48 lines
6.9 KiB
Markdown
48 lines
6.9 KiB
Markdown
# ಕರುಣೆ, ಕರುಣಾಮಯ
|
||
|
||
## ಪದದ ಅರ್ಥವಿವರಣೆ:
|
||
|
||
“ಕರುಣೆ’ ಮತ್ತು “ಕರುಣಾಮಯ” ಎನ್ನುವ ಎರಡು ಪದಗಳು ಅಗತ್ಯತೆಯಲ್ಲಿರುವ ಜನರಿಗೆ ಸಹಾಯ ಮಾಡುವುದನ್ನು ಸೂಚಿಸುತ್ತದೆ, ವಿಶೇಷವಾಗಿ ಅಗತ್ಯತೆಯಲ್ಲಿರುವವರು ತುಂಬಾ ದೀನ ಸ್ಥಿತಿಯಲ್ಲಿ ಅಥವಾ ಕೆಳ ಮಟ್ಟದಲ್ಲಿ ಇದ್ದಾಗ ಮಾಡುವ ಸಹಾಯವನ್ನು ಸೂಚಿಸುತ್ತದೆ.
|
||
|
||
* “ಕರುಣೆ” ಎನ್ನುವ ಪದವು ಜನರು ಮಾಡಿದ ತಪ್ಪುಗಳಿಗೆ ಅವರನ್ನು ಶಿಕ್ಷಿಸಬಾರದೆನ್ನುವ ಅರ್ಥವನ್ನು ಒಳಗೊಂಡಿರುತ್ತದೆ.
|
||
* ಅರಸನಾಗಿರುವ ಒಬ್ಬ ಶಕ್ತಿಯುಳ್ಳ ಒಬ್ಬ ವ್ಯಕ್ತಿ, ಜನರಿಗೆ ಹಾನಿ ಮಾಡುವ ವಿಧಾನದಲ್ಲಿ ನಡೆದುಕೊಳ್ಳುವ ಬದಲಾಗಿ ಅವರು ಸುಖವಾಗಿ ಚೆನ್ನಾಗಿ ನೋಡಿಕೊಳ್ಳುವಾಗ ಅವನನ್ನು “ಕರುಣಾಮಯ” ಎಂದು ಹೇಳಲಾಗುತ್ತದೆ.
|
||
* ಕರುಣಾಮಯವಾಗಿ ಇರುವುದೆಂದರೆ ನಮಗೆ ವಿರುದ್ಧವಾಗಿ ತಪ್ಪು ಮಾಡಿದವರನ್ನು ಕ್ಷಮಿಸುವುದು ಎಂದರ್ಥ.
|
||
* ಯಾರಾದರೂ ತುಂಬಾ ಅಗತ್ಯತೆಯಲ್ಲಿರುವಾಗ ಅವರಿಗೆ ನಾವು ಸಹಾಯ ಮಾಡಿದಾಗ, ನಾವು ಅವರ ಮೇಲೆ ಕರುಣೆ ತೋರಿಸುತ್ತಿದ್ದೇವೆ ಎಂದರ್ಥ.
|
||
* ದೇವರು ನಮ್ಮ ವಿಷಯದಲ್ಲಿ ಕರುಣಾಮಯನಾಗಿದ್ದಾನೆ, ಮತ್ತು ನಾವೂ ಇತರರ ವಿಷಯದಲ್ಲಿ ಕರುಣೆಯನ್ನು ತೋರಿಸಬೇಕೆಂದು ಆತನು ನಮ್ಮಿಂದ ಬಯಸುತ್ತಿದ್ದಾನೆ.
|
||
|
||
## ಅನುವಾದ ಸಲಹೆಗಳು:
|
||
|
||
* ಸಂದರ್ಭಾನುಸಾರವಾಗಿ, “ಕರುಣೆ” ಎನ್ನುವ ಪದವನ್ನು “ದಯೆ” ಅಥವಾ “ಕನಿಕರ” ಅಥವಾ “ಅನುಕಂಪ” ಎಂದೂ ಅನುವಾದ ಮಾಡಬಹುದು.
|
||
* “ಕರುಣಾಮಯ” ಎನ್ನುವ ಪದವನ್ನು “ಅನುಕಂಪವನ್ನು ತೋರಿಸುವುದು” ಅಥವಾ “ದಯೆಯಿಂದ ಇರುವುದು” ಅಥವಾ “ಕ್ಷಮಿಸುವುದು” ಎಂದೂ ಅನುವಾದ ಮಾಡಬಹುದು.
|
||
* “ಕರುಣೆಯನ್ನು ತೋರಿಸು” ಅಥವಾ “ಕರುಣೆ ಹೊಂದಿರು” ಎನ್ನುವ ಮಾತನ್ನು “ದಯೆಯಿಂದ ನಡೆದುಕೋ” ಅಥವಾ “ಇತರರ ವಿಷಯದಲ್ಲಿ ಕನಿಕರದಿಂದಿರು” ಎಂದು ಅನುವಾದ ಮಾಡಬಹುದು.
|
||
|
||
(ಈ ಪದಗಳನ್ನು ಸಹ ನೋಡಿರಿ : [ಕನಿಕರ](../kt/compassion.md), [ಕ್ಷಮಿಸು](../kt/forgive.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು :
|
||
|
||
* [1 ಪೇತ್ರ.01:3-5](rc://*/tn/help/1pe/01/03)
|
||
* [1 ತಿಮೊಥೆ.01:13](rc://*/tn/help/1ti/01/13)
|
||
* [ದಾನಿ.09:17-17](rc://*/tn/help/dan/09/17)
|
||
* [ವಿಮೋ.34:6](rc://*/tn/help/exo/34/06)
|
||
* [ಆದಿ.19:16-16](rc://*/tn/help/gen/19/16)
|
||
* [ಇಬ್ರಿ.10:28-29](rc://*/tn/help/heb/10/28)
|
||
* [ಯಾಕೋಬ.02:13](rc://*/tn/help/jas/02/13)
|
||
* [ಲೂಕ.06:35-36](rc://*/tn/help/luk/06/35)
|
||
* [ಮತ್ತಾಯ.09:27](rc://*/tn/help/mat/09/27)
|
||
* [ಫಿಲಿಪ್ಪಿ.02:25-27](rc://*/tn/help/php/02/25)
|
||
* [ಕೀರ್ತನೆ.041:4-6](rc://*/tn/help/psa/041/004)
|
||
* [ರೋಮಾ.12:1](rc://*/tn/help/rom/12/01)
|
||
|
||
## ಸತ್ಯವೇದ ಕತೆಗಳಿಂದ ಉದಾಹರಣೆಗಳು:
|
||
|
||
* __[19:16](rc://*/tn/help/obs/19/16)__ ವಿಗ್ರಹಾರಾಧನೆಯನ್ನು ನಿಲ್ಲಿಸಿ, ಇತರರ ವಿಷಯದಲ್ಲಿ __ ಕರುಣೆ__ ಮತ್ತು ನ್ಯಾಯಗಳನ್ನು ತೋರಿಸುವುದು ಆರಂಭಿಸಬೇಕೆಂದು ಅವರು (ಪ್ರವಾದಿಗಳು) ಎಲ್ಲ ಜನರಿಗೆ ಹೇಳಿದರು.
|
||
* __[19:17](rc://*/tn/help/obs/19/17)__ ಬಾವಿಯ ಕೆಳ ಭಾಗದಲ್ಲಿರುವ ಮಣ್ಣಿನೊಳಗೆ ಆತನು (ಯೆರೆಮೀಯ) ಮುಳುಗಿ ಹೋಗಿದ್ದನು, ಆದರೆ ಅರಸನು ಅವನ ಮೇಲೆ __ ಕರುಣೆ __ ತೋರಿಸಿದನು ಮತ್ತು ಯೆರೆಮೀಯನು ಸಾಯದೆ ಆ ಬಾವಿಯೊಳಗಿಂದ ಅವನನ್ನು ಹೊರ ತೆಗೆದುಕೊಂಡು ಬರಬೇಕೆಂದು ತನ್ನ ದಾಸರಿಗೆ ಆಜ್ಞಾಪಿಸಿದನು.
|
||
* __[20:12](rc://*/tn/help/obs/20/12)__ ಪಾರಸೀಕ ಸಾಮ್ರಾಜ್ಯವು ಬಲವಾದದ್ದು, ಆದರೆ ಅವರು ಜಯಿಸಿದ ಜನರ ವಿಷಯದಲ್ಲಿ ಕರುಣಾಮಯವಾಗಿತ್ತು.
|
||
* __[27:11](rc://*/tn/help/obs/27/11)__ “ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು?” ಎಂದು ಯೇಸು ಆ ಧರ್ಮೋಪದೇಶಕನಿಗೆ ಕೇಳಿದನು. ಅವನು, “ಅವನಿಗೆ ___ ಕರುಣೆ ___ ತೋರಿಸಿದವನೇ” ಎಂದು ಉತ್ತರಿಸಿದನು.
|
||
* __[32:11](rc://*/tn/help/obs/32/11)__ “ಇಲ್ಲ, ನೀನು ನಿನ್ನ ಮನೆಗೂ ನಿನ್ನ ಜನರ ಬಳಿಗೂ ಹೋಗಿ ಕರ್ತನು ನಿನ್ನಲ್ಲಿ __ ಕರುಣೆಯಿಟ್ಟು __ ನಿನಗೆ ಏನೇನು ಉಪಕಾರಗಳನ್ನು ಮಾಡಿದ್ದಾನೋ ಅದನ್ನು ಹೇಳು” ಎಂದು ಯೇಸು ಅವನಿಗೆ ಹೇಳಿದನು.
|
||
* __[34:09](rc://*/tn/help/obs/34/09)__ “ಆದರೆ ತೆರಿಗೆ ಸಂಗ್ರಹಿಸುವವನು ಧಾರ್ಮಿಕ ಆಡಳಿತಗಾರರಿಂದ ದೂರವಿರುತ್ತಾನೆ, ಸ್ವರ್ಗದತ್ತಲೂ ನೋಡಲಿಲ್ಲ. ಬದಲಾಗಿ, ಅವನು ತನ್ನ ಎದೆಯ ಮೇಲೆ ಬಡಿದು, ‘ದೇವರೇ, ದಯವಿಟ್ಟು ನಾನು ಪಾಪಿಯಾಗಿದ್ದರಿಂದ ನನಗೆ ಕರುಣಿಸು ’ ಎಂದು ಪ್ರಾರ್ಥಿಸಿದನು.
|
||
|
||
## ಪದ ಡೇಟಾ:
|
||
|
||
* Strong's: H2551, H2603, H2604, H2616, H2617, H2623, H3722, H3727, H4627, H4819, H5503, H5504, H5505, H5506, H6014, H7349, H7355, H7356, H7359, G1653, G1655, G1656, G2433, G2436, G3628, G3629, G3741, G4698
|