kn_tw/bible/kt/flesh.md

5.6 KiB

ಶರೀರ

ಪದದ ಅರ್ಥವಿವರಣೆ:

ಸತ್ಯವೇದದಲ್ಲಿ “ಶರೀರ” ಎನ್ನುವ ಪದವು ಅಕ್ಷರಾರ್ಥವಾಗಿ ಮನುಷ್ಯರ ಅಥವಾ ಪ್ರಾಣಿಗಳ ಭೌತಿಕ ದೇಹದಲ್ಲಿನ ಮೃಧು ಅಂಗಾಂಶವನ್ನು ಸೂಚಿಸುತ್ತದೆ.

  • “ಶರೀರ” ಎನ್ನುವ ಪದವನ್ನು ಮನುಷ್ಯರೆಲ್ಲರನ್ನು ಅಥವಾ ಜೀವರಾಶಿಗಳನ್ನು ಸೂಚಿಸುವುದಕ್ಕೆ ಅಲಂಕಾರಿಕ ವಿಧಾನದಲ್ಲಿ ಸತ್ಯವೇದವು ಕೂಡ ಉಪಯೋಗಿಸುತ್ತದೆ.
  • ಹೊಸ ಒಡಂಬಡಿಕೆಯಲ್ಲಿ “ಶರೀರ” ಎನ್ನುವ ಪದವನ್ನು ಮನುಷ್ಯರ ಪಾಪ ಸ್ವಭಾವನ್ನು ಸೂಚಿಸುವುದಕ್ಕೆ ಉಪಯೋಗಿಸಿದ್ದಾರೆ. ಇದನ್ನು ಅನೇಕಬಾರಿ ಅವರ ಆತ್ಮೀಕವಾದ ಸ್ವಭಾವಕ್ಕೆ ವಿರುದ್ಧವಾಗಿ ಉಪಯೋಗಿಸಿದ್ದಾರೆ.
  • “ಸ್ವಂತ ರಕ್ತಶರೀರಗಳು” ಎನ್ನುವ ಮಾತು ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ರಕ್ತ ಸಂಬಂಧವಿರುವುದನ್ನು ಸೂಚಿಸುತ್ತದೆ, ಉದಾಹರಣೆಗೆ ತಂದೆತಾಯಿಗಳು, ಅಣ್ಣತಮ್ಮ, ಮಗು ಅಥವಾ ಮೊಮ್ಮೊಗ.
  • “ಶರೀರ ಮತ್ತು ರಕ್ತ” ಎನ್ನುವ ಮಾತು ಕೂಡ ಒಬ್ಬ ವ್ಯಕ್ತಿಯ ಪೂರ್ವಜರನ್ನು ಅಥವಾ ಸಂತಾನದವರನ್ನು ಸೂಚಿಸುತ್ತದೆ.
  • “ಒಂದೇ ಶರೀರ” ಎನ್ನುವ ಮಾತು ವಿವಾಹದಲ್ಲಿ ಸ್ತ್ರೀ ಪುರುಷರಿಬ್ಬರು ಭೌತಿಕವಾಗಿ ಏಕವಾಗುವುದನ್ನು ಸೂಚಿಸುತ್ತದೆ.

ಅನುವಾದ ಸಲಹೆಗಳು:

  • ಪ್ರಾಣಿಯ ಶರೀರದ ಕುರಿತಾದ ಸಂದರ್ಭದಲ್ಲಿ, “ಶರೀರ” ಎನ್ನುವ ಪದವನ್ನು “ದೇಹ” ಅಥವಾ “ಚರ್ಮ” ಅಥವಾ “ಮಾಂಸ” ಎಂದೂ ಅನುವಾದ ಮಾಡಬಹುದು.
  • ಎಲ್ಲಾ ಜೀವರಾಶಿಗಳಿಗೆ ಇದನ್ನು ಸೂಚಿಸುವುದಕ್ಕೆ ಉಪಯೋಗಿಸಿದಾಗ, ಈ ಪದವನ್ನು “ಜೀವಿಸುವ ಪ್ರಾಣಿಗಳು” ಅಥವಾ “ಜೀವಿಸುವ ಪ್ರತಿಯೊಂದು” ಎಂದೂ ಅನುವಾದ ಮಾಡಬಹುದು.
  • ಸಾಧಾರಣವಾಗಿ ಜನರೆಲ್ಲರನ್ನು ಸೂಚಿಸುವಾಗ, ಈ ಪದವನ್ನು “ಜನರು” ಅಥವಾ “ಮನುಷ್ಯರು” ಅಥವಾ ಜೀವಿಸುವ ಪ್ರತಿಯೊಬ್ಬರು” ಎಂದೂ ಅನುವಾದ ಮಾಡಬಹುದು.
  • “ಶರೀರ ಮತ್ತು ರಕ್ತ” ಎನ್ನುವ ಮಾತನ್ನು “ಬಂಧುಗಳು” ಅಥವಾ “ಕುಟುಂಬ” ಅಥವಾ “ನಂಟರು” ಅಥವಾ “ಕುಟುಂಬ ವಂಶದವರು” ಎಂದೂ ಅನುವಾದ ಮಾಡಬಹುದು. ಕೆಲವೊಂದು ಸಂದರ್ಭಗಳಲ್ಲಿ ಈ ಪದವನ್ನು “ಪೂರ್ವಜರು” ಅಥವಾ “ಸಂತಾನದವರು” ಎಂದೂ ಅನುವಾದ ಮಾಡುತ್ತಾರೆ.
  • ಕೆಲವೊಂದು ಭಾಷೆಗಳಲ್ಲಿ “ಶರೀರ ಮತ್ತು ರಕ್ತ” ಎನ್ನುವ ಪದಗಳಿಗೆ ಬರುವ ಒಂದೇ ಅರ್ಥದ ಪದಗಳನ್ನು ಉಪಯೋಗಿಸುತ್ತಾರೆ.
  • “ಒಂದೇ ಶರೀರವಾಗಿರುವುದು” ಎನ್ನುವ ಮಾತನ್ನು “ಲೈಂಗಿಕವಾಗಿ ಐಕ್ಯವಾಗಿರುವುದು” ಅಥವಾ “ಒಂದೇ ಶರೀರವಾಗಿ ಮಾರ್ಪಡುವುದು” ಅಥವಾ “ಆತ್ಮ ದೇಹಗಳಲ್ಲಿ ಒಬ್ಬ ವ್ಯಕ್ತಿಯಂತೆ ಇರುವುದು” ಎಂದೂ ಅನುವಾದ ಮಾಡಬಹುದು. ಈ ಪದವು ಅನುವಾದ ಮಾಡುವ ಭಾಷೆಯಲ್ಲಿ ಮತ್ತು ಸಂಸ್ಕೃತಿಯಲ್ಲಿ ಅಂಗೀಕಾರ ಮಾಡುತ್ತಾರೋ ಇಲ್ಲವೋ ಎಂದು ಪರಿಶೀಲನೆ ಮಾಡಬೇಕಾದ ಅವಶ್ಯಕತೆ ಇದೆ. ನೋಡಿರಿ: ನಯನುಡಿ. ಈ ಪದವನ್ನು ಅಲಂಕಾರಿಕ ಭಾಷೆಯಲ್ಲಿಯೂ ಅರ್ಥಮಾಡಿಕೊಳ್ಳಬಹುದು, ಸ್ತ್ರೀ ಪುರುಷರು ನಿಜವಾಗಿ “ಒಂದು ಶರೀರವಾಗಿ ಮಾರ್ಪಡುತ್ತಾರೆ” ಅಥವಾ ಒಬ್ಬ ವ್ಯಕ್ತಿಯಾಗಿರುತ್ತಾರೆಂದು ಅದರ ಅರ್ಥವಲ್ಲ.

ಸತ್ಯವೇದದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: H829, H1320, H1321, H2878, H3894, H4207, H7607, H7683, G2907, G4559, G4560, G4561