kn_tw/bible/kt/jew.md

34 lines
4.5 KiB
Markdown

# ಯೆಹೂದಿ, ಯೆಹೂದ್ಯ, ಯೆಹೂದ್ಯರು
## ಸತ್ಯಾಂಶಗಳು:
ಯೆಹೂದಿಗಳು ಅಬ್ರಾಹಾಮನ ಮೊಮ್ಮೊಗನಾದ ಯಾಕೋಬನ ಸಂತಾನದ ಜನರಾಗಿರುತ್ತಾರೆ. “ಯೆಹೂದಿ” ಎನ್ನುವ ಪದವು “ಯೂದಾ” ಎನ್ನುವ ಪದದಿಂದ ಬಂದಿರುತ್ತದೆ.
* ಬಾಬೆಲೋನಿಯದಲ್ಲಿ ಇಸ್ರಾಯೇಲ್ಯರ ಸೆರೆಯಿಂದ ಯೂದಾಗೆ ತಿರುಗಿಬಂದನಂತರ ಜನರು ಅವರನ್ನು “ಯೆಹೂದ್ಯರು” ಎಂದು ಕರೆಯುವುದಕ್ಕೆ ಆರಂಭಿಸಿದರು.
* ಮೆಸ್ಸೀಯನಾದ ಯೇಸು ಯೆಹೂದ್ಯನಾಗಿದ್ದನು. ಆದರೆ, ಯೆಹೂದ್ಯ ಧರ್ಮದ ನಾಯಕರು ಯೇಸುವನ್ನು ತಿರಸ್ಕರಿಸಿದರು ಮತ್ತು ಆತನು ಸಾಯಿಸಬೇಕೆಂದು ಬೆಂಬಲ ಕೊಟ್ಟರು.
* “ಯೆಹೂದ್ಯರು” ಎನ್ನುವ ಪದವು ಅನೇಕಬಾರಿ ಯೆಹೂದ್ಯರಾದ ಜನರೆಲ್ಲರನ್ನು ಸೂಚಿಸದೇ ಯೆಹೂದ್ಯ ನಾಯಕರನ್ನು ಮಾತ್ರವೇ ಸೂಚಿಸುತ್ತದೆ. ಬೇರೆ ಸಂದರ್ಭಗಳಲ್ಲಿ ಕೆಲವೊಂದು ಅನುವಾದಗಳಲ್ಲಿ “ನಾಯಕರು” ಎಂದು ಸೇರಿಸಿ ಹೇಳುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : [ಅಬ್ರಾಹಾಮ](../names/abraham.md), [ಯಾಕೋಬ](../names/jacob.md), [ಇಸ್ರಾಯೇಲ್](../kt/israel.md), [ಬಾಬೆಲೋನಿಯ](../names/babylon.md), [ಯೆಹೂದ್ಯ ನಾಯಕರು](../other/jewishleaders.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.02:5-7](rc://*/tn/help/act/02/05)
* [ಅಪೊ.ಕೃತ್ಯ.10:27-29](rc://*/tn/help/act/10/27)
* [ಅಪೊ.ಕೃತ್ಯ.14:5-7](rc://*/tn/help/act/14/05)
* [ಕೊಲೊಸ್ಸ.03:9-11](rc://*/tn/help/col/03/09)
* [ಯೋಹಾನ.02:13-14](rc://*/tn/help/jhn/02/13)
* [ಮತ್ತಾಯ.28:14-15](rc://*/tn/help/mat/28/14)
## ಸತ್ಯವೇದದಿಂದ ಉದಾಹರಣೆಗಳು:
* __[20:11](rc://*/tn/help/obs/20/11)__ ಇಸ್ರಾಯೇಲ್ಯರನ್ನು ಈಗ __ ಯೆಹೂದ್ಯರೆಂದು __ ಕರೆಯಲ್ಪಡುತ್ತಿದ್ದಾರೆ ಮತ್ತು ಅವರಲ್ಲಿ ಅನೇಕರು ಬಾಬೆಲೋನಿಯಾದಲ್ಲೇ ಜೀವಿಸಿದ್ದರು.
* __[20:12](rc://*/tn/help/obs/20/12)__ ಆದ್ದರಿಂದ, ಸೆರೆಯಲ್ಲಿ ಎಪ್ಪತ್ತು ವರ್ಷಗಳು ಇದ್ದಾದನಂತರ, __ ಯೆಹೂದ್ಯರಲ್ಲಿ __ ಒಂದು ಚಿಕ್ಕ ಗುಂಪು ಯೂದಾದಲ್ಲಿರುವ ಯೆರೂಸಲೇಮ್ ಪಟ್ಟಣಕ್ಕೆ ಹಿಂದುರಿಗೆ ಬಂದರು.
* __[37:10](rc://*/tn/help/obs/37/10)__ ಈ ಅದ್ಭುತ ಕಾರಣದಿಂದ __ ಯೆಹೂದ್ಯರಲ್ಲಿ __ ಅನೇಕರು ಯೇಸುವಿನಲ್ಲಿ ನಂಬಿಕೆ ಇಟ್ಟರು.
* __[37:11](rc://*/tn/help/obs/37/11)__ ಆದರೆ __ ಯೆಹೂದ್ಯರ __ ಧರ್ಮ ನಾಯಕರಲ್ಲಿ ಅಸೂಯೆ ಇದ್ದಿತ್ತು, ಆದ್ದರಿಂದ ಅವರು ಯೇಸುವನ್ನು ಮತ್ತು ಲಾಜರನನ್ನು ಹೇಗೆ ಸಾಯಿಸಬೇಕೆಂದು ಪ್ರಣಾಳಿಕೆ ಹಾಕುವುದಕ್ಕೆ ಎಲ್ಲರು ಸೇರಿಕೊಂಡಿದ್ದರು.
* __[40:02](rc://*/tn/help/obs/40/02)__ ಶಿಲುಬೆಯಲ್ಲಿ ಇಳಿಹಾಕಲ್ಪಟ್ಟ ಯೇಸುವಿನ ತಲೆಯ ಮೇಲೆ “__ ಯೆಹೂದ್ಯರ __ ಅರಸ” ಎಂಬುದಾಗಿ ಒಂದು ಸೂಚನೆಯನ್ನು ಅವರು ಬರೆಯಬೇಕೆಂದು ಪಿಲಾತನು ಆಜ್ಞಾಪಿಸಿದ್ದನು.
* __[46:06](rc://*/tn/help/obs/46/06)__ ಆ ಕ್ಷಣದಲ್ಲೇ, “ಯೇಸು ದೇವರ ಮಗ” ಎಂದು ಹೇಳುತ್ತಾ ದಮಸ್ಕದಲ್ಲಿ __ ಯೆಹೂದ್ಯರಿಗೆ __ ಸೌಲನು ಪ್ರಸಂಗ ಮಾಡುವುದಕ್ಕೆ ಆರಂಭಿಸಿದನು.
## ಪದ ಡೇಟಾ:
* Strong's: H3054, H3061, H3062, H3064, H3066, G2450, G2451, G2452, G2453, G2454