2.8 KiB
2.8 KiB
ಸಾಮ್ಯ, ಸಾಮ್ಯಗಳು
ಪದದ ಅರ್ಥವಿವರಣೆ:
“ಸಾಮ್ಯ” ಎನ್ನುವ ಪದವು ಸಾಧಾರಣವಾಗಿ ನೈತಿಕ ಸತ್ಯವನ್ನು ಬೋಧಿಸುವುದಕ್ಕೆ ಅಥವಾ ವಿವರಿಸುವುದಕ್ಕೆ ಉಪಯೋಗಿಸುವ ನೀತಿ ಪಾಠವನ್ನು ಅಥವಾ ಚಿಕ್ಕ ಕಥೆಯನ್ನು ಸೂಚಿಸುತ್ತದೆ.
- ಯೇಸು ತನ್ನ ಶಿಷ್ಯರಿಗೆ ಬೋಧಿಸುವುದಕ್ಕೆ ಸಾಮ್ಯಗಳನ್ನು ಉಪಯೋಗಿಸಿದನು. ಆತನು ಸಾಮ್ಯಗಳನ್ನು ಜನ ಸಮೂಹಗಳಿಗೆ ಹೇಳಿದರೂ, ಆತನು ಆ ಸಾಮ್ಯಗಳನ್ನು ಹೆಚ್ಚಿನ ಮಟ್ಟಿಗೆ ವಿವರಿಸಲಿಲ್ಲ.
- ಯೇಸುವಿನಲ್ಲಿ ನಂಬಿಕೆಯಿಡದ ಫರಿಸಾಯರಂತ ಜನರಿಂದ ಸತ್ಯವನ್ನು ಮರೆಮಾಡಿ, ಯೇಸು ತನ್ನ ಶಿಷ್ಯರಿಗೆ ಸತ್ಯವನ್ನು ತಿಳಿಸುವುದಕ್ಕೆ ಸಾಮ್ಯವನ್ನು ಉಪಯೋಗಿಸಲಾಗಿರುತ್ತದೆ.
- ದಾವೀದನ ಪಾಪವು ಎಷ್ಟು ಭಯಂಕರವಾದದ್ದೋ ಎಂದು ತೋರಿಸುವುದಕ್ಕೆ ಪ್ರವಾದಿಯಾದ ನಾತಾನನು ಅರಸನಾದ ದಾವೀದನಿಗೆ ಒಂದು ಸಾಮ್ಯವನ್ನು ಹೇಳಿದನು.
- ಒಳ್ಳೇಯ ಸಮಾರ್ಯದವನ ಕಥೆಯೇ ಕಥೆಯಾಗಿರುವ ಸಾಮ್ಯದ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಯೇಸುವಿನ ಬೋಧನೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಶಿಷ್ಯರಿಗೆ ಸಹಾಯ ಮಾಡುವುದಕ್ಕೆ ನೀತಿ ಪಾಠವನ್ನಾಗಿ ಯೇಸು ಹೋಲಿಸಿದ ಹಳೇ ಮತ್ತು ಹೊಸ ಬುದ್ದಲಿಗಳ ಸಾಮ್ಯವು ಒಂದು ಉದಾಹರಣೆಯಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : ಸಮಾರ್ಯ)
ಸತ್ಯವೇದದ ಅನುಬಂಧ ವಾಕ್ಯಗಳು :
- ಲೂಕ.05:36
- ಲೂಕ.06:39-40
- ಲೂಕ.08:4-6
- ಲೂಕ.08:9-10
- ಮಾರ್ಕ.04:1-2
- ಮತ್ತಾಯ.13:3-6
- ಮತ್ತಾಯ.13:10-12
- ಮತ್ತಾಯ.13:13-14
ಪದ ಡೇಟಾ:
- Strong's: H1819, H4912, G3850, G3942