kn_tw/bible/kt/forsaken.md

32 lines
4.8 KiB
Markdown

# ತೊರೆ, ತೊರೆಯುವುದು, ತೊರೆಯಲ್ಪಟ್ಟಿದೆ, ಬಿಟ್ಟುಬಿಡಿ
## ಪದದ ಅರ್ಥವಿವರಣೆ:
“ತೊರೆ” ಎನ್ನುವ ಪದಕ್ಕೆ ಯಾರಾದರೊಬ್ಬರನ್ನು ಬಿಟ್ಟುಬಿಡುವುದು ಅಥವಾ ಯಾವುದಾದರೊಂದನ್ನು ಕೈಬಿಡುವುದು. “ತೊರೆಯಲ್ಪಟ್ಟ” ಒಬ್ಬ ವ್ಯಕ್ತಿ ಇನ್ನೊಬ್ಬರಿಂದ ಕೈಬಿಡಲ್ಪಟ್ಟಿರುತ್ತಾನೆ ಅಥವಾ ಇನ್ನೊಬ್ಬರಿಂದ ಬಹಿಷ್ಕರಿಸಲ್ಪಟ್ಟಿರುತ್ತಾನೆ.
* ಜನರು ದೇವರನ್ನು “ತೊರೆದಾಗ”, ಆತನಿಗೆ ಅವರು ಅವಿಧೇಯತೆ ತೋರಿಸುವುದರ ಮೂಲಕ ಆತನಿಗೆ ವಿಶ್ವಾಸದ್ರೋಹವನ್ನು ಮಾಡಿದವರಾಗಿರುತ್ತಾರೆ.
* ದೇವರು ಜನರನ್ನು “ತೊರೆದಾಗ”, ಆತನು ಅವರಿಗೆ ಸಹಾಯ ಮಾಡುವುದನ್ನು ನಿಲ್ಲಿಸುತ್ತಾನೆ ಮತ್ತು ಅವರೆಲ್ಲರು ತಿರುಗಿ ಆತನ ಬಳಿಗೆ ಬರಬೇಕೆಂದು ಬಯಸುವ ಕ್ರಮದಲ್ಲಿ ಅವರೆಲ್ಲರು ಶ್ರಮೆಗಳನ್ನು ಹೊಂದುವುದಕ್ಕೆ ಅನುಮತಿ ಕೊಡುತ್ತಾನೆ.
* ದೇವರ ಬೋಧನೆಗಳನ್ನು ಅನುಸರಿಸದೇ ಇರುವುದನ್ನು ಅಥವಾ ತೊರೆಯುವುದು ಹೇಗೋ ಹಾಗೆಯೇ ಈ ಪದವು ವಸ್ತುಗಳನ್ನು ಬಿಟ್ಟುಬಿಡುವುದನ್ನೂ ಸೂಚಿಸುತ್ತದೆ,
* “ಆತನು ನಿನ್ನನ್ನು ತೊರೆದಿದ್ದಾನೆ” ಎನ್ನುವ ಮಾತಿನಲ್ಲಿರುವಂತೆ ಅಥವಾ ಒಬ್ಬರು “ತೊರೆಯಲ್ಪಟ್ಟಿದ್ದಾರೆ” ಎಂದು ಸೂಚಿಸುವ ಮಾತಿನಂತೆ, “ತೊರೆಯಲ್ಪಟ್ಟಿದ್ದೀ” ಎನ್ನುವ ಪದವನ್ನು ಭೂತ ಕಾಲದಲ್ಲಿಯೂ ಉಪಯೋಗಿಸಬಹುದು,
## ಅನುವಾದ ಸಲಹೆಗಳು:
* ಈ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಬಿಟ್ಟುಬಿಡುವುದು” ಅಥವಾ “ನಿರ್ಲಕ್ಷ್ಯೆ” ಅಥವಾ “ಕೈಬಿಡುವುದು” ಅಥವಾ “ಇಲ್ಲಿಂದ ಪಾರಾಗು” ಅಥವಾ “ಹಿಂದಕ್ಕೆ ಬಿಡು” ಎಂದು ಸಂದರ್ಭಕ್ಕೆ ತಕ್ಕಂತೆ ಪದಗಳನ್ನು ಉಪಯೋಗಿಸಬಹುದು.
* ದೇವರ ಧರ್ಮಶಾಸ್ತ್ರವನ್ನು “ತೊರೆ” ಎನ್ನುವ ಮಾತನ್ನು “ದೇವರ ಧರ್ಮಶಾಸ್ತ್ರಕ್ಕೆ ಅವಿಧೇಯತೆ ತೋರಿಸು” ಎಂದೂ ಅನುವಾದ ಮಾಡಬಹುದು. ಇದನ್ನು “ಬಿಟ್ಟುಬಿಡು” ಅಥವಾ “ಕೈಬಿಡು” ಅಥವಾ ಆತನ ಬೋಧನೆಗಳಿಗೆ ಅಥವಾ ಆತನ ಧರ್ಮಶಾಸ್ತ್ರಕ್ಕೆ “ವಿಧೇಯತೆ ತೋರಿಸುವುದನ್ನು ನಿಲ್ಲಿಸು” ಎಂದೂ ಅನುವಾದ ಮಾಡಬಹುದು.
* “ತೊರೆಯಲ್ಪಡುವುದು” ಎನ್ನುವ ಮಾತನ್ನು “ಬಿಟ್ಟು ಬಿಡಲ್ಪಡುವುದು” ಅಥವಾ “ಬಿಡಲ್ಪಟ್ಟವರು” ಎಂದೂ ಅನುವಾದ ಮಾಡಬಹುದು.
* ಈ ಪದವನ್ನು ಅನುವಾದ ಮಾಡುವುದಕ್ಕೆ ಅನೇಕ ವಿಭಿನ್ನವಾದ ಪದಗಳನ್ನು ಉಪಯೋಗಿಸಲು ಇದು ತುಂಬಾ ಸ್ಪಷ್ಟವಾಗಿದೆ, ವಾಕ್ಯದಲ್ಲಿ ಒಬ್ಬ ವ್ಯಕ್ತಿಯನ್ನು ತೊರೆಯುವುದು ಅಥವಾ ಒಂದು ವಸ್ತುವನ್ನು ಬಿಟ್ಟುಬಿಡುವುದು ಇದೆಯೋ ಇಲ್ಲವೋ ಎನ್ನುವುದರ ಮೇಲೆ ಆಧಾರಪಟ್ಟಿರುತ್ತದೆ.
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.06:11-13](rc://*/tn/help/1ki/06/11)
* [ದಾನಿ.11:29-30](rc://*/tn/help/dan/11/29)
* [ಆದಿ.24:26-27](rc://*/tn/help/gen/24/26)
* [ಯೆಹೋ.24:16-18](rc://*/tn/help/jos/24/16)
* [ಮತ್ತಾಯ.27:45-47](rc://*/tn/help/mat/27/45)
* [ಜ್ಞಾನೋ.27:9-10](rc://*/tn/help/pro/27/09)
* [ಕೀರ್ತನೆ.071:17-18](rc://*/tn/help/psa/071/017)
## ಪದ ಡೇಟಾ:
* Strong's: H488, H2308, H5203, H5428, H5800, H5805, H7503, G646, G657, G863, G1459, G2641,