kn_tw/bible/kt/ark.md

29 lines
4.1 KiB
Markdown

# ನಾವೆ
## ಪದದ ಅರ್ಥವಿವರಣೆ:
“ನಾವೆ” ಎನ್ನುವ ಪದವು ಅಕ್ಷರಾರ್ಥವಾಗಿ ಹಿಡಿದುಕೊಳ್ಳುವುದಕ್ಕೆ ಮಾಡಿರುವ ಅಥವಾ ಏನಾದರೊಂದನ್ನು ಸಂರಕ್ಷಿಸುವುದಕ್ಕೆ ಮಾಡಿದ ಆಯಾತಾಕಾರದಲ್ಲಿರುವ ಕಟ್ಟಿಗೆಯ ಪೆಟ್ಟಿಗೆಯನ್ನು ಸೂಚಿಸುತ್ತದೆ. ನಾವೆ ಎನ್ನುವುದು ದೊಡ್ಡದಾಗಿರಬಹುದು ಅಥವಾ ಚಿಕ್ಕದಾಗಿರಬಹುದು, ಇದನ್ನು ಯಾವ ಉದ್ದೇಶಕ್ಕಾಗಿ ಉಪಯೋಗ ಮಾಡುತ್ತಿದ್ದೇವೆ ಎನ್ನುವದರ ಮೇಲೆ ಆಧಾರಪಟ್ಟಿರುತ್ತದೆ.
* ಆಂಗ್ಲ ಸತ್ಯವೇದದಲ್ಲಿ, “ನಾವೆ” ಎನ್ನುವ ಪದವನ್ನು ಮೊಟ್ಟ ಮೊದಲು ಪ್ರಪಂಚದಲ್ಲೆಲ್ಲಾ ಬರುತ್ತಿರುವ ಪ್ರಳಯದಿಂದ ತಪ್ಪಿಸಿಕೊಳ್ಳಲು ನೋಹನು ನಿರ್ಮಿಸಿದ ಅತೀ ದೊಡ್ಡ ಕಟ್ಟಿಗೆಯ ಆಯಾತಾಕಾರದ ಹಡಗಿಗೆ ಸೂಚಿಸಲಾಗಿದೆ. ನಾವೆಗೆ ಸಪಾಟವಾದ ಅಡಿಭಾಗ, ಮೇಲ್ಛಾವಣಿ ಮತ್ತು ಗೋಡೆಗಳು ಇರುತ್ತವೆ.
* ಈ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಅತೀ ದೊಡ್ಡ ಹಡಗು” ಅಥವಾ “ದೋಣಿ” ಅಥವಾ “ಸರಕುಗಳನ್ನು ಹೊಯ್ಯುವ ಹಡಗು” ಅಥವಾ “ಅತೀ ದೊಡ್ಡ, ಪೆಟ್ಟಿಗೆಯ ಆಕಾರದ ಹಡಗು” ಎಂದೆನ್ನುವ ಪದಗಳನ್ನು ಒಳಗೊಂಡಿರುತ್ತವೆ.
ಈ ದೊಡ್ಡ ಹಡಗನ್ನು ಸೂಚಿಸುವುದಕ್ಕೆ ಉಪಯೋಗಿಸಿದ ಇಬ್ರಿಯ ಪದವನ್ನೇ ಮೋಶೆಯು ಕೂಸಾಗಿರುವಾಗ ತನ್ನ ತಾಯಿಯು ಕೂಸಾಗಿದ್ದ ಮೋಶೆಯನ್ನು ಬಚ್ಚಿಡುವುದಕ್ಕೆ ನೈಲ್ ನದಿಯಲ್ಲಿ ಇಟ್ಟ ಪೆಟ್ಟಿಗೆಗೆ ಅಥವಾ ಬುಟ್ಟಿಗೆ ಕೂಡ ಅದೇ ಪದವನ್ನು ಉಪಯೋಗಿಸಿದ್ದಾರೆ. ಇಂಥಹ ಸಂದರ್ಭದಲ್ಲಿ ಸಹಜವಾಗಿ “ಬುಟ್ಟಿ” ಎಂದೂ ಅನುವಾದ ಮಾಡುತ್ತಾರೆ.
* “ಒಡಂಬಡಿಕೆಯ ಮಂಜೂಷ” ಎಂದು ಉಪಯೋಗಿಸಿದ ನುಡಿಗಟ್ಟಿನಲ್ಲಿ “ಮಂಜೂಷ” ಎನ್ನುವ ಪದಕ್ಕೆ ಬೇರೊಂದು ಇಬ್ರಿಯ ಪದವನ್ನು ಉಪಯೋಗಿಸಿದ್ದಾರೆ. ಇದನ್ನು “ಪೆಟ್ಟಿಗೆ” ಅಥವಾ “ಗೂಡು” ಅಥವಾ “ಪಾತ್ರೆ” ಎಂದೂ ಅನುವಾದ ಮಾಡಬಹುದು.
* “ನಾವೆ” ಎನ್ನುವ ಪದವನ್ನು ಅನುವಾದ ಮಾಡಲು ಆಯ್ಕೆ ಮಾಡಿಕೊಂಡಾಗ, ಇದು ಎಂಥಾ ಅಳತೆಯಲ್ಲಿದೆ ಮತ್ತು ಇದು ಯಾವುದಕ್ಕೆ ಉಪಯೋಗಿಸಿದ್ದಾರೆ ಎನ್ನುವದನ್ನು ಪ್ರತಿ ಸಂದರ್ಭದಲ್ಲಿ ನೋಡುವುದು ತುಂಬಾ ಪ್ರಾಮುಖ್ಯ.
(ಇವುಗಳನ್ನು ಸಹ ನೋಡಿರಿ : [ಒಡಂಬಡಿಕೆಯ ಮಂಜೂಷ](../kt/arkofthecovenant.md), [ಬುಟ್ಟಿ](../other/basket.md))
## ಸತ್ಯವೇದದ ಉಲ್ಲೇಖಗಳು :
* [1 ಪೇತ್ರ 3:18-20](rc://*/tn/help/1pe/03/18)
* [ವಿಮೋಚನಾ 16:33-36](rc://*/tn/help/exo/16/33)
* [ವಿಮೋಚನಾ 30:5-6](rc://*/tn/help/exo/30/05)
* [ಆದಿಕಾಂಡ 8:4-5](rc://*/tn/help/gen/08/04)
* [ಲೂಕ 17:25-27](rc://*/tn/help/luk/17/25)
* [ಮತ್ತಾಯ 24:37-39](rc://*/tn/help/mat/24/37)
## ಪದದ ದತ್ತಾಂಶ:
* Strong's: H0727, H8392, G27870