kn_tw/bible/kt/hell.md

40 lines
5.0 KiB
Markdown

# ನರಕ, ಬೆಂಕಿಯ ಕೆರೆ
## ಪದದ ಅರ್ಥವಿವರಣೆ:
ನರಕ ಎನ್ನುವುದು ಕೊನೆಯಿಲ್ಲದ ನೋವು ಮತ್ತು ಶ್ರಮೆಯ ಅಂತಿಮ ಸ್ಥಳವಾಗಿದೆ, ಅಲ್ಲಿಯೇ ದೇವರು ತನಗೆ ವಿರುದ್ಧವಾಗಿ ನಡೆದುಕೊಳ್ಳುವವರನ್ನು ಮತ್ತು ಯೇಸುವಿನ ತ್ಯಾಗದ ಮೂಲಕ ಅವರನ್ನು ರಕ್ಷಿಸುವ ತನ್ನ ಯೋಜನೆಯನ್ನು ತಿರಸ್ಕರಿಸುವ ಪ್ರತಿಯೊಬ್ಬರನ್ನು ಶಿಕ್ಷಿಸುತ್ತಾನೆ. ಇದನ್ನು “ಬೆಂಕಿಯ ಕೆರೆ” ಎಂಬುದಾಗಿಯೂ ಸೂಚಿಸಿದ್ದಾರೆ.
* ನರಕವನ್ನು ಬೆಂಕಿ ಮತ್ತು ಭಯಂಕರವಾದ ಹಿಂಸೆ ಇರುವ ಸ್ಥಳವೆಂದು ವಿವರಿಸಿದ್ದಾರೆ.
* ಸೈತಾನನು ಮತ್ತು ಸೈತಾನನ್ನು ಹಿಂಬಾಲಿಸುವ ಪ್ರತಿಯೊಂದು ದುರಾತ್ಮವು ನಿತ್ಯಶಿಕ್ಷೆ ಹೊಂದುವುದಕ್ಕೆ ನರಕದಲ್ಲಿ ಹಾಕಲ್ಪಡುತ್ತಾರೆ.
* ಜನರು ತಮ್ಮ ಪಾಪಗಳಿಗಾಗಿ ಯೇಸುವಿನ ಬಲಿಯಾಗದಲ್ಲಿ ನಂಬದವರು ಮತ್ತು ಅವರನ್ನು ರಕ್ಷಿಸುವುದಕ್ಕೆ ಆತನಲ್ಲಿ ಭರವಸೆವಿಡದ ಜನರು ನರಕದಲ್ಲಿ ನಿರಂತರವಾಗಿ ಶಿಕ್ಷೆ ಹೊಂದುತ್ತಾಯಿರುವರು.
## ಅನುವಾದ ಸಲಹೆಗಳು:
* ಈ ಪದಗಳು ವಿವಿಧವಾದ ಸಂದರ್ಭಗಳಲ್ಲಿ ಕಂಡುಬರುವುದರಿಂದ ಬಹುಶಃ ಇವುಗಳನ್ನು ವಿಭಿನ್ನವಾದ ರೀತಿಯಲ್ಲಿ ಅನುವಾದ ಬೇಕಾಗಿರುತ್ತದೆ.
* “ಬೆಂಕಿಯ ಕೆರೆ” ಎನ್ನುವ ಮಾತಿನಲ್ಲಿ ಇರುವಂತೆ ಕೆಲವೊಂದು ಭಾಷೆಗಳಲ್ಲಿ “ಕೆರೆ” ಎನ್ನುವ ಪದವನ್ನು ಉಪಯೋಗಿಸುವುದಿಲ್ಲ, ಯಾಕಂದರೆ ಇದು ನೀರನ್ನು ಸೂಚಿಸುತ್ತದೆ.
* “ನರಕ” ಎನ್ನುವ ಪದವನ್ನು “ಸಂಕಟದ ಸ್ಥಳ” ಅಥವಾ “ನೋವು ಮತ್ತು ಕತ್ತಲೆಯ ಅಂತಿಮ ಸ್ಥಳ” ಎಂದೂ ಅನುವಾದ ಮಾಡಬಹುದು.
* “ಬೆಂಕಿಯ ಕೆರೆ” ಎನ್ನುವ ಪದವನ್ನು “ಬೆಂಕಿಯ ಸಮುದ್ರ” ಅಥವಾ “ಹೆಚ್ಚಾದ ಬೆಂಕಿ (ಹಿಂಸೆಗಳ)” ಅಥವಾ “ಬೆಂಕಿಯ ನೆಲ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಪರಲೋಕ](../kt/heaven.md), [ಮರಣ](../other/death.md), [ಹೇಡೆಸ್](../kt/hades.md), [ಕೂಪ](../other/abyss.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಯಾಕೋಬ.03:5-6](rc://*/tn/help/jas/03/05)
* [ಲೂಕ.12:4-5](rc://*/tn/help/luk/12/04)
* [ಮಾರ್ಕ.09:42-44](rc://*/tn/help/mrk/09/42)
* [ಮತ್ತಾಯ.05:21-22](rc://*/tn/help/mat/05/21)
* [ಮತ್ತಾಯ.05:29-30](rc://*/tn/help/mat/05/29)
* [ಮತ್ತಾಯ.10:28-31](rc://*/tn/help/mat/10/28)
* [ಮತ್ತಾಯ.23:32-33](rc://*/tn/help/mat/23/32)
* [ಮತ್ತಾಯ.25:41-43](rc://*/tn/help/mat/25/41)
* [ಪ್ರಕ.20:13-15](rc://*/tn/help/rev/20/13)
## ಸತ್ಯವೇದದಿಂದ ಉದಾಹರಣೆಗಳು:
* ___[50:14](rc://*/tn/help/obs/50/14)__ ಆತನು (ದೇವರು) ಅವರನ್ನು ___ ನರಕದೊಳಗೆ ___ ಹಾಕುವನು, ಅಲ್ಲಿ ಅವರು ಅಳುವುದು ಮತ್ತು ಕೋಪದಲ್ಲಿ ಹಲ್ಲುಗಳನ್ನು ಕಡಿಯುವುದೂ ಇರುತ್ತದೆ. ಆ ಬೆಂಕಿಯು ಹೊರಗೆ ಎಲ್ಲಿಗೂ ಹೋಗದೆ , ಅವರನ್ನು ನಿರಂತರವಾಗಿ ಸುಡುತ್ತಾ ಇರುತ್ತದೆ, ಮತ್ತು ಹುಳಗಳು ಅವರನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ.
* ___[50:15](rc://*/tn/help/obs/50/15)__ ದೇವರಿಗೆ ವಿಧೇಯತೆ ತೋರಿಸದೆ ಅವನನ್ನು ಹಿಂಬಾಲಿಸುವುದಕ್ಕೆ ನಿರ್ಣಯ ಮಾಡಿಕೊಳ್ಳುವ ಪ್ರತಿಯೊಬ್ಬರೊಂದಿಗೆ ಸೈತಾನನನ್ನು ಆತನು ___ ನರಕದೊಳಗೆ ___ ಹಾಕುವನು, ಆಲ್ಲಿ ಅವನು ಯುಗಯುಗಗಳು ಸುಡಲ್ಪಡುತ್ತಾ ಇರುವನು,
## ಪದ ಡೇಟಾ:
* Strong's: H7585, G86, G439, G440, G1067, G3041, G4442, G4443, G4447, G4448, G5020, G5394, G5457