kn_tw/bible/kt/exhort.md

27 lines
3.2 KiB
Markdown

# ಎಚ್ಚರಿಸು, ಎಚ್ಚರಿಕೆ
## ಪದದ ಅರ್ಥವಿವರಣೆ:
“ಎಚ್ಚರಿಸು” ಎನ್ನುವ ಪದಕ್ಕೆ ಸರಿಯಾದದ್ದನ್ನು ಮಾಡಬೇಕೆಂದು ಒಬ್ಬರನ್ನು ಬಲವಾಗಿ ಪ್ರೋತ್ಸಾಹಗೊಳಿಸುವುದು ಮತ್ತು ಆರೈಸುವುದು. ಅಂಥಹ ಪ್ರೋತ್ಸಾಹವನ್ನೇ “ಎಚ್ಚರಿಕೆ” ಎಂದು ಕರೆಯುತ್ತಾರೆ.
* ಎಚ್ಚರಿಕೆ ಮಾಡುವುದಕ್ಕೆ ಉದ್ದೇಶವೇನೆಂದರೆ ಇತರ ಜನರು ಪಾಪವನ್ನು ಮಾಡದೇ ದೇವರ ಚಿತ್ತವನ್ನು ಅನುಸರಿಸುವಂತೆ ನೋಡಿಕೊಳ್ಳುವುದು.
* ಹೊಸ ಒಡಂಬಡಿಕೆಯಲ್ಲಿ ಕ್ರೈಸ್ತರು ಒಬ್ಬರಿಗೊಬ್ಬರು ಕಠಿಣವಾಗಿಯೂ ಅಥವಾ ಥಟ್ಟನೆಯಾಗಿ ಎಚ್ಚರಿಸಿಕೊಳ್ಳದೇ, ಪ್ರೀತಿಯಲ್ಲಿ ಎಚ್ಚರಿಸಿಕೊಳ್ಳಿರಿ ಎಂದು ಬೋಧಿಸಲ್ಪಟ್ಟಿದೆ,
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ, “ಎಚ್ಚರಿಸು” ಎನ್ನುವ ಪದವನ್ನು “ಬಲವಾಗಿ ಕೇಳಿಕೊಳ್ಳಿ” ಅಥವಾ “ಮನವೊಲಿಸು” ಅಥವಾ “ಸಲಹೆಕೊಡು” ಎಂದೂ ಅನುವಾದ ಮಾಡಬಹುದು.
* ಎಚ್ಚರಿಸುವವರು ಕೋಪಗೊಂಡಿರುತ್ತಾರೆನ್ನುವ ಭಾವನೆ ಅನುವಾದ ಪದಗಳಲ್ಲಿ ಬರದಂತೆ ನೋಡಿಕೊಳ್ಳಿರಿ. ಈ ಪದವು ಬಲವನ್ನು ಮತ್ತು ತೀವ್ರತೆಯನ್ನು ತಿಳಿಸಬೇಕು, ಆದರೆ ಕೋಪದಿಂದ ಮಾತನಾಡುವುದನ್ನು ಸೂಚಿಸಬಾರದು.
* ಅನೇಕ ಸಂದರ್ಭಗಳಲ್ಲಿ “ಎಚ್ಚರಿಸು” ಎನ್ನುವ ಪದವನ್ನು “ಪ್ರೋತ್ಸಾಹಿಸು” ಎನ್ನುವ ಪದಕ್ಕಿಂತ, ಪ್ರೇರೇಪಿಸು, ಧೈರ್ಯ ತುಂಬು, ಅಥವಾ ಒಬ್ಬರನ್ನು ಆದರಿಸು ಎಂದು ಅರ್ಥ ಬರುವ ಪದಗಳಿಂದ ಅನುವಾದ ಮಾಡಲಾಗುತ್ತದೆ.
* ಈ ಪದವನ್ನು ಸಹಜವಾಗಿ ವಿಭಿನ್ನ ರೀತಿಯಲ್ಲಿ “ಒತ್ತಿ ಹೇಳು” ಎಂದೂ ಅನುವಾದಿಸುತ್ತಾರೆ, ಇದಕ್ಕೆ ಒಬ್ಬರ ಕೆಟ್ಟ ನಡತೆಗಾಗಿ ಅವರನ್ನು ಸರಿಪಡಿಸುವುದು ಅಥವಾ ಅವರಿಗೆ ಎಚ್ಚರಿಕೆ ಕೊಡುವುದು ಎಂದರ್ಥ.
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಥೆಸ್ಸ.02:3-4](rc://*/tn/help/1th/02/03)
* [1 ಥೆಸ್ಸ.02:10-12](rc://*/tn/help/1th/02/10)
* [1 ತಿಮೊಥೆ.05:1-2](rc://*/tn/help/1ti/05/01)
* [ಲೂಕ.03:18-20](rc://*/tn/help/luk/03/18)
## ಪದ ಡೇಟಾ:
* Strong's: G3867, G3870, G3874, G4389