kn_tw/bible/kt/lawofmoses.md

50 lines
9.4 KiB
Markdown

# ಧರ್ಮಶಾಸ್ತ್ರ, ಮೋಶೆಯ ಧರ್ಮಶಾಸ್ತ್ರ,ಯೆಹೋವನ ಧರ್ಮಶಾಸ್ತ್ರ, ದೇವರ ಧರ್ಮಶಾಸ್ತ್ರ,
## ಪದದ ಅರ್ಥವಿವರಣೆ:
ಅತ್ಯಂತ ಸರಳವಾಗಿ, "ಧರ್ಮಶಾಸ್ತ್ರ" ಎಂಬ ಪದವು ಅನುಸರಿಸಬೇಕಾದ ನಿಯಮ ಅಥವಾ ಸೂಚನೆಯನ್ನು ಸೂಚಿಸುತ್ತದೆ. ಸತ್ಯವೆದದಲ್ಲಿ, "ಧರ್ಮಶಾಸ್ತ್ರ" ಎಂಬ ಪದವನ್ನು ಸಾಮಾನ್ಯವಾಗಿ ಯಾವುದನ್ನಾದರೂ ಉಲ್ಲೇಖಿಸಲು ಬಳಸಲಾಗುತ್ತದೆ ಮತ್ತು ದೇವರು ತನ್ನ ಜನರು ಪಾಲಿಸಬೇಕೆಂದು ಮತ್ತು ಮಾಡಬೇಕೆಂದು ದೇವರು ಬಯಸುತ್ತಾನೆ. "ಮೋಶೆಯ ಧರ್ಮಶಾಸ್ತ್ರ" ಎಂಬ ನಿರ್ದಿಷ್ಟ ಪದವು ಇಸ್ರಾಯೇಲ್ಯರಿಗೆ ವಿಧೇಯರಾಗಲು ದೇವರು ಮೋಶೆಗೆ ನೀಡಿದ ಆಜ್ಞೆಗಳು ಮತ್ತು ಸೂಚನೆಗಳನ್ನು ಸೂಚಿಸುತ್ತದೆ.
* ಸಂದರ್ಭಾನುಸಾರವಾಗಿ “ಧರ್ಮಶಾಸ್ತ್ರ” ಎನ್ನುವುದು ಈ ಕೆಳಕಂಡವುಗಳನ್ನು ಸೂಚಿಸುತ್ತದೆ:
* ದೇವರು ಇಸ್ರಾಯೇಲ್ಯರಿಗೋಸ್ಕರ ಎರಡು ಕಲ್ಲಿನ ಶಿಲೆಗಳ ಮೇಲೆ ಬರೆದ ಹತ್ತು ಆಜ್ಞೆಗಳು
* ಮೋಶೆಗೆ ಕೊಡಲ್ಪಟ್ಟ ಎಲ್ಲಾ ಆಜ್ಞೆಗಳು
* ಒಡಂಬಡಿಕೆಯ ಮೊದಲು ಐದು ಪುಸ್ತಕಗಳು
* ಸಂಪೂರ್ಣ ಹಳೆ ಒಡಂಬಡಿಕೆ (ಹೊಸ ಒಡಂಬಡಿಕೆಯಲ್ಲಿ ಸೂಚಿಸಿದ “ವಾಕ್ಯಗಳು”).
* ದೇವರ ಎಲ್ಲಾ ಆದೇಶಗಳು ಮತ್ತು ಚಿತ್ತ
* ಇಬ್ರಿಯ ವಾಕ್ಯಗಳು (ಅಥವಾ “ಹಳೇ ಒಡಂಬಡಿಕೆ”) ಸೂಚಿಸುವುದಕ್ಕೆ ಹೊಸ ಒಡಂಬಡಿಕೆಯಲ್ಲಿ ಉಪಯೋಗಿಸಿದ “ಧರ್ಮಶಾಸ್ತ್ರ ಮತ್ತು ಪ್ರವಾದಿಗಳು” ಎನ್ನುವ ಮಾತು
## ಅನುವಾದ ಸಲಹೆಗಳು:
* ಈ ಪದಗಳನ್ನು “ಧರ್ಮಶಾಸ್ತ್ರಗಳು” ಎನ್ನುವ ಬಹುವಚನ ಪದದಿಂದಲೂ ಅನುವಾದ ಮಾಡಬಹುದು, ಯಾಕಂದರೆ ಅವು ಅನೇಕವಾದ ಆದೇಶಗಳನ್ನು ಸೂಚಿಸುತ್ತವೆ.
* “ಮೋಶೆಯ ಧರ್ಮಶಾಸ್ತ್ರ” ಎನ್ನುವ ಮಾತನ್ನು “ಇಸ್ರಾಯೇಲ್ಯರಿಗೆ ಕೊಡುವುದಕ್ಕೆ ದೇವರು ಮೋಶೆಗೆ ಹೇಳಿರುವ ಆಜ್ಞೆಗಳು” ಎಂದೂ ಅನುವಾದ ಮಾಡಬಹದು.
* ಸಂದರ್ಭಾನುಗುಣವಾಗಿ, “ಮೋಶೆಯ ಧರ್ಮಶಾಸ್ತ್ರ” ಎನ್ನುವ ಮಾತನ್ನು “ದೇವರು ಮೋಶೆಗೆ ಹೇಳಿದ ಧರ್ಮಶಾಸ್ತ್ರ” ಅಥವಾ “ಮೋಶೆ ಬರೆದಿರುವ ಧರ್ಮಶಾಸ್ತ್ರ” ಅಥವಾ “ಇಸ್ರಾಯೇಲ್ಯರಿಗೆ ಕೊಡಬೇಕೆಂದು ದೇವರು ಮೋಶೆಗೆ ಹೇಳಿದ ಧರ್ಮಶಾಸ್ತ್ರ” ಎಂದೂ ಅನುವಾದ ಮಾಡಬಹುದು.
* “ಧರ್ಮಶಾಸ್ತ್ರ” ಅಥವಾ “ದೇವರ ಧರ್ಮಶಾಸ್ತ್ರ” ಅಥವಾ “ದೇವರ ಆಜ್ಞೆಗಳು” ಎನ್ನುವ ಮಾತುಗಳನ್ನು ಅನುವಾದ ಮಾಡುವ ವಿಧಾನಗಳಲ್ಲಿ “ದೇವರಿಂದ ಬಂದಿರುವ ಆಜ್ಞೆಗಳು” ಅಥವಾ “ದೇವರ ಆಜ್ಞೆಗಳು” ಅಥವಾ “ದೇವರು ಕೊಟ್ಟ ಶಾಸನಗಳು” ಅಥವಾ “ದೇವರು ಆಜ್ಞಾಪಿಸಿದ ಪ್ರತಿಯೊಂದು” ಅಥವಾ “ದೇವರ ಎಲ್ಲಾ ಆದೇಶಗಳು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* “ಯೆಹೋವನ ಧರ್ಮಶಾಸ್ತ್ರ” ಎನ್ನುವ ಮಾತನ್ನು “ಯೆಹೋವನ ಆಜ್ಞೆಗಳು” ಅಥವಾ “ವಿಧೇಯತೆ ತೋರಿಸಬೇಕೆಂದು ಯೆಹೋವನು ಹೇಳಿದ ಆದೇಶಗಳು” ಅಥವಾ “ಯೆಹೋವನಿಂದ ಬಂದಿರುವ ಆಜ್ಞೆಗಳು” ಅಥವಾ “ಯೆಹೋವನು ಆಜ್ಞಾಪಿಸಿದ ವಿಷಯಗಳು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಆದೇಶ](../other/instruct.md), [ಮೋಶೆ](../names/moses.md), [ಹತ್ತು ಆಜ್ಞೆಗಳು](../other/tencommandments.md), [ಕಾನೂನುಬದ್ಧ](../other/lawful.md), [ಯೆಹೋವ](../kt/yahweh.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.15:06](rc://*/tn/help/act/15/06)
* [ದಾನಿ.09:13](rc://*/tn/help/dan/09/13)
* [ವಿಮೋ.28:42-43](rc://*/tn/help/exo/28/42)
* [ಎಜ್ರಾ.07:25-26](rc://*/tn/help/ezr/07/25)
* [ಗಲಾತ್ಯ.02:15](rc://*/tn/help/gal/02/15)
* [ಲೂಕ.24:44](rc://*/tn/help/luk/24/44)
* [ಮತ್ತಾಯ.05:18](rc://*/tn/help/mat/05/18)
* [ನೆಹೆ.10:29](rc://*/tn/help/neh/10/29)
* [ರೋಮಾ.03:19-20](rc://*/tn/help/rom/03/20)
## ಸತ್ಯವೇದ ಕಥೆಗಳಿಂದ ಉದಾಹರಣೆಗಳು:
* __[13:07](rc://*/tn/help/obs/13/07)__ ದೇವರು ಕೂಡ ಅನುಸರಿಸುವುದಕ್ಕೆ ಅನೇಕವಾದ ನಿಯಮಗಳನ್ನು ಮತ್ತು __ ಧರ್ಮಶಾಸ್ತ್ರಗಳನ್ನು __ ಕೊಟ್ಟಿದ್ದಾನೆ. ಒಂದುವೇಳೆ ಜನರು ಈ __ ಧರ್ಮಶಾಸ್ತ್ರಕ್ಕೆ __- ವಿಧೇಯರಾದರೆ, ದೇವರು ಅವರನ್ನು ಆಶೀರ್ವಾದ ಮಾಡಿ, ಅವರನ್ನು ಸಂರಕ್ಷಿಸುತ್ತಾರೆಂದು ವಾಗ್ಧಾನ ಮಾಡಿದ್ದರು. ಒಂದುವೇಳೆ ಅವರು ಅವಿಧೇಯರಾದರೆ ದೇವರು ಅವರನ್ನು ಶಿಕ್ಷಿಸುತ್ತಾನೆ.
* __[13:09](rc://*/tn/help/obs/13/09)__ ದೇವರ ಧರ್ಮಶಾಸ್ತ್ರಕ್ಕೆ ಅವಿಧೇಯರಾಗುವ ಪ್ರತಿಯೊಬ್ಬರೂ ದೇವರಿಗೆ ಸರ್ವಾಂಗಹೋಮವನ್ನಾಗಿ ಮಾಡಲು ಗುಡಾರದ ಮುಂದಿರುವ ಯಜ್ಞವೇದಿಯ ಬಳಿಗೆ ಒಂದು ಪ್ರಾಣಿಯನ್ನು ಕರೆದುಕೊಂಡು ಬರಬೇಕು.
* __[15:13](rc://*/tn/help/obs/15/13)__ ಚಿಯೋನಿನಲ್ಲಿ ದೇವರು ಇಸ್ರಾಯೇಲ್ಯರೊಂದಿಗೆ ಮಾಡಿದ ಒಡಂಬಡಿಕೆಗೆ ವಿಧೇಯರಾಗಬೇಕೆಂದು ಜನರ ಬಾಧ್ಯತೆಯನ್ನು ಯೆಹೋಶುವ ಅವರಿಗೆ ಜ್ಞಾಪಕ ಮಾಡಿದ್ದಾನೆ. ದೇವರಿಗೆ ನಂಬಿಗಸ್ತರಾಗಿರುತ್ತೇವೆಂದು ಜನರೆಲ್ಲರು ವಾಗ್ಧಾನ ಮಾಡಿದರು ಮತ್ತು __ ಆತನ ಧರ್ಮಶಾಸ್ತ್ರವನ್ನು __ ಅನುಸರಿಸಿದರು.
* __[16:01](rc://*/tn/help/obs/16/01)__ ಯೆಹೋಶುವ ಮರಣಿಸಿದನಂತರ ಇಸ್ರಾಯೇಲ್ಯರು ದೇವರಿಗೆ ಅವಿಧೇಯರಾದರು ಮತ್ತು ಉಳಿದ ಕಾನಾನ್ಯರನ್ನು ಹೊರಗೆ ಹೋಗಲಾಡಿಸಲಿಲ್ಲ ಅಥವಾ __ ದೇವರ ಧರ್ಮಶಾಸ್ತ್ರಕ್ಕೆ __ ವಿಧೇಯರಾಗಲಿಲ್ಲ.
* __[21:05](rc://*/tn/help/obs/21/05)__ ಹೊಸ ಒಡಂಬಡಿಕೆಯಲ್ಲಿ ದೇವರು ತನ್ನ __ ಧರ್ಮಶಾಸ್ತ್ರವನ್ನು __ ಜನರ ಹೃದಯಗಳ ಮೇಲೆ ಬರೆಯುತ್ತಾರೆ, ಇದರಿಂದ ಜನರು ದೇವರನ್ನು ವೈಯುಕ್ತಿಕವಾಗಿ ತಿಳಿದುಕೊಳ್ಳುತ್ತಾರೆ, ಅವರು ತನ್ನ ಜನರಾಗಿರುತ್ತಾರೆ, ಮತ್ತು ದೇವರು ಅವರ ಪಾಪಗಳನ್ನು ಕ್ಷಮಿಸುತ್ತಾರೆ.
* __[27:01](rc://*/tn/help/obs/27/01)__ ದೇವರ ಧರ್ಮಶಾಸ್ತ್ರದಲ್ಲಿ ಏನು ಬರೆಯಲ್ಪಟ್ಟಿದೆ?” ಎಂದು ಯೇಸು ಉತ್ತರಿಸಿದರು.
* __[28:01](rc://*/tn/help/obs/28/01)__ “ನನ್ನನ್ನು ಒಳ್ಳೆಯವನು ಎಂದು ಯಾಕೆ ಕರೆಯುತ್ತಿದ್ದೀರಿ?” ಒಳ್ಳೆಯವನು ಒಬ್ಬನೇ ಇದ್ದಾನೆ, ಆತನೇ ದೇವರು. ಆದರೆ ನಿಮಗೆ ನಿತ್ಯಜೀವ ಬೇಕೆಂದಿದ್ದರೆ, __ ದೇವರ ಆಜ್ಞೆಗಳಿಗೆ __ ವಿಧೇಯನಾಗು” ಎಂದು ಯೇಸು ಅವನಿಗೆ ಹೇಳಿದನು.
## ಪದ ಡೇಟಾ:
* Strong's: H430, H1881, H1882, H2706, H2710, H3068, H4687, H4872, H4941, H8451, G2316, G3551, G3565