kn_tw/bible/kt/life.md

59 lines
9.4 KiB
Markdown
Raw Permalink Blame History

This file contains invisible Unicode characters

This file contains invisible Unicode characters that are indistinguishable to humans but may be processed differently by a computer. If you think that this is intentional, you can safely ignore this warning. Use the Escape button to reveal them.

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

# ಜೀವನ, ಜೀವಿಸು, ಜೀವಿಸಿದೆ,  ಜೀವಂತವಾಗಿರುವುದು
## ಪದದ ಅರ್ಥವಿವರಣೆ:
"ಜೀವನ" ಎಂಬ ಪದವು ಭೌತಿಕವಾಗಿ ಸತ್ತವರ ವಿರುದ್ಧ ದೈಹಿಕವಾಗಿ ಜೀವಂತವಾಗಿರುವುದನ್ನು ಸೂಚಿಸುತ್ತದೆ. “ಭೌತಿಕವಾದ ಜೀವನ” ಮತ್ತು “ಆತ್ಮೀಯಕವಾದ ಜೀವನ” ಎನ್ನುವ ಮಾತುಗಳಿಗೆ ಅರ್ಥವೇನೆಂಬುವುದನ್ನು ಈ ಕೆಳಕಂಡ ಚರ್ಚೆಗಳು ಹೇಳುತ್ತವೆ.
### 1. ಭೌತಿಕವಾದ ಜೀವನ
* “ಜೀವನ” ಎನ್ನುವ ಪದವು ಕೂಡ “ಜೀವನ ರಕ್ಷಿಸಲ್ಪಟ್ಟಿದೆ” ಎಂದೆನ್ನುವ ಮಾತಿನಲ್ಲಿರುವಂತೆ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ.
* ಕೆಲವೊಂದುಬಾರಿ “ಜೀವನ” ಎನ್ನುವ ಪದವು “ತನ್ನ ಜೀವನ ಸಂತೋಷಕರವಾಗಿದೆ” ಎನ್ನುವ ಮಾತಿನಲ್ಲಿರುವಂತೆ ಜೀವನದ ಅನುಭವನ್ನು ಕೂಡ ಸೂಚಿಸುತ್ತದೆ.
* “ತನ್ನ ಜೀವನದ ಅಂತ್ಯವು” ಎನ್ನುವ ಮಾತಿನಲ್ಲಿರುವಂತೆ ಈ ಪದವು ಒಬ್ಬ ವ್ಯಕ್ತಿಯ ಜೀವನ ಕಾಲವ್ಯವಧಿಯನ್ನು ಸೂಚಿಸುತ್ತದೆ.
* “ನನ್ನ ತಾಯಿ ಇನ್ನೂ ಜೀವಿಸುತ್ತಿದ್ದಾರೆ” ಎನ್ನುವ ಮಾತಿನಲ್ಲಿ ಜೀವನ ಎಂಬ ಪದವು ದೈಹಿಕವಾಗಿ ಜೀವಂತವಾಗಿರುವುದನ್ನು ಉಲ್ಲೇಖಿಸಬಹುದು. "ಅವರು ನಗರದಲ್ಲಿ ವಾಸಿಸುತ್ತಿದ್ದರು" ಅವರು ಎಲ್ಲೋ ವಾಸಿಸುವಂತೆ ಉಲ್ಲೇಖಿಸಬಹುದು.
* ಸತ್ಯವೇದದಲ್ಲಿ “ಜೀವನ” ಎನ್ನುವ ಪರಿಕಲ್ಪನೆಯು ಅನೇಕಬಾರಿ “ಮರಣ” ಎನ್ನುವ ಪರಿಕಲ್ಪನೆಗೆ ವಿರುದ್ಧವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
### 2. ಆತ್ಮೀಕವಾದ ಜೀವನ
* ಒಬ್ಬ ವ್ಯಕ್ತಿ ದೇವರೊಂದಿಗೆ ಇರುವ ಯೇಸುವಿನಲ್ಲಿ ನಂಬಿದಾಗ ಆ ವ್ಯಕ್ತಿ ಆತ್ಮೀಕವಾದ ಜೀವನವನ್ನು ಹೊಂದಿರುತ್ತಾನೆ, ಆ ವ್ಯಕ್ತಿಯಲ್ಲಿ ಪವಿತ್ರಾತ್ಮನು ಜೀವಿಸುವದರಿಂದ ಜೀವನ ರೂಪಾಂತರವಾಗುತ್ತದೆ.
* ಆತ್ಮೀಕವಾದ ಜೀವನಕ್ಕೆ ವಿರುದ್ಧವಾಗಿ ಆತ್ಮೀಯಕವಾದ ಮರಣ ಎಂದು ಕರೆಯುತ್ತಾರೆ, ಇದಕ್ಕೆ ದೇವರಿಂದ ದೂರವಾಗುವುದು ಮತ್ತು ನಿತ್ಯ ಶಿಕ್ಷೆಯನ್ನು ಅನುಭವಿಸುವುದು ಎಂದರ್ಥವಾಗಿರುತ್ತದೆ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ, “ಜೀವನ” ಎನ್ನುವ ಪದವನ್ನು “ಅಸ್ತಿತ್ವದಲ್ಲಿರುವುದು” ಅಥವಾ “ವ್ಯಕ್ತಿ” ಅಥವಾ “ಪ್ರಾಣ” ಅಥವಾ “ಇರುವುದು” ಅಥವಾ “ಅನುಭವ” ಎಂದೂ ಅನುವಾದ ಮಾಡಬಹುದು.
* “ಜೀವಿಸು” ಎನ್ನುವ ಪದವನ್ನು “ನಿವಾಸ ಮಾಡು” ಅಥವಾ “ಇರು” ಅಥವಾ “ಅಸ್ತಿತ್ವದಲ್ಲಿರು” ಎಂದೂ ಅನುವಾದ ಮಾಡಬಹುದು.
* “ತನ್ನ ಜೀವನದ ಅಂತ್ಯ” ಎನ್ನುವ ಮಾತನ್ನು “ಅವನು ಜೀವಿಸುವುದನ್ನು ನಿಲ್ಲಿಸಿದಾಗ” ಎಂದು ಅನುವಾದ ಮಾಡಬಹುದು.
* “ಅವರ ಜೀವನಗಳನ್ನು ಕಾಪಾಡಿದನು” ಎನ್ನುವ ಮಾತನ್ನು “ಅವರು ಜೀವಿಸುವುದಕ್ಕೆ ಅನುಮತಿಸಲ್ಪಟ್ಟರು” ಅಥವಾ “ಅವರನ್ನು ಸಾಯಿಸಲಿಲ್ಲ” ಎಂದೂ ಅನುವಾದ ಮಾಡಬಹುದು.
* “ಅವರು ತಮ್ಮ ಜೀವನಗಳನ್ನು ಅಪಾಯಕ್ಕೊಳಗಾಗಿಸಿಕೊಂಡರು” ಎನ್ನುವ ಮಾತನ್ನು “ಅವರು ತಮ್ಮ ಜೀವನಗಳನ್ನು ಅಪಾಯದಲ್ಲಿ ಇರಿಸಿಕೊಂಡರು” ಅಥವಾ “ಅವರನ್ನು ಸಾಯಿಸಿಕೊಳ್ಳುವ ಕಾರ್ಯವನ್ನು ಅವರು ಮಾಡಿಕೊಂಡರು” ಎಂದೂ ಅನುವಾದ ಮಾಡಬಹುದು.
* ಆತ್ಮೀಕವಾಗಿ ಜೀವಿಸುವುದರ ಕುರಿತಾಗಿ ಸತ್ಯವೇದವು ಮಾತನಾಡಿದಾಗ, “ಜೀವನ” ಎನ್ನುವ ಪದವನ್ನು “ಆತ್ಮೀಕವಾದ ಜೀವನ” ಅಥವಾ “ನಿತ್ಯಜೀವ” ಎಂದು ಸಂದರ್ಭಾನುಸಾರವಾಗಿ ಅನುವಾದ ಮಾಡಬಹುದು.
* “ಆತ್ಮೀಕ ಜೀವನ” ಎನ್ನುವ ಉದ್ದೇಶದ ಮಾತನ್ನು “ನಮ್ಮ ಆತ್ಮಗಳಲ್ಲಿ ನಾವು ಜೀವಿಸುವಂತೆ ದೇವರು ಮಾಡುತ್ತಿದ್ದಾರೆ” ಅಥವಾ “ದೇವರ ಆತ್ಮದಿಂದ ಹೊಸ ಜೀವನ” ಅಥವಾ “ನಮ್ಮ ಸ್ವಂತ ಅಂತರಂಗದಲ್ಲಿ ಜೀವಂತರಾಗಿರುವಂತೆ ಮಾಡಿದನು” ಎಂದೂ ಅನುವಾದ ಮಾಡಬಹುದು.
* ಸಂದರ್ಭಾನುಸಾರವಾಗಿ “ಜೀವನವನ್ನು ಅನುಗ್ರಹಿಸು” ಎನ್ನುವ ಮಾತನ್ನು “ಜೀವಿಸುವುದಕ್ಕೆ ಕಾರಣವಾಗು” ಅಥವಾ “ನಿತ್ಯ ಜೀವವನ್ನು ಕೊಡು” ಅಥವಾ “ನಿತ್ಯದಲ್ಲಿ ಜೀವಿಸುವುದಕ್ಕೆ ಕಾರಣವಾಗಿ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ: [ಮರಣ](../other/death.md), [ನಿತ್ಯಜೀವ](../kt/eternity.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [2 ಪೇತ್ರ.01:03](rc://*/tn/help/2pe/01/03)
* [ಅಪೊ.ಕೃತ್ಯ.10:42](rc://*/tn/help/act/10/42)
* [ಆದಿ.02:07](rc://*/tn/help/gen/02/07)
* [ಆದಿ.07:22](rc://*/tn/help/gen/07/22)
* [ಇಬ್ರಿ.10:20](rc://*/tn/help/heb/10/20)
* [ಯೆರೆ.44:02](rc://*/tn/help/jer/44/02)
* [ಯೋಹಾನ.01:04](rc://*/tn/help/jhn/01/04)
* [ನ್ಯಾಯಾ.02:18](rc://*/tn/help/jdg/02/18)
* [ಲೂಕ.12:23](rc://*/tn/help/luk/12/23)
* [ಮತ್ತಾಯ.07:14](rc://*/tn/help/mat/07/14)
## ಸತ್ಯವೇದ ಕಥೆಗಳಿಂದ ಉದಾಹರಣೆಗಳು:
* __[01:10](rc://*/tn/help/obs/01/10)__ ಆದ್ದರಿಂದ ದೇವರು ಮಣ್ಣನ್ನು ತೆಗೆದುಕೊಂಡು, ಮನುಷ್ಯನ ರೂಪವನ್ನು ಮಾಡಿ, ಅವನೊಳಗೆ __ ಜೀವವನ್ನು __ ಊದಿದನು.
* __[03:01](rc://*/tn/help/obs/03/01)__ ಸ್ವಲ್ಪ ಕಾಲವಾದನಂತರ, ಅನೇಕ ಜನರು ಲೋಕದಲ್ಲಿ __ಜೀವಿಸುತ್ತಿದ್ದರು __.
* __[08:13](rc://*/tn/help/obs/08/13)__ ಯೋಸೇಫನ ಅಣ್ಣಂದಿಯರು ಮನೆಗೆ ಹಿಂತಿರುಗಿ ಹೋದನಂತರ, ತಮ್ಮ ತಂದೆಯಾದ ಯಾಕೋಬನಿಗೆ ಯೋಸೇಫನು ಇನ್ನೂ __ಜೀವತವಾಗಿದ್ದಾನೆ __, ಅವನು ಸಂತೋಷವಾಗಿದ್ದಾನೆಂದು ಹೇಳಿದರು.
* __[17:09](rc://*/tn/help/obs/17/09)__ ಆದರೆ, ತನ್ನ ದಾವೀದನ __ಜೀವನದ __ ಅಂತ್ಯ ಭಾಗದಲ್ಲಿ ದೇವರ ಮುಂದೆ ಭಯಂಕರ ಪಾಪವನ್ನು ಮಾಡಿದನು.
* __[27:01](rc://*/tn/help/obs/27/01)__ ಒಂದು ದಿನ ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ಪಂಡಿತನಾಗಿರುವ ಒಬ್ಬ ವ್ಯಕ್ತಿ ಯೇಸುವನ್ನು ಪರೀಕ್ಷೆ ಮಾಡುವುದಕ್ಕೆ ಬಂದು, “ಬೋಧಕನೇ, ನಿತ್ಯ __ ಜೀವವನ್ನು __ ಪಡೆಯುವದಕ್ಕೆ ನಾನೇನು ಮಾಡಬೇಕು?” ಎಂದು ಕೇಳಿದನು.
* __[35:05](rc://*/tn/help/obs/35/05)__ “ನಾನೇ ಪುನರುತ್ಥಾನವು ಮತ್ತು __ಜೀವವು __ ಆಗಿದ್ದೇನೆ” ಎಂದು ಯೇಸು ಹೇಳಿದನು.
* __[44:05](rc://*/tn/help/obs/44/05)__ “ಯೇಸುವನ್ನು ಸಾಯಿಸಬೇಕೆಂದು ರೋಮಾ ಪಾಲಕನಿಗೆ ಹೇಳಿದ ವ್ಯಕ್ತಿ ನೀನೇ ಆಗಿದ್ದೀ. ನೀನು __ಜೀವಾಧಿಪತಿಯನ್ನು __ ಸಾಯಿಸಿದ್ದೀ, ಆದರೆ ದೇವರು ಆತನನ್ನು ಮರಣದಿಂದ ಎಬ್ಬಿಸಿದನು.”
## ಪದ ಡೇಟಾ:
* Strong's: H1934, H2416, H2417, H2421, H2425, H5315, G198, G222, G227, G806, G590