಗೊಳಿಸು” ಅಥವಾ “ತೊಳೆ” ಅಥವಾ “ಎಲ್ಲಾ ಕಲ್ಮಷಗಳಿಂದ ತೊಳೆ” ಅಥವಾ “ಎಲ್ಲಾ ಪಾಪಗಳಿಂದ ಬಿಡುಗಡೆ ಹೊಂದು” ಎಂದೂ ಅನುವಾದ ಮಾಡಬಹುದು.
* “ಅವರ ಶುದ್ಧೀಕರಣಕ್ಕೆ ಸಮಯವು ಮುಗಿದು ಹೋದಾಗ” ಎನ್ನುವ ಮಾತನ್ನು “ಅನೇಕ ದಿನಗಳ ಕಾಲ ಎದುರುನೋಡುವುದರ ಮೂಲಕ ಅವರು ತಮ್ಮನ್ನು ತಾವು ಶುದ್ಧೀಕರಣ ಹೊಂದಿದಾಗ” ಎಂದೂ ಅನುವಾದ ಮಾಡಬಹುದು.
* “ಪಾಪಗಳಿಗಾಗಿ ಶುದ್ಧೀಕರಣವನ್ನು ಅನುಗ್ರಹಿಸಿದಾಗ” ಎನ್ನುವ ಮಾತನ್ನು “ಜನರು ತಮ್ಮ ಪಾಪಗಳಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುವುದಕ್ಕೆ ಮಾರ್ಗವನ್ನು ಅನುಗ್ರಹಿಸಿದಾಗ” ಎಂದೂ ಅನುವಾದ ಮಾಡಬಹುದು.
* “ಶುದ್ಧೀಕರಣ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ತೊಳೆಯುವುದು” ಅಥವಾ “ಆತ್ಮಿಕವಾಗಿ ತೊಳೆಯುವುದು” ಅಥವಾ “ಧಾರ್ಮಿಕವಾಗಿ ಸ್ವಚ್ಚಗೊಳಿಸಲ್ಪಡುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
(ಈ ಪದಗಳನ್ನು ಸಹ ನೋಡಿರಿ : [ಪ್ರಾಯಶ್ಚಿತ್ತ](../kt/atonement.md), [ಶುದ್ಧ](../kt/clean.md), [ಆತ್ಮ](../kt/spirit.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ತಿಮೊಥೆ.01:5-8](rc://*/tn/help/1ti/01/05)
* [ವಿಮೋ.31:6-9](rc://*/tn/help/exo/31/06)
* [ಇಬ್ರಿ.09:13-15](rc://*/tn/help/heb/09/13)
* [ಯಾಕೋಬ.04:8-10](rc://*/tn/help/jas/04/08)
* [ಲೂಕ.02:22-24](rc://*/tn/help/luk/02/22)
* [ಪ್ರಕ.14:3-5](rc://*/tn/help/rev/14/03)
## ಪದ ಡೇಟಾ:
* Strong's: H1249, H1252, H1253, H1305, H1865, H2134, H2135, H2141, H2212, H2398, H2403, H2561, H2889, H2890, H2891, H2892, H2893, H3795, H3800, H4795, H5343, H5462, H6337, H6884, H6942, H8562, G48, G49, G53, G54, G1506, G2511, G2512, G2513, G2514