33 lines
5.4 KiB
Markdown
33 lines
5.4 KiB
Markdown
# ಆಮೆನ್, ನಿಜವಾಗಿ
|
|
|
|
## ಅರ್ಥವಿವರಣೆ:
|
|
|
|
“ಆಮೆನ್” ಎಂದರೆ ಒಬ್ಬ ವ್ಯಕ್ತಿ ಹೇಳಿದ ಮಾತುಗಳಿಗೆ ಲಕ್ಷ್ಯ ಕೊಡಲು ಕರೆಯುವುದಕ್ಕೆ ಉಪಯೋಗಿಸುವ ಪದ ಅಥವಾ ಆ ಮಾತುಗಳನ್ನು ಒತ್ತಿ ಹೇಳುವುದಕ್ಕೆ ಉಪಯೋಗಿಸುವ ಪದವಾಗಿರುತ್ತದೆ. ಸಾಮಾನ್ಯವಾಗಿ ಈ ಪದವನ್ನು ಪ್ರಾರ್ಥನೆಯ ಕೊನೆಯ ಭಾಗದಲ್ಲಿ ಉಪಯೋಗಿಸುತ್ತಾರೆ. ಕೆಲವೊಂದು ಸಲ ಈ ಪದವನ್ನು “ ನಿಜವಾಗಿ” ಎಂದೂ ಅನುವಾದ ಮಾಡಬಹುದು.
|
|
|
|
* ಪ್ರಾರ್ಥನೆಯ ಕೊನೆಯ ಭಾಗದಲ್ಲಿ ಉಪಯೋಗಿಸುವಾಗ, “ಆಮೆನ್” ಎನ್ನುವ ಪದವು ಪ್ರಾರ್ಥನೆಯಲ್ಲಿ ಹೇಳಿದ ಮಾತುಗಳಿಗೆ ಸಮ್ಮತಿಯನ್ನು ತಿಳಿಸುತ್ತದೆ ಅಥವಾ ಮಾಡಿದ ಪ್ರಾರ್ಥನೆ ನೆರವೇರಿಸಲ್ಪಡಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸುತ್ತಿದೆ.
|
|
* ಯೇಸು ಕ್ರಿಸ್ತನು ಹೇಳಿದ ಸತ್ಯ ಮಾತುಗಳನ್ನು ಎತ್ತಿ ಹಿಡಿಯಲು “ಆಮೆನ್” ಎಂದು ಯೇಸು ತನ್ನ ಬೋಧನೆಯಲ್ಲಿ ಉಪಯೋಗಿಸಿದ್ದಾನೆ. ಮುಂಚಿತವಾಗಿ ಮಾಡಿದ ಬೋಧನೆಗೆ ಸಂಬಂಧಪಟ್ಟ ಮತ್ತೊಂದು ಬೋಧನೆಯನ್ನು ಪರಿಚಯ ಮಾಡುವುದಕ್ಕೆ “ನಾನು ನಿಮ್ಮೊಂದಿಗೆ ಹೇಳುತ್ತಿದ್ದೇನೆ” ಎಂದು ಹೇಳುವುದರ ಮೂಲಕ ಆತನು ಬೋಧನೆಯನ್ನು ಮಾಡಿದನು.
|
|
* ಈ ರೀತಿಯಲ್ಲಿ ಯೇಸು “ಆಮೆನ್” ಎಂದು ಉಪಯೋಗಿಸುವಾಗ, ಕೆಲವೊಂದು ಆಂಗ್ಲ ಅನುವಾದಗಳು (ಮತ್ತು ಯುಎಲ್.ಟಿ) “ಖಂಡಿತವಾಗಿ” ಅಥವಾ “ನಿಜವಾಗಿ” ಎಂದು ಅನುವಾದ ಮಾಡಿವೆ.
|
|
* “ನಿಜವಾಗಿ” ಎನ್ನುವ ಪದಕ್ಕೆ ಇನ್ನೊಂದು ಅರ್ಥದಲ್ಲಿ ಕೆಲವೊಂದು ಸಲ “ನಿಶ್ಚಯವಾಗಿ” ಅಥವಾ “ಖಂಡಿತವಾಗಿ” ಎಂದು ಅನುವಾದ ಮಾಡಲಾಗಿದೆ ಮತ್ತು ಇದನ್ನು ಬೋಧಕನು ಹೇಳಿದ ಪ್ರತಿಯೊಂದು ಮಾತನ್ನು ಒತ್ತಿ ಹೇಳುವುದಕ್ಕೂ ಉಪಯೋಗಿಸಲಾಗಿದೆ.
|
|
|
|
## ಅನುವಾದ ಸಲಹೆಗಳು:
|
|
|
|
* ಹೇಳಲಾದ ಏನನ್ನಾದರೂ ಒತ್ತಿ ಹೇಳುವುದಕ್ಕೆ ಉಪಯೋಗಿಸಿದ ಉದ್ದೇಶಿತ ಭಾಷೆಯು ವಿಶೇಷ ಪದ ಅಥವಾ ಪದಗುಚ್ಛವನ್ನು ಹೊಂದಿದೆಯೇ ಎಂಬುದನ್ನು ಪರಿಗಣಿಸಿರಿ.
|
|
* ಏನಾದರೊಂದನ್ನು ದೃಡೀಕರಿಸಲು ಅಥವಾ ಪ್ರಾರ್ಥನೆಯ ಕೊನೆಯ ಭಾಗದಲ್ಲಿ ಉಪಯೋಗಿಸುವಾಗ, “ಆಮೆನ್” ಎನ್ನುವುದನ್ನು “ಹಾಗೆಯೇ ನಡೆಯಲಿ” ಅಥವಾ “ಇದು ನೆರವೇರಿಸಲ್ಪಡಲಿ” ಅಥವಾ “ಇದು ನಿಜವಾಗಲಿ” ಎಂದು ಅನುವಾದ ಮಾಡಬಹುದು.
|
|
* “ನಿಜವಾಗಿ ನಾನು ನಿಮಗೆ ಹೇಳುತ್ತೇನೆ” ಎಂದು ಯೇಸು ಹೇಳಿದಾಗ, ಇದನ್ನು ಕೂಡ “ಹೌದು, ನಾನು ನಿಜ ನಿಜವಾಗಿ ನಿಮಗೆ ಹೇಳುತ್ತಿದ್ದೇನೆ” ಎಂದು ಅಥವಾ “ಅದು ನಿಜ, ಮತ್ತು ನಾನು ಕೂಡ ನಿಮಗೆ ಹೇಳುತ್ತಿದ್ದೇನೆ” ಎಂದು ಕೂಡ ಅನುವಾದ ಮಾಡಬಹುದು.
|
|
* “ನಿಜ ನಿಜವಾಗಿ ನಾನು ನಿಮಗೆ ಹೇಳುತ್ತಿದ್ದೇನೆ” ಎನ್ನುವ ಮಾತನ್ನು “ಇದನ್ನು ನಾನು ತುಂಬಾ ಖಂಡಿತವಾಗಿ ಹೇಳುತ್ತಿದ್ದೇನೆ” ಅಥವಾ “ನಾನು ಇದನ್ನು ನಿಮಗೆ ಮನಃಪೂರ್ವಕವಾಗಿ ಹೇಳುತ್ತಿದ್ದೇನೆ” ಅಥವಾ “ನಾನು ಹೇಳುತ್ತಿರುವ ಪ್ರತಿಯೊಂದು ಮಾತು ಸತ್ಯವಾದ ಮಾತಾಗಿರುತ್ತದೆ” ಎಂದು ಅನುವಾದ ಮಾಡಬಹುದು.
|
|
|
|
(ಇವುಳನ್ನು ಸಹ ನೋಡಿರಿ : [ನೆರವೇರಿಸು](../kt/fulfill.md), [ನಿಜ](../kt/true.md))
|
|
|
|
## ಸತ್ಯವೇದದ ಉಲ್ಲೇಖಗಳು:
|
|
|
|
* [ಧರ್ಮೋಪದೇಶಕಾಂಡ 27:15](rc://*/tn/help/deu/27/15)
|
|
* [ಯೋಹಾನ 5:19](rc://*/tn/help/jhn/05/19)
|
|
* [ಯೂದ 1:24-25](rc://*/tn/help/jud/01/24)
|
|
* [ಮತ್ತಾಯ 26:33-35](rc://*/tn/help/mat/26/33)
|
|
* [ಫಿಲೆಮೋನ 1:23-25](rc://*/tn/help/phm/01/23)
|
|
* [ಪ್ರಕಟನೆ 22:20-21](rc://*/tn/help/rev/22/20)
|
|
|
|
## ಪದದ ದತ್ತಾಂಶ:
|
|
|
|
* Strong's: H0543, G2810
|