kn_tw/bible/kt/nazirite.md

27 lines
4.0 KiB
Markdown

# ನಾಜಿರ, ನಾಜಿರರು, ನಾಜಿರ ಪ್ರತಿಜ್ಞೆ
## ಸತ್ಯಾಂಶಗಳು:
“ನಾಜಿರ” ಎನ್ನುವ ಪದವು “ನಾಜಿರ ಪ್ರತಿಜ್ಞೆಯನ್ನು” ತೆಗೆದುಕೊಂಡಿರುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಈ ಪ್ರತಿಜ್ಞೆಯನ್ನು ಪುರುಷರು ಮಾತ್ರವೇ ತೆಗೆದುಕೊಳ್ಳುತ್ತಾರೆ, ಆದರೆ ಸ್ತ್ರೀಯರು ಕೂಡ ತೆಗೆದುಕೊಳ್ಳುತ್ತಾರೆ
* ನಾಜೀರ ಪ್ರತಿಜ್ಞೆಯನ್ನು ತೆಗೆದುಕೊಂಡಿರುವ ಒಬ್ಬ ವ್ಯಕ್ತಿ ಆ ಪ್ರತಿಜ್ಞೆಯನ್ನು ನೆರವೇರಿಸುವವರೆಗೂ ಅಂದರೆ ಆ ನಿರ್ದಿಷ್ಟ ಕಾಲದವರೆಗೂ ದ್ರಾಕ್ಷಿಗಳಿಂದ ಮಾಡಿದ ಪಾನವನ್ನಾಗಲಿ ಅಥವಾ ಆಹಾರವನ್ನಾಗಲಿ ತೆಗೆದುಕೊಳ್ಳುವುದಿಲ್ಲವೆಂದು ಒಪ್ಪಂದ ಮಾಡಿಕೊಂಡಿರುತ್ತಾನೆ. ಈ ನಿರ್ದಿಷ್ಟ ಕಾಲದಲ್ಲಿ ಇವನು ತನ್ನ ಕೂದಲನ್ನು ಕತ್ತರಿಸಿಕೊಳ್ಳುವುದಿಲ್ಲ, ಮತ್ತು ಶವದ ಬಳಿಗೆ ಹೋಗುವುದಿಲ್ಲ.
* ಇಟ್ಟಿಕೊಂಡಿರುವ ನಿರ್ಧಿಷ್ಠ ಕಾಲವು ಮುಗಿದನಂತರ, ಆ ಪ್ರತಿಜ್ಞೆಯು ನೆರವೇರಿಸಲ್ಪಡುತ್ತದೆ, ನಾಜಿರನು ಯಾಜಕನ ಬಳಿಗೆ ಹೋಗಿ, ಅರ್ಪಣೆಯನ್ನು ಅರ್ಪಿಸಬೇಕು. ಇದರಲ್ಲಿ ತನ್ನ ಕೂದಲನ್ನು ಕತ್ತರಿಸಿ, ಅವುಗಳನ್ನು ಸುಟ್ಟು ಹಾಕುವುದನ್ನು ಒಳಗೊಂಡಿರುತ್ತದೆ. ಎಲ್ಲಾ ಕಟ್ಟಳೆಗಳನ್ನು ತೆಗೆದುಹಾಕಲಾಗುತ್ತದೆ.
* ನಾಜಿರ ಪ್ರತಿಜ್ಞೆಯ ಕೆಳಗೆ ಇರುವ ಸಂಸೋನನು ಹಳೇ ಒಡಂಬಡಿಕೆಯಲ್ಲಿ ಎಲ್ಲರಿಗೆ ಚೆನ್ನಾಗಿ ಗೊತ್ತಿದ್ದವನಾಗಿರುತ್ತಾನೆ.
* ಜೆಕರ್ಯನ ಮಗನಾಗಿರುವ ಸ್ನಾನೀಕನಾದ ಯೋಹಾನನು ಬಲವಾದ ಪಾನವನ್ನು ಕುಡಿಯುವುದಿಲ್ಲವೆಂದು ದೂತನು ಜೆಕರ್ಯನಿಗೆ ಹೇಳುತ್ತಾನೆ, ಇದರಿಂದ ಯೋಹಾನನು ನಾಜಿರ ಕೆಳಗೆ ಇದ್ದಾನೆಂದು ತಿಳಿದುಬರುತ್ತಿದೆ.
* ಅಪೊಸ್ತಲರ ಕೃತ್ಯಗಳಲ್ಲಿರುವ ವಾಕ್ಯಭಾಗದ ಪ್ರಕಾರ ಅಪೊಸ್ತಲನಾದ ಪೌಲನು ಕೂಡ ಒಂದಾನೊಂದುಸಲ ಅಪೊಸ್ತಲರ ಕೃತ್ಯಗಳಲ್ಲಿರುವ ವಾಕ್ಯಭಾಗದ ಪ್ರಕಾರ ಈ ಪ್ರತಿಜ್ಞೆಯನ್ನು ತೆಗೆದುಕೊಂಡಿರಬಹುದು,
(ಅನುವಾದ ಸಲಹೆಗಳು: [ಹೆಸರುಗಳನ್ನು ಅನುವಾದ ಮಾಡಿರಿ](rc://*/ta/man/translate/translate-names))
(ಈ ಪದಗಳನ್ನು ಸಹ ನೋಡಿರಿ : [ಯೋಹಾನ (ಸ್ನಾನಿಕನು)](../names/johnthebaptist.md), [ಸರ್ವಾಂಗ ಹೋಮ](../other/sacrifice.md), [ಸಂಸೋನ](../names/samson.md), [ಪ್ರತಿಜ್ಞೆ](../kt/vow.md), [ಜೆಕರ್ಯ](../names/zechariahot.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.18:18-19](rc://*/tn/help/act/18/18)
* [ಆಮೋಸ.02:11-12](rc://*/tn/help/amo/02/11)
* [ನ್ಯಾಯಾ.13:3-5](rc://*/tn/help/jdg/13/03)
* [ಅರಣ್ಯ.06:1-4](rc://*/tn/help/num/06/01)
## ಪದ ಡೇಟಾ:
* Strong's: H5139