kn_tw/bible/kt/power.md

46 lines
7.2 KiB
Markdown

# ಶಕ್ತಿ, ಶಕ್ತಿಗಳು
## ಪದದ ಅರ್ಥವಿವರಣೆ:
“ಶಕ್ತಿ” ಎನ್ನುವ ಪದವು ಕಾರ್ಯಗಳನ್ನು ಮಾಡುವುದಕ್ಕೆ ಅಥವಾ ಅನೇಕ ಕಾರ್ಯಗಳನ್ನು ನಡೆಯುವುದಕ್ಕೆ ಸಾಮರ್ಥ್ಯವನ್ನು ಸೂಚಿಸುತ್ತದೆ, ಈ ಪದವು ಅನೇಕಸಲ ಉನ್ನತ ಬಲವನ್ನು ಸೂಚಿಸುತ್ತವೆ. “ಶಕ್ತಿಗಳು” ಎನ್ನುವ ಪದವು ಅನೇಕ ಕಾರ್ಯಗಳನ್ನು ಮಾಡಲು ಉನ್ನತ ಸಾಮರ್ಥ್ಯವನ್ನು ಹೊಂದಿರುವ ಮನುಷ್ಯರನ್ನು ಅಥವಾ ಆತ್ಮಗಳನ್ನು ಸೂಚಿಸುತ್ತವೆ.
* “ದೇವರ ಶಕ್ತಿ” ಎನ್ನುವ ಮಾತು ಪ್ರತಿಯೊಂದನ್ನು ಮಾಡುವ ದೇವರ ಸಾಮರ್ಥ್ಯವನ್ನು ಸೂಚಿಸುತ್ತದೆ, ವಿಶೇಷವಾಗಿ ಮನುಷ್ಯರು ಮಾಡುವುದಕ್ಕಾಗದಿರುವ ಅನೇಕ ಕಾರ್ಯಗಳನ್ನು ಮಾಡುವ ಸಾಮರ್ಥ್ಯವನ್ನು ಸೂಚಿಸುತ್ತದೆ.
* ದೇವರು ಸೃಷ್ಟಿಸಿದ ಪ್ರತಿಯೊಂದರ ಮೇಲೆ ಆತನಿಗೆ ಸಂಪೂರ್ಣವಾದ ಶಕ್ತಿಯಿರುತ್ತದೆ.
* ದೇವರು ಬಯಸಿದ ಕಾರ್ಯಗಳನ್ನು ಮಾಡಲು ದೇವರು ತನ್ನ ಜನರಿಗೆ ಶಕ್ತಿಯನ್ನು ಕೊಡುತ್ತಾರೆ, ಇದರಿಂದ ಅವರು ಜನರನ್ನು ಗುಣಪಡಿಸಿದಾಗ ಅಥವಾ ಅನೇಕ ಅದ್ಭುತಕಾರ್ಯಗಳನ್ನು ಮಾಡಿದಾಗ, ಅವರು ದೇವರು ಕೊಟ್ಟ ಶಕ್ತಿಯಿಂದಲೇ ಮಾಡುತ್ತಿರುತ್ತಾರೆ.
* ಯಾಕಂದರೆ ಯೇಸು ಮತ್ತು ಪವಿತ್ರಾತ್ಮರು ಕೂಡಾ ದೇವರಾಗಿದ್ದಾರೆ, ಅವರು ಇದೇ ಶಕ್ತಿಯನ್ನು ಹೊಂದಿರುತ್ತಾರೆ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ “ಶಕ್ತಿ” ಎನ್ನುವ ಪದವನ್ನು “ಸಾಮರ್ಥ್ಯ” ಅಥವಾ “ಬಲ” ಅಥವಾ “ಬಲವುಳ್ಳ” ಅಥವಾ “ಅದ್ಭುತಗಳನ್ನು ಮಾಡುವುದಕ್ಕೆ ಸಾಮರ್ಥ್ಯ” ಅಥವಾ “ನಿಯಂತ್ರಣ” ಎಂದೂ ಅನುವಾದ ಮಾಡಬಹುದು.
* “ಶಕ್ತಿಗಳು” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಶಕ್ತಿಯುತವಾದವುಗಳು” ಅಥವಾ “ನಿಯಂತ್ರಿಸುವ ಆತ್ಮಗಳು” ಅಥವಾ “ಇತರರನ್ನು ನಿಯಂತ್ರಿಸುವವರು” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
* “ನಮ್ಮ ಶತ್ರುಗಳ ಶಕ್ತಿಯಿಂದ ನಮ್ಮನ್ನು ರಕ್ಷಿಸು” ಎನ್ನುವ ಮಾತನ್ನು “ನಮ್ಮ ಶತ್ರುಗಳಿಂದ ಬರುವ ಒತ್ತಡದಿಂದ ನಮ್ಮನ್ನು ರಕ್ಷಿಸು” ಅಥವಾ “ನಮ್ಮ ಶತ್ರುಗಳ ನಿಯಂತ್ರಣದಿಂದ ನಮ್ಮನ್ನು ಬಿಡಿಸು” ಎಂದೂ ಅನುವಾದ ಮಾಡಬಹುದು. ಇಂಥಹ ಸಂದರ್ಭದಲ್ಲಿ “ಶಕ್ತಿ” ಎನ್ನುವ ಪದವು ಇತರರನ್ನು ಒತ್ತಾಯಗೊಳಿಸುವುದಕ್ಕೆ ಮತ್ತು ನಿಯಂತ್ರಿಸುವುದಕ್ಕೆ ಒಬ್ಬರ ಬಲವನ್ನು ಉಪಯೋಗಿಸುವುದು ಎನ್ನುವ ಅರ್ಥವನ್ನು ಹೊಂದಿರುತ್ತದೆ,
(ಈ ಪದಗಳನ್ನು ಸಹ ನೋಡಿರಿ : [ಪವಿತ್ರಾತ್ಮ](../kt/holyspirit.md), [ಯೇಸು](../kt/jesus.md), [ಅದ್ಭುತ](../kt/miracle.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಥೆಸ್ಸ.01:4-5](rc://*/tn/help/1th/01/04)
* [ಕೊಲೊಸ್ಸ.01:11-12](rc://*/tn/help/col/01/11)
* [ಆದಿ.31:29-30](rc://*/tn/help/gen/31/29)
* [ಯೆರೆ.18:21-23](rc://*/tn/help/jer/18/21)
* [ಯೂದಾ.01:24-25](rc://*/tn/help/jud/01/24)
* [ನ್ಯಾಯಾ.02:18-19](rc://*/tn/help/jdg/02/18)
* [ಲೂಕ.01:16-17](rc://*/tn/help/luk/01/16)
* [ಲೂಕ.04:14-15](rc://*/tn/help/luk/04/14)
* [ಮತ್ತಾಯ.26:62-64](rc://*/tn/help/mat/26/62)
* [ಫಿಲಿಪ್ಪಿ.03:20-21](rc://*/tn/help/php/03/20)
* [ಕೀರ್ತನೆ.080:1-3](rc://*/tn/help/psa/080/001)
## ಸತ್ಯವೇದದಿಂದ ಉದಾಹರಣೆಗಳು:
* __[22:05](rc://*/tn/help/obs/22/05)__ “ಪವಿತ್ರಾತ್ಮನು ನಿಮ್ಮ ಬಳಿಗೆ ಬರುವನು, ಮತ್ತು ನಿಮ್ಮ ಮೇಲೆ ದೇವರ __ ಶಕ್ತಿ __ ಇಳಿದು ಬಂದು ಆವರಿಸುವುದು. ಆದ್ದರಿಂದ ದೇವರ ಮಗನಾಗಿರುವ ಶಿಶುವು ಪವಿತ್ರನಾಗಿರುತ್ತಾನೆ.” ಎಂದು ದೂತನು ವಿವರಿಸಿ ಹೇಳಿದನು.
* __[26:01](rc://*/tn/help/obs/26/01)__ ಸೈತಾನಿನ ಶೋಧನೆಗಳನ್ನು ಜಯಿಸಿದನಂತರ, ಯೇಸು ಪವಿತ್ರಾತ್ಮನ __ ಶಕ್ತಿಯಲ್ಲಿ __ ಹಿಂದುರಿಗಿ ತಾನು ನಿವಾಸವಾಗಿರುವ ಗಲಿಲಾಯ ಸೀಮೆಗೆ ಹೊರಟು ಹೋದನು.
* __[32:15](rc://*/tn/help/obs/32/15)__ ಯೇಸು ತನ್ನೊಳಗಿಂದ __ ಶಕ್ತಿ __ ಹೊರಟು ಹೋಯಿತೆಂದು ತನ್ನಲ್ಲಿ ತಕ್ಷಣವೇ ತಿಳಿದುಕೊಂಡನು.
* __[42:11](rc://*/tn/help/obs/42/11)__ ಯೇಸು ಮರಣದಿಂದ ಎದ್ದುಬಂದನಂತರ ನಲವತ್ತು ದಿನಗಳು, “ನನ್ನ ತಂದೆಯು ನಿಮ್ಮ ಮೇಲೆ ಪವಿತ್ರಾತ್ಮನನ್ನು ಕಳುಹಿಸಿ __ ಶಕ್ತಿಯನ್ನು __ ಅನುಗ್ರಹಿಸುವವರೆಗೂ ಯೆರೂಸಲೇಮಿನಲ್ಲಿಯೇ ಇರಿ” ಎಂದು ಆತನು ತನ್ನ ಶಿಷ್ಯರೊಂದಿಗೆ ಹೇಳಿದನು.
* __[43:06](rc://*/tn/help/obs/43/06)__ “ಇಸ್ರಾಯೇಲ್ ಜನರೇ, ನಿಮಗೆ ಗೊತ್ತಿದ್ದು, ನೀವು ನೋಡುತ್ತಿರುವಂತೆಯೇ, ದೇವರ __ ಶಕ್ತಿಯಿಂದ __ ಅನೇಕ ಸೂಚಕ ಕ್ರಿಯೆಗಳನ್ನು ಮತ್ತು ಅದ್ಭುತಗಳನ್ನು ಮಾಡಿದ ವ್ಯಕ್ತಿ ಯೇಸುವಾಗಿದ್ದಾನೆ.
* __[44:08](rc://*/tn/help/obs/44/08)__
## ಪದ ಡೇಟಾ:
* Strong's: H410, H1369, H2220, H2428, H2429, H2632, H3027, H3028, H3581, H4475, H4910, H5794, H5797, H5808, H6184, H7786, H7980, H7981, H7983, H7989, H8280, H8592, H8633, G1411, G1415, G1756, G1849, G1850, G2478, G2479, G2904, G3168