kn_tw/bible/kt/crucify.md

39 lines
5.8 KiB
Markdown

# ಶಿಲುಬೆಗೆ ಹಾಕುವುದು, ಶಿಲುಬೆಗೆ ಹಾಕಲ್ಪಟ್ಟರು
## ಪದದ ಅರ್ಥವಿವರಣೆ
“ಶಿಲುಬೆಗೆ ಹಾಕುವುದು” ಎಂದರೆ ಯಾರಾದರು ಒಬ್ಬ ವ್ಯಕ್ತಿಯನ್ನು ಶಿಲುಬೆಗೆ ಮೊಳೆಹೊಡೆದು ಮತ್ತು ಅವನು ಅತಿ ಘೋರವಾದ ನೋವಿನಲ್ಲಿ ಅಲ್ಲಿಯೇ ಸಾಯುವದಕ್ಕೆ ಬಿಡುವ ಶಿಕ್ಷೆ ಎಂದರ್ಥ.
* ಅಪರಾಧಿಯನ್ನು ಶಿಲುಬೆಗೆ ಮೊಳೆಹೊಡೆಯುತ್ತಾರೆ ಅಥವಾ ಕಟ್ಟಿಹಾಕುತ್ತಾರೆ. ಶಿಲುಬೆಗೆ ಹಾಕಲ್ಪಟ್ಟ ಜನರು ರಕ್ತ ಹೀನತೆ ಅಥವಾ ಉಸಿರುಗಟ್ಟುವಿಕೆಯಿಂದ ಸತ್ತುಹೋದರು.
* ಪ್ರಾಚೀನ ರೋಮಾ ಸಾಮ್ರಾಜ್ಯದಲ್ಲಿ ಅತಿ ಘೋರವಾದ ಅಪರಾಧಿಗಳಿಗೆ ಅಥವಾ ಅವರ ಸರ್ಕಾರದ ಅಧಿಕಾರವನ್ನು ಉಲ್ಲಂಘಿಸುವವರಿಗೆ ಈ ವಿಧವಾದ ಶಿಕ್ಷೆಯನ್ನು ಕೊಡುತ್ತಿದ್ದರು.
* ಯೇಸುವನ್ನು ಶಿಲುಬೆಗೆ ಹಾಕಲು ತಮ್ಮ ಸೈನಿಕರಿಗೆ ಅಪ್ಪಣೆ ನೀಡಬೇಕೆಂದು ಯಹೂದಿಯರ ಮತಾಧಿಕರಿಗಳು ರೋಮಾ ಪ್ರಭುತ್ವದವರನ್ನು ಬೇಡಿಕೊಂಡರು. ಸೈನಿಕರು ಯೇಸುವನ್ನು ಶಿಲುಬೆಗೆ ಮೊಳೆಹೊಡೆದರು. ಆತನ ಅಲ್ಲಿ ಆರು ಘಂಟೆಗಳ ಕಾಲ ನೋವನ್ನು ಅನುಭವಿಸಿ ಆ ನಂತರ ಸತ್ತುಹೋದರು.
## ಅನುವಾದ ಸಲಹೆಗಳು:
* “ಶಿಲುಬೆಗೆ ಹಾಕುವುದು” ಎನ್ನುವ ಪದವನ್ನು “ಶಿಲುಬೆಯ ಮೇಲೆ ಸಾಯಿಸುವುದು” ಅಥವಾ “ಶಿಲುಬೆಗೆ ಮೊಳೆಯುವ ಮೂಲಕ ಮರಣದಂಡನೆ” ಎಂದು ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಶಿಲುಬೆ](../kt/cross.md), [ರೋಮಾ](../names/rome.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.02:22-24](rc://*/tn/help/act/02/22)
* [ಗಲಾತ್ಯ.02:20-21](rc://*/tn/help/gal/02/20)
* [ಲೂಕ.23:20-22](rc://*/tn/help/luk/23/20)
* [ಲೂಕ.23:33-34](rc://*/tn/help/luk/23/33)
* [ಮತ್ತಾಯ.20:17-19](rc://*/tn/help/mat/20/17)
* [ಮತ್ತಾಯ.27:23-24](rc://*/tn/help/mat/27/23)
## ಸತ್ಯವೇದದಿಂದ ಕೆಲವು ಉದಾಹರಣೆಗಳು :
* __[39:11](rc://*/tn/help/obs/39/11)__ ಆದರೆ ಯಹೂದಿಯ ನಾಯಕರು ಮತ್ತು ಜನರು “ಆತನನ್ನು (ಯೇಸುವನ್ನು)__ಶಿಲುಬೆಗೆ ಹಾಕಿರಿ__!” ಎಂದು ಕೂಗಿ ಹೇಳಿದರು.
* __[39:12](rc://*/tn/help/obs/39/12)__ ಗದ್ದಲ ಹೆಚ್ಚಾಗುತ್ತದೆ ಎಂದು ಪಿಲಾತನು ತಿಳಿದು ಯೇಸುವನ್ನು __ಶಿಲುಬೆಗೆ ಹಾಕುವುದಕ್ಕೆ__ ತನ್ನ ಸೈನಿಕರಿಗೆ ಒಪ್ಪಿಸಿದನು. ಯೇಸು ಕ್ರಿಸ್ತನನ್ನು ಶಿಲುಬೆಗೇರಿಸುವದರ ವಿಷಯದಲ್ಲಿ ಪ್ರಮುಖ ಪತ್ರ ವಹಿಸಿದರು.
* __[40:01](rc://*/tn/help/obs/40/01)__ ಸೈನಿಕರು ಯೇಸುವನ್ನು ಅಪಹಾಸ್ಯ ಮಾಡಿದ ಮೇಲೆ ಆತನನ್ನು __ಶಿಲುಬೆಗೆ ಹಾಕುವದಕ್ಕೆ__ ಕರೆದುಕೊಂಡುಹೋಗಿದರು. ಆತನು ಮರಣಿಸುವ ಶಿಲುಬೆಯನ್ನು ಆತನೇ ಹೊತ್ತಿಕೊಂಡು ಹೋಗುವಂತೆ ಅವರು ಮಾಡಿದುರು.
* __[40:04](rc://*/tn/help/obs/40/04)__ ಇಬ್ಬರು ಕಳ್ಳರ ಮಧ್ಯದಲ್ಲಿ ಯೇಸುವನ್ನು __ಶಿಲುಬೆಗೆ ಹಾಕಿದರು__.
* __[43:06](rc://*/tn/help/obs/43/06)__ “ಇಸ್ರಾಯೇಲ್ ಜನರೇ, ನನ್ನ ಮಾತುಗಳನ್ನು ಕೇಳಿರಿ;, ನಜರೇತಿನ ಯೇಸು ಇದ್ದನಲ್ಲಾ, ನಿಮಗೂ ತಿಳಿದಿರುವಂತೆ ದೇವರು ಆತನ ಕೃಪೆಯಿಂದ ಮಹತ್ತುಗಳನ್ನೂ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ನಿಮ್ಮಲ್ಲಿ ನಡಿಸಿ ಆತನನ್ನು ತನಗೆ ಮೆಚ್ಚಿಕೆಯಾದವನೆಂದು ನಿಮಗೆ ತೋರಿಸಿಕೋಟ್ಟನು. ಆದರೂ ನೀವು ಆತನನ್ನು __ಶಿಲುಬೆಗೆ ಹಾಕಿ__ ಮೊಳೆಜಡಿದು ಕೊಂದಿರಿ.
* __[43:09](rc://*/tn/help/obs/43/09)__ “ನೀವು ಯೇಸು ಎಂಬ ಈ ಮನುಷ್ಯನನ್ನು __ಶಿಲುಬೆಗೆ ಹಾಕಿ__ ಕೊಂದಿದ್ದೀರ”
* __[44:08](rc://*/tn/help/obs/44/08)__ “ನೀವು ನೋಡುತ್ತಿರುವಂತಹ, ನಿಮಗೆ ಗುರುತಿರುವಂತಹ ಈ ಮನುಷ್ಯನು ಗುಣವಾಗುವುದಕ್ಕೆ ಯೇಸುವಿನ ಹೆಸರಿನಲ್ಲಿ ಇಟ್ಟ ಅವನ ನಂಬಿಕೆಯೇ ಕಾರಣ. ನೀವು ಯೇಸುವನ್ನು __ಶಿಲುಬೆಗೆ ಹಾಕಿ__ ಕೊಲ್ಲಿಸಿದ್ದೀರಿ, ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು!”
## ಪದ ಡೇಟಾ:
* Strong's: G388, G4362, G4717, G4957