kn_tw/bible/kt/favor.md

32 lines
4.6 KiB
Markdown

# ದಯೆ, ದಯೆ ತೋರಿಸುತ್ತದೆ, ಇಷ್ಟವಾದ, ಪಕ್ಷಪಾತ
## ಪದದ ಅರ್ಥವಿವರಣೆ:
ಸಾಮಾನ್ಯವಾಗಿ “ದಯೆ” ಎಂದರೆ ಅನುಮೋದನೆ ಎಂದರ್ಥ. ಇನ್ನೊಬ್ಬ ವ್ಯಕ್ತಿಗೆ ದಯೆ ತೋರುವ ಯಾರಾದರೂ ಆ ವ್ಯಕ್ತಿಯನ್ನು ಧನಾತ್ಮಕವಾಗಿ ಪರಿಗಣಿಸುತ್ತಾರೆ ಮತ್ತು ಅವರನ್ನು ಅನುಮೋದಿಸುತ್ತಾರೆ.
* “ಪಕ್ಷಪಾತ” ಎನ್ನುವ ಪದಕ್ಕೆ ಕೇವಲ ಕೆಲವರ ವಿಷಯದಲ್ಲಿ ಮಾತ್ರ ದಯೆಯನ್ನು ಅಥವಾ ಇಷ್ಟವನ್ನು ತೋರಿಸುವ ರೀತಿಯಲ್ಲಿ ನಡೆದುಕೊಳ್ಳುವುದು ಎಂದರ್ಥ. ಒಬ್ಬರ ಮೇಲೊಬ್ಬರು ಅಥವಾ ಒಂದರ ಮೇಲೊಂದು ಇಷ್ಟವನ್ನುಂಟು ಮಾಡಿಕೊಳ್ಳುವುದು ಎಂದರ್ಥ, ಯಾಕಂದರೆ ಆ ವ್ಯಕ್ತಿ ಅಥವಾ ಆ ವಸ್ತು ತುಂಬಾ ಪ್ರಾಮುಖ್ಯ. ಸಾಧಾರಣವಾಗಿ, ಪಕ್ಷಪಾತ ಎನ್ನುವುದು ಸರಿಯಾದದ್ದಲ್ಲವೆಂದು ಪರಿಗಣಿಸಲಾಗಿದೆ.
* ಯೇಸು ದೇವರ ಮತ್ತು ಮನುಷ್ಯನ ”ದಯೆಯಲ್ಲಿ " ಬೆಳೆದನು. ದೇವರು ಮತ್ತು ಮನುಷ್ಯರು ಆತನ ನಡುವಳಿಕೆಯನ್ನು ಮತ್ತು ನಡತೆಯನ್ನು ಅನುಮೋದಿಸಿದ್ದಾರೆಂದು ಇದು ಅರ್ಥೈಸುತ್ತದೆ.
* ಒಬ್ಬರಿಂದ “ದಯೆಯನ್ನು ಪಡೆದುಕೋ” ಎನ್ನುವ ಮಾತಿಗೆ ಆ ವ್ಯಕ್ತಿಯಿಂದ ಇನ್ನೊಬ್ಬರು ಅನುಮೋದನೆ ಹೊಂದುವುದು ಎಂದರ್ಥ.
* ಅರಸನು ಒಬ್ಬರಿಗೆ ದಯೆ ತೋರಿಸಿದಾಗ, ಆ ವ್ಯಕ್ತಿಯ ಮನವಿಯನ್ನು ಅನುಮೋದಿಸಿದ್ದಾನೆ ಮತ್ತು ಅದಕ್ಕೆ ಅನುಮತಿ ಕೊಟ್ಟಿದ್ದಾನೆ ಎಂದರ್ಥ.
* “ದಯೆ” ಎನ್ನುವುದು ಕೆಲವರ ಪ್ರಯೋಜನಕ್ಕಾಗಿ ಇನ್ನೊಬ್ಬ ವ್ಯಕ್ತಿಯ ವಿಷಯದಲ್ಲಿ ನಡೆದುಕೊಳ್ಳುವ ನಡೆತೆ ಅಥವಾ ಒಂದು ಸೂಚನೆಯೂ ಆಗಿರಬಹುದು.
## ಅನುವಾದ ಸಲಹೆಗಳು:
* ದಯೆ ಎಂಬ ಪದವನ್ನು ಅನುವಾದ ಮಾಡುವ ಬೇರೊಂದು ವಿಧಾನಗಳಲ್ಲಿ “ಆಶೀರ್ವಾದ” ಅಥವಾ “ಪ್ರಯೋಜನ” ಅಥವ "ಅನುಮೋದನೆ" ಎಂಬ ಪದಗಳನ್ನು ಉಪಯೋಗಿಸುತ್ತಾರೆ.
* “ಯೆಹೋವನ ಇಷ್ಟವಾದ ವರ್ಷ” ಎನ್ನುವ ಮಾತನ್ನು “ಯೆಹೋವನು ದೊಡ್ಡ ಆಶೀರ್ವಾದವನ್ನು ತೆಗೆದುಕೊಂಡು ಬಂದ ವರ್ಷ (ಅಥವಾ ಸಮಯ)” ಎಂದೂ ಅನುವಾದ ಮಾಡುತ್ತಾರೆ.
* “ಪಕ್ಷಪಾತ” ಎನ್ನುವ ಪದವನ್ನು “ಆದ್ಯತೆ ಕೊಡುವುದು” ಅಥವಾ “ಅನುಕೂಲಕರವಾಗಿರುವುದು” ಅಥವಾ “ಅನ್ಯಾಯವಾದ ರೀತಿಯಲ್ಲಿ ನೋಡಿಕೊಳ್ಳುವುದು” ಎಂದೂ ಅನುವಾದ ಮಾಡಬಹುದು. ಈ ಪದವು “ಅತ್ಯಂತ ಪ್ರೀತಿ” ಎನ್ನುವ ಪದಕ್ಕೆ ಹತ್ತಿರವಾಗಿರುತ್ತದೆ, ಇದಕ್ಕೆ “ಹೆಚ್ಚಿನ ಆದ್ಯತೆ ಇರುವ ಅಥವಾ ಹೆಚ್ಚಾಗಿ ಪ್ರೀತಿಸಲ್ಪಟ್ಟ ವ್ಯಕ್ತಿ” ಎಂದರ್ಥ.
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಸಮು.02:25-26](rc://*/tn/help/1sa/02/25)
* [2 ಪೂರ್ವ.19:6-7](rc://*/tn/help/2ch/19/06)
* [2 ಕೊರಿಂಥ.01:11](rc://*/tn/help/2co/01/11)
* [ಅಪೊ.ಕೃತ್ಯ.24:26-27](rc://*/tn/help/act/24/26)
* [ಆದಿ.41:14-16](rc://*/tn/help/gen/41/14)
* [ಆದಿ.47:25-26](rc://*/tn/help/gen/47/25)
* [ಆದಿ.50:4-6](rc://*/tn/help/gen/50/04)
## ಪದ ಡೇಟಾ:
* Strong's: H995, H1156, H1293, H1779, H1921, H2580, H2603, H2896, H5278, H5375, H5414, H5922, H6213, H6437, H6440, H7521, H7522, H7965, G1184, G3685, G4380, G4382, G5485, G5486