kn_tw/bible/kt/clean.md

52 lines
8.8 KiB
Markdown

# ಶುದ್ಧ, ತೊಳೆಯು
## ಪದದ ಅರ್ಥವಿವರಣೆ:
“ಶುದ್ದ” ”ಎಂಬ ಪದವು ಸಾಮಾನ್ಯವಾಗಿ ಯಾರೊಬ್ಬರಿಂದ / ಯಾವುದೋ ಕೊಳಕು ಅಥವಾ ಕಲೆಗಳನ್ನು ತೆಗೆದುಹಾಕುವುದು ಅಥವಾ ಮೊದಲಿಗೆ ಯಾವುದೇ ಕೊಳಕು ಅಥವಾ ಕಲೆಗಳನ್ನು ಹೊಂದಿರದಿರುವುದನ್ನು ಸೂಚಿಸುತ್ತದೆ. "ತೊಳೆಯುವುದು" ಎಂಬ ಪದವು ನಿರ್ದಿಷ್ಟವಾಗಿ ಯಾರೋ / ಯಾವುದೋ ಕೊಳಕು ಅಥವಾ ಕಲೆಗಳನ್ನು ತೆಗೆದುಹಾಕುವ ಕ್ರಿಯೆಯನ್ನು ಸೂಚಿಸುತ್ತದೆ.
* “ಶುದ್ಧೀಕರಿಸು” ಎನ್ನುವ ಪದವನ್ನು ಯಾವುದಾದರೊಂದನ್ನು “ಶುದ್ಧ” ಮಾಡುವ ಪದ್ಧತಿಯ ಕ್ರಿಯೆಯನ್ನು ಸೂಚಿಸುತ್ತದೆ. ಇದನ್ನು “ತೊಳೆ” ಅಥವಾ “ಪವಿತ್ರಗೊಳಿಸು” ಎಂದೂ ಅನುವಾದ ಮಾಡಬಹುದು.
* ಹಳೇ ಒಡಂಬಡಿಕೆಯಲ್ಲಿ ದೇವರು ಇಸ್ರಾಯೇಲ್ಯರಿಗೆ “ಶುದ್ಧ” ಪ್ರಾಣಿಗಳು ಯಾವುವು ಮತ್ತು “ಅಶುದ್ಧ” ಪ್ರಾಣಿಗಳು ಯಾವುವೆಂದು ವಿಶೇಷವಾಗಿ ಹೇಳಿದ್ದನು. ಹೋಮಕ್ಕಾಗಿ ಮತ್ತು ತಿನ್ನುವುದಕ್ಕೆ ಕೇವಲ ಶುದ್ಧ ಪ್ರಾಣಿಗಳನ್ನು ಮಾತ್ರವೇ ಉಪಯೋಗಿಸುವುದಕ್ಕೆ ಅನುಮತಿಸಿದ್ದನು. ಈ ಸಂದರ್ಭದಲ್ಲಿ “ಶುದ್ಧ” ಎನ್ನುವ ಪದಕ್ಕೆ ಹೋಮಕ್ಕಾಗಿ ಉಪಯೋಗಿಸಲು ದೇವರಿಗೆ ಅಂಗೀಕೃತವಾದ ಪ್ರಾಣಿ ಎಂದರ್ಥ.
* ಒಬ್ಬ ವ್ಯಕ್ತಿಗೆ ಚರ್ಮ ರೋಗವಿದ್ದರೆ ಆ ವ್ಯಕ್ತಿಯ ಚರ್ಮವು ಇನ್ನು ಮುಂದೆ ಯಾವ ಅಂಟುರೋಗವಿಲ್ಲದೆ ಗುಣವಾಗುವವರೆಗೂ ಅಶುದ್ಧನು ಎಂದರ್ಥ, ಆ ವ್ಯಕ್ತಿಯನ್ನು “ಶುದ್ಧನು” ಎಂದು ತಿರುಗಿ ಹೇಳುವವರೆಗೂ ಚರ್ಮವನ್ನು ಶುದ್ಧೀಕರಿಸುವುದಕ್ಕೋಸ್ಕರ ನಿಯಮಗಳಿಗೆ ವಿಧೇಯನಾಗಬೇಕು.
* “ಶುದ್ಧ” ಎನ್ನುವ ಪದವು ಕೆಲವೊಂದುಬಾರಿ ನೈತಿಕ ಪವಿತ್ರತೆಯನ್ನು ಸೂಚಿಸಲು ಅಲಂಕಾರಿಕವಾಗಿ ಉಪಯೋಗಿಸುತ್ತಾರೆ.
ಸತ್ಯವೇದದಲ್ಲಿ “ಅಶುದ್ಧ” ಎನ್ನುವ ಪದವು ದೇವರು ತನ್ನ ಜನರು ಮುಟ್ಟಕೂಡದ, ತಿನ್ನಬಾರದ, ಅಥವಾ ಬಲಿಯಾಗಿ ಅರ್ಪಿಸಬಾರದ ವಿಷಯಗಳನ್ನು ಸೂಚಿಸಲು ಅಲಂಕಾರಿಕವಾಗಿ ಉಪಯೋಗಿಸಲ್ಪಟ್ಟಿರುತ್ತದೆ.
* ಯಾವ ಯಾವ ಪ್ರಾಣಿಗಳು “ಶುದ್ಧವೋ” ಮತ್ತು ಯಾವ ಯಾವ ಪ್ರಾಣಿಗಳು “ಅಶುದ್ಧವೋ” ಎನ್ನುವುದರ ಕುರಿತಾಗಿ ದೇವರು ಇಸ್ರಾಯೇಲ್ಯರಿಗೆ ಆಜ್ಞೆಗಳನ್ನು ಕೊಟ್ಟರು. ಅಶುದ್ಧವಾದ ಪ್ರಾಣಿಗಳು ಬಲಿಗೆ ಅಥವಾ ತಿನ್ನುವುದಕ್ಕೆ ಉಪಯೋಗಿಸಲು ಅನುಮತಿಯಿಲ್ಲ.
* ಚರ್ಮ ರೋಗಗಳಿಂದಿರುವ ಜನರು ಗುಣವಾಗುವವರೆಗೂ ಅವರನ್ನು “ಅಶುದ್ಧರು” ಎಂದು ಕರೆಯುತ್ತಿದ್ದರು.
* ಇಸ್ರಾಯೇಲ್ಯರು “ಅಶುದ್ಧ” ವಾದವುಗಳನ್ನು ಮುಟ್ಟಿದರೆ, ಅವರು ತಮ್ಮನ್ನು ತಾವೇ ಒಂದು ಕಾಲಾವದಿಯವರೆಗೆ ಅಶುದ್ಧರು ಎಂದು ಹೇಳಿಕೊಳ್ಳುತ್ತಿದ್ದರು.
* ಅಶುದ್ಧವಾದವುಗಳನ್ನು ತಿನ್ನುವುದರ ಕುರಿತಾಗಿ ಅಥವಾ ಅವುಗಳನ್ನು ಮುಟ್ಟಿಕೊಳ್ಳುವುದರ ಕುರಿತಾಗಿ ದೇವರ ಆಜ್ಞೆಗಳಿಗೆ ವಿಧೇಯತೆ ತೋರಿಸುವುದೆನ್ನುವುದು ದೇವರ ಸೇವೆಗಾಗಿ ಇಸ್ರಾಯೇಲ್ಯರನ್ನು ಪ್ರತ್ಯೇಕಿಸಲ್ಪಟ್ಟವರನ್ನಾಗಿ ಇರಿಸುತ್ತದೆ.
* ಈ ಭೌತಿಕವಾದ ಮತ್ತು ಸಾಂಪ್ರದಾಯಿಕವಾದ ಅಶುದ್ಧತೆಯು ನೈತಿಕ ಅಶುದ್ಧತೆಗೆ ಗುರುತಾಗಿರುತ್ತದೆ.
* ಇನ್ನೊಂದು ಅಲಂಕಾರಿಕ ಭಾಷೆಯಲ್ಲಿ “ಅಶುದ್ಧ ಆತ್ಮ” ಎನ್ನುವುದು ದುಷ್ಟಾತ್ಮಕ್ಕೆ ಸೂಚನೆಯಾಗಿರುತ್ತದೆ.
## ಅನುವಾದ ಸಲಹೆಗಳು:
* ಈ ಪದವನ್ನು “ಸ್ವಚ್ಛ” ಅಥವಾ “ಪವಿತ್ರ” (ಮಾಲಿನ್ಯವಾಗದೆ ಎನ್ನುವ ಅರ್ಥ ಬರುವ ಪದ) ಎನ್ನುವ ಸಾಧಾರಣ ಪದದೊಂದಿಗೆ ಅನುವಾದ ಮಾಡಬಹುದು.
* ಈ ಪದವನ್ನು ಅನುವಾದ ಮಾಡುವ ಇನ್ನೊಂದು ವಿಧಾನದಲ್ಲಿ, “ಆಚರಣೆ ಶುದ್ಧತೆ” ಅಥವಾ “ದೇವರಿಗೆ ಸ್ವೀಕೃತವಾದದ್ದು” ಎನ್ನುವ ಮಾತುಗಳೂ ಒಳಗೊಂಡಿರುತ್ತವೆ.
* “ಶುದ್ಧೀಕರಿಸು” ಎನ್ನುವದನ್ನು “ತೊಳೆ” ಅಥವಾ “ಪವಿತ್ರಗೊಳಿಸು” ಎಂದೂ ಅನುವಾದ ಮಾಡಬಹುದು.
* “ಶುದ್ಧ” ಮತ್ತು “ಶುದ್ಧೀಕರಿಸು” ಎನ್ನುವ ಪದಗಳನ್ನು ಅಲಂಕಾರಿಕ ಭಾವನೆಯಲ್ಲಿಯೂ ಅರ್ಥಮಾಡಿಕೊಳ್ಳುವಂತೆ ನೋಡಿಕೊಳ್ಳಿರಿ.
* “ಅಶುದ್ಧ” ಎನ್ನುವ ಪದವನ್ನು “ಶುದ್ಧವಿಲ್ಲದ್ದು” ಅಥವಾ “ದೇವರ ದೃಷ್ಟಿಯಲ್ಲಿ ಅಯೋಗ್ಯವಾದದ್ದು” ಅಥವಾ “ಭೌತಿಕವಾಗಿ ಅಶುದ್ಧವಾದದ್ದು” ಅಥವಾ “ಕೊಳೆಯಾದದ್ದು” ಎಂದೂ ಅನುವಾದ ಮಾಡಬಹುದು.
* ಅಶುದ್ಧ ಆತ್ಮ ಎಂದು ದೆವ್ವವನ್ನು ಸೂಚಿಸಿದಾಗ, “ಅಶುದ್ಧ” ಎನ್ನುವ ಪದವನ್ನು “ದುಷ್ಟ” ಅಥವಾ “ಕೊಳೆಯಾದದ್ದು” ಎಂದೂ ಅನುವಾದ ಮಾಡಬಹುದು.
* ಈ ಪದದ ಅನುವಾದವು ಆತ್ಮೀಕ ಅಶುದ್ಧತೆಯನ್ನು ಅನುಮತಿಸಬೇಕು. ಮುಟ್ಟುವುದಕ್ಕೂ, ತಿನ್ನುವುದಕ್ಕೂ ಅಥವಾ ಬಲಿ ಕೊಡುವುದಕ್ಕೂ ಯೋಗ್ಯವಿಲ್ಲವೆಂದು ದೇವರು ಹೇಳಿದ ಪ್ರತಿಯೊಂದನ್ನು ಸೂಚಿಸಬೇಕು.
(ಈ ಪದಗಳನ್ನು ಸಹ ನೋಡಿರಿ : [ಕೊಳಕು](../other/defile.md), [ದೆವ್ವ](../kt/demon.md), [ಪವಿತ್ರ](../kt/holy.md), [ಹೋಮ](../other/sacrifice.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.07:02](rc://*/tn/help/gen/07/02)
* [ಆದಿ.07:08](rc://*/tn/help/gen/07/08)
* [ಧರ್ಮೋ.12:15](rc://*/tn/help/deu/12/15)
* [ಕೀರ್ತನೆ.051:07](rc://*/tn/help/psa/051/007)
* [ಜ್ಞಾನೋ.20:29-30](rc://*/tn/help/pro/20/30)
* [ಯೆಹೆ.24:13](rc://*/tn/help/ezk/24/13)
* [ಮತ್ತಾಯ.23:27](rc://*/tn/help/mat/23/27)
* [ಲೂಕ.05:13](rc://*/tn/help/luk/05/13)
* [ಅಪೊ.ಕೃತ್ಯ.08:07](rc://*/tn/help/act/08/07)
* [ಅಪೊ.ಕೃತ್ಯ.10:27-29](rc://*/tn/help/act/10/27)
* [ಕೊಲೊಸ್ಸ.03:05](rc://*/tn/help/col/03/05)
* [1 ಥೆಸ್ಸ.04:07](rc://*/tn/help/1th/04/07)
* [ಯಾಕೋಬ.04:08](rc://*/tn/help/jas/04/08)
## ಪದ ಡೇಟಾ:
* Strong's: H1249, H1252, H1305, H2134, H2135, H2141, H2398, H2548, H2834, H2889, H2890, H2891, H2893, H2930, H2931, H2932, H3001, H3722, H5079, H5352, H5355, H5356, H6172, H6565, H6663, H6945, H7137, H8552, H8562, G167, G169, G2511, G2512, G2513, G2839, G2840, G3394, G3689