kn_tw/bible/kt/inherit.md

44 lines
6.5 KiB
Markdown

# ಬಾಧ್ಯನಾಗು, ಪಿತ್ರಾರ್ಜಿತ, ಬಾಧ್ಯಸ್ಥ
## ಪದದ ಅರ್ಥವಿವರಣೆ:
“ಬಾಧ್ಯನಾಗು” ಎನ್ನುವ ಪದವು ಒಬ್ಬ ವ್ಯಕ್ತಿಯಿಂದ ಅಥವಾ ತಂದೆತಾಯಿಗಳಿಂದ ತೆಗೆದುಕೊಳ್ಳುವ ಬೆಲೆಯುಳ್ಳದ್ದನ್ನು ಸೂಚಿಸುತ್ತದೆ, ಯಾಕಂದರೆ ಆ ವ್ಯಕ್ತಿಯೊಂದಿಗೆ ವಿಶೇಷವಾದ ಸಂಬಂಧವಿರುತ್ತದೆ. “ಪಿತ್ರಾರ್ಜಿತ” ಎನ್ನುವುದು ಹೊಂದಿಕೊಂಡಿರುವುದನ್ನು ಅಥವಾ ಪಡೆದುಕೊಂಡಿರುವುದನ್ನು ಸೂಚಿಸುತ್ತದೆ. ವ್ಯಕ್ತಿಯೊಂದಿಗಿನ ವಿಶೇಷ ಸಂಬಂಧದಿಂದಾಗಿ ಈ ಪದವು ಇನ್ನೊಬ್ಬ ವ್ಯಕ್ತಿಯಿಂದ ಅಮೂಲ್ಯವಾದದ್ದನ್ನು ಪಡೆಯುವುದನ್ನು ಸಹ ಸೂಚಿಸುತ್ತದೆ.
* ಪಡೆದುಕೊಂಡಿರುವ ಭೌತಿಕವಾದ ಪಿತ್ರಾರ್ಜಿತ ಬಹುಶಃ ಅದು ಹಣ, ಭೂಮಿ, ಅಥವಾ ಅಸ್ತಿಪಾಸ್ತಿಯಾಗಿರಬಹುದು.
* ಕಾನಾನ್ ಭೂಮಿಯನ್ನು ಅಬ್ರಾಹಾಮನು ಮತ್ತು ತನ್ನ ಸಂತಾನದವರು ಸ್ವಾಧೀನ ಮಾಡಿಕೊಳ್ಳುತ್ತಾರೆಂದು, ಮತ್ತು ಅದು ಅವರಿಗೆ ಶಾಶ್ವತವಾಗಿ ಇರುತ್ತದೆಯೆಂದು ದೇವರು ಅವರೊಂದಿಗೆ ವಾಗ್ಧಾನ ಮಾಡಿದ್ದನು.
## ಅನುವಾದ ಸಲಹೆಗಳು:
* ಪಿತ್ರಾರ್ಜಿತ ಅಥವಾ ಬಾಧ್ಯಸ್ಥ ಎನ್ನುವ ಉದ್ದೇಶದಲ್ಲಿ ಅನುವಾದ ಮಾಡುವ ಭಾಷೆಯಲ್ಲಿ ಮುಂಚಿತವಾಗಿಯೇ ಪದಗಳು ಇದ್ದಾವೋ ಇಲ್ಲವೋ ಎಂದು ನೋಡಿರಿ, ಆ ಪದಗಳನ್ನೇ ಉಪಯೋಗಿಸಿರಿ.
* ಸಂದರ್ಭಾನುಸಾರವಾಗಿ, “ಬಾಧ್ಯನಾಗು” ಎನ್ನುವ ಪದಕ್ಕೆ ಪರ್ಯಾಯ ಪದಗಳಾಗಿ “ಪಡೆದುಕೋ” ಅಥವಾ “ಸ್ವಾಧೀನಪಡಿಸಿಕೋ” ಅಥವಾ “ಅದರ ಆಸ್ತಿಪಾಸ್ತಿಗಳಲ್ಲಿ ಬಾಧ್ಯಸ್ಥನಾಗು” ಎಂದೂ ಉಪಯೋಗಿಸಬಹುದು.
* “ಪಿತ್ರಾರ್ಜಿತ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ವಾಗ್ಧಾನ ಮಾಡಿದ ಬಹುಮಾನ” ಅಥವಾ “ಸ್ಥಿರವಾದ ಆಸ್ತಿಪಾಸ್ತಿ” ಎನ್ನುವ ಪದಗಳು ಒಳಗೊಂಡಿರಬಹುದು.
* “ಬಾಧ್ಯಸ್ಥ” ಎನ್ನುವ ಪದವನ್ನು “ತಂದೆಯ ಆಸ್ತಿಪಾಸ್ತಿಗಳನ್ನು ಪಡೆದುಕೊಳ್ಳುವ ಸವಲತ್ತು ಹೊಂದಿರುವ ಮಗ” ಅಥವಾ “(ದೇವರ) ಆತ್ಮೀಯಕವಾದ ಆಸ್ತಿಪಾಸ್ತಿಗಳನ್ನು ಅಥವಾ ಆಶೀರ್ವಾದಗಳನ್ನು ಪಡೆಯುವುದಕ್ಕೆ ಆದುಕೊಂಡಿರುವ ವ್ಯಕ್ತಿ” ಎನ್ನುವ ಅರ್ಥಗಳು ಬರುವ ಮಾತುಗಳಿಂದ ಅನುವಾದ ಮಾಡಬಹುದು.
* “ಪಿತ್ರಾರ್ಜಿತ” ಎನ್ನುವ ಪದವನ್ನು “ದೇವರಿಂದ ಬಂದ ಆಶೀರ್ವಾದಗಳು” ಅಥವಾ “ಪಿತ್ರಾರ್ಜಿತ ಆಶೀರ್ವಾದಗಳು” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಬಾಧ್ಯಸ್ಥ](../other/heir.md), [ಕಾನಾನ್](../names/canaan.md), [ವಾಗ್ಧಾನ ಭೂಮಿ](../kt/promisedland.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಕೊರಿಂಥ.06:9-11](rc://*/tn/help/1co/06/09)
* [1 ಪೇತ್ರ.01:04](rc://*/tn/help/1pe/01/04)
* [2 ಸಮು.21:03](rc://*/tn/help/2sa/21/03)
* [ಅಪೊ.ಕೃತ್ಯ.07:4-5](rc://*/tn/help/act/07/04)
* [ಧರ್ಮೋ.20:16](rc://*/tn/help/deu/20/16)
* [ಗಲಾತ್ಯ.05:21](rc://*/tn/help/gal/05/21)
* [ಆದಿ.15:07](rc://*/tn/help/gen/15/07)
* [ಇಬ್ರಿ.09:15](rc://*/tn/help/heb/09/15)
* [ಯೆರೆ.02:07](rc://*/tn/help/jer/02/07)
* [ಲೂಕ.15:11](rc://*/tn/help/luk/15/11)
* [ಮತ್ತಾಯ.19:29](rc://*/tn/help/mat/19/29)
* [ಕೀರ್ತನೆ.079:01](rc://*/tn/help/psa/079/001)
## ಸತ್ಯವೇದ ಕತೆಗಳಿಂದ ಉದಾಹರಣೆಗಳು:
* __[04:06](rc://*/tn/help/obs/04/06)__ ಕಾನಾನಿಗೆ ಅಬ್ರಾಮನು ಬಂದಾಗ, “ನಿನ್ನ ಸುತ್ತಮುತ್ತ ನೋಡು” ಎಂದು ದೇವರು ಹೇಳಿದರು. ನೀನು ನೋಡುತ್ತಿರುವ ಭೂಮಿಯನ್ನೆಲ್ಲಾ __ ಸ್ವಾಸ್ಥ್ಯವನ್ನಾಗಿ __ ನಿನಗೂ ಮತ್ತು ನಿನ್ನ ಸಂತಾನದವರಿಗೂ ಕೊಡುತ್ತೇನೆ.
* __[27:01](rc://*/tn/help/obs/27/01)__ ಒಂದು ದಿನ, ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ಪಂಡಿತನಾಗಿರುವ ಒಬ್ಬ ವ್ಯಕ್ತಿ ಯೇಸುವನ್ನು ಪರೀಕ್ಷೆ ಮಾಡುವುದಕ್ಕೆ ಆತನ ಬಳಿಗೆ ಬಂದು, “ಬೋಧಕನೇ, ನಿತ್ಯಜೀವವನ್ನು __ ಪಡೆದುಕೊಳ್ಳುವುದಕ್ಕೆ __ ನಾನೇನು ಮಾಡಬೇಕು?” ಎಂದು ಕೇಳಿದನು.
* __[35:03](rc://*/tn/help/obs/35/03)__ “ಇಬ್ಬರ ಪುತ್ರರನ್ನು ಪಡೆದ ಒಬ್ಬ ಮನುಷ್ಯನಿದ್ದನು. ಚಿಕ್ಕವನು ತನ್ನ ತಂದೆ ಬಳಿಗೆ ಬಂದು, “ತಂದೆಯೇ, ಈಗ ನನಗೆ ನನ್ನ __ ಸ್ವಾಸ್ಥ್ಯ __ ಬೇಕು!” ಎಂದು ಕೇಳಿದನು. ಆದ್ದರಿಂದ ತಂದೆ ತನಗಿರುವ ಆಸ್ತಿಪಾಸ್ತಿಯನ್ನೆಲ್ಲಾ ತನ್ನ ಇಬ್ಬರು ಮಕ್ಕಳಿಗೆ ಎರಡು ಭಾಗ ಮಾಡಿದನು.
## ಪದ ಡೇಟಾ:
* Strong's: H2490, H2506, H3423, H3425, H4181, H5157, H5159, G2816, G2817, G2819, G2820