kn_tw/bible/kt/evil.md

51 lines
8.2 KiB
Markdown

# ಕೆಟ್ಟ, ದುಷ್ಟ, ದುಷ್ಟತನ
## ಪದದ ಅರ್ಥವಿವರಣೆ:
“ಕೆಟ್ಟ” ಮತ್ತು “ದುಷ್ಟ” ಎನ್ನುವ ಪದಗಳು ದೇವರ ಪರಿಶುದ್ಧ ಗುಣಲಕ್ಷಣಗಳಿಗೆ ಮತ್ತು ಆತನ ಚಿತ್ತಕ್ಕೆ ವಿರುದ್ಧಾಗಿರುವ ಪ್ರತಿಯೊಂದು ಕಾರ್ಯವನ್ನು ಸೂಚಿಸುತ್ತವೆ.
* “ಕೆಟ್ಟ” ಎನ್ನುವ ಪದವು ಒಬ್ಬ ವ್ಯಕ್ತಿಯ ನಡತೆಯನ್ನು ಸೂಚಿಸುವಾಗ, “ದುಷ್ಟ” ಎನ್ನುವುದು ಒಬ್ಬ ವ್ಯಕ್ತಿಯ ನಡತೆಗಿಂತ ಹೆಚ್ಚಾದ ಕೆಟ್ಟತನವನ್ನು ಸೂಚಿಸಬಹುದು. ಆದರೆ, ಎರಡು ಪದಗಳು ಅರ್ಥ ಕೊಡುವುದರಲ್ಲಿ ಒಂದೇ ಅರ್ಥವನ್ನು ಕೊಡುತ್ತವೆ.
* “ದುಷ್ಟತನ” ಎನ್ನುವ ಪದವು ಜನರು ದುಷ್ಟ ಕಾರ್ಯಗಳನ್ನು ಮಾಡುವಾಗ ಉಂಟಾಗುವ ಸ್ಥಿತಿಯನ್ನು ಸೂಚಿಸುತ್ತದೆ.
* ಕೆಟ್ಟತನಕ್ಕೆ ಫಲಿತಗಳು ಸ್ಪಷ್ಟವಾಗಿ ತೋರಿಸಲ್ಪಟ್ಟಿವೆ, ಜನರು ಇತರರನ್ನು ಸಾಯಿಸುವುದು, ಅವರ ವಸ್ತುಗಳನ್ನು ಕದಿಯುವುದು, ಸುಳ್ಳುಸುದ್ಧಿ ಹೇಳುವುದರ ಮೂಲಕ, ಕ್ರೂರರಾಗಿ ಇರುವುದರ ಮೂಲಕ ಮತ್ತು ಕರುಣೆಯಿಲ್ಲದವರಾಗಿ ಇರುವುದರ ಮೂಲಕ ಯಾವರೀತಿ ಹಾನಿ ಮಾಡುತ್ತಾರೆಂದು ಹೇಳಲ್ಪಟ್ಟಿದೆ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ, “ಕೆಟ್ಟ” ಮತ್ತು “ದುಷ್ಟ” ಎನ್ನುವ ಪದಗಳನ್ನು “ಚೆನ್ನಾಗಿಲ್ಲದಿರುವುದು” ಅಥವಾ “ಪಾಪತ್ಮವಾದದ್ದು” ಅಥವಾ “ಅನೈತಿಕವಾದದ್ದು” ಎಂದೂ ಅನುವಾದ ಮಾಡಬಹುದು.
* ಈ ಪದವನ್ನು ಅನುವಾದ ಮಾಡುವ ಇನ್ನೊಂದು ವಿಧಾನಗಳಲ್ಲಿ “ಒಳ್ಳೇಯದಲ್ಲ” ಅಥವಾ “ನೀತಿಯಲ್ಲದ್ದು” ಅಥವಾ “ನೈತಿಕತೆಯಿಲ್ಲದ್ದು” ಎನ್ನುವ ಪದಗಳನ್ನು ಉಪಯೋಗಿಸಬಹುದು.
* ಅನುವಾದ ಮಾಡುವ ಭಾಷೆಯಲ್ಲಿ ಉಪಯೋಗಿಸುವ ಪದಗಳು ಸಂದರ್ಭಕ್ಕೆ ತಕ್ಕಂತೆ ಸ್ವಾಭಾವಿಕವಾಗಿ ಇರುವ ಪದಗಳು ಅಥವಾ ಮಾತುಗಳನ್ನು ಉಪಯೋಗಿಸಲು ನೋಡಿಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : [ಅವಿಧೇಯತೆ](../other/disobey.md), [ಪಾಪ](../kt/sin.md), [ಒಳ್ಳೇಯದು](../kt/good.md), [ನೀತಿ](../kt/righteous.md), [ದೆವ್ವ](../kt/demon.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಸಮು.24:10-11](rc://*/tn/help/1sa/24/10)
* [1 ತಿಮೊಥೆ.06:9-10](rc://*/tn/help/1ti/06/09)
* [3 ಯೋಹಾನ.01:9-10](rc://*/tn/help/3jn/01/09)
* [ಆದಿ.02:15-17](rc://*/tn/help/gen/02/15)
* [ಆದಿ.06:5-6](rc://*/tn/help/gen/06/05)
* [ಯೋಬ.01:1-3](rc://*/tn/help/job/01/01)
* [ಯೋಬ.08:19-20](rc://*/tn/help/job/08/19)
* [ನ್ಯಾಯಾ.09:55-57](rc://*/tn/help/jdg/09/55)
* [ಲೂಕ.06:22-23](rc://*/tn/help/luk/06/22)
* [ಮತ್ತಾಯ.07:11-12](rc://*/tn/help/mat/07/11)
* [ಜ್ಞಾನೋ.03:7-8](rc://*/tn/help/pro/03/07)
* [ಕೀರ್ತನೆ.022:16-17](rc://*/tn/help/psa/022/016)
## ಸತ್ಯವೇದದಿಂದ ಉದಾಹರಣೆಗಳು:
* __[02:04](rc://*/tn/help/obs/02/04)__ “ನೀವು ಇದನ್ನು ತಿಂದ ಮರುಕ್ಷಣವೇ, ನೀವು ದೇವರಂತೆ ಆಗುತ್ತೀರಿ ಮತ್ತು ಆತನಿಗೆ ತಿಳಿದಿರುವಂತೆ ನಿಮಗೆ ಕೂಡ ಒಳ್ಳೇಯದು __ ಕೆಟ್ಟದ್ದು __ ಎನ್ನುವ ಅರಿವು ಉಂಟಾಗುತ್ತದೆಯೆಂದು ದೇವರಿಗೆ ಗೊತ್ತು.”
* __[03:01](rc://*/tn/help/obs/03/01)__ ಬಹುಕಾಲವಾದನಂತರ ಈ ಲೋಕದಲ್ಲಿ ಅನೇಕ ಜನರು ಜೀವಿಸಿದ್ದರು. ಅವರು ___ ದುಷ್ಟರಾದರು ___ ಮತ್ತು ಹಿಂಸೆಯನ್ನುಂಟು ಮಾಡುವವರಾದರು.
* __[03:02](rc://*/tn/help/obs/03/02)__ ಆದರೆ ನೋಹನು ದೇವರ ದಯೆಯನ್ನು ಪಡೆದುಕೊಂಡನು. ___ ದುಷ್ಟ ___ ಜನರ ಮಧ್ಯೆದಲ್ಲಿ ಇವನೇ ನೀತಿವಂತನಾಗಿದ್ದನು.
* __[04:02](rc://*/tn/help/obs/04/02)__ ___ ಕೆಟ್ಟದ್ದನ್ನು ___ ಮಾಡುವುದಕ್ಕೆ ಎಲ್ಲರು ಸೇರಿ ಕೆಲಸ ಮಾಡುತ್ತಿರುವುದನ್ನು ದೇವರು ನೋಡಿದರು, ಅವರು ಇನ್ನೂ ಅನೇಕ ಪಾಪ ಕಾರ್ಯಗಳನ್ನು ಮಾಡಬಹುದು.
* __[08:12](rc://*/tn/help/obs/08/12)__ “ನನ್ನನ್ನು ಗುಲಾಮನನ್ನಾಗಿ ನೀವು ಮಾರಿದಾಗ ನೀವು ___ ಕೆಟ್ಟದ್ದನ್ನು ___ ಮಾಡುವುದಕ್ಕೆ ಯತ್ನಿಸಿದ್ದೀರಿ, ಆದರೆ ದೇವರು ಒಳ್ಳೆಯದಕ್ಕಾಗಿ ___ ಕೆಟ್ಟದ್ದನ್ನು ___ ಉಪಯೋಗಿಸಿಕೊಂಡಿದ್ದಾರೆ!”
* __[14:02](rc://*/tn/help/obs/14/02)__ ಅವರು (ಕಾನಾನ್ಯರು) ಸುಳ್ಳು ದೇವರುಗಳನ್ನು ಆರಾಧನೆ ಮಾಡಿದರು ಮತ್ತು ಅನೇಕ ___ ದುಷ್ಟ ___ ಕಾರ್ಯಗಳನ್ನು ಮಾಡಿದರು.
* __[17:01](rc://*/tn/help/obs/17/01)__ ಆದರೆ ಇವನು ದೇವರಿಗೆ ವಿಧೇಯನಾಗದಂತ ___ ದುಷ್ಟ ___ ಮನುಷ್ಯನಾಗಿ ಮಾರ್ಪಟ್ಟನು, ಆದ್ದರಿಂದ ಅವನ ಸ್ಥಾನದಲ್ಲಿ ಅರಸನಾಗಿರಲು ದೇವರು ಇನ್ನೊಬ್ಬ ವ್ಯಕ್ತಿಯನ್ನು ಆರಿಸಿಕೊಂಡರು.
* __[18:11](rc://*/tn/help/obs/18/11)__ ಇಸ್ರಾಯೇಲ್ ಹೊಸ ರಾಜ್ಯದಲ್ಲಿದ್ದ ಅರಸರೆಲ್ಲರು ___ ದುಷ್ಟರಾಗಿದ್ದರು ___ .
* __[29:08](rc://*/tn/help/obs/29/08)__ ಅರಸನು ತುಂಬಾ ಹೆಚ್ಚಾದ ಸಿಟ್ಟಿನಲ್ಲಿದ್ದನು, ಅದಕ್ಕೆ ಅವನು ___ ದುಷ್ಟ ___ ದಾಸನನ್ನು ಸೆರೆಮನೆಯೊಳಗೆ ಹಾಕಿದನು, ಅವನು ತನ್ನ ಎಲ್ಲಾ ಸಾಲವನ್ನು ತೀರಿಸುವತನಕ ಆ ಸೆರೆಮನೆಯಲ್ಲಿಯೇ ಬಿದ್ದಿರುವನು.
* __[45:02](rc://*/tn/help/obs/45/02)__ ಇವನು (ಸ್ತೆಫೆನನು) ದೇವರ ಕುರಿತಾಗಿ ಮತ್ತು ಮೋಶೆಯ ಕುರಿತಾಗಿ ___ ಕೆಟ್ಟ ___ ಮಾತುಗಳನ್ನಾಡಿದ್ದನ್ನು ನಾವು ಕೇಳಿದೆವು!” ಎಂದು ಅವರು ಹೇಳಿದರು.
* __[50:17](rc://*/tn/help/obs/50/17)__ ಆತನು (ಯೇಸು) ಪ್ರತಿಯೊಬ್ಬರ ಕಣ್ಣೀರನ್ನು ಹೊರೆಸುವನು ಮತ್ತು ಅಲ್ಲಿ ಯಾವ ಶ್ರಮೆಯು, ಬಾಧೆಯು, ಅಳುವುದು, ___ ಕೆಟ್ಟತನವು ___, ನೋವು, ಅಥವಾ ಮರಣವು ಇರುವುದಿಲ್ಲ.
## ಪದ ಡೇಟಾ:
* Strong's: H205, H605, H1100, H1681, H1942, H2154, H2162, H2617, H3415, H4209, H4849, H5753, H5766, H5767, H5999, H6001, H6090, H7451, H7455, H7489, H7561, H7562, H7563, H7564, G92, G113, G459, G932, G987, G988, G1426, G2549, G2551, G2554, G2555, G2556, G2557, G2559, G2560, G2635, G2636, G4151, G4189, G4190, G4191, G5337