kn_tw/bible/kt/arkofthecovenant.md

28 lines
3.7 KiB
Markdown

# ಒಡಂಬಡಿಕೆಯ ಮಂಜೂಷ, ಯೆಹೋವನ ಮಂಜೂಷ
## ಪದದ ಅರ್ಥವಿವರಣೆ:
ಈ ಪದಗಳು ವಿಶೇಷವಾದ ಕಟ್ಟಿಗೆಯ ಪೆಟ್ಟಿಗೆಯನ್ನು, ಅದರ ಮೇಲೆ ಬಂಗಾರದ ಹೊದಿಕೆಯನ್ನು, ಅದರಲ್ಲಿ ಹತ್ತು ಆಜ್ಞೆಗಳನ್ನು ಬರೆದಿರುವ ಎರಡು ಹಲಗೆಗಳನ್ನು ಸೂಚಿಸುತ್ತದೆ. ಅದರಲ್ಲಿ ಆರೋನನ ಕೋಲು ಮತ್ತು ಮನ್ನ ಪಾತ್ರೆಯು ಒಳಗೊಂಡಿರುತ್ತದೆ.
* “ಮಂಜೂಷ” ಎನ್ನುವ ಪದವು ಇಲ್ಲಿ “ಪೆಟ್ಟಿಗೆ” ಅಥವಾ “ಗೂಡು” ಅಥವಾ “ಪಾತ್ರೆ” ಎಂದೂ ಅನುವಾದ ಮಾಡಬಹುದು.
* ಈ ಗೂಡಿನಲ್ಲಿರುವ ವಸ್ತುಗಳು ದೇವರ ಒಡಂಬಡಿಕೆಯ ಇಸ್ರಾಯೇಲ್ಯರನ್ನು ನೆನಪಿಸುತ್ತದೆ.
* ಒಡಂಬಡಿಕೆಯ ಮಂಜೂಷವು “ಅತೀ ಪರಿಶುದ್ಧ ಸ್ಥಳದಲ್ಲಿ” ಮಾತ್ರ ಕಂಡುಬರುತ್ತದೆ.
* ಗುಡಾರದಲ್ಲಿರುವ ಅತಿ ಪರಿಶುದ್ಧ ಸ್ಥಳದಲ್ಲಿಟ್ಟ ಒಡಂಬಡಿಕೆಯ ಮಂಜೂಷದ ಮೇಲೆ ದೇವರ ಸನ್ನಿಧಿಯು ಇಳಿದು ಬರುತ್ತಿತ್ತು, ಅಲ್ಲಿಯೇ ಇಸ್ರಾಯೇಲ್ಯರ ಪಕ್ಷವಾಗಿ ಮೋಶೆಯೊಂದಿಗೆ ದೇವರು ಮಾತನಾಡುವ ಸ್ಥಳವಾಗಿತ್ತು.
* ದೇವಾಲಯದಲ್ಲಿರುವ ಅತಿ ಪರಿಶುದ್ಧ ಸ್ಥಳದಲ್ಲಿಟ್ಟ ಒಡಂಬಡಿಕೆಯ ಮಂಜೂಷದ ಸಮಯದಲ್ಲಿ, ಕೇವಲ ಪ್ರಧಾನ ಯಾಜಕನು ಮಾತ್ರವೇ ಮಂಜೂಷದ ಬಳಿಗೆ ಹೋಗುವುದಕ್ಕೆ ಸಾಧ್ಯ, ಅದು ಕೂಡ ವರ್ಷಕ್ಕೊಮ್ಮೆ ದೋಷ ಪರಿಹಾರ ದಿನದಂದು ಮಾತ್ರ ಗುಡಾರದೊಳಗೆ ಪ್ರವೇಶಿಸಬೇಕು.
* ಅನೇಕ ಆಂಗ್ಲ ಅನುವಾದಗಳಲ್ಲಿ “ಒಡಂಬಡಿಕೆಯ ಆಜ್ಞೆಗಳನ್ನು” ಅಕ್ಷರಾರ್ಥವಾಗಿ “ಸಾಕ್ಷಿ” ಎಂಬುದಾಗಿ ಅನುವಾದಿಸಿದ್ದಾರೆ. ಹತ್ತು ಆಜ್ಞೆಗಳು ದೇವರು ತನ್ನ ಜನರೊಂದಿಗೆ ಮಾಡಿದ ಒಡಂಬಡಿಕೆಗೆ ಸಾಕ್ಷಿಯಾಗಿವೆ ಅಥವಾ ಆಧಾರವಾಗಿವೆ ಎನ್ನುವ ಸತ್ಯಕ್ಕೆ ಇದು ಸೂಚನೆಯಾಗಿರುತ್ತದೆ. “ಒಡಂಬಡಿಕೆಯ ಧರ್ಮಶಾಸ್ತ್ರ” ಎಂಬುದಾಗಿಯೂ ಇದನ್ನು ಅನುವಾದ ಮಾಡಿದ್ದಾರೆ.
(ಈ ಪದಗಳನ್ನು ಸಹ ನೋಡಿರಿ : [ಮಂಜೂಷ](../kt/ark.md), [ಒಡಂಬಡಿಕೆ](../kt/covenant.md), [ದೋಷ ಪರಿಹಾರ](../kt/atonement.md), [ಪರಿಶುದ್ಧ ಸ್ಥಳ](../kt/holyplace.md), [ಸಾಕ್ಷಿ](../kt/testimony.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಸಮು.06:14-15](rc://*/tn/help/1sa/06/14)
* [ವಿಮೋ.25:10-11](rc://*/tn/help/exo/25/10)
* [ಇಬ್ರಿ.09:3-5](rc://*/tn/help/heb/09/03)
* [ನ್ಯಾಯಾ.20:27-28](rc://*/tn/help/jdg/20/27)
* [ಅರಣ್ಯ.07:89](rc://*/tn/help/num/07/89)
* [ಪ್ರಕ.11:19](rc://*/tn/help/rev/11/19)
## ಪದ ಡೇಟಾ:
* Strong's: H727, H1285, H3068