kn_tw/bible/kt/evangelism.md

26 lines
2.5 KiB
Markdown

# ಸುವಾರ್ತಿಕನು
## ಪದದ ಅರ್ಥವಿವರಣೆ:
ಯೇಸು ಕ್ರಿಸ್ತನ ಸುವಾರ್ತೆಯನ್ನು ಸಾರುವ ವ್ಯಕ್ತಿಯನ್ನು “ಸುವಾರ್ತಿಕನು” ಎಂದು ಕರೆಯುತ್ತಾರೆ.
* “ಸುವಾರ್ತಿಕನು” ಎನ್ನುವ ಪದಕ್ಕೆ “ಶುಭವಾರ್ತೆಯನ್ನು ಸಾರುವವನು” ಎಂದು ಅಕ್ಷರಾರ್ಥವಾಗಿದೆ.
* ಆತನ ಪಾಪ ಪರಿಹಾರ ಬಲಿಯ ಮೂಲಕ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟು ದೇವರ ರಾಜ್ಯದಲ್ಲಿ ಹೇಗೆ ಪಾಲುಹೊಂದಬೇಕೆನ್ನುವ ಶುಭವಾರ್ತೆಯನ್ನು ಸಾರಲು ಯೇಸು ತನ್ನ ಶಿಷ್ಯರನ್ನು ಕಳುಹಿಸಿದನು.
* ಈ ಶುಭವಾರ್ತೆಯನ್ನು ಸಾರಲು ಎಲ್ಲಾ ಕ್ರೈಸ್ತರು ಪ್ರೋತ್ಸಾಹ ಹೊಂದಿದ್ದಾರೆ.
* ಈ ಶುಭವಾರ್ತೆಯನ್ನು ಪ್ರಭಾವಿತವಾಗಿ ಪ್ರಕಟಿಸಲು ವಿಶೇಷವಾದ ಆತ್ಮಿಯ ವರವನ್ನು ಹೊಂದಿರುತ್ತಾರೆ. ಇಂತಹ ಜನರು ಸುವಾರ್ತಿಕಾರಣ ಮಾಡುವ ವರವನ್ನು ಹೊಂದಿದ್ದರೆಂದು ಹೇಳಲ್ಪಟ್ಟಿದೆ ಮತ್ತು ಇವರನ್ನು “ಸುವಾರ್ತಿಕರು” ಎಂದು ಕರೆಯುತ್ತಾರೆ.
## ಅನುವಾದ ಸಲಹೆಗಳು:
* “ಸುವಾರ್ತಿಕನು” ಎನ್ನುವ ಪದವನ್ನು “ಶುಭವಾರ್ತೆ ಬೋಧಿಸುವವನು” ಅಥವಾ “ಶುಭವಾರ್ತೆ ಸಾರುವವನು” ಅಥವಾ “(ಯೇಸು ಕ್ರಿಸ್ತನ ಕುರಿತಾಗಿ) ಶುಭವಾರ್ತೆಯನ್ನು ಸಾರುವ ವ್ಯಕ್ತಿ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಶುಭವಾರ್ತೆ](../kt/goodnews.md), [ಆತ್ಮ](../kt/spirit.md), [ವರ](../kt/gift.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [2 ತಿಮೊಥೆ.04:05](rc://*/tn/help/2ti/04/05)
* [ಎಫೆಸೆ.04:11-13](rc://*/tn/help/eph/04/11)
## ಪದ ಡೇಟಾ:
* Strong's: G2099