kn_tw/bible/kt/prophet.md

54 lines
10 KiB
Markdown

# ಪ್ರವಾದಿ, ಪ್ರವಾದಿಗಳು, ಪ್ರವಾದನೆ, ಪ್ರವಾದಿಸು, ದರ್ಶಿ, ಪ್ರವಾದಿನಿ
## ಪದದ ಅರ್ಥವಿವರಣೆ:
“ಪ್ರವಾದಿ” ಎನ್ನುವವನು ದೇವರ ಸಂದೇಶವನ್ನು ಜನರಿಗೆ ತಿಳಿಸುವ ಒಬ್ಬ ವ್ಯಕ್ತಿಯಾಗಿರುತ್ತಾನೆ. ಈ ಕೆಲಸವನ್ನು ಮಾಡುವ ಸ್ತ್ರೀಯನ್ನು “ಪ್ರವಾದಿನಿ” ಎಂದು ಕರೆಯುತ್ತಾರೆ.
* ಅನೇಕಬಾರಿ ಪ್ರವಾದಿಗಳು ಜನರನ್ನು ತಮ್ಮ ಪಾಪಗಳಿಂದ ಹಿಂದುರಿಗಿ, ದೇವರಿಗೆ ವಿಧೇಯರಾಗಿರಬೇಕೆಂದು ಎಚ್ಚರಿಸಿದ್ದಾರೆ.
* “ಪ್ರವಾದನೆ” ಎನ್ನುವುದು ಪ್ರವಾದಿ ಮಾತನಾಡುವ ಸಂದೇಶವಾಗಿರುತ್ತದೆ. “ಪ್ರವಾದಿಸು” ಎಂದರೆ ದೇವರ ಸಂದೇಶಗಳನ್ನು ಮಾತನಾಡುವುದು ಎಂದರ್ಥ.
* ಅನೇಕಬಾರಿ ಪ್ರವಾದಿಸುವ ಸಂದೇಶವು ಭವಿಷ್ಯತ್ತಿನಲ್ಲಿ ನಡೆಯುವ ಕಾರ್ಯಗಳ ಕುರಿತಾಗಿರುತ್ತದೆ.
* ಹಳೇ ಒಡಂಬಡಿಕೆಯಲ್ಲಿ ಅನೇಕ ಪ್ರವಾದನೆಗಳು ಈಗಾಗಲೇ ನೆರವೇರಿಸಲ್ಪಟ್ಟಿರುತ್ತವೆ.
* ಸತ್ಯವೇದದಲ್ಲಿ ಅನೇಕ ಪುಸ್ತಕಗಳು ಪ್ರವಾದಿಗಳಿಂದ ಬರೆಯಲ್ಪಟ್ಟಿರುತ್ತವೆ, ಕೆಲವೊಂದುಬಾರಿ “ಪ್ರವಾದಿಗಳು” ಎಂಬುದಾಗಿ ಸೂಚಿಸಲ್ಪಟ್ಟಿರುತ್ತದೆ.
* “ನ್ಯಾಯಪ್ರಮಾಣ ಮತ್ತು ಪ್ರವಾದಿಗಳು” ಎನ್ನುವ ಮಾತಿನ ಉದಾಹರಣೆಯನ್ನು ತೆಗೆದುಕೊಂಡರೆ, ಈ ಮಾತು ಇಬ್ರಿಯ ಲೇಖಗಳೆಲ್ಲವುಗಳನ್ನು ಸೂಚಿಸುತ್ತವೆ, ಇವುಗಳನ್ನು “ಹಳೇ ಒಡಂಬಡಿಕೆ” ಎಂದೂ ಕರೆಯುತ್ತಾರೆ.
* ಪ್ರವಾದಿ ಎನ್ನುವ ಹೆಸರಿಗೆ ಹಳೇಯ ಹೆಸರು “ದರ್ಶಿ” ಅಥವಾ “ನೋಡುವ ವ್ಯಕ್ತಿ” ಎಂದಾಗಿರುತ್ತದೆ.
* “ದರ್ಶಿ” ಎನ್ನುವ ಪದವು ಕೆಲವೊಂದುಬಾರಿ ಸುಳ್ಳು ಪ್ರವಾದಿಯನ್ನು ಅಥವಾ ಕಣಿ ಹೇಳುವುದನ್ನು ಅಭ್ಯಾಸ ಮಾಡುವ ವ್ಯಕ್ತಿಯನ್ನು ಸೂಚಿಸುತ್ತದೆ.
## ಅನುವಾದ ಸಲಹೆಗಳು:
* “ಪ್ರವಾದಿ” ಎನ್ನುವ ಪದವನ್ನು “ದೇವರ ಪ್ರತಿನಿಧಿ” ಅಥವಾ “ದೇವರು ಪಕ್ಷವಾಗಿ ಮಾತನಾಡುವ ವ್ಯಕ್ತಿ” ಅಥವಾ “ದೇವರ ಸಂದೇಶಗಳನ್ನು ಮಾತನಾಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
* “ದರ್ಶಿ” ಎನ್ನುವ ಪದವನ್ನು “ದರ್ಶಗಳನ್ನು ನೋಡುವ ವ್ಯಕ್ತಿ” ಅಥವಾ “ದೇವರಿಂದ ಭವಿಷ್ಯತ್ತನ್ನು ನೋಡುವ ವ್ಯಕ್ತಿ” ಎಂದೂ ಅನುವಾದ ಮಾಡಬಹುದು.
* “ಪ್ರವಾದಿನಿ” ಎನ್ನುವ ಪದವನ್ನು “ದೇವರಿಗಾಗಿ ಮಾತನಾಡುವ ಪ್ರತಿನಿಧಿ” ಅಥವಾ “ದೇವರ ಪಕ್ಷವಾಗಿ ಮಾತನಾಡುವ ಸ್ತ್ರೀ” ಅಥವಾ “ದೇವರ ಸಂದೇಶಗಳನ್ನು ಮಾತನಾಡುವ ಸ್ತ್ರೀ” ಎಂದೂ ಅನುವಾದ ಮಾಡಬಹುದು.
* “ಪ್ರವಾದನೆ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ, “ದೇವರಿಂದ ಬಂದಿರುವ ಸಂದೇಶ” ಅಥವಾ “ಪ್ರವಾದಿಯ ಸಂದೇಶ” ಎನ್ನುವ ಮಾತುಗಳನ್ನು ಉಪಯೋಗಿಸುತ್ತಾರೆ.
* “ಪ್ರವಾದಿಸು” ಎನ್ನುವ ಪದವನ್ನು “ದೇವರಿಂದ ಬಂದಿರುವ ಮಾತುಗಳನ್ನಾಡುವುದು” ಅಥವಾ “ದೇವರ ಸಂದೇಶವನ್ನು ಹೇಳು” ಎಂದೂ ಅನುವಾದ ಮಾಡಬಹುದು.
* ಅಲಂಕಾರಿಕ ಮಾತುಗಳಲ್ಲಿ, “ನ್ಯಾಯಪ್ರಮಾಣ ಮತ್ತು ಪ್ರವಾದಿಗಳು” ಎನ್ನುವ ಮಾತನ್ನು “ಪ್ರವಾದಿಗಳ ಮತ್ತು ನ್ಯಾಯಪ್ರಮಾಣದ ಪುಸ್ತಕಗಳು” ಅಥವಾ “ದೇವರ ಕುರಿತಾಗಿ ಮತ್ತು ತನ್ನ ಜನರ ಕುರಿತಾಗಿ ಬರೆಯಲ್ಪಟ್ಟ ಪ್ರತಿಯೊಂದು ವಿಷಯವು” ಎಂದೂ ಅನುವಾದ ಮಾಡಬಹುದು, ಅದರಲ್ಲಿ ದೇವರ ಆಜ್ಞೆಗಳು ಮತ್ತು ಆತನ ಪ್ರವಾದಿಗಳು ಪ್ರಕಟಿಸಿರುವುದು ಒಳಗೊಂಡಿರುತ್ತದೆ.”
* ಸುಳ್ಳು ದೇವರ ಪ್ರವಾದಿಯನ್ನು (ಅಥವಾ ದರ್ಶಿಯನ್ನು) ಸೂಚಿಸಿದಾಗ, ಉದಾಹರಣೆಗೆ, “ಸುಳ್ಳು ಪ್ರವಾದಿ (ದರ್ಶಿ)” ಅಥವಾ “ಸುಳ್ಳು ದೇವರ ಪ್ರವಾದಿ (ದರ್ಶಿ)” ಅಥವಾ “ಬಾಳ್ ಪ್ರವಾದಿ” ಎನ್ನುವುದು ತುಂಬಾ ಅತ್ಯಗತ್ಯ.
(ಈ ಪದಗಳನ್ನು ಸಹ ನೋಡಿರಿ : [ಬಾಳ್](rc://*/ta/man/translate/figs-synecdoche), [ಕಣಿ](../names/baal.md), [ಸುಳ್ಳು ದೇವರು](../other/divination.md), [ಸುಳ್ಳು ಪ್ರವಾದಿ](../kt/falsegod.md), [ನೆರವೇರಿಸು](../other/falseprophet.md), [ಧರ್ಮಶಾಸ್ತ್ರ](../kt/fulfill.md), [ದರ್ಶನ](../kt/lawofmoses.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಥೆಸ್ಸ.02:14-16](../other/vision.md)
* [ಅಪೊ.ಕೃತ್ಯ.03:24-26](rc://*/tn/help/1th/02/14)
* [ಯೋಹಾನ.01:43-45](rc://*/tn/help/act/03/24)
* [ಮಲಾಕಿ.04:4-6](rc://*/tn/help/jhn/01/43)
* [ಮತ್ತಾಯ.01:22-23](rc://*/tn/help/mal/04/04)
* [ಮತ್ತಾಯ.02:17-18](rc://*/tn/help/mat/01/22)
* [ಮತ್ತಾಯ.05:17-18](rc://*/tn/help/mat/02/17)
* [ಕೀರ್ತನೆ.051:1-2](rc://*/tn/help/mat/05/17)
## ಸತ್ಯವೇದದಿಂದ ಉದಾಹರಣೆಗಳು:
* ___[12:12](rc://*/tn/help/psa/051/001)___ ಐಗುಪ್ತರೆಲ್ಲರೂ ಸತ್ತಿದ್ದಾರೆಂದು ಇಸ್ರಾಯೇಲ್ಯರು ನೋಡಿದಾಗ, ಅವರು ದೇವರಲ್ಲಿ ಭರವಸೆ ಇಟ್ಟರು ಮತ್ತು ಮೋಶೆ ದೇವರ ___ ಪ್ರವಾದಿ ___ ಎಂದು ನಂಬಿದರು.
* ___[17:13](rc://*/tn/help/obs/12/12)___ ದಾವೀದನು ಮಾಡಿದ ವಿಷಯದಲ್ಲಿ ದೇವರು ತುಂಬಾ ಹೆಚ್ಚಾಗಿ ಕೋಪಗೊಂಡಿದ್ದರು, ಅದಕ್ಕಾಗಿ ದಾವೀದನು ಎಂಥ ಭಯಂಕರವಾದ ಪಾಪವನ್ನು ಮಾಡಿದ್ದಾನೆಂದು ತಿಳಿಸಲು, ಆತನು ___ ಪ್ರವಾದಿಯಾದ ___ ನಾತಾನನನ್ನು ಕಳುಹಿಸಿದನು.
* ___[19:01](rc://*/tn/help/obs/17/13)___ ಇಸ್ರಾಯೇಲ್ಯರ ಚರಿತ್ರೆಯಲ್ಲೆಲ್ಲಾ ದೇವರು ಅವರನ್ನು ___ ಪ್ರವಾದಿಗಳ ___ ಬಳಿಗೆ ಕಳುಹಿಸಿದರು. ___ ಪ್ರವಾದಿಗಳು ___ ದೇವರಿಂದ ಸಂದೇಶಗಳನ್ನು ಕೇಳಿಸಿಕೊಂಡು, ಆ ದೇವರ ಸಂದೇಶಗಳನ್ನು ಜನರಿಗೆ ಹೇಳಿದರು.
* ___[19:06](rc://*/tn/help/obs/19/01)___ ಸುಮಾರು 450 ಮಂದಿ ಬಾಳ್ ಪ್ರವಾದಿಗಳನ್ನು ಸೇರಿಸಿ, ಇಸ್ರಾಯೇಲ್ ರಾಜ್ಯದಲ್ಲಿರುವ ಎಲ್ಲಾ ಜನರು ಕಾರ್ಮೆಲ್ ಪರ್ವತದ ಬಳಿಗೆ ಬಂದರು.
* ___[19:17](rc://*/tn/help/obs/19/06)___ ಜನರು ಹೆಚ್ಚಿನ ಮಟ್ಟಿಗೆ ದೇವರಿಗೆ ವಿಧೇಯತೆಯನ್ನು ತೋರಿಸಿದ್ದಿಲ್ಲ. ಅವರು ಹೆಚ್ಚಾಗಿ ___ ಪ್ರವಾದಿಗಳಲ್ಲಿ ___ ದುಷ್ಟ ನಡತೆಯಿಂದ ನಡೆದುಕೊಳ್ಳುತ್ತಿದ್ದರು ಮತ್ತು ಕೆಲವೊಂದುಬಾರಿ ಅವರು ಸಾಯಿಸಲ್ಪಡುತ್ತಿದ್ದರು.
* ___[21:09](rc://*/tn/help/obs/19/17)___ಮೆಸ್ಸೀಯ ಕನ್ಯೆಯ ಗರ್ಭದಿಂದ ಹುಟ್ಟುವನು ಎಂದು ___ ಪ್ರವಾದಿಯಾದ ___ ಯೆಶಾಯನು ___ ಪ್ರವಾದಿಸಿದ್ದನು ___ .
* ___[43:05](rc://*/tn/help/obs/21/09)___ “ ಯೋವೇಲನಿಂದ ಬಂದಿರುವ ಪ್ರವಾದನೆಯು ಇದು ನೆರವೇರಿಸಲ್ಪಡುವುದು ಎನ್ನುವುದರಲ್ಲಿ “ಅಂತ್ಯಕಾಲದಲ್ಲಿ, ನಾನು ನನ್ನ ಆತ್ಮವನ್ನು ಸುರಿಸುತ್ತೇನೆ” ಎಂದು ದೇವರು ಹೇಳಿದ ಮಾತನ್ನು ಹೇಳಿದ್ದನು.”
* ___[43:07](rc://*/tn/help/obs/43/05)___ “ನೀನು ನಿನ್ನ ಪರಿಶುದ್ಧನನ್ನು ಸಮಾಧಿಯೊಳಗೆ ಬಿಡುವುದಿಲ್ಲ” ಎಂದು ಹೇಳಿದ ___ ಪ್ರವಾದನೆಯು ___ ನೆರವೇರಿಸಲ್ಪಟ್ಟಿದೆ.”
* ___[48:12](rc://*/tn/help/obs/43/07)___ ದೇವರ ವಾಕ್ಯವನ್ನು ಸಾರಿದ ಮೋಶೆಯು ದೊಡ್ಡ __ ಪ್ರವಾದಿಯಾಗಿದ್ದನು __. ಆದರೆ ಯೇಸುವು ಎಲ್ಲರಿಗಿಂತ ದೊಡ್ಡ ___ ಪ್ರವಾದಿಯಾಗಿರುತ್ತಾನೆ ___. ಆತನೇ ದೇವರ ವಾಕ್ಯವಾಗಿದ್ದಾನೆ.
## ಪದ ಡೇಟಾ:
* Strong's: H2372, H2374, H4853, H5012, H5013, H5016, H5017, H5029, H5030, H5031, H5197, G2495, G4394, G4395, G4396, G4397, G4398, G5578