kn_tw/bible/kt/predestine.md

26 lines
3.1 KiB
Markdown

# ನಿರ್ಣಯಿಸು, ನಿರ್ಣಯಿಸಲ್ಪಟ್ಟಿದೆ
## ಪದದ ಅರ್ಥವಿವರಣೆ:
“ನಿರ್ಣಯಿಸು” ಮತ್ತು “ನಿರ್ಣಯಿಸಲ್ಪಟ್ಟಿದೆ” ಎನ್ನುವ ಪದಗಳು ಯಾವುದಾದರೊಂದು ನಡೆಯುವುದಕ್ಕೆ ಮುಂಚಿತವಾಗಿ ಪ್ರಣಾಳಿಕೆ ಮಾಡುವುದನ್ನು ಅಥವಾ ನಿರ್ಣಯಿಸಲ್ಪಟ್ಟಿರುವುದನ್ನು ಸೂಚಿಸುತ್ತದೆ.
* ಈ ಪದವು ವಿಶೇಷವಾಗಿ ನಿತ್ಯ ಜೀವವನ್ನು ಹೊಂದುವುದಕ್ಕೆ ದೇವರು ಜನರನ್ನು ಮುಂಚಿತವಾಗಿಯೇ ನಿರ್ಣಯಿಸಿದ್ದನ್ನು ಸೂಚಿಸುತ್ತದೆ.
* ಕೆಲವೊಂದುಬಾರಿ “ಮೊದಲೇ ನೇಮಿಸಲ್ಪಟ್ಟಿರುವುದು” ಎನ್ನುವ ಪದವು ಉಪಯೋಗಿಸಲ್ಪಟ್ಟಿರುತ್ತದೆ, ಇದಕ್ಕೆ ಮುಂಚಿತವಾಗಿಯೇ ನಿರ್ಣಯಿಸುವುದು ಎಂದರ್ಥ.
## ಅನುವಾದ ಸಲಹೆಗಳು:
* “ನಿರ್ಣಯಿಸು” ಎನ್ನುವ ಪದವನ್ನು “ಮುಂಚಿತವಾಗಿಯೇ ನಿರ್ಣಯಿಸು” ಅಥವಾ “ಸಮಯ ಬರುವುದಕ್ಕೆ ಮುಂಚಿತವಾಗಿ ನಿರ್ಣಯಿಸು” ಎಂದೂ ಅನುವಾದ ಮಾಡಬಹುದು.
* “ನಿರ್ಣಯಿಸಲ್ಪಟ್ಟಿರುತ್ತದೆ” ಎನ್ನುವ ಪದವನ್ನು “ಅನೇಕ ವರ್ಷಗಳ ಹಿಂದೆ ನಿರ್ಣಯಿಸಲ್ಪಡುವುದು” ಅಥವಾ “ಮುಂದೆ ನಡೆಯುವ ಕಾರ್ಯವನ್ನು ಪ್ರಣಾಳಿಕೆ ಮಾಡುವುದು’ ಅಥವಾ “ಮೊದಲೇ ನಿರ್ಧರಿಸುವುದು” ಎಂದೂ ಅನುವಾದ ಮಾಡಬಹುದು.
* “ನಮ್ಮನ್ನು ಮುಂದೆ ನಿರ್ಣಯಿಸಿದ್ದಾರೆ” ಎನ್ನುವ ಮಾತನ್ನು “ನಮ್ಮನ್ನು ಅನೇಕ ವರ್ಷಗಳ ಹಿಂದೆಯೇ ನಿರ್ಣಯಿಸಲ್ಪಟ್ಟಿರುತ್ತೇವೆ” ಅಥವಾ “ಮುಂದಿನ ಕಾಲದಲ್ಲಿ ನಾವು ಹೀಗೆ ಇರುತ್ತೇವೆಂದು ಈಗಾಗಲೇ ಮುಂಚಿತವಾಗಿಯೇ ನಿರ್ಣಯಿಸಲ್ಪಟ್ಟಿರುತ್ತೇವೆ” ಎಂದೂ ಅನುವಾದ ಮಾಡಬಹುದು.
* ಈ ಪದದ ಅರ್ಥಕ್ಕೂ ಮತ್ತು “ಮುಂತಿಳಿಯುವುದು” ಎನ್ನುವ ಪದಕ್ಕೂ ವ್ಯತ್ಯಾಸವಿರುತ್ತದೆಯೆಂದು ತಿಳಿದುಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : [ಮುಂತಿಳಿಯುವುದು](../other/foreordain.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಕೊರಿಂಥ.02:6-7](rc://*/tn/help/1co/02/06)
## ಪದ ಡೇಟಾ:
* Strong's: G4309