kn_tw/bible/kt/appoint.md

30 lines
3.8 KiB
Markdown

# ನೇಮಕ, ನೇಮಕಗಳು, ನೇಮಿಸಲ್ಪಟ್ಟವನು
## ಪದದ ಅರ್ಥವಿವರಣೆ:
“ನೇಮಕ” ಮತ್ತು “ನೇಮಿಸಲ್ಪಟ್ಟವನು” ಎನ್ನುವ ಪದಗಳು ಒಂದು ವಿಶೇಷವಾದ ಕೆಲಸವನ್ನು ಅಥವಾ ಪಾತ್ರವನ್ನು ನೆರವೇರಿಸಲು ಯಾರಾದರೊಬ್ಬರನ್ನು ಆಯ್ಕೆ ಮಾಡಿಕೊಳ್ಳುವದನ್ನು ಸೂಚಿಸುತ್ತದೆ.
* “ನೇಮಿಸಲ್ಪಟ್ಟಿರುವುದು” ಎಂದರೆ “ನಿತ್ಯಜೀವವನ್ನು ಹೊಂದುವುದಕ್ಕೆ ನೇಮಿಸಲ್ಪಟ್ಟವನು” ಎಂಬಂತೆ ಏನನ್ನಾದರೂ ಪಡೆದುಕೊಳ್ಳುವುದಕ್ಕೆ “ಆಯ್ಕೆ ಮಾಡಲ್ಪಟ್ಟವನು” ಎನ್ನುವದನ್ನೂ ಸೂಚಿಸುತ್ತದೆ. ಜನರು “ನಿತ್ಯಜೀವವನ್ನು ಹೊಂದಿಕೊಳ್ಳುವುದಕ್ಕೆ ನೇಮಿಸಲ್ಪಟ್ಟಿದ್ದಾರೆ” ಎನ್ನುವ ಮಾತಿಗೆ, ಅವರು ನಿತ್ಯಜೀವವನ್ನು ಪಡೆದುಕೊಳ್ಳುವುದಕ್ಕೆ ಆಯ್ಕೆಯಾಗಿದ್ದಾರೆ ಎಂದರ್ಥವನ್ನು ಕೊಡುತ್ತದೆ.
* “ನೇಮಿಸಲ್ಪಟ್ಟ ಸಮಯ” ಎನ್ನುವ ಮಾತು ಏನಾದರು ಮಾಡಲು ದೇವರು “ಆಯ್ಕೆ ಮಾಡಿಕೊಂಡ ಸಮಯ” ಅಥವಾ “ಯೋಜಿತ ಸಮಯ” ವನ್ನು ಸೂಚಿಸುತ್ತದೆ.
“ನೇಮಕ” ಎನ್ನುವ ಪದವು ಯಾರಾದರೊಬ್ಬರು ಎನಾದರೊಂದು ಕೆಲಸವನ್ನು ಮಾಡುವುದಕ್ಕೆ ಅವರನ್ನು “ಆಜ್ಞಾಪಿಸು” ಅಥವಾ “ನಿಯೋಜಿಸು” ಎನ್ನುವ ಅರ್ಥವನ್ನೂ ಕೊಡುತ್ತದೆ.
## ಅನುವಾದ ಸಲಹೆಗಳು:
* ಸಂದರ್ಭಾನುಗುಣವಾಗಿ, “ನೇಮಕ” ಎನ್ನುವ ಪದವನ್ನು ಅನುವಾದ ಮಾಡುವುದರಲ್ಲಿ “ಆಯ್ಕೆ ಮಾಡು” ಅಥವಾ “ನಿಯೋಜಿಸು” ಅಥವಾ “ಸಂಪ್ರದಾಯಿಕವಾಗಿ ಆಯ್ಕೆ ಮಾಡು” ಅಥವಾ “ಆರಿಸು” ಎನ್ನುವ ಪದಗಳನ್ನೂ ಸೇರಿಸಬಹುದು.
* “ನೇಮಿಸಲ್ಪಟ್ಟವನು” ಎನ್ನುವ ಪದವನ್ನು “ನಿಯೋಜಿಸಲ್ಪಟ್ಟಿದೆ” ಅಥವಾ “ಯೋಜಿಸಲ್ಪಟ್ಟಿದೆ” ಅಥವಾ “ವಿಶೇಷವಾಗಿ ಆಯ್ಕೆ ಮಾಡಲ್ಪಟ್ಟಿದೆ” ಎಂಬುದಾಗಿಯೂ ಅನುವಾದ ಮಾಡಬಹುದು.
* “ನೇಮಿಸಲ್ಪಟ್ಟವನಾಗಿ” ಎನ್ನುವ ಮಾತು “ಆಯ್ಕೆ ಮಾಡಲ್ಪಟ್ಟವನಾಗಿ” ಎಂಬುದಾಗಿಯೂ ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಸಮು.08:10-12](rc://*/tn/help/1sa/08/10)
* [ಅಪೊ.ಕೃತ್ಯ.03:19-20](rc://*/tn/help/act/03/19)
* [ಅಪೊ.ಕೃತ್ಯ.06:2-4](rc://*/tn/help/act/06/02)
* [ಅಪೊ.ಕೃತ್ಯ.13:48-49](rc://*/tn/help/act/13/48)
* [ಆದಿ.41:33-34](rc://*/tn/help/gen/41/33)
* [ಅರಣ್ಯ.03:9-10](rc://*/tn/help/num/03/09)
## ಪದ ಡೇಟಾ:
* Strong's: H561, H977, H2163, H2296, H2706, H2708, H2710, H3198, H3245, H3259, H3677, H3983, H4150, H4151, H4152, H4487, H4662, H5324, H5344, H5414, H5567, H5975, H6310, H6485, H6565, H6635, H6680, H6923, H6942, H6966, H7760, H7896, G322, G606, G1299, G1303, G1935, G2525, G2749, G4287, G4384, G4929, G5021, G5087