kn_tw/bible/kt/ephod.md

25 lines
2.5 KiB
Markdown

# ಮಹಾಯಾಜಕನ ಕವಚ (ಏಫೋದ್)
## ಪದದ ಅರ್ಥವಿವರಣೆ
ಏಫೋದ್ ಎನ್ನುವುದು ಇಸ್ರಾಯೇಲ್ ಯಾಜಕರು ಧರಿಸುತ್ತಿದ್ದ ಮುಂಗವಚವಾಗಿತ್ತು. ಅದಕ್ಕೆ ಎರಡು ಭಾಗಗಳಿದ್ದವು, ಮುಂದೆ ಮತ್ತು ಹಿಂದೆ, ಆ ಎರಡು ಭಾಗಗಳನ್ನು ಭುಜಗಳ ಮೇಲೆ ಕಟ್ಟಿಕೊಳ್ಳುತ್ತಿದ್ದರು ಮತ್ತು ಸೊಂಟಕ್ಕೆ ನಡಿಕಟ್ಟಿಕೊಳ್ಳುತ್ತಿದ್ದರು.
* ಒಂದು ವಿಧವಾದ ಏಫೋದ್ ನಾರೆಯಿಂದ ಮಾಡಲ್ಪಡುತ್ತಿತ್ತು ಮತ್ತು ಅದನ್ನು ಸಾಮಾನ್ಯವಾದ ಯಾಜಕರು ಧರಿಸುತ್ತಿದ್ದರು.
* ಮಹಾಯಾಜಕನು ಧರಿಸುತ್ತಿದ್ದ ಏಫೋದ್ ಬಂಗಾರ, ನೀಲಿ, ನೇರಳೆ ಮತ್ತು ಕೆಂಪು ಬಣ್ಣಗಳ ನೂಲುನಿಂದ ಕಸೂತಿ ಕೆಲಸ ಮಾಡಲ್ಪಟ್ಟಿತ್ತು.
* ಮಹಾಯಾಜಕನ ಏಫೋದ್ ಮುಂಭಾಗದಲ್ಲಿ ಎದೆಗೆ ಧರಿಸುವ ಪದಕವಿತ್ತು. ಎದೆಗೆ ಧರಿಸುವ ಪದಕ ಹಿಂಭಾಗದಲ್ಲಿ ಊರೀಮ್ ಮತ್ತು ತುಮ್ಮೀಮ್ (ಪ್ರಕಟಣೆ ಮತ್ತು ಸತ್ಯ) ಎಂಬ ಕಲ್ಲುಗಳನ್ನು ಇಡಲ್ಪಟ್ಟಿದ್ದವು, ಕೆಲವು ವಿಷಯಗಳಲ್ಲಿ ಯೆಹೋವನ ಚಿತ್ತವನ್ನು ತಿಳಿದುಕೊಳ್ಳಲು ಈ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು.
* ನ್ಯಾಯಸ್ಥಾಪಕನಾದ ಗಿದ್ಯೋನ್ ಮೂರ್ಖವಾಗಿ ಎದೆಗೆ ಧರಿಸುವ ಪದಕವನ್ನು ಮಾಡಿದನು ಮತ್ತು ಇಸ್ರಾಯೇಲ್ ಅದನ್ನು ವಿಗ್ರಹವಾಗಿ ಆರಾಧಿಸಿದರು.
(ಈ ಪದಗಳನ್ನು ಸಹ ನೋಡಿರಿ : [ಯಾಜಕನು](../kt/priest.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಸಮು.02:18-19](rc://*/tn/help/1sa/02/18)
* [ವಿಮೋ.28:4-5](rc://*/tn/help/exo/28/04)
* [ಹೊಶೆಯ.03:4-5](rc://*/tn/help/hos/03/04)
* [ನ್ಯಾಯ.08:27-28](rc://*/tn/help/jdg/08/27)
* [ಯಾಜ.08:6-7](rc://*/tn/help/lev/08/06)
## ಪದ ಡೇಟಾ:
* Strong's: H641, H642, H646