kn_tw/bible/kt/conscience.md

25 lines
3.4 KiB
Markdown

# ಮನಸ್ಸಾಕ್ಷಿ, ಮನಸ್ಸಾಕ್ಷಿಗಳು
## ಪದದ ಅರ್ಥವಿವರಣೆ:
ಮನಸ್ಸಾಕ್ಷಿ ಎನ್ನುವುದು ಒಬ್ಬ ವ್ಯಕ್ತಿಯ ಆಲೋಚನೆಯ ವಿಭಾಗವಾಗಿರುತ್ತದೆ, ಇದರ ಮೂಲಕದಿಂದಲೇ ಒಬ್ಬ ವ್ಯಕ್ತಿ ಪಾಪ ಮಾಡುತ್ತಿದ್ದಾನೆ ಎನ್ನುವದನ್ನು ದೇವರು ಆ ವ್ಯಕ್ತಿಗೆ ತಿಳಿಸುತ್ತಾನೆ.
* ಯಾವುದು ಸರಿಯೋ ಮತ್ತು ಯಾವುದು ತಪ್ಪೋ ಎನ್ನುವದರ ಮಧ್ಯೆಯಿರುವ ವ್ಯತ್ಯಾಸವನ್ನು ತಿಳಿದುಕೊಳ್ಳಲು ಅವರಿಗೆ ಸಹಾಯ ಮಾಡುವುದಕ್ಕೆ ದೇವರು ಮನಸ್ಸಾಕ್ಷಿಯನ್ನು ಜನರಿಗೆ ಕೊಟ್ಟಿರುತ್ತಾನೆ.
* ದೇವರಿಗೆ ವಿಧೇಯನಾಗುವ ಒಬ್ಬ ವ್ಯಕ್ತಿಯನ್ನು “ಪವಿತ್ರ”ವಾದ ಅಥವಾ “ಶುದ್ಧವಾದ” ಅಥವಾ “ಸ್ವಚ್ಛವಾದ” ಮನಸ್ಸಾಕ್ಷಿ ಇರುವ ವ್ಯಕ್ತಿಯೆಂದು ಕರೆಯಲ್ಪಟ್ಟಿದ್ದಾನೆ.
* ಒಬ್ಬ ವ್ಯಕ್ತಿಗೆ “ಶುದ್ಧವಾದ ಮನಸ್ಸಾಕ್ಷಿ” ಇರುವುದಾದರೆ, ಆ ವ್ಯಕ್ತಿ ಯಾವ ಪಾಪವನ್ನು ಮರೆಮಾಚುತ್ತಿಲ್ಲ ಎಂದರ್ಥ.
* ತಮ್ಮ ಮನಸ್ಸಾಕ್ಷಿಯನ್ನು ನಿರ್ಲಕ್ಷ್ಯೆ ಮಾಡಿ, ತಾವು ಪಾಪ ಮಾಡಿದ್ದೇವೆಂದು ತಿಳಿದು ಅಪರಾಧಕ್ಕೊಳಗಾಗದಿದ್ದರೆ ತಮ್ಮ ಮನಸ್ಸಾಕ್ಷಿಗಳು ಯಾವುದು ತಪ್ಪು ಎಂದು ಗ್ರಹಿಸುವುದುರಲ್ಲಿ ಕೆಲಸ ಮಾಡುತ್ತಿಲ್ಲವೆಂದು ಅದರ ಅರ್ಥವಾಗಿರುತ್ತದೆ. ಇಂಥಹ ಮನಸ್ಸಾಕ್ಷಿಯನ್ನೇ “ಬಾಡಿಹೋದ ಮನಸ್ಸಾಕ್ಷಿ” ಎಂದು ಸತ್ಯವೇದ ಕರೆಯುತ್ತದೆ, ಇದು ಬಿಸಿ ಕಬ್ಬಿಣದಂತೆ “ಮುದ್ರೆ” ಹಾಕಲ್ಪಟ್ಟಿರುವ ಹಾಗೆ ಇರುತ್ತೆದೆ. ಅಂಥಹ ಮನಸ್ಸಾಕ್ಷಿಯನ್ನು “ಅರಿವುಯಿರದ” ಮತ್ತು “ಮಾಲಿನ್ಯವಾದ” ಮನಸ್ಸಾಕ್ಷಿಯೆಂದು ಕರೆಯುತ್ತಾರೆ.
* ಈ ಪದವನ್ನು ಅನುವಾದ ಮಾಡುವ ಇನ್ನೊಂದು ವಿಧಾನಗಳಲ್ಲಿ “ಅಂತರಂಗದ ನೈತಿಕ ಮಾರ್ಗದರ್ಶಿ” ಅಥವಾ “ನೈತಿಕ ಆಲೋಚನೆ” ಎಂದೂ ಅನುವಾದ ಮಾಡುತ್ತಾರೆ.
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ತಿಮೊಥೆ.01:18-20](rc://*/tn/help/1ti/01/18)
* [1 ತಿಮೊಥೆ.03:8-10](rc://*/tn/help/1ti/03/08)
* [2 ಕೊರಿಂಥ.05:11-12](rc://*/tn/help/2co/05/11)
* [2 ತಿಮೊಥೆ.01:3-5](rc://*/tn/help/2ti/01/03)
* [ರೋಮಾ.09:1-2](rc://*/tn/help/rom/09/01)
* [ತೀತ.01:15-16](rc://*/tn/help/tit/01/15)
## ಪದ ಡೇಟಾ:
* Strong's: G4893