77 lines
14 KiB
Markdown
77 lines
14 KiB
Markdown
# ನ್ಯಾಯ, ನ್ಯಾಯವಾದ, ಅನ್ಯಾಯ, ಅನ್ಯಾಯವಾಗಿ, ಸಮರ್ಥಿಸಿ, ಸಮರ್ಥನೆ ಮಾಡುವುದು
|
|
|
|
## ಪದದ ಅರ್ಥವಿವರಣೆ:
|
|
|
|
“ನ್ಯಾಯ” ಮತ್ತು “ನ್ಯಾಯವಾದ” ಎನ್ನುವ ಪದಗಳು ದೇವರ ನ್ಯಾಯಶಾಸನಗಳ ಪ್ರಕಾರ ಜನರನ್ನು ಸರಿಯಾಗಿ ನೋಡಿಕೊಳ್ಳುವುದನ್ನು ಸೂಚಿಸುತ್ತದೆ. ಇತರ ಜನರು ಕೂಡ ನ್ಯಾಯವಂತರೆಂದು ಅವರ ವಿಷಯದಲ್ಲಿ ಸರಿಯಾದ ವರ್ತನೆಯ ದೇವರ ಸ್ಥಿರತೆಯನ್ನು ಮಾನವ ಕಾನೂನುಗಳೂ ಪ್ರತಿಬಿಂಬಿಸುತ್ತವೆ.
|
|
|
|
* “ನ್ಯಾಯವಾಗಿ” ಇರುವುದು ಎಂದರೆ ಇತರರ ವಿಷಯದಲ್ಲಿ ಸರಿಯಾದ ವಿಧಾನದಲ್ಲಿರುವ ಮತ್ತು ಚೆನ್ನಾಗಿರುವ ಕ್ರಿಯೆಗಳನ್ನು ಮಾಡುವುದು ಎಂದರ್ಥ. ದೇವರ ದೃಷ್ಟಿಯಲ್ಲಿ ನೈತಿಕವಾಗಿರುವ ಸರಿಯಾದದ್ದನ್ನೇ ಮಾಡುವುದಕ್ಕೆ ಯಥಾರ್ಥತೆಯನ್ನು ಮತ್ತು ಸಮಗ್ರತೆಯನ್ನು ಸೂಚಿಸುತ್ತದೆ.
|
|
* “ನ್ಯಾಯವಾಗಿ” ನಡೆದುಕೊಳ್ಳುವುದು ಎನ್ನುವುದಕ್ಕೆ ದೇವರ ನ್ಯಾಯಶಾಸನಗಳ ಪ್ರಕಾರ ಸರಿಯಾದ, ಒಳ್ಳೇಯದಾದ ಮತ್ತು ನಿಖರವಾದ ವಿಧಾನದಲ್ಲಿ ಜನರೊಂದಿಗೆ ವರ್ತಿಸುವುದು ಎಂದರ್ಥ.
|
|
* “ನ್ಯಾಯವಾದ-ನಡತೆ”ಯನ್ನು ಪಡೆದುಕೊಳ್ಳುವುದು ಎನ್ನುವುದಕ್ಕೆ ಕಾನೂನಿನ ಕೆಳಗೆ ಸರಿಯಾಗಿ ನಡೆಸಲ್ಪಡುವುದು ಎಂದರ್ಥ, ಅದು ಕಾನೂನುಗಳಿಂದ ಸಂರಕ್ಷಿಸಲ್ಪಡಬಹುದು ಅಥವಾ ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಶಿಕ್ಷೆಯನ್ನು ಪಡೆಯುವುದೂ ಆಗಿರಬಹುದು.
|
|
* ಕೆಲವೊಂದುಬಾರಿ “ನ್ಯಾಯ” ಎನ್ನುವ ಪದವು “ನೀತಿಯುತ” ಅಥವಾ “ದೇವರ ನ್ಯಾಯಶಾಸನಗಳನ್ನು ಅನುಸರಿಸುವುದು” ಎನ್ನುವ ವಿಶಾಲ ಅರ್ಥವನ್ನು ಹೊಂದಿರುತ್ತದೆ.
|
|
|
|
“ಅನ್ಯಾಯ” ಮತ್ತು “ಅನ್ಯಾಯವಾಗಿ” ಎನ್ನುವ ಪದಗಳು ಜನರ ವಿಷಯದಲ್ಲಿ ಸರಿಯಾಗಿ ನಡೆದುಕೊಳ್ಳದ ಪದ್ಧತಿಯನ್ನು ಮತ್ತು ಅವರಿಗೆ ಹಾನಿಯನ್ನುಂಟು ಮಾಡುವ ವರ್ತನೆಯನ್ನು ಸೂಚಿಸುತ್ತದೆ.
|
|
|
|
* “ಅಧರ್ಮ” ಎನ್ನುವ ಪದವು ಒಬ್ಬ ವ್ಯಕ್ತಿ ಕೆಟ್ಟದ್ದನ್ನು ಅನುಭವಿಸುವದಕ್ಕೆ ಅರ್ಹನಾಗದಿದ್ದರೂ ಅವನಿಗೆ ಕೆಟ್ಟದ್ದೇ ನಡೆಯುವದನ್ನು ಸೂಚಿಸುತ್ತದೆ ಇದು ಜನರ ವಿಷಯದಲ್ಲಿ ಸರಿಯಾಗಿ ನೋಡಿಕೊಳ್ಳದ ವಿಧಾನವನ್ನು ಸೂಚಿಸುತ್ತದೆ.
|
|
* ಅನ್ಯಾಯ ಎನ್ನುವುದಕ್ಕೆ ಕೆಲವೊಂದು ಜನರನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವಾಗ, ಇನ್ನೂ ಕೆಲವರನ್ನು ಕೆಟ್ಟದ್ದಾಗಿ ನೋಡಿಕೊಳ್ಳುವ ಅರ್ಥವು ಇರುತ್ತದೆ.
|
|
* ಅನ್ಯಾಯವಾದ ರೀತಿಯಲ್ಲಿ ಯಾರಾದರೂ ನಡೆದುಕೊಳ್ಳುತ್ತಿದ್ದರೆ, ಅವರು “ಪಕ್ಷಪಾತಿಯಾಗಿರುತ್ತಾನೆ” ಅಥವಾ “ದುಷ್ಟ ಆಲೋಚನೆಯನ್ನು ಹೊಂದಿರುತ್ತಾನೆ”, ಯಾಕಂದರೆ ಅವನು ಜನರ ವಿಷಯದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತಾಯಿಲ್ಲ.
|
|
|
|
“ಸಮರ್ಥಿಸು” ಮತ್ತು “ಸಮರ್ಥನೆ ಮಾಡು” ಎನ್ನುವ ಪದಗಳು ಅಪರಾಧಿಯಾಗಿರುವ ಒಬ್ಬ ವ್ಯಕ್ತಿಯನ್ನು ನೀತಿವಂತನನ್ನಾಗಿ ಮಾಡುವುದನ್ನು ಸೂಚಿಸುತ್ತದೆ. ದೇವರೊಬ್ಬನೇ ಪ್ರತಿಯೊಬ್ಬ ಮನುಷ್ಯನನ್ನು ನೀತಿವಂತರನ್ನಾಗಿ ಸಮರ್ಥಿಸುವವನಾಗಿರುತ್ತಾನೆ.
|
|
|
|
* ದೇವರು ಜನರನ್ನು ನೀತಿವಂತರನ್ನಾಗಿ ಸಮರ್ಥಿಸಿದಾಗ, ಆತನು ಅವರ ಪಾಪಗಳನ್ನು ಕ್ಷಮಿಸುವನು ಮತ್ತು ಅವರನ್ನು ಪಾಪರಹಿತರಾದ ಜನರನ್ನಾಗಿ ಮಾಡಿದನು. ಆತನು ಜನರು ಮಾಡಿದ ಪಾಪಗಳಿಂದ ರಕ್ಷಿಸಲು ಯೇಸುವಿನಲ್ಲಿ ಭರವಸೆವಿಟ್ಟು ಪಶ್ಚಾತ್ತಾಪಪಡುವ ಪ್ರತಿ ಪಾಪಿಯನ್ನು ಸಮರ್ಥಿಸುವನು ಅಥವಾ ನೀತಿವಂತರನ್ನಾಗಿ ಮಾಡುವನು.
|
|
* “ಸಮರ್ಥಿಸುವುದು” ಎನ್ನುವುದು ದೇವರು ಜನರ ಪಾಪಗಳನ್ನು ಕ್ಷಮಿಸುವಾಗ ಮಾಡುವ ಕೆಲಸವನ್ನು ಮತ್ತು ಆತನ ದೃಷ್ಟಿಯಲ್ಲಿ ಆ ವ್ಯಕ್ತಿಯನ್ನು ನೀತಿವಂತನನ್ನಾಗಿ ನಿರ್ಣಯಿಸುವುದನ್ನು ಸೂಚಿಸುತ್ತದೆ.
|
|
|
|
## ಅನುವಾದ ಸಲಹೆಗಳು:
|
|
|
|
* ಸಂದರ್ಭಾನುಸಾರವಾಗಿ, “ನ್ಯಾಯ” ಎನ್ನುವ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ನೈತಿಕವಾಗಿ ಸರಿಯಾದದ್ದು” ಅಥವಾ “ನ್ಯಾಯೋಚಿತ” ಎಂದೂ ಅನುವಾದ ಮಾಡಬಹುದು.
|
|
* “ನ್ಯಾಯವಾದ” ಎನ್ನುವ ಪದವನ್ನು “ನ್ಯಾಯೋಚಿತವಾದ ನಡವಳಿಕೆ” ಅಥವಾ “ಅರ್ಹ ಪರಿಣಾಮಗಳು” ಎಂದೂ ಅನುವಾದ ಮಾಡಬಹುದು.
|
|
* “ನ್ಯಾಯವಾಗಿ ನಡೆದುಕೊಳ್ಳುವುದು” ಎನ್ನುವ ಪದವನ್ನು “ನ್ಯಾಯೋಚಿತವಾಗಿ ನಡೆದುಕೊಳ್ಳಿರಿ” ಅಥವಾ “ನ್ಯಾಯವಾದ ವಿಧಾನದಲ್ಲಿ ವರ್ತಿಸುವುದು” ಎಂದೂ ಅನುವಾದ ಮಾಡಬಹುದು.
|
|
* ಕೆಲವೊಂದು ಸಂದರ್ಭಗಳಲ್ಲಿ, “ನ್ಯಾಯ” ಎನ್ನುವ ಪದವನ್ನು “ನೀತಿಯುತ” ಅಥವಾ “ಪ್ರಾಮಾಣಿಕ” ಎಂದೂ ಅನುವಾದ ಮಾಡಬಹುದು.
|
|
* ಸಂದರ್ಭಾನುಸಾರವಾಗಿ, “ಅನ್ಯಾಯ” ಎನ್ನುವ ಪದವನ್ನು “ಅನ್ಯಾಯೋಚಿತ” ಅಥವಾ “ಪಕ್ಷಪಾತ” ಅಥವಾ “ಅನೀತಿವಂತ” ಎಂದೂ ಅನುವಾದ ಮಾಡಬಹುದು.
|
|
* “ಅನ್ಯಾಯ” ಎನ್ನುವ ಮಾತನ್ನು “ಅನ್ಯಾಯಸ್ಥರು” ಅಥವಾ “ಅನ್ಯಾಯ ಜನರು” ಅಥವಾ “ಇತರರನ್ನು ಚೆನ್ನಾಗಿ ನೋಡಿಕೊಳ್ಳದ ಜನರು” ಅಥವಾ “ಅನೀತಿವಂತರಾದ ಜನರು” ಅಥವಾ “ದೇವರಿಗೆ ಅವಿಧೇಯರಾಗಿರುವ ಜನರು” ಎಂದೂ ಅನುವಾದ ಮಾಡಬಹುದು.
|
|
* “ಅನ್ಯಾಯವಾಗಿ” ಎನ್ನುವ ಪದವನ್ನು “”ಅನ್ಯಾಯವಾದ ನಡತೆಯಲ್ಲಿ” ಅಥವಾ “ತಪ್ಪಾಗಿ” ಅಥವಾ “ಅನ್ಯಾಯೋಚಿತವಾಗಿ” ಎಂದೂ ಅನುವಾದ ಮಾಡಬಹುದು.
|
|
* “ಅನ್ಯಾಯ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ, “ತಪ್ಪಾಗಿ ನಡೆದುಕೊಳ್ಳುವುದು” ಅಥವಾ “ಅನ್ಯಾಯೋಚಿತವಾಗಿ ಕ್ರಿಯೆಗಳನ್ನು ಮಾಡುವುದು” ಎನ್ನುವ ಮಾತುಗಳು ಸೇರಿಸಬಹುದು. (ನೋಡಿರಿ: [ಅಮೂರ್ತ ನಾಮಪದಗಳು](rc://*/ta/man/translate/figs-abstractnouns))
|
|
* “ಸಮರ್ಥಿಸು” ಎನ್ನುವ ಮಾತನ್ನು ಅನುವಾದ ಬೇರೊಂದು ವಿಧಾನಗಳಲ್ಲಿ, “ಒಬ್ಬರನ್ನು ನೀತಿವಂತರನ್ನಾಗಿ ಪ್ರಕಟಿಸುವುದು” ಅಥವಾ “ಒಬ್ಬರನ್ನು ನೀತಿವಂತರನ್ನಾಗಿ ಮಾಡುವುದು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
|
|
* ‘ಸಮರ್ಥನೆ ಮಾಡುವುದು” ಎನ್ನುವ ಮಾತು “ನೀತಿಯನ್ನು ಪ್ರಕಟಿಸುವುದು” ಅಥವಾ “ನೀತಿವಂತರಾಗುವುದು” ಅಥವಾ “ನೀತಿಯುತವಾಗಿ ಜನರನ್ನು ಮಾಡುವುದು” ಎಂದೂ ಅನುವಾದ ಮಾಡಬಹುದು.
|
|
* “ಸಮರ್ಥನೆ ಮಾಡುವುದರಲ್ಲಿ ಫಲಿಸುವುದು” ಎನ್ನುವ ಮಾತನ್ನು “ದೇವರು ಅನೇಕಮಂದಿ ಜನರನ್ನು ನೀತಿವಂತರನ್ನಾಗಿ ಸಮರ್ಥಿಸಿದ್ದಾನೆ” ಅಥವಾ “ಇದರಿಂದ ದೇವರು ಜನರನ್ನು ನೀತಿವಂತರನ್ನಾಗಿ ಮಾಡಿದನು” ಎಂದೂ ಅನುವಾದ ಮಾಡಬಹುದು.
|
|
* “ನಮ್ಮ ಸಮರ್ಥನೆಯಲ್ಲಿ” ಎನ್ನುವ ಮಾತನ್ನು “ದೇವರಿಂದ ನಾವು ನೀತಿವಂತರಾಗುವ ಕ್ರಮದಲ್ಲಿ” ಎಂದೂ ಅನುವಾದ ಮಾಡಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ಕ್ಷಮಿಸು](../kt/forgive.md), [ಅಪರಾಧ](../kt/guilt.md), [ತೀರ್ಪು ಮಾಡು](../kt/judge.md), [ನೀತಿ](../kt/righteous.md), [ನೀತಿ](../kt/righteous.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಆದಿ.44:16](rc://*/tn/help/gen/44/16)
|
|
* [1 ಪೂರ್ವ.18:14](rc://*/tn/help/1ch/18/14)
|
|
* [ಯೆಶಯಾ.04:4](rc://*/tn/help/isa/04/03)
|
|
* [ಯೆರೆ.22:03](rc://*/tn/help/jer/22/03)
|
|
* [ಯೆಹೆ.18:16-17](rc://*/tn/help/ezk/18/16)
|
|
* [ಮೀಕಾ.03:8](rc://*/tn/help/mic/03/08)
|
|
* [ಮತ್ತಾಯ.05:43-45](rc://*/tn/help/mat/05/43)
|
|
* [ಮತ್ತಾಯ.11:19](rc://*/tn/help/mat/11/19)
|
|
* [ಮತ್ತಾಯ.23:23-24](rc://*/tn/help/mat/23/23)
|
|
* [ಲೂಕ.18:03](rc://*/tn/help/luk/18/03)
|
|
* [ಲೂಕ.18:08](rc://*/tn/help/luk/18/08)
|
|
* [ಲೂಕ.18:13-14](rc://*/tn/help/luk/18/13)
|
|
* [ಲೂಕ.21:20-22](rc://*/tn/help/luk/21/20)
|
|
* [ಲೂಕ.23:41](rc://*/tn/help/luk/23/41)
|
|
* [ಅಪೊ.ಕೃತ್ಯ.13:38-39](rc://*/tn/help/act/13/38)
|
|
* [ಅಪೊ.ಕೃತ್ಯ.28:04](rc://*/tn/help/act/28/04)
|
|
* [ರೋಮಾ.04:1-3](rc://*/tn/help/rom/04/01)
|
|
* [ಗಲಾತ್ಯ.03:9](rc://*/tn/help/gal/03/06)
|
|
* [ಗಲಾತ್ಯ.03:11](rc://*/tn/help/gal/03/10=11)
|
|
* [ಗಲಾತ್ಯ.05:3-4](rc://*/tn/help/gal/05/03)
|
|
* [ತೀತ.03:6-7](rc://*/tn/help/tit/03/06)
|
|
* [ಇಬ್ರಿ.06:10](rc://*/tn/help/heb/06/10)
|
|
* [ಯಾಕೋಬ.02:24](rc://*/tn/help/jas/02/24)
|
|
* [ಪ್ರಕ.15:3-4](rc://*/tn/help/rev/15/03)
|
|
|
|
## ಸತ್ಯವೇದದಿಂದ ಉದಾಹರಣೆಗಳು:
|
|
|
|
* __[17:09](rc://*/tn/help/obs/17/09)__ ದಾವೀದನು __ ನ್ಯಾಯವಾಗಿ __ ಆಳಿದನು ಮತ್ತು ಅನೇಕ ವರ್ಷಗಳ ಕಾಲ ನಂಬಿಗಸ್ತನಾಗಿದ್ದನು ಮತ್ತು ದೇವರು ಆತನನ್ನು ಆಶೀರ್ವಾದ ಮಾಡಿದನು.
|
|
* __[18:13](rc://*/tn/help/obs/18/13)__ ಯೂದಾ ಅರಸರಲ್ಲಿ ಕೆಲವರು __ ನ್ಯಾಯವಾಗಿ __ ಅಳಿದ ಒಳ್ಳೇಯ ಮನುಷ್ಯರಿದ್ದರು ಮತ್ತು ದೇವರನ್ನು ಆರಾಧನೆ ಮಾಡಿದ್ದರು.
|
|
* __[19:16](rc://*/tn/help/obs/19/16)__ ವಿಗ್ರಹಾರಾಧನೆ ನಿಲ್ಲಿಸಬೇಕೆಂದು, ಇತರರ ವಿಷಯದಲ್ಲಿ ಕರುಣೆ ತೋರಿಸುವುದನ್ನು ಮತ್ತು __ ನ್ಯಾಯವಾಗಿ __ ನಡೆದುಕೊಳ್ಳುವುದನ್ನು ಆರಂಭಿಸಬೇಕೆಂದು ಅವರು (ಪ್ರವಾದಿಗಳು) ಜನರೆಲ್ಲರಿಗೆ ಹೇಳಿದರು.
|
|
* __[50:17](rc://*/tn/help/obs/50/17)__ ಯೇಸು ಸಮಾಧಾನದಿಂದ, __ ನ್ಯಾಯದಿಂದ __ ಆತನ ರಾಜ್ಯವನ್ನು ಆಳುವನು ಮತ್ತು ಆತನು ತನ್ನ ಜನರೊಂದಿಗೆ ಯಾವಾಗಲೂ ಇರುವನು
|
|
|
|
## ಪದ ಡೇಟಾ:
|
|
|
|
* Strong's: H205, H2555, H3477, H4941 H5765, H5766, H5767, H6662, H6663, H6664, H6666, H8003, H8264, H8636, G91, G93, G94, G1342, G1344, G1345, G1346, G1347, G1738
|