kn_tw/bible/kt/christian.md

43 lines
6.5 KiB
Markdown
Raw Permalink Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

# ಕ್ರೈಸ್ತನು
## ಅರ್ಥವಿವರಣೆ:
ಯೇಸು ಪರಲೋಕಕ್ಕೆ ಹಿಂತಿರುಗಿ ಹೋದ ಮೇಲೆ ಸ್ವಲ್ಪಕಾಲವಾದನಂತರ, ಜನರು “ಕ್ರೈಸ್ತರು” ಎಂದು ಹೆಸರನ್ನು ಇಟ್ಟುಕೊಂಡರು, ಇದಕ್ಕೆ “ಕ್ರಿಸ್ತನ ಹಿಂಬಾಲಕರು” ಎಂದರ್ಥ.
* ಅಂತಿಯೋಕ್ಯ ಪಟ್ಟಣದಲ್ಲಿ ಯೇಸುವಿನ ಹಿಂಬಾಲಕರನ್ನು ಮೊಟ್ಟ ಮೊದಲು “ಕ್ರೈಸ್ತರು” ಎಂದು ಕರೆಯಲಾಯಿತು.
* ಯಾವ ಒಬ್ಬ ವ್ಯಕ್ತಿ ಯೇಸುವನ್ನು ದೇವರ ಮಗನೆಂದು ನಂಬಿರುತ್ತಾನೋ ಮತ್ತು ತನ್ನ ಪಾಪಗಳಿಂದ ತನ್ನನ್ನು ರಕ್ಷಿಸುವುದಕ್ಕೆ ಯೇಸುವನ್ನು ನಂಬಿರುತ್ತಾನೋ ಅವನೇ ಕ್ರೈಸ್ತನು.
* ನಮ್ಮ ಆಧುನಿಕ ಕಾಲದಲ್ಲಿ, “ಕ್ರೈಸ್ತನು” ಎನ್ನುವ ಪದವು ಅನೇಕಬಾರಿ ಕ್ರೈಸ್ತ ಧರ್ಮಕ್ಕೆ ಸೇರಿದವನೆಂದು ಗುರುತಿಸುವ , ಆದರೆ ಅವರು ನಿಜವಾಗಿ ಯೇಸುವನ್ನು ಹಿಂಬಾಲಿಸದವರಿಗೆ ಉಪಯೋಗಿಸುತ್ತಿದ್ದಾರೆ . ಸತ್ಯವೇದದಲ್ಲಿ “ಕ್ರೈಸ್ತನು” ಎನ್ನುವುದಕ್ಕೆ ಈ ಅರ್ಥವಲ್ಲ.
* ಯಾಕಂದರೆ ಸತ್ಯವೇದದಲ್ಲಿ “ಕ್ರೈಸ್ತನು” ಎನ್ನುವ ಪದವನ್ನು ಯಾವಾಗಲೂ ಯೇಸುವನ್ನು ನಿಜವಾಗಿ ನಂಬಿದವರಿಗೆ ಮಾತ್ರ ಸೂಚಿಸಲಾಗಿತ್ತು. ಒಬ್ಬ ಕ್ರೈಸ್ತನನ್ನು “ವಿಶ್ವಾಸಿ” ಎಂದೂ ಕರೆಯುತ್ತಾರೆ.
## ಅನುವಾದದ ಸಲಹೆಗಳು:
* ಈ ಪದವನ್ನು “ಕ್ರಿಸ್ತ-ಹಿಂಬಾಲಕ” ಅಥವಾ “ಕ್ರಿಸ್ತನ ಅನುಚಾರಕ” ಅಥವಾ “ಕ್ರಿಸ್ತ-ಮನುಷ್ಯ” ಎಂದೂ ಅನುವಾದ ಮಾಡಬಹುದು.
* ಈ ಪದದ ಅನುವಾದವು ಶಿಷ್ಯನು ಅಥವಾ ಅಪೊಸ್ತಲನು ಎನ್ನುವ ಪದಗಳಿಗೆ ಉಪಯೋಗಿಸುವ ಪದಗಳಿಗಿಂತ ಭಿನ್ನವಾಗಿ ಅನುವಾದ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಈ ಪದವನ್ನು ಅನುವಾದ ಮಾಡುತ್ತಿರುವಾಗ ಕೇವಲ ಒಂದು ಗುಂಪಿಗೆ ಮಾತ್ರವಲ್ಲದೇ, ಯೇಸುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬರನ್ನು ಸೂಚಿಸುವಂತೆ ನೋಡಿಕೊಳ್ಳಿರಿ.
* ಸ್ಥಳೀಯ ಅಥವಾ ರಾಷ್ಟ್ರೀಯ ಭಾಷೆಯಲ್ಲಿರುವ ಸತ್ಯವೇದದ ಅನುವಾದಗಳಲ್ಲಿ ಈ ಪದವನ್ನು ಯಾವರೀತಿ ಅನುವಾದಿಸಿದ್ದಾರೆಂಬುದನ್ನು ಪರಿಗಣಿಸಿ. (ಅನುವಾದ ಸಲಹೆಗಳು: [ಗೊತ್ತಿಲ್ಲದವುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-unknown))
(ಇವುಗಳನ್ನು ಸಹ ನೋಡಿರಿ : [ಅಂತಿಯೋಕ್ಯ](../names/antioch.md), [ಕ್ರಿಸ್ತನು](../kt/christ.md), [ಸಭೆ](../kt/church.md), [ಶಿಷ್ಯನು](../kt/disciple.md), [ನಂಬಿಕೆ](../kt/believe.md), [ಯೇಸು](../kt/jesus.md), [ದೇವರ ಮಗ](../kt/sonofgod.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಕೊರಿಂಥ. 6:7-8](rc://*/tn/help/1co/06/07)
* [1 ಪೇತ್ರ 4:16](rc://*/tn/help/1pe/04/16)
* [ಅಪೊ.ಕೃತ್ಯ. 11:26](rc://*/tn/help/act/11/26)
* [ಅಪೊ.ಕೃತ್ಯ. 26:28](rc://*/tn/help/act/26/28)
## ಸತ್ಯವೇದದಿಂದ ಉದಾಹರಣೆಗಳು:
* __[46:9](rc://*/tn/help/obs/46/09)__ ಅಂತಿಯೋಕ್ಯದಲ್ಲಿಯೇ ಯೇಸುವಿನಲ್ಲಿ ನಂಬಿಕೆಯಿಟ್ಟವರನ್ನು ಮೊಟ್ಟ ಮೊದಲು __ಕ್ರೈಸ್ತರೆದು__ ಕರೆಯಲಾಯಿತು.
* __[47:14](rc://*/tn/help/obs/47/14)__ ಯೇಸುವಿನ ಕುರಿತಾಗಿ ಶುಭವಾರ್ತೆಯನ್ನು ಬೋಧಿಸಲು ಮತ್ತು ಸಾರಲು ಪೌಲನು ಮತ್ತು ಇತರ __ಕ್ರೈಸ್ತ __ನಾಯಕರು ಅನೇಕ ಪಟ್ಟಣಗಳಿಗೆ ಪ್ರಯಾಣ ಮಾಡಿದರು.
* __[49:15](rc://*/tn/help/obs/49/15)__ ಯೇಸು ನಿನಗಾಗಿ ಏನು ಮಾಡಿದ್ದಾನೆಂದು ತಿಳಿದು, ಆತನಲ್ಲಿ ನೀನು ನಂಬಿಕೆ ಇಡುವುದಾದರೆ, ಆಗ ನೀನು __ಕ್ರೈಸ್ತನು__ ಎಂಬುದಾಗಿ ಕರೆಯಲ್ಪಡುವಿ!
* __[49:16](rc://*/tn/help/obs/49/16)__ ನೀನು __ಕ್ರೈಸ್ತರಾಗಿದ್ದರೆ__, ಯೇಸು ಮಾಡಿದ ಕಾರ್ಯದಿಂದ ದೇವರು ನಿಮ್ಮ ಎಲ್ಲಾ ಪಾಪಗಳನ್ನು ಕ್ಷಮಿಸಿದ್ದಾನೆ.
* __[49:17](rc://*/tn/help/obs/49/17)__ ನೀನು __ಕ್ರೈಸ್ತರಾಗಿದ್ದರೂ__ ಸಹ, ನೀವು ಪಾಪ ಮಾಡುವದಕ್ಕೆ ಶೋಧನೆಗೆ ಒಳಗಾಗುತ್ತೀ.
* __[50:3](rc://*/tn/help/obs/50/03)__ ಆತನು ಪರಲೋಕಕ್ಕೆ ಹಿಂತಿರುಗಿ ಹೋಗುವುದಕ್ಕೆ ಮುಂಚಿತವಾಗಿ, ಸುವಾರ್ತೆಯನ್ನು ಕೇಳದ ಪ್ರತಿಯೊಬ್ಬರಿಗೆ ನೀವು ಶುಭವಾರ್ತೆಯನ್ನು ಸಾರಿರಿ ಎಂದು ಯೇಸು __ಕ್ರೈಸ್ತರಿಗೆ__ ಹೇಳಿದನು.
* __[50:11](rc://*/tn/help/obs/50/11)__ ಯೇಸು ಹಿಂದುರಿಗಿ ಬರುವಾಗ, ಮರಣ ಹೊಂದಿದ ಪ್ರತಿಯೊಬ್ಬ
__ಕ್ರೈಸ್ತನು__ ಮರಣದಿಂದ ಎಬ್ಬಿಸಲ್ಪಡುವನು ಮತ್ತು ಆಕಾಶದಲ್ಲಿ ಆತನನ್ನು ಭೇಟಿಯಾಗುವನು.
## ಪದದ ಡೇಟಾ:
* Strong's: G55460