kn_tw/bible/kt/fulfill.md

41 lines
5.8 KiB
Markdown

# ನೆರವೇರಿಸು, ನೆರವೇರಿಕೆಯಾಗಿದೆ
## ಪದದ ಅರ್ಥವಿವರಣೆ:
“ನೆರವೇರಿಸು” ಎನ್ನುವ ಪದಕ್ಕೆ ಬಯಸಿದ ಏನನ್ನಾದರೂ ಸಾಧಿಸು ಅಥವಾ ಪೂರ್ಣಗೊಳಿಸು ಎಂದರ್ಥ.
* ಪ್ರವಾದನೆಯು ನೆರವೇರಿಕೆಯಾದಾಗ, ಪ್ರವಾದನೆಯಲ್ಲಿ ಹೇಳಲ್ಪಟ್ಟಿರುವದನ್ನು ದೇವರು ನಡೆಸಿದ್ದಾರೆ ಎಂದರ್ಥ.
* ಒಬ್ಬ ವ್ಯಕ್ತಿ ಒಂದು ವಾಗ್ಧಾನವನ್ನು ಅಥವಾ ಪ್ರತಿಜ್ಞೆಯನ್ನು ನೆರವೇರಿಸುವುದಾದರೆ, ಆತನು ಮಾಡುತ್ತೇನೆ ಎಂದು ಹೇಳಿದ ವಾಗ್ಧಾನವನ್ನು ನೆರವೇರಿಸಿದ್ದಾನೆ ಎಂದರ್ಥ.
* ಜವಾಬ್ದಾರಿಯನ್ನು ಪೂರೈಸು ಎನ್ನುವುದಕ್ಕೆ ಕೊಡಲ್ಪಟ್ಟ ಅಥವಾ ಅಗತ್ಯವುಳ್ಳ ಕೆಲಸವನ್ನು ಮಾಡುವುದು ಎಂದರ್ಥ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ “ನೆರವೇರಿಸು” ಎನ್ನುವ ಪದವನ್ನು “ಸಾಧಿಸು” ಅಥವಾ “ಪೂರ್ತಿಗೊಳಿಸು” ಅಥವಾ “ನಡೆಯುವಂತೆ ಮಾಡು” ಅಥವಾ “ವಿಧೇಯನಾಗು” ಅಥವಾ “ನಿರ್ವಹಿಸು” ಎಂದೂ ಅನುವಾದ ಮಾಡಬಹುದು.
* “ನೆರವೇರಿಸಲ್ಪಟ್ಟಿದೆ” ಎನ್ನುವ ಮಾತಿಗೆ “ನಿಜವಾಗಿ ನೆರವೇರಿದೆ” ಅಥವಾ “ನಡೆದಿದೆ” ಅಥವಾ “ನಡೆಯುತ್ತಿದೆ” ಎಂದೂ ಅನುವಾದ ಮಾಡಬಹುದು.
* “ನೆರವೇರಿಸು” ಎನ್ನುವ ಪದವನ್ನು ಅನುವಾದಿಸುವ ವಿಧಾನಗಳಲ್ಲಿ, “ನಿನ್ನ ಸೇವೆಯನ್ನು ನೆರವೇರಿಸು” ಎನ್ನುವ ಮಾತಿನಂತೆ, “ಸಂಪೂರ್ತಿಗೊಳಿಸು” ಅಥವಾ “ನಿರ್ವಹಿಸು” ಅಥವಾ “ಅಭ್ಯಾಸ ಮಾಡು” ಅಥವಾ “ಸೇವೆ ಮಾಡುವುದಕ್ಕೆ ದೇವರು ನಿಮ್ಮನ್ನು ಕರೆದಂತೆಯೇ ಇತರ ಜನರನ್ನು ರಕ್ಷಿಸು” ಎಂದು ಅನೇಕ ಪದಗಳನ್ನು ಸೇರಿಸಿ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಎಫೆಸ](../kt/prophet.md), [ಪೌಲ](../kt/christ.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.02:26-27](../kt/minister.md)
* [ಅಪೊ.ಕೃತ್ಯ.03:17-18](../kt/call.md)
* [ಯಾಜಕ.22:17-19](rc://*/tn/help/1ki/02/26)
* [ಲೂಕ.04:20-22](rc://*/tn/help/act/03/17)
* [ಮತ್ತಾಯ.01:22-23](rc://*/tn/help/lev/22/17)
* [ಮತ್ತಾಯ.05:17-18](rc://*/tn/help/luk/04/20)
* [ಕೀರ್ತನೆ.116:12-15](rc://*/tn/help/mat/01/22)
## ಸತ್ಯವೇದದಿಂದ ಉದಾಹರಣೆಗಳು:
* ___[24:04](rc://*/tn/help/mat/05/17)___ “ನೋಡಿರಿ ನಾನು ನಿಮ್ಮ ಬಳಿಗೆ ನನ್ನ ದೂತನನ್ನು ಕಳುಹಿಸುತ್ತಿದ್ದೇನೆ, ಅವನು ನಿಮ್ಮ ಮಾರ್ಗವನ್ನು ಸಿದ್ಧಪಡಿಸುವನು” ಎಂದು ಪ್ರವಾದಿಗಳು ಹೇಳಿದ್ದನ್ನು ಯೋಹಾನನು __ ನೇರವೆರಿಸಿದನು ___.
* ___[40:03](rc://*/tn/help/psa/116/012)___ ಯೇಸುವಿನ ವಸ್ತ್ರಗಳಿಗಾಗಿ ಸೈನಿಕರು ಜೂಜಾಡಿದರು. ಅವರು ಈ ರೀತಿ ಮಾಡಿದಾಗ, “ಅವರ ಮಧ್ಯೆದಲ್ಲಿರುವ ನನ್ನ ವಸ್ತ್ರಗಳನ್ನು ಅವರು ವಿಂಗಡಿಸಿದರು, ಮತ್ತು ನನ್ನ ವಸ್ತ್ರಗಳಿಗಾಗಿ ಚೀಟು ಹಾಕಿದರು” ಎಂದು ಹೇಳಲ್ಪಟ್ಟ ಪ್ರವಾದನೆಯು ಅವರು ___ ನೆರವೇರಿಸಿದರು ___ .
* ___[42:07](rc://*/tn/help/obs/24/04)___ “ದೇವರ ವಾಕ್ಯದಲ್ಲಿ ನನ್ನ ಕುರಿತು ಬರೆಯಲ್ಪಟ್ಟ ಪ್ರತಿಯೊಂದು ತಪ್ಪದೇ ___ ನೆರವೇರಿಸಲ್ಪಡಬೇಕು ___ ಎಂದು ನಾನು ನಿಮಗೆ ಹೇಳಿದ್ದೇನು” ಎಂದು ಯೇಸು ಹೇಳಿದರು.
* ___[43:05](rc://*/tn/help/obs/40/03)___ “ಅಂತ್ಯಕಾಲದಲ್ಲಿ ನಾನು ನನ್ನ ಆತ್ಮವನ್ನು ಸುರಿಸುತ್ತೇನೆ” ಎಂದು ದೇವರು ಹೇಳಿದ ಮಾತುಗಳು ಪ್ರವಾದಿಯಾದ ಯೋವೇಲನಿಂದ ಪ್ರವಾದಿಸಲ್ಪಟ್ಟವು.
* ___[43:07](rc://*/tn/help/obs/42/07)___ ‘ನಿನ್ನ ಪವಿತ್ರನಿಗೆ ಕೊಳೆಯಲು ಬಿಡಲಾರೆ’ ಎಂದು ಹೇಳುವ ಪ್ರವಾದನೆಯನ್ನು ಇದು ___ ನೆರವೇರಿಸಿತು ___.”
* ___[44:05](rc://*/tn/help/obs/43/05)___ “ನೀನು ಮಾಡಿದ್ದನ್ನು ನೀನು ಅರ್ಥಮಾಡಿಕೊಳ್ಳದಿದ್ದರೂ, ಮೆಸ್ಸೀಯ ಶ್ರಮೆ ಹೊಂದಬೇಕು ಮತ್ತು ಸಾಯಬೇಕು ಎನ್ನುವ ಪ್ರವಾದನೆಗಳನ್ನು ___ ನೆರವೇರಿಸುವುದಕ್ಕೆ __ ನಿನ್ನ ಕ್ರಿಯೆಗಳನ್ನು ದೇವರು ಉಪಯೋಗಿಸಿಕೊಂಡಿದ್ದಾರೆ.
## ಪದ ಡೇಟಾ:
* Strong's: H1214, H5487, G1096, G4138