kn_tw/bible/kt/body.md

36 lines
5.7 KiB
Markdown

# ದೇಹ, ದೇಹಗಳು
## ಪದದ ಅರ್ಥವಿವರಣೆ:
“ದೇಹ” ಎನ್ನುವ ಪದವು ಅಕ್ಷರಾರ್ಥವಾಗಿ ಒಬ್ಬ ವ್ಯಕ್ತಿಯ ಅಥವಾ ಒಂದು ಪ್ರಾಣಿಯ ಭೌತಿಕ ಶರೀರವನ್ನು ಸೂಚಿಸುತ್ತದೆ. ಒಂದು ವಸ್ತುವನ್ನು ಅಥವಾ ಗುಂಪಿನಲ್ಲಿರುವ ವೈಯುಕ್ತಿಕ ಸದಸ್ಯರನ್ನು ಸೂಚಿಸುವುದಕ್ಕೆ ಅಲಂಕಾರ ರೂಪದಲ್ಲಿಯೂ ಈ ಪದವನ್ನು ಉಪಯೋಗಿಸುತ್ತಾರೆ.
* ಅನೇಕಬಾರಿ “ದೇಹ” ಎನ್ನುವ ಪದವನ್ನು ಸತ್ತಂತ ಪ್ರಾಣಿಯನ್ನು ಅಥವಾ ಸತ್ತಂತ ವ್ಯಕ್ತಿಯನ್ನು ಸೂಚಿಸುತ್ತದೆ. ಕೆಲವೊಂದುಬಾರಿ ಇದನ್ನು “ಮೃತ ದೇಹ” ಅಥವಾ “ಶವ” ಎಂದೂ ಸೂಚಿಸುತ್ತಾರೆ.
* ಯೇಸು ತನ್ನ ಕೊನೆಯ ಪಸ್ಕ ಭೋಜನದ ಸಮಯದಲ್ಲಿ ತನ್ನ ಶಿಷ್ಯರಿಗೆ, “ಇದು ನನ್ನ ದೇಹ (ರೊಟ್ಟಿ)” ಎಂದು ಹೇಳಿದಾಗ, ಎಲ್ಲಾ ಜನರ ಪಾಪಗಳಿಗಾಗಿ “ಮುರಿಯಲ್ಪಡುವ” (ಜಜ್ಜಲ್ಪಡುವ) ತನ್ನ ಭೌತಿಕ ದೇಹದ ಕುರಿತಾಗಿಯೇ ಆತನು ಅದನ್ನು ಹೇಳಿದ್ದನು.
* ಸತ್ಯವೇದದಲ್ಲಿ ಕ್ರೈಸ್ತರ ಗುಂಪನ್ನು “ಕ್ರಿಸ್ತನ ದೇಹ” ಎಂಬುದಾಗಿ ಹೇಳಲ್ಪಟ್ಟಿದೆ.
* ಭೌತಿಕ ದೇಹದಲ್ಲಿ ಅನೇಕ ಭಾಗಗಳು ಇರುವಂತೆಯೇ, “ಕ್ರಿಸ್ತನ ದೇಹದಲ್ಲಿಯೂ” ಅನೇಕಮಂದಿ ವೈಯುಕ್ತಿಕ ಸದಸ್ಯರು ಇರುತ್ತಾರೆ.
* ದೇವರಿಗೆ ಸೇವೆ ಮಾಡಲು ಮತ್ತು ಆತನಿಗೆ ಮಹಿಮೆಯನ್ನು ತರಲು ಎಲ್ಲಾ ಗುಂಪು ಸೇರಿ ಕೆಲಸ ಮಾಡುವುದಕ್ಕೆ ಸಹಾಯ ಮಾಡಲು ಕ್ರಿಸ್ತನ ದೇಹದಲ್ಲಿ ಪ್ರತಿಯೊಬ್ಬ ವೈಯುಕ್ತಿಕ ವಿಶ್ವಾಸಿ ಒಂದು ವಿಶೇಷವಾದ ಕೆಲಸವನ್ನು ಹೊಂದಿರುತ್ತಾನೆ.
* ಯೇಸುವನ್ನು ಕೂಡ ಎಲ್ಲಾ ವಿಶ್ವಾಸಿಗಳ “ದೇಹದ” “ತಲೆ” (ನಾಯಕ) ಎಂಬುದಾಗಿ ಸೂಚಿಸಲ್ಪಟ್ಟಿದ್ದಾನೆ. ಒಬ್ಬ ವ್ಯಕ್ತಿಯ ತಲೆಯು ತನ್ನ ಶರೀರವು ಏನು ಮಾಡಬೇಕೆಂದು ಹೇಳುತ್ತದೋ, ಹಾಗೆಯೇ ಯೇಸು ತನ್ನ “ದೇಹದ” ಸದಸ್ಯರಾದ ಕ್ರೈಸ್ತರನ್ನು ನಿರ್ದೇಶಿಸುವವನು ಮತ್ತು ಅವರಿಗೆ ಮಾರ್ಗದರ್ಶಕನೂ ಆಗಿರುತ್ತಾನೆ.
## ಅನುವಾದ ಸಲಹೆಗಳು:
* ಈ ಪದವನ್ನು ಅನುವಾದ ಮಾಡುವ ಉತ್ತಮ ವಿಧಾನವು ಯೋಜನೆಯ ಭಾಷೆಯಲ್ಲಿ ಭೌತಿಕ ಶರೀರವನ್ನು ಸೂಚಿಸುವುದಕ್ಕೆ ಅತಿ ಹೆಚ್ಚಾಗಿ ಉಪಯೋಗಿಸುವ ಪದವನ್ನು ಬಳಸುವುದು. ಉಪಯೋಗಿಸಿದ ಪದವು ಕೀಳಾಗಿ ತೋರಿಸುವ ಪದವಾಗಿರದಂತೆ ನೋಡಿಕೊಳ್ಳಿರಿ.
* ವಿಶ್ವಾಸಿಗಳ ಸಮೂಹವನ್ನು ಸೂಚಿಸುವಾಗ, ಕೆಲವೊಂದು ಭಾಷೆಗಳಲ್ಲಿ “ಕ್ರಿಸ್ತನ ಆತ್ಮೀ ದೇಹ” ಎಂದು ಹೇಳುವುದಕ್ಕೆ ಈ ಪದವು ಬಹುಶಃ ಹೆಚ್ಚಾದ ಸ್ವಾಭಾವಿಕವಾಗಿರಬಹುದು.
* “ಇದು ನನ್ನ ದೇಹ” ಎಂದು ಯೇಸು ಹೇಳಿದಾಗ, ಇದನ್ನು ಅಕ್ಷರಾರ್ಥವಾಗಿ ಅನುವಾದ ಮಾಡುವುದು ಉತ್ತಮ, ಇದಕ್ಕೆ ಒಂದು ಸೂಚನೆಯನ್ನಿಟ್ಟು ವಿವರಿಸುವುದು ಅತ್ಯಗತ್ಯ.
* ಮೃತ ದೇಹವನ್ನು ಸೂಚಿಸುವಾಗ ಕೆಲವೊಂದು ಭಾಷೆಗಳಲ್ಲಿ ಒಂದು ವಿಶೇಷವಾದ ಪದವು ಇರಬಹುದು, ವ್ಯಕ್ತಿಯ ಶರೀರವಾದರೆ “ಶವ” ಎಂದೂ ಅಥವಾ ಪ್ರಾಣಿಯಾದರೆ “ಹೆಣ” ಎಂದೂ ಉಪಯೋಗಿಸುತ್ತಾರೆ. ಈ ಪದವನ್ನು ಅನುವಾದ ಮಾಡುವಾಗ ಸಂದರ್ಭಾನುಸಾರವಾಗಿ ಮತ್ತು ಅಂಗೀಕೃತವಾಗಿ ಇರುವಂತೆ ನೋಡಿಕೊಳ್ಳಿರಿ.
(ಈ ಪದಗಳನ್ನು ಸಹ ನೋಡಿರಿ : [ತಲೆ](../other/head.md), [hand](../other/hand.md); [face](../other/face.md); [loins](../other/loins.md); [righthand](../kt/righthand.md); [tongue](../other/tongue.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಪೂರ್ವ.10:12](rc://*/tn/help/1ch/10/12)
* [1 ಕೊರಿಂಥ.05:05](rc://*/tn/help/1co/05/05)
* [ಎಫೆಸ.04:04](rc://*/tn/help/eph/04/04)
* [ನ್ಯಾಯಾ.14:08](rc://*/tn/help/jdg/14/08)
* [ಅರಣ್ಯ.06:6-8](rc://*/tn/help/num/06/06)
* [ಕೀರ್ತನೆ.031:09](rc://*/tn/help/psa/031/009)
* [ರೋಮಾ.12:05](rc://*/tn/help/rom/12/05)
## ಪದ ಡೇಟಾ:
* Strong's: H990, H1320, H1460, H1465, H1472, H1480, H1655, H3409, H4191, H5038, H5085, H5315, H6106, H6297, H7607, G4430, G4954, G4983, G5559