kn_tw/bible/kt/minister.md

30 lines
3.9 KiB
Markdown

# ಸೇವಕನಿಗೆ, ಸೇವೆ
## ಪದದ ಅರ್ಥವಿವರಣೆ:
ಸತ್ಯವೇದದಲ್ಲಿ “ಸೇವೆ” ಎನ್ನುವ ಪದವು ದೇವರ ಕುರಿತಾಗಿ ಇತರರಿಗೆ ಬೋಧನೆ ಮಾಡುವುದರ ಮೂಲಕ ಅವರಿಗೆ ಸೇವೆ ಮಾಡುವುದನ್ನು ಮತ್ತು ಅವರ ಆತ್ಮೀಯಕವಾದ ಅಗತ್ಯತೆಗಳನ್ನು ನೋಡಿಕೊಳ್ಳುವುದನ್ನು ಸೂಚಿಸುತ್ತದೆ.
* ಹಳೇ ಒಡಂಬಡಿಕೆಯಲ್ಲಿ ಯಾಜಕರು ದೇವರಿಗೆ ಅರ್ಪಣೆಗಳನ್ನು ಮಾಡುವುದರ ಮೂಲಕ ದೇವಾಲಯದಲ್ಲಿ ಆತನಿಗೆ “ಸೇವೆ” ಮಾಡುತ್ತಿದ್ದರು.
* ಅವರ “ಸೇವೆ”ಯಲ್ಲಿ ದೇವಾಲಯವನ್ನು ಚೆನ್ನಾಗಿ ನೋಡಿಕೊಳ್ಳುವುದು ಮತ್ತು ಜನರ ಪಕ್ಷವಾಗಿ ದೇವರಿಗೆ ಪ್ರಾರ್ಥನೆಗಳನ್ನು ಅರ್ಪಿಸುವುದು ಒಳಗೊಂಡಿರುತ್ತದೆ.
* ಜನರಿಗೆ “ಸೇವೆ” ಮಾಡುವ ಕೆಲಸದಲ್ಲಿ ದೇವರ ಕುರಿತಾಗಿ ಅವರಿಗೆ ಬೋಧನೆ ಮಾಡುವುದರ ಮೂಲಕ ಅವರಿಗೆ ಆತ್ಮೀಯಕವಾಗಿ ಸೇವೆ ಮಾಡುವುದೂ ಒಳಗೊಂಡಿರುತ್ತದೆ.
* ಈ ಪದವು ಜನರಿಗೆ ಭೌತಿಕವಾದ ವಿಧಾನಗಳಲ್ಲಿ ಸೇವೆ ಮಾಡುವುದನ್ನೂ ಸೂಚಿಸುತ್ತದೆ, ಬಡವರಿಗೆ ಊಟವನ್ನು ಒದಗಿಸಿಕೊಡುವುದು ಮತ್ತು ರೋಗಿಗಳಿಗೆ ವೈದ್ಯಕೀಯ ಸೇವೆಯನ್ನು ಮಾಡಿಸುವುದು ಒಳಗೊಂಡಿರುತ್ತದೆ.
## ಅನುವಾದ ಸಲಹೆಗಳು:
* ಜನರಿಗೆ ಸೇವೆ ಮಾಡುವ ಸಂದರ್ಭದಲ್ಲಿ, “ಸೇವಕನಿಗೆ” ಎನ್ನುವ ಪದವನ್ನು “ಸೇವೆ ಮಾಡು” ಅಥವಾ “ಜಾಗೃತಿ ತೆಗೆದುಕೋ” ಅಥವಾ “ಅವರ ಅಗತ್ಯತೆಗಳನ್ನು ಪೂರೈಸು” ಎಂದೂ ಅನುವಾದ ಮಾಡಬಹುದು.
* ದೇವಾಲಯದಲ್ಲಿ ಸೇವೆ ಮಾಡುವುದನ್ನು ಸೂಚಿಸಿದಾಗ, “ಸೇವಕ” ಎನ್ನುವ ಪದವನ್ನು “ದೇವಾಲಯದಲ್ಲಿ ಸೇವೆ ಮಾಡು” ಅಥವಾ “ಜನರಿಗಾಗಿ ದೇವರಿಗೆ ಅರ್ಪಣೆಗಳನ್ನು ಅರ್ಪಿಸು” ಎಂದೂ ಅನುವಾದ ಮಾಡಬಹುದು.
* ದೇವರಿಗೆ ಸೇವೆ ಮಾಡುವ ಸಂದರ್ಭದಲ್ಲಿ ಈ ಪದವನ್ನು “ಸೇವೆ ಮಾಡು” ಅಥವಾ “ದೇವರಿಗಾಗಿ ಕೆಲಸ ಮಾಡು” ಎಂದೂ ಅನುವಾದ ಮಾಡಬಹುದು.
* “ಸೇವೆ ಮಾಡಿದೆ” ಎನ್ನುವ ಮಾತನ್ನು “ಜಾಗೃತಿ ತೆಗೆದುಕೊಂಡಿದೆ” ಅಥವಾ “ಕೊಡಲ್ಪಟ್ಟಿದೆ” ಅಥವಾ “ಸಹಾಯ ಮಾಡಲ್ಪಟ್ಟಿದೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಸೇವೆ ಮಾಡು](../other/servant.md), [ಅರ್ಪಣೆ](../other/sacrifice.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ಸಮು.20:23-26](rc://*/tn/help/2sa/20/23)
* [ಅಪೊ.ಕೃತ್ಯ.06:2-4](rc://*/tn/help/act/06/02)
* [ಅಪೊ.ಕೃತ್ಯ.21:17-19](rc://*/tn/help/act/21/17)
## ಪದ ಡೇಟಾ:
* Strong's: H6399, H8120, H8334, H8335, G1247, G1248, G1249, G2023, G2038, G2418, G3008, G3009, G3010, G3011, G3930, G5256, G5257, G5524