kn_tw/bible/kt/israel.md

44 lines
5.8 KiB
Markdown

# ಇಸ್ರಾಯೇಲ, ಇಸ್ರಾಯೇಲ್ಯರು
## ಸತ್ಯಾಂಶಗಳು:
“ಇಸ್ರಾಯೇಲ” ಎನ್ನುವ ಪದವು ದೇವರು ಯಾಕೋಬನಿಗೆ ಕೊಟ್ಟ ಹೆಸರಾಗಿತ್ತು. ಈ ಪದಕ್ಕೆ “ಅವನು ದೇವರೊಂದಿಗೆ ಹೋರಾಟ ಮಾಡುವನು” ಎಂದರ್ಥ.
* ಯಾಕೋಬನ ಸಂತತಿಯವರು “ಇಸ್ರಾಯೇಲ್ ಜನರು” ಅಥವಾ “ಇಸ್ರಾಯೇಲ್ ದೇಶ” ಅಥವಾ “ಇಸ್ರಾಯೇಲ್ಯರು” ಎಂಬುದಾಗಿ ಕರೆಯಲ್ಪಟ್ಟರು.
* ದೇವರು ತನ್ನ ಒಡಂಬಡಿಕೆಯನ್ನು ಇಸ್ರಾಯೇಲ್ ಜನರೊಂದಿಗೆ ವಿಸ್ತರಿಸಿದರು. ಅವರು ಆತನು ಆದುಕೊಂಡ ಜನರಾಗಿದ್ದರು.
* ಇಸ್ರಾಯೇಲ್ ದೇಶದವರು ಹನ್ನೆರಡು ಕುಲಗಳಿಗೆ ಸಂಬಂಧಪಟ್ಟವರಾಗಿದ್ದರು.
* ಅರಸನಾದ ಸೊಲೊಮೋನನು ಮರಣಿಸಿದನಂತರ ಇಸ್ರಾಯೇಲ್ ದೇಶವು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿತು: ದಕ್ಷಿಣ ರಾಜ್ಯವನ್ನು “ಯೂದಾ” ಎಂದು ಕರೆದರು, ಮತ್ತು ಉತ್ತರ ರಾಜ್ಯವನ್ನು “ಇಸ್ರಾಯೇಲ್” ಎಂದು ಕರೆದರು.
* “ಇಸ್ರಾಯೇಲ್” ಎನ್ನುವ ಪದವನ್ನು ಅನೇಕಬಾರಿ “ಇಸ್ರಾಯೇಲ್ ಜನರು” ಅಥವಾ “ಇಸ್ರಾಯೇಲ್ ದೇಶ” ಎಂದು ಸಂದರ್ಭಾನುಗುಣವಾಗಿ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಯಾಕೋಬ](../names/jacob.md), [ಇಸ್ರಾಯೇಲ್ ರಾಜ್ಯ](../names/kingdomofisrael.md), [ಯೂದಾ](../names/kingdomofjudah.md), [ದೇಶ](../other/nation.md), [ಇಸ್ರಾಯೇಲ್ ಹನ್ನೆರಡು ಕುಲಗಳು](../other/12tribesofisrael.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಪೂರ್ವ.10:01](rc://*/tn/help/1ch/10/01)
* [1 ಅರಸ.08:02](rc://*/tn/help/1ki/08/02)
* [ಅಪೊ.ಕೃತ್ಯ.02:36](rc://*/tn/help/act/02/36)
* [ಅಪೊ.ಕೃತ್ಯ.07:24](rc://*/tn/help/act/07/24)
* [ಅಪೊ.ಕೃತ್ಯ.13:23](rc://*/tn/help/act/13/23)
* [ಯೋಹಾನ.01:49-51](rc://*/tn/help/jhn/01/49)
* [ಲೂಕ.24:21](rc://*/tn/help/luk/24/21)
* [ಮಾರ್ಕ.12:29](rc://*/tn/help/mrk/12/29)
* [ಮತ್ತಾಯ.02:06](rc://*/tn/help/mat/02/06)
* [ಮತ್ತಾಯ.27:09](rc://*/tn/help/mat/27/09)
* [ಫಿಲಿಪ್ಪ.03:4-5](rc://*/tn/help/php/03/04)
## ಸತ್ಯವೇದದಿಂದ ಉದಾಹರಣೆಗಳು:
* __[08:15](rc://*/tn/help/obs/08/15)__ ಹನ್ನೆರಡು ಮಂದಿ ಮಕ್ಕಳ ಸಂತಾನದವರು __ ಇಸ್ರಾಯೇಲ್ __ ಹನ್ನೆರಡು ಕುಲಗಳಾದರು.
* __[09:03](rc://*/tn/help/obs/09/03)__ ಅನೇಕ ಭವನಗಳನ್ನು ಮತ್ತು ಪಟ್ಟಣವೆಲ್ಲವನ್ನು ಕಟ್ಟಬೇಕೆಂದು ಐಗುಪ್ತರು __ ಇಸ್ರಾಯೇಲ್ಯರನ್ನು __ ಬಲವಂತ ಮಾಡಿದರು.
* __[09:05](rc://*/tn/help/obs/09/05)__ ಇಸ್ರಾಯೇಲ್ ಸ್ತ್ರೀ ಒಬ್ಬ ಗಂಡು ಮಗುವಿಗೆ ಜನ್ಮ ಕೊಟ್ಟಳು.
* __[10:01](rc://*/tn/help/obs/10/01)__ ಇಸ್ರಾಯೇಲ್ ದೇವರು ಹೀಗೆನ್ನುತ್ತಾನೆ “’ನನ್ನ ಜನರನ್ನು ಕಳುಹಿಸು” ಎಂದು ಅವರು ಹೇಳಿದರು.
* __[14:12](rc://*/tn/help/obs/14/12)__ ಇದೆಲ್ಲವನ್ನು ಹೊರತುಪಡಿಸಿ, ದೇವರಿಗೆ ಮತ್ತು ಮೋಶೆಗೆ ವಿರುದ್ಧವಾಗಿ __ ಇಸ್ರಾಯೇಲ್ __ ಜನರು ದೂರು ಹೇಳಿದರು ಮತ್ತು ಗುನುಗುಟ್ಟಿದರು.
* __[15:09](rc://*/tn/help/obs/15/09)__ ಆ ದಿನದಂದು __ ಇಸ್ರಾಯೇಲನಿಗಾಗಿ __ ದೇವರು ಹೋರಾಟ ಮಾಡಿದರು. ಆತನು ಅಮೋರಿಯರಿಯರಲ್ಲಿ ಗೊಂದಲವನ್ನುಂಟು ಮಾಡಿದನು ಮತ್ತು ದೊಡ್ಡ ದೊಡ್ಡ ಆನೆಕಲ್ಲುಗಳನ್ನು ಕಳುಹಿಸಿದನು, ಆಗ ಅಮೋರಿಯರಲ್ಲಿ ಅನೇಕರು ಸತ್ತರು.
* __[15:12](rc://*/tn/help/obs/15/12)__ ಈ ಹೋರಾಟವಾದನಂತರ, ದೇವರು ಪ್ರತಿಯೊಂದು __ ಇಸ್ರಾಯೇಲ್ __ ಕುಲಕ್ಕೆ ವಾಗ್ಧಾನ ಭೂಮಿಯನ್ನು ಹಂಚಿದನು. ಆದನಂತರ, ದೇವರು __ ಇಸ್ರಾಯೇಲ್ __ ಗಡಿಗಳಲ್ಲಿರುವ ಪ್ರತಿಯೊಬ್ಬರಿಗೆ ಸಮಾಧಾನವನ್ನು ಕೊಟ್ಟರು.
* __[16:16](rc://*/tn/help/obs/16/16)__ ಆದ್ದರಿಂದ __ ಇಸ್ರಾಯೇಲ್ಯರು __ ವಿಗ್ರಹಗಳಿಗೆ ಆರಾಧನೆ ಮಾದುತ್ತಿದ್ದಕ್ಕಾಗಿ, ಅವರನ್ನು ದೇವರು ಶಿಕ್ಷಿಸಿದರು.
* __[43:06](rc://*/tn/help/obs/43/06)“__ ಇಸ್ರಾಯೇಲ್ ಜನರೇ, ನೀವು ಇದುವರೆಗೆ ತಿಳಿದುಕೊಂಡಂತೆ ಮತ್ತು ನೋಡಿದಂತೆ, ಯೇಸು ದೇವರ ಶಕ್ತಿಯಿಂದ ಅನೇಕವಾದ ಸೂಚಕ ಕ್ರಿಯೆಗಳನ್ನು ಮತ್ತು ಅದ್ಭುತಗಳನ್ನು ಮಾಡಿದನು.”
## ಪದ ಡೇಟಾ:
* Strong's: H3478, H3479, H3481, H3482, G935, G2474, G2475