kn_tw/bible/kt/passover.md

40 lines
6.0 KiB
Markdown

# ಪಸ್ಕ
## ಸತ್ಯಾಂಶಗಳು:
“ಪಸ್ಕ” ಎನ್ನುವುದು ಪ್ರತಿ ವರ್ಷ ಯೆಹೂದ್ಯರು ಆಚರಿಸುವ ಧಾರ್ಮಿಕ ಹಬ್ಬದ ಹೆಸರಾಗಿರುತ್ತದೆ, ಐಗುಪ್ತದಲ್ಲಿ ಗುಲಾಮಗಿರಿಯಿಂದ ತಮ್ಮ ಪೂರ್ವಜರಾದ ಇಸ್ರಾಯೇಲ್ಯರನ್ನು ದೇವರು ಯಾವರೀತಿ ರಕ್ಷಿಸಿದ್ದಾರೆಂದು ನೆನಪು ಮಾಡಿಕೊಳ್ಳುವುದಕ್ಕೆ ಈ ಹಬ್ಬವನ್ನು ಮಾಡುತ್ತಾರೆ.
* ಈ ಹಬ್ಬದ ಹೆಸರು ದೇವರು ಇಸ್ರಾಯೇಲ್ಯರ ಮನೆಗಳನ್ನು “ದಾಟಿ ಹೋಗಿದ್ದಾನೆ”, ಅವರ ಮಕ್ಕಳನ್ನು ಸಾಯಿಸಲಿಲ್ಲ, ಆದರೆ ಐಗುಪ್ತರ ಮೊದಲ ಸಂತಾನವಾಗಿರುವ ಗಂಡು ಮಕ್ಕಳನ್ನು ಸಾಯಿಸಿದನು ಎನ್ನುವ ಸತ್ಯದ ಘಟನೆಯೊಳಗಿಂದ ಬಂದಿದ್ದಾಗಿರುತ್ತದೆ.
* ಪಸ್ಕ ಆಚರಣೆಯಲ್ಲಿ ಅವರು ಕೊಂದು, ಚೆನ್ನಾಗಿ ಸುಟ್ಟ ಪರಿಪೂರ್ಣವಾದ ಕುರಿಮರಿ ವಿಶೇಷವಾದ ಊಟ ಮತ್ತು ಅದರೊಂದಿಗೆ ಹುಳಿಯಿಲ್ಲದ ರೊಟ್ಟಿಯನ್ನು ಹೊಂದಿರುತ್ತಾರೆ. ಐಗುಪ್ತದಿಂದ ಇಸ್ರಾಯೇಲ್ಯರು ರಕ್ಷಿಸಲ್ಪಟ್ಟ ದಿನದ ಮುಂಚಿನ ರಾತ್ರಿ ಅವರು ಊಟ ಮಾಡಿದ ಊಟವನ್ನು ಈ ಆಹಾರ ಪದಾರ್ಥಗಳು ಜ್ಞಾಪಕ ಮಾಡುತ್ತವೆ.
* ಇಸ್ರಾಯೇಲ್ಯರ ಮನೆಗಳನ್ನು ದೇವರು ಹೇಗೆ “ದಾಟಿ ಹೋದರು” ಎಂದು ಆಚರಿಸಿಕೊಳ್ಳಬೇಕೆಂದು ಮತ್ತು ಐಗುಪ್ತದಲ್ಲಿರುವ ಗುಲಾಮಗಿರಿಯಿಂದ ಆತನು ಹೇಗೆ ಬಿಡುಗಡೆಗೊಳಿಸಿದನೆಂದು ಜ್ಞಾಪಕ ಮಾಡಿಕೊಳ್ಳುವುದರ ಕ್ರಮದಲ್ಲಿ ಪ್ರತಿ ವರ್ಷವು ಈ ಊಟವನ್ನು ಮಾಡಬೇಕೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದರು
## ಅನುವಾದ ಸಲಹೆಗಳು:
* “ಪಸ್ಕ” ಎನ್ನುವ ಪದವನ್ನು “ದಾಟು” ಮತ್ತು “ಹಾದು ಹೋಗು” ಅಥವಾ ಇದೇ ಅರ್ಥಬರುವ ಬೇರೊಂದು ಪದಗಳಿಂದ ಅನುವಾದ ಮಾಡಬಹುದು.
* ಈ ಹಬ್ಬದ ಹೆಸರು ಇಸ್ರಾಯೇಲ್ಯರ ಮಕ್ಕಳನ್ನು ಸಂರಕ್ಷಿಸುತ್ತಾ, ಅವರ ಮನೆಗಳನ್ನು ದಾಟಿ ಹೋಗುವುದರಲ್ಲಿ ಕರ್ತನ ದೂತ ಏನು ಮಾಡಿತೆಂದು ವಿವರಿಸುವುದಕ್ಕೆ ಉಪಯೋಗಿಸುವ ಪದಗಳೊಂದಿಗೆ ಸ್ಪಷ್ಟವಾದ ಸಂಬಂಧವನ್ನು ಹೊಂದಿದ್ದರೆ ಎಷ್ಟೋ ಸಹಾಯಕವಾಗಿರುತ್ತದೆ.
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಕೊರಿಂಥ.05:6-8](rc://*/tn/help/1co/05/06)
* [2 ಕೊರಿಂಥ.30:13-15](rc://*/tn/help/2ch/30/13)
* [2 ಅರಸ.23:21-23](rc://*/tn/help/2ki/23/21)
* [ಧರ್ಮೋ.16:1-2](rc://*/tn/help/deu/16/01)
* [ವಿಮೋ.12:26-28](rc://*/tn/help/exo/12/26)
* [ಎಜ್ರಾ.06:21-22](rc://*/tn/help/ezr/06/21)
* [ಯೋಹಾನ.13:1-2](rc://*/tn/help/jhn/13/01)
* [ಯೆಹೋ.05:10-11](rc://*/tn/help/jos/05/10)
* [ಯಾಜಕ.23:4-6](rc://*/tn/help/lev/23/04)
* [ಅರಣ್ಯ.09:1-3](rc://*/tn/help/num/09/01)
## ಸತ್ಯವೇದದಿಂದ ಉದಾಹರಣೆಗಳು:
* __[12:14](rc://*/tn/help/obs/12/14)__ ಐಗುಪ್ತರ ಮೇಲೆ ದೇವರ ಜಯವನ್ನು ಜ್ಞಾಪಕ ಮಾಡಿಕೊಳ್ಳುವುದಕ್ಕೆ ಮತ್ತು ಪ್ರತಿ ವರ್ಷ __ ಪಸ್ಕ __ ಹಬ್ಬವನ್ನು ಆಚರಿಸುವುದರ ಮೂಲಕ ಗುಲಾಮಗಿರಿಯಿಂದ ಅವರ ಬಿಡುಗಡೆಯನ್ನು ಜ್ಞಾಪಕ ಮಾಡಿಕೊಳ್ಳುವುದಕ್ಕೆ ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದನು.
* __[38:01](rc://*/tn/help/obs/38/01)__ ಪ್ರತಿ ವರ್ಷ ಯೆಹೂದ್ಯರು __ ಪಸ್ಕವನ್ನು __ ಆಚರಿಸಿದರು. ಅನೇಕ ಶತಾಬ್ದಗಳಿಂದ ಐಗುಪ್ತದಲ್ಲಿರುವ ಗುಲಾಮಗಿರಿಯಿಂದ ತಮ್ಮ ಪೂರ್ವಜರನ್ನು ದೇವರು ಹೇಗೆ ರಕ್ಷಿಸಿದರೆನ್ನುವುದರ ಕುರಿತಾಗಿಯೇ ಈ ಆಚರಣೆಯಾಗಿತ್ತು.
* __[38:04](rc://*/tn/help/obs/38/04)__ ಯೇಸು ತನ್ನ ಶಿಷ್ಯರೊಂದಿಗೆ __ ಪಸ್ಕವನ್ನು __ ಆಚರಿಸಿದರು.
* __[48:09](rc://*/tn/help/obs/48/09)__ ದೇವರು ರಕ್ತವನ್ನು ನೋಡಿದಾಗ, ಅವರ ಮನೆಗಳಿಂದ ಆತನು ಹಾದು ಹೋದನು ಮತ್ತು ಅವರ ಚೊಚ್ಚಲ ಮಕ್ಕಳನ್ನು ಸಾಯಿಸಲಿಲ್ಲ. ಈ ಸಂಘಟನೆಯನ್ನು __ ಪಸ್ಕ __ ಎಂದು ಕರೆಯುತ್ತಾರೆ.
* __[48:10](rc://*/tn/help/obs/48/10)__ ಯೇಸು ನಮ್ಮ __ ಪಸ್ಕ __ ಕುರಿಮರಿಯಾಗಿದ್ದಾನೆ. ಈತನು ಪರಿಪೂರ್ಣನು ಮತ್ತು ಪಾಪರಹಿತನು ಆಗಿದ್ದನು, ಮತ್ತು __ ಪಸ್ಕ __ ಆಚರಣೆಯ ಸಮಯದಲ್ಲಿಯೇ ಆತನನ್ನು ಸಾಯಿಸಿದ್ದರು.
## ಪದ ಡೇಟಾ:
* Strong's: H6453, G3957