kn_tw/bible/kt/hypocrite.md

31 lines
3.8 KiB
Markdown

# ಕಪಟಿ, ಕಪಟಿಗಳು, ಕಾಪಟ್ಯ
## ಪದದ ಅರ್ಥವಿವರಣೆ:
“ಕಪಟಿ” ಎನ್ನುವ ಪದವು ನೀತಿವಂತನೆಂದು ಕಾಣಿಸಿಕೊಳ್ಳುವುದಕ್ಕೆ ಕಾರ್ಯಗಳನ್ನು ಮಾಡುವ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ, ಆದರೆ ಇಂಥವರು ರಹಸ್ಯವಾಗಿ ದುಷ್ಟ ಕಾರ್ಯಗಳನ್ನು ಮಾಡುತ್ತಿರುತ್ತಾರೆ. “ಕಾಪಟ್ಯ” ಎನ್ನುವ ಪದವು ಒಬ್ಬ ವ್ಯಕ್ತಿ ನೀತಿವಂತನೆಂದು ಆಲೋಚನೆ ಮಾಡುವಷ್ಟು ರೀತಿಯಲ್ಲಿ ಜನರನ್ನು ಮೋಸಗೊಳಿಸುವ ನಡತೆಯನ್ನು ಸೂಚಿಸುತ್ತದೆ.
* ಕಪಟಿಗಳು ಒಳ್ಳೇಯ ಕಾರ್ಯಗಳು ಮಾಡುತ್ತಾ ಕಾಣಿಸಿಕೊಳ್ಳಬೇಕೆಂದು ಬಯಸುತ್ತಾರೆ, ಇದರಿಂದ ಜನರು ಅವರನ್ನು ಒಳ್ಳೇಯ ಜನರು ಎಂಬುದಾಗಿ ಆಲೋಚನೆ ಮಾಡುತ್ತಾರೆ.
* ಅನೇಕಬಾರಿ ಕಪಟಿ ತಾನು ಮಾಡುವ ಪಾಪದ ಕಾರ್ಯಗಳನ್ನು ಇತರರು ಮಾಡುತ್ತಿದ್ದರೇ, ಅವರನ್ನು ವಿಮರ್ಶಿಸುತ್ತಾ ಇರುತ್ತಾನೆ.
* ಯೇಸು ಫರಿಸಾಯರನ್ನು ಕಪಟಿಗಳು ಎಂದು ಕರೆದಿದ್ದಾನೆ ಯಾಕಂದರೆ ಅವರು ಭಕ್ತಿಪೂರ್ವಕವಾಗಿ ಇದ್ದಂತೆ ಕೆಲವೊಂದು ಬಟ್ಟೆಗಳನ್ನು ಹಾಕಿಕೊಳ್ಳುತ್ತಿದ್ದರು ಮತ್ತು ಕೆಲವೊಂದು ಆಹಾರಗಳನ್ನು ಮಾತ್ರ ತಿನ್ನುತ್ತಿದ್ದರು, ಆದರೆ ಅವರು ಜನರ ಮೇಲೆ ದಯೆಯನ್ನು ಅಥವ ಒಳ್ಳೇಯತನವನ್ನು ತೋರಿಸುತ್ತಿರಲಿಲ್ಲ.
* ಕಪಟಿಗಳು ಬೇರೆಯವರಲ್ಲಿ ತಪ್ಪುಗಳನ್ನು ಎತ್ತಿ ತೋರಿಸುತ್ತಾ ಇರುತ್ತಾರೆ, ಆದರೆ ಅವನ ತಪ್ಪುಗಳನ್ನು ಮಾತ್ರ ಸರಿಪಡಿಸಿಕೊಳ್ಳುವುದಿಲ್ಲ.
## ಅನುವಾದ ಸಲಹೆಗಳು:
* ಕೆಲವೊಂದು ಭಾಷೆಗಳಲ್ಲಿ “ಎರಡು ಮುಖಗಳಿರುವವನು” ಎನ್ನುವ ಮಾತು ಇರುತ್ತದೆ, ಇದು ಕಪಟಿಯನ್ನು ಅಥವಾ ಕಪಟಿಯ ಕ್ರಿಯೆಗಳನ್ನು ಸೂಚಿಸುತ್ತದೆ.
* “ಕಪಟಿ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ವಂಚನೆ” ಅಥವಾ “ನಟನೆ” ಅಥವಾ “ಅಹಂಕಾರಿ, ಮೋಸ ಮಾಡುವ ವ್ಯಕ್ತಿ” ಎಎನ್ನುವ ಮಾತುಗಳು ಒಳಗೊಂಡಿರುತ್ತವೆ.
* “ಕಾಪಟ್ಯ” ಎನ್ನುವ ಪದವನ್ನು “ಮೋಸ” ಅಥವಾ “ನಕಲಿ ಕ್ರಿಯೆಗಳು” ಅಥವಾ “ನಟಿಸುವುದು” ಎಂದೂ ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [ಗಲಾತ್ಯ.02:13-14](rc://*/tn/help/gal/02/13)
* [ಲೂಕ.06:41-42](rc://*/tn/help/luk/06/41)
* [ಲೂಕ.12:54-56](rc://*/tn/help/luk/12/54)
* [ಲೂಕ.13:15-16](rc://*/tn/help/luk/13/15)
* [ಮಾರ್ಕ.07:6-7](rc://*/tn/help/mrk/07/06)
* [ಮತ್ತಾಯ.06:1-2](rc://*/tn/help/mat/06/01)
* [ರೋಮಾ.12:9-10](rc://*/tn/help/rom/12/09)
## ಪದ ಡೇಟಾ:
* Strong's: H120, H2611, H2612, G505, G5272, G5273